ಗೂಗಲ್‌ ಕ್ರೋಮ್‌ನಲ್ಲಿ ಪಾಸ್‌ವರ್ಡ್‌ ಸೇವ್‌ ಮಾಡುವವರು ಈ ಸ್ಟೋರಿ ಓದಿರಿ!

|

ಪ್ರಸ್ತುತ ದಿನಗಳಲ್ಲಿ ಡಿಜಿಟಲ್‌ ಅಕೌಂಟ್‌ಗಳ ಬಳಕೆ ಹೆಚ್ಚಾಗಿದೆ. ಆನ್‌ಲೈನ್ ಖಾತೆಗಳನ್ನು ಸುರಕ್ಷಿತವಾಗಿಡುವುದಕ್ಕೆ ಪ್ರತಿಯೊಬ್ಬರೂ ಕೂಡ ಪಾಸ್‌ವರ್ಡ್‌ಗಳನ್ನು ಸೆಟ್‌ ಮಾಡುವುದು ಅವಶ್ಯಕವಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟಕರವಾಗಲಿದೆ. ಇದೇ ಕಾರಣಕ್ಕೆ ಗೂಗಲ್‌ ಕ್ರೋಮ್‌ ನಿಮ್ಮ ಲಾಗಿನ್ ವಿವರಗಳನ್ನು ಗೂಗಲ್‌ ಸರ್ವರ್‌ಗಳಿಗೆ ಸೇವ್‌ ಮಾಡುವ ಅನುಕೂಲವನ್ನು ನೀಡಿದೆ. ಆದರೆ, ನಿಮ್ಮ ಪಾಸ್‌ವರ್ಡ್‌ಗಳನ್ನು ಕ್ರೋಮ್‌, ಗೂಗಲ್‌ ಅಥವಾ ಯಾವುದೇ ಇತರ ಬ್ರೌಸರ್‌ರ್‌ನಲ್ಲಿ ಸೇವ್‌ ಮಾಡುವುದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಕಾಡುವುದು ಸಹಜ.

ಗೂಗಲ್‌ ಕ್ರೋಮ್‌

ಹೌದು, ಗೂಗಲ್‌ ಕ್ರೋಮ್‌ ಅಥವಾ ಇತರ ಬ್ರೌಸರ್‌ಗಳಲ್ಲಿ ಪಾಸ್‌ವರ್ಡ್‌ಗಳನ್ನು ಸೇವ್‌ ಮಾಡುವುದು ಸುರಕ್ಷಿತವೇ ಅನ್ನೊ ಪ್ರಶ್ನೆ ಸಹಜ. ಏಕೆಂದರೆ ಇಂದಿನ ದಿನಗಳಲ್ಲಿ ನಿಮ್ಮ ಡಿಜಿಟಲ್‌ ಖಾತೆಗಳನ್ನು ಹ್ಯಾಕರ್‌ಗಳು ಹ್ಯಾಕ್‌ ಮಾಡುವುದಕ್ಕಾಗಿಯೇ ಕಾದಿರುತ್ತಾರೆ. ಆದರಿಂದ ಪಾಸ್‌ವರ್ಡ್‌ಗಳ ಸುರಕ್ಷಿತವಾಗಿರುವುದರ ಬಗ್ಗೆ ಎಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ. ಹಾಗಾದ್ರೆ ಗೂಗಲ್‌ ಕ್ರೋಮ್‌ನಲ್ಲಿ ನಿಮ್ಮ ಪಾಸ್‌ವರ್ಡ್‌ ಸೇವ್‌ ಮಾಡುವುದು ಸರಿನಾ? ಅನ್ನೊದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಕ್ರೋಮ್‌ನಲ್ಲಿ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುವುದು ಸುರಕ್ಷಿತವೇ?

ಗೂಗಲ್‌ ಕ್ರೋಮ್‌ನಲ್ಲಿ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುವುದು ಸುರಕ್ಷಿತವೇ?

