ರಿಲಾಯನ್ಸ್‌ ಕೊಡುಗೆ: ಹೊಸ ಐಟೆಲ್ A23 ಪ್ರೊ ಫೋನ್‌ಗೆ ಭಾರೀ ಡಿಸ್ಕೌಂಟ್‌!

|

ಈಗಾಗಲೇ ಹಲವು ಆಕರ್ಷಕ ಕೊಡುಗೆಗಳ ಮೂಲಕ ಗಮನ ಸೆಳೆದಿರುವ ರಿಲಯನ್ಸ್ ಜಿಯೋ ಇದೀಗ ಬಳಕೆದಾರರಿಗೆ ರೀಚಾರ್ಜ್ ಮತ್ತು ರಿಯಾಯಿತಿ ಕೊಡುಗೆಗಳನ್ನು ನೀಡಲು ಸ್ಮಾರ್ಟ್‌ಫೋನ್ ತಯಾರಕರೊಂದಿಗೆ ಮತ್ತೆ ಕೈ ಜೋಡಿಸಿದೆ. ಜಿಯೋ ಟೆಲಿಕಾಂ ಹೊಸ ಐಟೆಲ್-Itel ಮೊಬೈಲ್‌ ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಿದ್ದು, ರಿಯಾಯಿತಿ ದರದಲ್ಲಿ ಇಟೆಲ್ A23 ಪ್ರೊ ಸ್ಮಾರ್ಟ್‌ಪೊನ್‌ ಅನ್ನು ಖರೀದಿಸುವ ಅವಕಾಶ ನೀಡಿದೆ.

ಭಾರತದಲ್ಲಿ

ಹೌದು, ಐಟೆಲ್ A23 ಪ್ರೊ ಭಾರತದಲ್ಲಿ ಬಿಡುಗಡೆ ಆಗಿದೆ. ಇದೊಂದು ಎಂಟ್ರಿ ಲೆವೆಲ್ 4G ಸ್ಮಾರ್ಟ್‌ಫೋನ್ ಆಗಿದ್ದು, ಎರಡು ಬಣ್ಣ ಆಯ್ಕೆಗಳೊಂದಿಗೆ ಒಂದೇ ಸಂರಚನೆಯಲ್ಲಿ ನೀಡಲಾಗುತ್ತದೆ. ಐಟೆಲ್ A23 ಪ್ರೊ ಆಂಡ್ರಾಯ್ಡ್ 10 (ಗೋ ಎಡಿಷನ್) ಅನ್ನು ಸಪೋರ್ಟ್‌ ಪಡೆದಿದೆ. ಈ ಫೋನಿನ ರೀಟೈಲ್‌ ಬೆಲೆಯು 4,999ರೂ, ಆಗಿದೆ. ಆದರೆ ರಿಲಯನ್ಸ್ ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳ ಮೂಲಕ ಜಿಯೋ ಎಕ್ಸ್‌ಕ್ಲೂಸಿವ್ ಆಫರ್‌ನೊಂದಿಗೆ ಫೋನ್ ಅನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.

ರಿಲಯನ್ಸ್

ಐಟೆಲ್ A23 ಪ್ರೊ ಫೋನ್ 1 ಜಿಬಿ ರಾಮ್ ಮತ್ತು 8 ಜಿಬಿ ಶೇಖರಣಾ ಆಯ್ಕೆಗೆ 4,999 ರೂ. ಆಗಿದೆ. ಆದರೆ ರಿಲಯನ್ಸ್ ಜಿಯೋ ಆಫರ್‌ನೊಂದಿಗೆ ಫೋನ್ ಅನ್ನು ಜೂನ್ 1 ರಿಂದ ಜಿಯೋ ನೆಟ್‌ವರ್ಕ್ ಹೊಂದಿರುವ ರಿಲಯನ್ಸ್ ಡಿಜಿಟಲ್ ವೆಬ್‌ಸೈಟ್, ಮೈಜಿಯೊ ಸ್ಟೋರ್‌ಗಳು ಮತ್ತು ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳಿಂದ 3,899ರೂ. ಲಭ್ಯವಾಗಲಿದೆ. ಈ ಫೋನ್ ಲೇಕ್ ಬ್ಲೂ ಮತ್ತು ನೀಲಮಣಿ ನೀಲಿ ಬಣ್ಣಗಳಲ್ಲಿ ಬರುತ್ತದೆ. ಹಾಗಾದರೇ ಈ ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಐಟೆಲ್ A23 ಪ್ರೊ ಫೋನ್ ವಾಟರ್ ಡ್ರಾಪ್ ನಾಚ್‌ ಶೈಲಿಯನ್ನು ಹೊಂದಿರುವ ಡಿಸ್‌ಪ್ಲೇ ಹೊಂದಿದ್ದು, ಇದು 480*854 ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 5 ಇಂಚಿನ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ ಇದಾಗಿದೆ. ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 196ppi ಆಗಿದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಐಟೆಲ್ A23 ಪ್ರೊ ಫೋನ್ 1.4GHz Unisoc SC9832E SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 10 ಗೋ ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಬಜೆಟ್‌ ಬೆಲೆಯ ಈ ಸ್ಮಾರ್ಟ್‌ಫೋನ್ 1GB RAM ಮತ್ತು 8GB ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ 32GB ವಿಸ್ತರಿಸುವ ಅವಕಾಶ.

ಕ್ಯಾಮೆರಾ ಮಾದರಿ

ಕ್ಯಾಮೆರಾ ಮಾದರಿ

ಇಟೆಲ್ A23 ಪ್ರೊ ಫೋನ್ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಅದು 2 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 0.3 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಐಟೆಲ್ A23 ಪ್ರೊ ಫೋನ್ 2,400mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದೆ. ಇನ್ನು ಈ ಫೋನ್ ಡ್ಯುಯಲ್ ಸಿಮ್ 4 ಜಿ, ವೈ-ಫೈ, ವೋಲ್ಟಿಇ, ಜಿಪಿಎಸ್, ಬ್ಲೂಟೂತ್, 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್ಗಾಗಿ ಮೈಕ್ರೋ-ಯುಎಸ್ಬಿ ಪೋರ್ಟ್ನೊಂದಿಗೆ ಬರುತ್ತದೆ. ಐಟೆಲ್ ಎ 23 ಪ್ರೊನಲ್ಲಿರುವ ಸಂವೇದಕಗಳು ಮೂರು-ಅಕ್ಷದ ವೇಗವರ್ಧಕ ಮತ್ತು ಸಾಮೀಪ್ಯ ಸಂವೇದಕವನ್ನು ಒಳಗೊಂಡಿವೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇಲ್ಲ ಆದರೆ ಫೋನ್ ಫೇಸ್ ಅನ್ಲಾಕ್ ವೈಶಿಷ್ಟ್ಯದೊಂದಿಗೆ ಬರುತ್ತದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಐಟೆಲ್ A23 ಪ್ರೊ ಫೋನ್ ಬೆಲೆಯು 4,999ರೂ. ಆಗಿದೆ. ಆದರೆ ಜಿಯೋ ಕೊಡುಗೆಯಲ್ಲಿ 3,899ರೂ.ಗಳಿಗೆ ಲಭ್ಯವಾಗಲಿದೆ. ಇದೇ ಜೂನ್ 1 ರಿಂದ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Reliance Digital will be able to get the smartphone at Rs 3,899 instead of its original MRP of Rs 4,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X