ಐವೋಮಿ ಲಾಂಚ್ ಮಾಡಿದೆ ಫೇಶಿಯಲ್ ರೆಕಗ್ನಿಶನ್ ಉಳ್ಳ ಆನಿವರ್ಸರಿ ಎಡಿಶನ್ i1s, ಬೆಲೆ ರೂ 7499

By Tejaswini P G
|

ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ತನ್ನ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಐವೋಮಿ ಈ ಸಂದರ್ಭದಲ್ಲಿ ಫೇಶಿಯಲ್ ರೆಕಗ್ನಿಶನ್ ತಂತ್ರಜ್ಞಾನ ಹೊಂದಿರುವ ಆನಿವರ್ಸರಿ ಎಡಿಶನ್ i1s ಅನ್ನು ಲಾಂಚ್ ಮಾಡುತ್ತಿದ್ದು, ಈ ಮೂಲಕ ಭಾರತದಲ್ಲಿ ಬಜೆಟ್ ಸ್ಮಾರ್ಟ್ಫೋನ್ ವಿಭಾಗದಲ್ಲಿ ಫೇಸ್ ಅನ್ಲಾಕ್ ಫೀಚರ್ ಅನ್ನು ನೀಡಹೊರಟಿದೆ. ಈ ಆನಿವರ್ಸರಿ ಎಡಿಶನ್ ನ ಕ್ಲಾಸಿಕ್ ಬ್ಲ್ಯಾಕ್ ಆವೃತ್ತಿ ಮಾರ್ಚ್ 9, 2018 ರಿಂದ ಖರೀದಿಗೆ ಲಭ್ಯವಾಗಲಿದ್ದು, ಫ್ಲಿಪ್ಕಾರ್ಟ್ ನಲ್ಲಿ ಮಾತ್ರ ಖರೀದಿಸಬಹುದಾಗಿದೆ.

ಐವೋಮಿ ಲಾಂಚ್ ಮಾಡಿದೆ ಫೇಶಿಯಲ್ ರೆಕಗ್ನಿಶನ್ ಉಳ್ಳ ಆನಿವರ್ಸರಿ ಎಡಿಶನ್ i1s

ಐವೋಮಿ ಯ ಫೇಸ್ ಅನ್ಲಾಕ್ ಫೀಚರ್ ಇನ್ಫ್ರಾರೆಡ್ ಡೆಪ್ತ್- ಮ್ಯಾಪಿಂಗ್ ಕ್ಯಾಮೆರಾ ಬದಲಿಗೆ ಸಾಮಾನ್ಯ ಸೆಲ್ಫೀ ಕ್ಯಾಮೆರಾ ವನ್ನೇ ಬಳಸುತ್ತದೆ. ಈ ಮೂಲಕ ಅದು ತನ್ನ ಫೇಶಿಯಲ್ ಸ್ಕ್ಯಾನ್ ಅನನ್ಯ ಮತ್ತು ಹೆಚ್ಚು ವೇಗವಾಗಿ ಕೆಲಸಮಾಡುತ್ತದೆ ಎಂದು ಐವೋಮಿ ಹೇಳಿದೆ.

ಐವೋಮಿ ಸಂಸ್ಥೆಯು ತನ್ನ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ಗಳಾದ i1, i1s, ಮಿ3 ಮತ್ತು ಮಿ3s ಮೊಬೈಲ್ಗಳನ್ನು ಮಾರ್ಚ್ 9 ರಿಂದ 31,2018 ರ ಒಳಗೆ ಖರೀದಿಸಿದರೆ 2 ವರ್ಷಗಳ ವ್ಯಾರೆಂಟಿಯನ್ನು ನೀಡಲಿದೆ. ಆಲ್ಲದೆ ಆನಿವರ್ಸರಿ ಎಡಿಶನ್ i1s ಮೇಲೆ ರೂ 2,200 ಇನ್ಸ್ಟೆಂಟ್ ಕ್ಯಾಶಬ್ಯಾಕ್ ನ ಜಿಯೋ ಫುಟ್ಬಾಲ್ ಆಫರ್ ಕೂಡ ಅನ್ವಯವಾಗಲಿದ್ದು, ಒಟ್ಟಾಗಿ ಈ ಮೊಬೈಲ್ ರೂ 5,299 ಕ್ಕೆ ಲಭ್ಯವಾಗಲಿದೆ.

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!

ಈ ಕುರಿತು ಮಾತನಾಡಿದ ಐವೋಮಿ ಇಂಡಿಯಾ ದ CEO ಆದ ಆಶ್ವಿನ್ ಭಂಡಾರಿ ಇವರು" ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಐವೋಮಿ ಯ ಪ್ರಯಾಣ ಈವರೆಗೆ ತುಂಬಾ ಉತ್ತೇಜನಕಾರಿಯಾಗಿದ್ದು, ವರ್ಷಪೂರ್ತಿ ಬೆಲೆಗೆ ತಕ್ಕ ಮೊಬೈಲ್ಗಳನ್ನು ನೀಡುವಲ್ಲಿ ಐವೋಮಿ ಸಫಲವಾಗಿದೆ. ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸುವ ಉತ್ಪನ್ನಗಳ ಕುರಿತು ಈಗ ಸ್ಪಷ್ಟ ಚಿತ್ರಣ ಪಡೆದಿರುವ ನಾವು ನಮ್ಮ ಮುಂದಿನ ಹಾದಿಯನ್ನು ಗುರುತಿಸಿ ಮುನ್ನಡೆಲಿದ್ದೇವೆ. ಚಿಕ್ಕ ಪಟ್ಟಣಗಳಲ್ಲಿ ಪೂರೈಕೆಯಾಗದೆ ಉಳಿದಿರುವ ಬೇಡಿಕೆಗಳೇ ನಮ್ಮ ಗುರಿಯಾಗಿದ್ದು ಅದನ್ನು ಪೂರೈಸುವತ್ತ ನಾವು ಶ್ರಮಿಸಲಿದ್ದೇವೆ" ಎಂದು ಹೇಳಿದ್ದಾರೆ.

ಏರ್‌ಟೆಲ್‌ಗೆ ತಿರುಗು ಬಾಣ: ಒಂದಾದ ಜಿಯೋ-ಇಂಟೆಕ್ಸ್, ಮಾರುಕಟ್ಟೆಯಲ್ಲಿ ಹೊಸ ಸಂಚಲನ..!

"ಎಲ್ಲಾ ಐವೋಮಿ ಉತ್ಪನ್ನಗಳು ನಾವೀನ್ಯತೆಯಿಂದ ಕೂಡಿದ್ದು, ನಾವು ನಮ್ಮ ಉತ್ಪನ್ನಗಳಲ್ಲಿ ಜಾಗತಿಕ ಮಟ್ಟದ ತಂತ್ರಜ್ಞಾನವನ್ನು ನೀಡ ಬಯಸುತ್ತೇವೆ. ನಮ್ಮ ನೂತನ ಸ್ಮಾರ್ಟ್ಫೋನ್ ಆನಿವರ್ಸರಿ ಎಡಿಶನ್ i1s ನಲ್ಲಿರುವ ಫೇಶಿಯಲ್ ರೆಕಗ್ನಿಶನ್ ಫೀಚರ್ ಇದಕ್ಕೆ ಸಾಕ್ಷಿಯಾಗಿದ್ದು, ರೂ 8000 ದ ಒಳಗಿನ ಬೆಲೆಯ ಶ್ರೇಣಿಯ ಮೊಬೈಲ್ಗಳಲ್ಲಿ ಫೆಸ್ ಅನ್ಲಾಕ್ ಫೀಚರ್ ನೀಡುವಲ್ಲಿ ನಾವು ಮೊದಲಿಗರಾಗಿದ್ದೇವೆ" ಎಂದು ಅವರು ಹೇಳಿದರು.

ಆನಿವರ್ಸರಿ ಎಡಿಶನ್ i1s ಐವೋಮಿ ಯ ಸ್ಮಾರ್ಟ್ ಮಿ 2.0 ಓಎಸ್ ಹೊಂದಿದ್ದು , ಇದು ಆಂಡ್ರಾಯ್ಡ್ ನುಗಾಟ್ 7.0 ಇಂದ ಬೆಂಬಲಿತವಾಗಿದೆ. ಈ ಆಪರೇಟಿಂಗ್ ಸಿಸ್ಟಮ್ ನಲ್ಲಿ 3D ಸ್ಮಾರ್ಟ್ ವಿಜೆಟ್, ಚೈಲ್ಡ್ ಮೋಡ್, ಫೇಸ್ ಏಜ್ ಮೋಡ್ , ವಾಟರ್ಮಾರ್ಕ್ ಫೋಟೋಸ್, ಟೈಮ್-ಲ್ಯಾಪ್ಸ್ ಮೋಡ್, ಪನೋರಮಾ ಮೋಡ್, ಫಿಲ್ಟರ್ಸ್, ರಿಯಲ್-ಟೈಮ್ ಲೆವೆಲ್ 7 ಬ್ಯೂಟಿ ಇಫೆಕ್ಟ್ ಮೊದಲಾದ ಫೀಚರ್ಗಳಿವೆ.

ಆಬ್ಸೊಲ್ಯೂಟ್ ವ್ಯೂ ಹೊಂದಿರುವ ಆನಿವರ್ಸರಿ ಎಡಿಶನ್ ಐವೋಮಿ i1s ಸ್ಕ್ರೀನ್ ನ ಗಾತ್ರ 5.45 ಇಂಚ್ ಇದ್ದು, HD ಇನ್ಫಿನಿಟಿ ಎಡ್ಜ್ ಡಿಸ್ಪ್ಲೇ (18:9 ಸ್ಕ್ರೀನ್ ಅನುಪಾತ) ಹೊಂದಿದೆ. ಅಲ್ಲದೆ 13MP+2MP ಡ್ಯುಯಲ್ ರೇರ್ ಕ್ಯಾಮೆರಾ, ಹಿಂಬದಿಯಲ್ಲಿ ಒನ್-ಟಚ್ ಫಿಂಗರ್ಪ್ರಿಂಟ್ ಸೆನ್ಸರ್, 3GB RAM + 32GB ROM ಇದ್ದು ಅದನ್ನು 128GB ವರೆಗೆ ವಿಸ್ತರಿಸಬಹುದಾಗಿದೆ. ಆನಿವರ್ಸರಿ ಎಡಿಶನ್ ಐವೋಮಿ i1s 3000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Most Read Articles
Best Mobiles in India

Read more about:
English summary
iVOOMi celebrates its first year in the Indian market with the launch of its Anniversary Edition i1s with facial recognition technology.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more