ಗೂಗಲ್‌ ಕ್ರೋಮ್‌ನಲ್ಲಿ ನೀವು ಸೇವ್‌ ಮಾಡುವ ಪಾಸ್‌ವರ್ಡ್‌ ಅನ್ನು ನಿಮ್ಮ ಡಿವೈಸ್‌ ಮಾತ್ರ ತಿಳಿದಿರುವ "ರಹಸ್ಯ ಕೀ" ಯೊಂದಿಗೆ ಎನ್‌ಕ್ರಿಪ್ಟ್ ಮಾಡುತ್ತದೆ ಎಂದು ಗೂಗಲ್‌ ಹೇಳಿದೆ. ಗೂಗಲ್‌ ಸರ್ವರ್‌ಗಳಲ್ಲಿ ಡೇಟಾವನ್ನು ಸಂಗ್ರಹಿಸುವ ಮೊದಲು ಇದು ನಡೆಯಲಿದೆ ಎಂದು ಹೇಳಿದೆ. ಅಂದರೆ ಗೂಗಲ್‌ ಕ್ರೋಮ್‌ನಲ್ಲಿ ನಿಮ್ಮ ಪಾಸ್‌ವರ್ಡ್‌ ಅನ್ನು ಗೂಗಲ್‌ ಸೇರಿದಂತೆ ಯಾರೂ ಕೂಡ ನಿಮ್ಮ ಬಳಕೆದಾರ ಹೆಸರು ಅಥವಾ ಪಾಸ್‌ವರ್ಡ್ ಅನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಗೂಗಲ್‌ ಹೇಳಿಕೊಂಡಿದೆ. ಆದರೆ ಗೂಗಲ್‌ ಕ್ರೋಮ್‌ನಲ್ಲಿ ನೀವು ಪಾಸ್‌ವರ್ಡ್‌ಗಳನ್ನು ಸೇವ್‌ ಮಾಡುವುದು ಸೂಕ್ತವಲ್ಲ ಎಂದೇ ಹೇಳಬಹುದು.

ಗೂಗಲ್‌

ಇದಲ್ಲದೆ ಗೂಗಲ್‌ ಕ್ರೋಮ್‌ನಲ್ಲಿ ಬೇರೆಯವರು ನಿಮ್ಮ ಪಾಸ್‌ವರ್ಡ್‌ಗಳನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಗೂಗಲ್‌ ಯಾವುದೇ ಆಲರ್ಟ್‌ ಕಳುಹಿಸುವುದಿಲ್ಲ. ಆದರೆ ನೀವು ಎಲ್ಲಾ ಪಾಸ್‌ವರ್ಡ್‌ಗಳಿಗೆ ಒಂದೇ ಬಾರಿಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ನಿಮ್ಮ ಫೇಸ್‌ಬುಕ್ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಅನ್ನು ನೀವು ಪರಿಶೀಲಿಸಲು ಬಯಸಿದರೆ, ನೀವು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಜಿ-ಮೇಲ್‌ ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ. ನಂತರ ನೀವು ಲಾಗಿನ್ ರುಜುವಾತುಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಆದರೆ ಯಾವುದೇ ಸಂದರ್ಭದಲ್ಲಿ, ಕ್ರೋಮ್‌ ಸೇರಿದಂತೆ ಯಾವುದೇ ಬ್ರೌಸರ್‌ನಲ್ಲಿ ಲಾಗ್ ಇನ್ ವಿವರಗಳನ್ನು ಸಂಗ್ರಹಿಸುವುದು ಸುರಕ್ಷಿತವಲ್ಲ. ಏಕೆಂದರೆ ನಿಮ್ಮ ಜಿಮೇಲ್ ಖಾತೆ ಹ್ಯಾಕ್ ಆಗಿದ್ದರೆ, ಆ ವ್ಯಕ್ತಿ ನೀವು ಗೂಗಲ್‌ ಸರ್ವರ್‌ಗಳಲ್ಲಿ ಸಂಗ್ರಹಿಸಿದ ಯಾವುದೇ ಖಾತೆ ಅಥವಾ ಸೈಟ್‌ಗೆ ಸುಲಭವಾಗಿ ಲಾಗ್ ಇನ್ ಮಾಡಲು ಸಾಧ್ಯವಾಗುತ್ತದೆ.

ಪಾಸ್‌ವರ್ಡ್‌ ರಕ್ಷಣೆಗಾಗಿ ಏನು ಮಾಡಬೇಕು?

ಪಾಸ್‌ವರ್ಡ್‌ ರಕ್ಷಣೆಗಾಗಿ ಏನು ಮಾಡಬೇಕು?

