Subscribe to Gizbot

ನೋಕಿಯಾದಿಂದ ಮತ್ತೆರಡು ಹಳೇ ಫೋನ್ ಗೆ ಹೊಸ ಜೀವ..!

Written By: Lekhaka

ಮಾರುಕಟ್ಟೆಗೆ ನೋಕಿಯಾ 9 ಲಾಂಚ್ ಆಗಲಿದೆ ಎನ್ನುವ ಮಾತು ಕೇಳಿಬರುತ್ತಿರುವ ಬೆನ್ನಲೇ HMD ಗ್ಲೊಬಲ್ ಸಂಸ್ಥೆಯೂ ಮತ್ತೊಂದು ಹೊಸ ವಿಷಯವನ್ನು ತಿಳಿದೆ. 2018ರಲ್ಲಿ ಹೊಸದಾಗಿ ಮತ್ತೆ ನೋಕಿಯಾ 6 ಮತ್ತು ನೋಕಿಯಾ 3310 ಫೀಚರ್ ಫೋನ್ ಅನ್ನು ಲಾಂಚ್ ಮಾಡುವುದಾಗಿ ತಿಳಿಸಿದೆ ಎನ್ನಲಾಗದೆ.

ನೋಕಿಯಾದಿಂದ ಮತ್ತೆರಡು ಹಳೇ ಫೋನ್ ಗೆ ಹೊಸ ಜೀವ..!

ಈಗಾಗಲೇ ಈ ಎರಡು ಫೋನ್ ಗಳ ಕುರಿತು ರೂಮರ್ ಗಳು ಹೆಚ್ಚಾಗಿದ್ದು, ಅದರಲ್ಲೂ ನೋಕಿಯಾ 3310 ಫೋನಿನಲ್ಲಿ 4G ಸೇವೆಯನ್ನು ನೀಡಲು ನೋಕಿಯಾ ಮುಂದಾಗಿದೆ ಎನ್ನಲಾಗಿದೆ. ಇದೆ ಮಾದರಿಯಲ್ಲಿ ನೋಕಿಯಾ 6 ಸಹ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ಲೀಕ್ ಆಗಿರುವ ಮಾಹಿತಿಯ ಪ್ರಕಾರ ನೋಕಿಯಾ ಡ್ಯುಯಲ್ ಸಿಮ್ ಹಾಕುವ ಹಾಂಡ್ ಸೆಟ್ ವೊಂದನ್ನು ಬಿಡುಗಡೆ ಮಾಡುವ ಸನಿಹದಲ್ಲಿದ್ದು, ನೋಡಲು ನೋಕಿಯಾ 2 ಮಾದರಿಯಲ್ಲಿ ಕಾಣಿಸಿಕೊಂಡರು ಸ್ಮಾರ್ಟ್ ಫೋನ್ ಅಲ್ಲಾ ಎನ್ನಲಾಗಿದ್ದು, ನೋಕಿಯಾ 3310 ಹೊಸ ಆವೃತ್ತಿ ಇದು ಎನ್ನುವ ಮಾತು ಕೇಳಿಬಂದಿದೆ.

ಸಿಗರೇಟ್ ಲೈಟರ್‌ಗಿಂತಲೂ ಚಿಕ್ಕ ಗಾತ್ರ, ಚಿನ್ನದ ಸರಕ್ಕಿಂತ ಕಡಿಮೆ ತೂಕ ಫೋನ್ ಮಾರುಕಟ್ಟೆಗೆ...!

4G VoLTE ಸಪೋರ್ಟ್ ಮಾಡುವ ಪೋಚರ್ ಫೋನಿನಲ್ಲಿ ಕ್ವಲ್ಟಿ ಕೀಪ್ಯಾಡ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಕ್ವಾಲ್ಕಮ್ ಸ್ನಾಪ್ ಡ್ರಾಗನ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಇದರೊಂದಿಗೆ ನೋಕಿಯಾ 6 ಸಹ ಹೊಸದಾಗಿ ಬಿಡುಗಡೆ ಮಾಡಲು ನೋಕಿಯಾ ತಯಾರಿ ನಡೆಸಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ನೋಕಿಯಾ 3310 ಹೊಸ ಫೋನ್ ಸಾಕಷ್ಟು ಖ್ಯಾತಿಯನ್ನು ಗಳಸಿಕೊಂಡಿದ್ದು, ಇದನ್ನು ಮುಂದುವರೆಸಿಕೊಳ್ಳು ಹೊಗುವ ಸಲುವಾಗಿ ಮತ್ತೊಂದು ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

English summary
A new Nokia smartphone with code TA-1047 has passed certification at FCC revealing some information about it.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot