ಐಟೆಲ್‌ ಕಂಪೆನಿಯಿಂದ ಹೊಸ ಫೀಚರ್‌ ಫೋನ್‌ ಲಾಂಚ್‌! 12 ಭಾಷೆಗಳಿಗೆ ಬೆಂಬಲ!

|

ಮೊಬೈಲ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಅಬ್ಬರದ ನಡುವೆಯೂ ಫೀಚರ್‌ ಫೋನ್‌ಗಳು ಇನ್ನು ಕೂಡ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವ ಫೀಚರ್‌ಫೋನ್‌ಗಳನ್ನು ಈಗಲೂ ಕೂಡ ಖರೀದಿಸುವವರಿದ್ದಾರೆ. ಇದೇ ಕಾರಣಕ್ಕೆ ಹಲವು ಪ್ರಮುಖ ಕಂಪೆನಿಗಳು ಫೀಚರ್‌ ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಐಟೆಲ್‌ ಕಂಪೆನಿ ಕೂಡ ಒಂದಾಗಿದ್ದು ಮೊಬೈಲ್‌ ಪ್ರಿಯರಿಂದ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಎರಡು ಹೊಸ ಫೀಚರ್‌ ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಐಟೆಲ್‌

ಹೌದು, ಐಟೆಲ್‌ ಕಂಪೆನಿ ಭಾರತದಲ್ಲಿ ಹೊಸ ಮ್ಯಾಜಿಕ್ ಎಕ್ಸ್ ಪ್ಲೇ ಮತ್ತು ಮ್ಯಾಜಿಕ್ ಎಕ್ಸ್ ಫೀಚರ್ ಫೋನ್‌ಗಳನ್ನು ಪರಿಚಯಿಸಿದೆ. ಈ ಫೀಚರ್‌ ಫೋನ್‌ಗಳು ಡ್ಯುಯಲ್ 4G VoLTE ಮತ್ತು ಇಂಟರ್‌ಬಿಲ್ಟ್‌ ಮ್ಯೂಸಿಕ್‌ ಮತ್ತು ಚಾಟ್ ಅಪ್ಲಿಕೇಶನ್‌ಗಳಾದ ಲೆಟ್ಸ್‌ಚಾಟ್‌ ಮತ್ತು ಬೂಮ್‌ಪ್ಲೇ ಅನ್ನು ಒಳಗೊಂಡಿವೆ. ಈ ಫೋನ್‌ಗಳು ಡ್ಯುಯಲ್ ಸಿಮ್ ಬೆಂಬಲ ಮತ್ತು VGA ರಿಯರ್‌ ಕ್ಯಾಮೆರಾಗಳನ್ನು ಹೊಂದಿವೆ. ಹಾಗಾದ್ರೆ ಈ ಫೀಚರ್‌ ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಟೆಲ್‌

ಐಟೆಲ್‌ ಕಂಪೆನಿ ಪರಿಚಯಿಸಿರುವ ಹೊಸ ಮ್ಯಾಜಿಕ್ ಎಕ್ಸ್ ಪ್ಲೇ ಫೀಚರ್‌ ಫೋನ್‌ 1.77-ಇಂಚಿನ 3D ಬಾಗಿದ ಡಿಸ್ಪ್ಲೇಯನ್ನು ಹೊಂದಿದೆ. ಆದರೆ ಮ್ಯಾಜಿಕ್ X ಫೀಚರ್‌ ಫೋನ್‌ ಅಲ್ಟ್ರಾ-ಸ್ಲಿಮ್ ವಿನ್ಯಾಸದೊಂದಿಗೆ 2.4-ಇಂಚಿನ 3D ಕರ್ವ್ಡ್ QVGA ಡಿಸ್‌ಪ್ಲೇ ಹೊಂದಿದೆ. ಇದು ಸ್ಮಾರ್ಟ್ LED ಆಲರ್ಟ್‌ ಅನ್ನು ಹೊಂದಿದೆ. ಇನ್ನು ಈ ಎರಡು ಫೋನ್‌ಗಳಲ್ಲಿ ಲೆಟ್ಸ್‌ಚಾಟ್‌ ಮತ್ತು ಬೂಮ್‌ಪ್ಲೇ ಅಪ್ಲಿಕೇಶನ್‌ಗಳನ್ನು ನೀಡಲಾಗಿದೆ. ಇದರಲ್ಲಿ ಲೆಟ್ಸ್‌ಚಾಟ್‌ ಅಪ್ಲಿಕೇಶನ್‌ ಮೂಲಕ ಚಾಟ್ ಗುಂಪುಗಳನ್ನು ರಚಿಸಬಹುದಾಗಿದೆ.