ನಿಮ್ಮ ಫೇಸ್‌ಬುಕ್‌, ಔಟ್‌ಲುಕ್‌, ಬ್ಯಾಂಕ್ ಮತ್ತು ಇತರ ಖಾತೆಯ ಪಾಸ್‌ವರ್ಡ್‌ಗಳನ್ನು ಗೂಗಲ್‌ ಕ್ರೋಮ್‌ನಲ್ಲಿ ಯಾವುದೇ ಕಾರಣಕ್ಕೂ ಸೇವ್‌ ಮಾಡಬೇಡಿ. ಒಂದು ವೇಳೆಸೇವ್‌ ಮಾಡಿದ್ದರೆ ಅವುಗಳನ್ನು ಕೂಡಲೇ ತೆಗೆದುಹಾಕುವುದು ಉತ್ತಮ. ಹಲವಾರು ಬ್ಯಾಂಕಿಂಗ್ ಸೈಟ್‌ಗಳು ಎರಡು-ಹಂತದ ಪರಿಶೀಲನಾ ವ್ಯವಸ್ಥೆಯನ್ನು ಹೊಂದಿದ್ದು ಕೆಲವು ಭದ್ರತಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತವೆ. ಆದರೆ, ಯಾವುದೇ ಖಾತೆಯ ಲಾಗ್ ಇನ್ ಡಿಟೇಲ್ಸ್‌ ಅನ್ನು ಸೇವ್‌ ಮಾಡದಿರುವುದು ಒಳ್ಳೆಯದು.

ಯೂನಿಕ್‌ ಪಾಸ್‌ವರ್ಡ್‌ಗಳನ್ನು ಬಳಸಲು ಪ್ರಯತ್ನಿಸಿ

ಯೂನಿಕ್‌ ಪಾಸ್‌ವರ್ಡ್‌ಗಳನ್ನು ಬಳಸಲು ಪ್ರಯತ್ನಿಸಿ

ನಿವು ಬಳಸುವ ಪಾಸ್‌ವರ್ಡ್‌ಗಳು ಯಾವಾಗಲೂ ಯೂನಿಕ್‌ ಆಗಿರುವಂತೆ ನೋಡಿಕೊಳ್ಳಿ. ನಿಮ್ಮ ಪಾಸ್‌ವರ್ಡ್‌ಗಳಲ್ಲಿ ಪಿನ್ ಕೋಡ್‌ಗಳನ್ನು ಸೇರಿಸಿ. ಅಲ್ಲದೆ ನಿಮ್ಮ ಗೂಗಲ್‌ ಅಕೌಂಟ್‌ಗಾಗಿ 2FA ಅನ್ನು ಬಳಸುವುದು ರೂಡಿ ಮಾಡಿ. ಆದ್ದರಿಂದ, ನಿಮ್ಮ ಖಾತೆಯು ಹ್ಯಾಕ್ ಆಗಿದ್ದರೆ, ನಿಮ್ಮ ದ್ವಿತೀಯ ಜಿ-ಮೇಲ್‌ ಖಾತೆಯನ್ನು ಬಳಸಿಕೊಂಡು ನೀವು ಅದನ್ನು ತಕ್ಷಣವೇ ರಿಸ್ಟೋರ್‌ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ.

ಕ್ರೋಮ್‌ನಿಂದ ಪಾಸ್‌ವರ್ಡ್‌ಗಳನ್ನು ತೆಗೆದುಹಾಕುವುದು ಹೇಗೆ?

ಕ್ರೋಮ್‌ನಿಂದ ಪಾಸ್‌ವರ್ಡ್‌ಗಳನ್ನು ತೆಗೆದುಹಾಕುವುದು ಹೇಗೆ?

ನಿಮ್ಮ ಬ್ರೌಸರ್‌ನಲ್ಲಿ "ಗೂಗಲ್‌ ಪಾಸ್‌ವರ್ಡ್ ಮ್ಯಾನೇಜರ್‌" ಎಂದು ಟೈಪ್ ಮಾಡಿ, ಅದು ಮೇಲ್ಭಾಗದಲ್ಲಿ ಗೂಗಲ್‌ನ ಅಧಿಕೃತ ಸೈಟ್ ಅನ್ನು ಪ್ರದರ್ಶಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಗೂಗಲ್‌ ತನ್ನ ಸರ್ವರ್‌ಗಳಲ್ಲಿ ಇರಿಸಿಕೊಳ್ಳಲು ನೀವು ಬಯಸದ ಯಾವುದೇ ಸೈಟ್ ಅಥವಾ ಖಾತೆಯನ್ನು ಆಯ್ಕೆಮಾಡಿ. ಇದೀಗ ಗೂಗಲ್‌ ನಿಮ್ಮ ಜಿ-ಮೇಲ್‌ ಪಾಸ್‌ವರ್ಡ್ ಅನ್ನು ನಮೂದಿಸಲು ನಿಮ್ಮನ್ನು ಕೇಳುತ್ತದೆ, ನಂತರ ನೀವು ಆಯ್ಕೆ ಮಾಡಿದ ಅಕೌಂಟ್‌ಗಳ ಪಾಸ್‌ವರ್ಡ್‌ಗಳನ್ನು ಡಿಲೀಟ್‌ ಮಾಡಬಹುದು.

Best Mobiles in India

English summary
Chrome gives you the convenience of saving your login details to Google servers to make it hassle-free for managing passwords.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X