ಸ್ಮಾರ್ಟ್‌ಫೋನ್ ತಯಾರಿಕೆಗೆ ಮುಂದಾದ ಜಿಯೋ!

|

ರಿಲಯನ್ಸ್ ಜಿಯೋ ಅಧಿಕೃತವಾಗಿ ಬಿಗ್ ಸ್ಕ್ರೀನ್ ಸ್ಮಾರ್ಟ್ ಫೋನ್ ತಯಾರಿಕೆಗೆ ಮುಂದಾಗಿರುವುದರ ಬಗ್ಗೆ ಪ್ರಕಟಿಸಲಾಗಿದೆ. ಎಕನಾಮಿಕ್ ಟೈಮ್ಸ್ ನಲ್ಲಿ ವರದಿಯಾಗಿರುವ ಪ್ರಕಾರ ರಿಲಯನ್ಸ್ ಜಿಯೋ ಈಗಾಗಲೇ ಕೆಲವು ಸಹಭಾಗಿಗಳ ಜೊತೆಗೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. 4ಜಿ ಸ್ಮಾರ್ಟ್ ಫೋನ್ ಗೆ ಈಗ ತಾನೆ ಕಾಲಿಡುತ್ತಿರುವ ದೊಡ್ಡ ಮಟ್ಟದ ಬಳಕೆದಾರರಿಗಾಗಿ ನಾವು ಅತ್ಯಂತ ಕಡಿಮೆ ಬೆಲೆಯಲ್ಲಿ ದೊಡ್ಡ ಸ್ಕ್ರೀನಿನ ಸ್ಮಾರ್ಟ್ ಫೋನ್ ತಯಾರಿಸುವ ಸಹಭಾಗಿಗಳ ಜೊತೆಗೆ ಕೆಲಸ ಮಾಡುತ್ತಿದ್ದೇವೆ.

ಸ್ಮಾರ್ಟ್‌ಫೋನ್ ತಯಾರಿಕೆಗೆ ಮುಂದಾದ ಜಿಯೋ!

ಆ ಮೂಲಕ ಗ್ರಾಹಕರು ಉತ್ತಮವಾಗಿರುವ ಕನೆಕ್ಟಿವಿಟಿ ಮತ್ತು ಕಟೆಂಟ್ ನ್ನು ತಮ್ಮ ಡಿವೈಸ್ ನಲ್ಲಿ ಪಡೆಯುವುದಕ್ಕೆ ಸಾಧ್ಯಗೊಳಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ ರಿಲಯನ್ಸ್ ಜಿಯೋ ಸಂಸ್ಥೆಯ ಚಾನಲ್ ಡೆವಲಪ್ ಮೆಂಟ್ ನ ಸೇಲ್ಸ್ ಹೆಡ್ ಆಗಿರುವ ಸುನಿಲ್ ದತ್. ಹಾಗಾದ್ರೆ ಬಿಗ್ ಸ್ಕ್ರೀನಿನ ರಿಲಯನ್ಸ್ ಜಿಯೋ ಸ್ಮಾರ್ಟ್ ಫೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಮತ್ತು ಸದ್ಯದ ಮಟ್ಟಿಗೆ ನಾವು ತಿಳಿದಿರುವ ಕೆಲವು ಅಂಶಗಳನ್ನು ನಾವಿಲ್ಲಿ ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇವೆ.

ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರುವ ರಿಲಯನ್ಸ್ ಜಿಯೋ ಸ್ಮಾರ್ಟ್ ಫೋನ್

ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರುವ ರಿಲಯನ್ಸ್ ಜಿಯೋ ಸ್ಮಾರ್ಟ್ ಫೋನ್

ಕೈಗೆಟುಕುವ ಬೆಲೆಯಲ್ಲಿ ಬಡ ಮಧ್ಯಮವರ್ಗದವರೂ ಕೂಡ ಬಳಸಲು ಸಾಧ್ಯವಾಗುವಂತಹ ದೊಡ್ಡ ಸ್ಕ್ರೀನಿನ ಸ್ಮಾರ್ಟ್ ಫೋನ್ ತಯಾರಿಕೆಗೆ ಕಂಪೆನಿ ಪ್ರಯತ್ನಿಸುತ್ತಿದೆ. ಅಂದರೆ ಫೀಚರ್ ಫೋನ್ ನಿಂದ ಈಗ ತಾನೆ ಸ್ಮಾರ್ಟ್ ಫೋನ್ ಗೆ ಅಪ್ ಗ್ರೇಡ್ ಆಗಲು ಇಚ್ಛಿಸುವ ದೊಡ್ಡ ಬಳಗದ ಗ್ರಾಹಕರನ್ನು ಇಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ.