ಮ್ಯಾಜಿಕ್

ಇನ್ನು ಮ್ಯಾಜಿಕ್ ಎಕ್ಸ್ ಫೀಚರ್‌ ಫೋನ್‌ ಮ್ಯೂಸಿಕ್‌ ಅಪ್ಲಿಕೇಶನ್, ಬೂಮ್ ಪ್ಲೇ ಅಪ್ಲಿಕೇಶನ್‌ ಬಳಸುವುದಕ್ಕೆ ಅವಕಾಶ ನೀಡಲಿದೆ. ಇದರಲ್ಲಿ ಬಳಕೆದಾರರು ಆನ್‌ಲೈನ್ ಮ್ಯೂಸಿಕ್‌ ಅನ್ನು ಕೇಳುವುದಕ್ಕೆ ಸಾಧ್ಯವಿದೆ. ಇದು ಮನರಂಜನೆಯನ್ನು ಬಯಸವುವವರಿಗೆ ಉತ್ತಮವಾದ ಆಯ್ಕೆಯಾಗಿದೆ. ಇನ್ನು ಬಿಲ್ಟ್-ಇನ್ ಬೂಮ್‌ಪ್ಲೇ ಗ್ರಾಹಕರಿಗೆ ಚಲನಚಿತ್ರಗಳು ಮತ್ತು ಭಕ್ತಿ ಸೇರಿದಂತೆ ಪ್ರಕಾರಗಳಲ್ಲಿ 74 ಮಿಲಿಯನ್ ಟ್ರ್ಯಾಕ್‌ಗಳನ್ನು ಕೇಳಲು ಅನುಮತಿಸುತ್ತದೆ.

ಫೋನ್‌ಗಳು

ಈ ಎರಡೂ ಫೋನ್‌ಗಳು ಎಫ್‌ಎಂ ರೇಡಿಯೋ, ಎಲ್‌ಇಡಿ ಫ್ಲ್ಯಾಷ್‌ಲೈಟ್ ಮತ್ತು ಕಿಂಗ್‌ವಾಯ್ಸ್ ಅನ್ನು ಹೊಂದಿವೆ. ಮ್ಯಾಜಿಕ್ ಎಕ್ಸ್ ಫೋನ್‌ಗಳು 4G ಸಂಪರ್ಕವನ್ನು ಸಹ ಬೆಂಬಲಿಸುತ್ತವೆ. ಇದಲ್ಲದೆ, ಮ್ಯಾಜಿಕ್ ಎಕ್ಸ್ ಪ್ಲೇ 1900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದರೆ, ಮ್ಯಾಜಿಕ್ X 1200mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಈ ಎರಡೂ ಫೋನ್‌ಗಳು ಡ್ಯುಯಲ್ ಸಿಮ್ ಬೆಂಬಲ ಮತ್ತು VGA ರಿಯರ್‌ ಕ್ಯಾಮೆರಾಗಳನ್ನು ಹೊಂದಿವೆ. ಜೊತೆಗೆ ಈ ಫೀಚರ್‌ ಫೋನ್‌ಗಳು ಇಂಗ್ಲಿಷ್, ಹಿಂದಿ, ಗುಜರಾತಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಪಂಜಾಬಿ, ಬೆಂಗಾಲಿ, ಒರಿಯಾ, ಅಸ್ಸಾಮಿ ಮತ್ತು ಉರ್ದು ಭಾಷೆಯನ್ನು ಬೆಂಬಲಿಸಲಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಐಟೆಲ್ ಮ್ಯಾಜಿಕ್ ಎಕ್ಸ್ ಪ್ಲೇ ಫೀಚರ್‌ ಫೋನ್‌ 2,099ರೂ. ಬೆಲೆಗೆ ಲಭ್ಯವಾಗಲಿದೆ. ಇದು ಮಿಡ್ನೈಟ್ ಬ್ಲ್ಯಾಕ್ ಮತ್ತು ಮಿಂಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ.
ಇನ್ನು ಐಟೆಲ್ ಮ್ಯಾಜಿಕ್ ಎಕ್ಸ್ ಫೀಚರ್‌ ಫೋನ್‌ 2,299ರೂ. ಬೆಲೆಯನ್ನು ಪಡೆದಿದ್ದು, ಮಿಡ್ನೈಟ್ ಬ್ಲ್ಯಾಕ್ ಮತ್ತು ಪರ್ಲ್ ವೈಟ್‌ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಎರಡು ಫಿಚರ್‌ ಫೋನ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುತ್ತವೆ.

ಸ್ಮಾರ್ಟ್‌ಫೋನ್‌

ಇನ್ನು ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮವಾದ ಬೇಡಿಕೆ ಇದೆ. ಇದರಲ್ಲಿ ಟೆಕ್ನೋ, ಇನ್ಫಿನಿಕ್ಸ್‌ ಮತ್ತು ಐಟೆಲ್‌ ಕಂಪೆನಿಗಳು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಈ ಕಂಪೆನಿಗಳು ಟ್ರಾನ್ಸಿಶನ್ ಗ್ರೂಪ್ ಬ್ರ್ಯಾಂಡ್‌ಗಳಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಎರಡನೇ ತ್ರೈಮಾಸಿಕದಲ್ಲಿ ಭಾರತದ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ 12% ಪಾಲನ್ನು ಪಡೆದುಕೊಂಡಿವೆ. ಆದರಿಂದ ಸ್ವದೇಶಿ ಬ್ರಾಂಡ್‌ಗಳಿಗೆ ಹೆಚ್ಚು ಅಗತ್ಯವಿರುವ ಉತ್ತೇಜನವನ್ನು ನೀಡಲು ಭಾರತ ಸರ್ಕಾರ ಮುಂದಾಗಿದೆ.

Best Mobiles in India

English summary
itel Magic X and Magic X Play feature phones launched in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X