ಈ ರೀತಿಯ ಸ್ಮಾರ್ಟ್ ಫೋನ್ ತಯಾರಿಕೆಗಾಗಿ ಯುಎಸ್ ಮೂಲದ ಕಂಪೆನಿ ಜೊತೆಗೆ ಜಿಯೋ ನಿರಂತರ ಮಾತುಕತೆ :

ಈ ರೀತಿಯ ಸ್ಮಾರ್ಟ್ ಫೋನ್ ತಯಾರಿಕೆಗಾಗಿ ಯುಎಸ್ ಮೂಲದ ಕಂಪೆನಿ ಜೊತೆಗೆ ಜಿಯೋ ನಿರಂತರ ಮಾತುಕತೆ :

ಈ ಹಿಂದೆ ವರದಿ ಮಾಡಿರುವಂತೆ ರಿಲಯನ್ಸ್ ಜಿಯೋ ಸಂಸ್ಥೆ ಈ ನಿಟ್ಟಿನಲ್ಲಿ ಈಗಾಗಲೇ ಯುಎಸ್ ಮೂಲದ ಸಂಸ್ಥೆಯೊಂದಿಗೆ ನಿರಂತರವಾಗಿ ಮಾತುಕತೆಯಲ್ಲಿ ತೊಡಗಿದೆ. ಅದುವೇ ಯುಎಸ್ ಮೂಲದ ಫ್ಲೆಕ್ಸ್ ಸಂಸ್ಥೆ ಸ್ಥಳೀಯವಾಗಿ ಈ ಸ್ಮಾರ್ಟ್ ಫೋನ್ ಗಳನ್ನು ತಯಾರಿಸಲಿದೆ ಎಂಬ ಮಾತೂ ಕೂಡ ಕೇಳಿಬಂದಿದೆ. ದೊಡ್ಡ ಆರ್ಡರ್ ನ್ನು ರಿಲಯನ್ಸ್ ಜಿಯೋ ಹೊಂದಿದೆ ಹಾಗಾಗಿ ಯುಎಸ್ ಸಂಸ್ಥೆ ಜೊತೆಗೆ ಮಾತುಕತೆ ನಿರಂತರವಾಗಿದೆ ಎನ್ನಲಾಗುತ್ತಿದೆ.

ಯುಎಸ್ ಮೂಲದ ಕಂಪೆನಿ ಫ್ಲೆಕ್ಸ್ ನ ಫ್ಯಾಕ್ಟರಿ ಚೆನೈನಲ್ಲಿದೆ

ಯುಎಸ್ ಮೂಲದ ಕಂಪೆನಿ ಫ್ಲೆಕ್ಸ್ ನ ಫ್ಯಾಕ್ಟರಿ ಚೆನೈನಲ್ಲಿದೆ

ಫ್ಲೆಕ್ಸ್ ಸಂಸ್ಥೆಯ ಫ್ಯಾಕ್ಟರಿ ಈಗಾಗಲೇ ಚೆನೈನಲ್ಲಿದೆ. ಒಂದು ತಿಂಗಳಿಗೆ ತನ್ನ ಕಂಪೆನಿಯಲ್ಲಿ 4 ರಿಂದ 5 ಮಿಲಿಯನ್ ಡಿವೈಸ್ ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಈ ಕಂಪೆನಿ ಹೊಂದಿದೆ ಎಂದು ಹೇಳಲಾಗಿದೆ. ಚೆನೈನ ಸ್ಪೆಷಲ್ ಎಕನಾಮಿಕ್ ಝೋನ್ ನಲ್ಲಿ ಈ ಸಂಸ್ಥೆ ಇದೆ.

ಈ ಬಿಗ್ ಸ್ಕ್ರೀನ್ ಫೋನ್ ಕೊಂಡವರಿಗೆ ಡಾಟಾ ಜೊತೆಗೆ ದೊಡ್ಡ ಆಫರ್ ನ್ನು ಜಿಯೋ ನೀಡುವ ಸಾಧ್ಯತೆ ಇದೆ

ಈ ಬಿಗ್ ಸ್ಕ್ರೀನ್ ಫೋನ್ ಕೊಂಡವರಿಗೆ ಡಾಟಾ ಜೊತೆಗೆ ದೊಡ್ಡ ಆಫರ್ ನ್ನು ಜಿಯೋ ನೀಡುವ ಸಾಧ್ಯತೆ ಇದೆ

ತಜ್ಞರು ಅಭಿಪ್ರಾಯ ಪಡುವಂತೆ ರಿಲಯನ್ಸ್ ಜಿಯೋ ಈ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಕೇವಲ ಡಾಟಾ ಆಫರ್ ಮಾತ್ರವೇ ನೀಡುವುದಿಲ್ಲ ಬದಲಾಗಿ ಇನ್ನು ಹೆಚ್ಚಿನ ಕೊಡುಗೆಗಳನ್ನು ನೀಡುವ ನಿರೀಕ್ಷೆ ಇದೆ. ಜಿಯೋ ಸ್ಮಾರ್ಟ್ ಫೋನ್ ಗಳನ್ನು ಪ್ರಸಿದ್ಧಿಗೊಳಿಸುವುದಕ್ಕಾಗಿ ಪ್ರತಿದಿನ 1ಜಿಬಿ ಡಾಟಾ ಉಚಿತವಾಗಿ ನೀಡುವುದರ ಜೊತೆಗೆ ಇನ್ನಷ್ಟು ಆಫರ್ ಗಳ ನಿರೀಕ್ಷೆ ಇದೆ.

ಸ್ಕ್ರೀನ್ ವಿಮೆಯನ್ನು ಈ ಸ್ಮಾರ್ಟ್ ಫೋನ್ ಗಳಿಗೆ ಜಿಯೋ ಆಫರ್ ಮಾಡುವ ಸಾಧ್ಯತೆ

ಸ್ಕ್ರೀನ್ ವಿಮೆಯನ್ನು ಈ ಸ್ಮಾರ್ಟ್ ಫೋನ್ ಗಳಿಗೆ ಜಿಯೋ ಆಫರ್ ಮಾಡುವ ಸಾಧ್ಯತೆ

ಈ ಫೋನ್ ನ ಸ್ಕ್ರೀನಿಗೆ ವಿಮೆ ಸೌಲಭ್ಯವನ್ನು ರಿಲಯನ್ಸ್ ನೀಡುವ ಸಾಧ್ಯತೆ ನಿಚ್ಛಳವಾಗಿದೆ. ಫೀಚರ್ ಫೋನ್ ನಿಂದ ಸ್ಮಾರ್ಟ್ ಫೋನ್ ಗೆ ವರ್ಗಾವಣೆ ಆಗದ ಬಳಕೆದಾರರ ಪ್ರಮುಖ ಬೇಡಿಕೆಯೆ ಸ್ಕ್ರೀನ್ ರಿಪೇರಿ ವೆಚ್ಚ. ಹಾಗಾಗಿ ಅದನ್ನು ಭರಿಸುವ ಯೋಜನೆಯನ್ನು ರೂಪಿಸಿಕೊಂಡರೆ ಜಿಯೋ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಯಶಸ್ಸುಗಳಿಸಲು ಸಾಧ್ಯವಿದೆ ಎಂಬ ಲೆಕ್ಕಾಚಾರದಲ್ಲಿ ಜಿಯೋ ಸಂಸ್ಥೆ ಇದೆ ಎನ್ನಲಾಗುತ್ತಿದೆ.

ರಿಲಯನ್ಸ್ ಜಿಯೋ ಚಂದಾದಾರರು ಸೇವೆಯಲ್ಲಿ ತೊಂದರೆ ಎದುರಿಸುವ ಸಾಧ್ಯತೆ

ರಿಲಯನ್ಸ್ ಜಿಯೋ ಚಂದಾದಾರರು ಸೇವೆಯಲ್ಲಿ ತೊಂದರೆ ಎದುರಿಸುವ ಸಾಧ್ಯತೆ

ಇತ್ತೀಚೆಗೆ ಟೆಲಿಕಾಂ ವಲಯದ ತಜ್ಞರು ಹೇಳಿರುವ ಪ್ರಕಾರ ಒಂದು ವೇಳೆ ರಿಲಯನ್ಸ್ ಜಿಯೋ ಸಂಸ್ಥೆ ಸ್ಪೆಕ್ಟ್ರಮ್ ನ್ನು ಖರೀದಿ ಮಾಡದೇ ಇದ್ದಲ್ಲಿ ಅನಿಲ್ ಅಂಬಾನಿ ಸ್ವಾಮ್ಯದ ಸಂಸ್ಥೆ ದಿವಾಳಿತನವನ್ನು ಎದುರಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಿದ್ದಾರೆ. ಟೆಲಿಕಾಂ ಸಂಸ್ಥೆ RCom ಯ ಮೇಲೆ ಅವಲಂಬಿತವಾಗಿದೆ ಏಕೆಂದರೆ 800 MHz ಬ್ಯಾಂಡ್ ಪ್ರೀಮಿಯಂನಲ್ಲಿ ಐದು ಘಟಕಗಳ ಸ್ಪೆಕ್ಟ್ರಮ್ ಬ್ಲಾಕ್ ಗಳನ್ನು ರಚಿಸಲು ಮಾತ್ರವೇ ಕಾರಣವಾಗಿರುತ್ತದೆ. ಕೆಲವು ಘಟಕಗಳಲ್ಲಿ ಜಿಯೋ 3.8 ಯುನಿಟ್ ನ 4ಜಿ ಏರ್ ವೇಸ್ ನ್ನು 800 MHz ನಲ್ಲಿ ಹೊಂದಿದೆ. ಆದರೆ ಇತ್ತೀಚೆಗೆ ಡಾಟ್(ಡಿಪಾರ್ಟ್ ಮೆಂಟ್ ಆಫ್ ಟೆಲಿಕಮ್ಯುನಿಕೇಷನ್) ಜಿಯೋ ಸಂಸ್ಥೆಯ RCom-ಜಿಯೋ ಸ್ಪೆಕ್ಟ್ರಮ್ ಟ್ರೇಡಿಂಗ್ ಡೀಲ್ ನ್ನು ನಿರಾಕರಿಸಿದೆ ಮತ್ತು ಸರ್ಕಾರಿ ನಿಯಮಗಳನ್ನು ಇದು ಪಾಲಿಸಿಲ್ಲ ಎಂದು ಹೇಳಿದೆ.

ಒಟ್ಟಾರೆ ಗುಣಮಟ್ಟಕ್ಕೆ ಹೊಡೆತ:

ಒಟ್ಟಾರೆ ಗುಣಮಟ್ಟಕ್ಕೆ ಹೊಡೆತ:

ಜಿಯೋ 4G LTE ಕವರೇಜ್ ನ ಒಟ್ಟಾರೆ ಗುಣಮಟ್ಟವು ಕೆಲವು ಪ್ರದೇಶಗಳಲ್ಲಿ ಉದಾಹರಣೆಗೆ ಮುಂಬೈ, ಗುಜರಾತ್, ಎಂಪಿ, ಹೆಚ್ ಪಿ, ಬಿಹಾರ್, ಓರಿಸ್ಸಾ, ಅಸ್ಸಾಂ, ಈಶಾಜ್ಯ ರಾಜ್ಯಗಳಲ್ಲಿ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.ಇದು ಯಾಕೆಂದರೆ ಕೆಲವು ಪ್ರದೇಶಗಳಲ್ಲಿ RCom's ನ ಏರ್ವೇಸ್ ಗಳಿಗೆ ಆಕ್ಸಿಸ್ ಇಲ್ಲದೇ ಇರುವುದು ಇದಕ್ಕೆ ಕಾರಣವಾಗಿರಬಹುದು. ಎರಡು ಕಂಪೆನಿಗಳ ಕಂಬೈನ್ ಹೋಲ್ಡಿಂಗ್ ನಲ್ಲಿ ಉಳಿತಾಯ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ ಜಿಯೋ 4ಜಿ ಬ್ಯಾಂಡ್ ಏಕಸಾಮ್ಯತೆಯಿಂದಾಗಿ ಈ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

Best Mobiles in India

Read more about:
English summary
It's official, Reliance Jio is working on a big-screen smartphone: All that's known so far

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X