ಭಾರತದಲ್ಲಿ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ನೀಡಲು ಮುಂದಾದ ಜಿಯೋ!

|

ದೇಶದ ಟೆಲಿಕಾಂ ವಲಯದಲ್ಲಿ ಹೊಸ ಕ್ರಾಂತಿ ಮಾಡಿದ ಜಿಯೋ ಇದೀಗ ಹೊಸ ಹೆಜ್ಜೆ ಇಡಲು ಮುಂದಾಗಿದೆ. ತನ್ನ ಬಳಕೆದಾರರಿಗೆ ತಡೆರಹಿತ ಬ್ರಾಡ್‌ಬ್ಯಾಂಡ್‌ ಸೇವೆ ನೀಡುವುದಕ್ಕಾಗಿ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ ಲಕ್ಸೆಂಬರ್ಗ್ ಮೂಲದ ದೂರಸಂಪರ್ಕ ಕಂಪನಿ SES ಜೊತೆಗೆ ಸಹಭಾಗಿತ್ವಕ್ಕೆ ಮುಂದಾಗಿದೆ. ಇದರ ಸಹಭಾಗಿತ್ವದಲ್ಲಿ ಭಾರತದಾದ್ಯಂತ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಪ್ರಾರಂಭಿಸುವುದಾಗಿ ಹೇಳಿದೆ.

ಬ್ರಾಡ್‌ಬ್ಯಾಂಡ್

ಹೌದು, ಜಿಯೋ ಹೊಸ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ನೀಡುವುದಕ್ಕೆ ಮುಂದಾಗಿದೆ. ಇದಕ್ಕಾಗಿ SES ಸಹಭಾಗಿತ್ವವನ್ನು ಸಹ ಪಡೆದುಕೊಂಡಿದೆ. ಜಿಯೋ ಸ್ಪೇಸ್ ಟೆಕ್ನಾಲಜಿ ಲಿಮಿಟೆಡ್ ಕಾಂಬಿನೇಶನ್ ಆಫ್‌ ಜಿಯೋ ಸ್ಟೇಷನರಿ (GEO) ಮತ್ತು ಮೀಡಿಯಂ ಅರ್ಥ ಆರ್ಬಿಟ್‌ (MEO) ಸ್ಯಾಟ್‌ಲೈಟ್‌ ನಕ್ಷತ್ರಪುಂಜಗಳ ಸಂಯೋಜನೆಯನ್ನು ನಿಯಂತ್ರಿಸಲಿದೆ. ಹಾಗಾದ್ರೆ ಜಿಯೋ ಘೋಷಣೆ ಮಾಡಿರುವ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್‌ ಸೇವೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಟೆಲಿಕಾಂ

ಜಿಯೋ ಟೆಲಿಕಾಂ ವಲಯದಲ್ಲಿ ಹೊಸ ಕ್ರಾಂತಿಗೆ ಮುಂದಾಗಿದೆ. ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್‌ ಸೇವೆಗಳ ಮೊಲ ಹೊಸ ಅಭಿವೃದ್ದಿ ಪಥಕ್ಕೆ ಹೆಜ್ಜೆ ಇಡಲು ಮುಂದಾಗಿದೆ. ಇನ್ನು ಈ ಬ್ರಾಡ್‌ಬ್ಯಾಂಡ್ ಸೇವೆಯು, ಎಂಟರ್‌ಪ್ರೈಸಸ್, ಮೊಬೈಲ್ ಬ್ಯಾಕ್‌ಹಾಲ್ ಮತ್ತು ರಿಟೇಲ್‌ ಕಸ್ಟಮರ್ಸ್‌ಗೆ ಗರಿಷ್ಠ 100Gbps ವೇಗದೊಂದಿಗೆ ಮಲ್ಟಿ-ಗಿಗಾಬಿಟ್ ಲಿಂಕ್ಸ್‌ ಸಾಮರ್ಥ್ಯವನ್ನು ಹೊಂದಿದೆ ಎಂದು ಜಿಯೋ ಹೇಳಿದೆ. ಸದ್ಯ ಜಿಯೋದ ಹೊಸ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗೆ ಯಾವುದೇ ಹೆಸರನ್ನು ಸೂಚಿಸಿಲ್ಲ.

ಬ್ರಾಡ್‌ಬ್ಯಾಂಡ್

ಜಿಯೋ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ಯಾವುದೇ ಹೆಸರು ಹೊಂದಿಲ್ಲ ನಿಜ, ಆದರೆ ಭಾರತದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆ ನೀಡಲು ಬಯಸುತ್ತಿರುವ ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಸೇವೆಗೆ ಪ್ರಬಲ ಪೈಪೋಟಿ ನೀಡಲಿದೆ. ಇನ್ನು ಜಿಯೋ ಎಸ್‌ಇಎಸ್‌ ಸಹಭಾಗಿತ್ವದಲ್ಲಿ 51% ಪಾಲುದಾರಿಕೆಯನ್ನು ಹೊಂದಿದೆ ಎಂದು ಘೋಷಿಸಿದೆ. ಇದರಲ್ಲಿ SES 49% ಪಾಲುದಾರಿಕೆಯನ್ನು ಪಡೆದುಕೊಂಡಿದೆ. ಇನ್ನು SES ಸಂಸ್ಥೆ ಉತ್ತಮ ಗುಣಮಟ್ಟದ ವೀಡಿಯೊ ಕಂಟೆಂಟ್‌ ಮತ್ತು ಪ್ರಪಂಚದಾದ್ಯಂತ ತಡೆರಹಿತ ಕನೆಕ್ಟಿವಿಟಿಯನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. SES ಪ್ರಪಂಚದ ಏಕೈಕ ಬಹು-ಕಕ್ಷೆಯ ಸಮೂಹವನ್ನು ನಿರ್ವಹಿಸುತ್ತದೆ.

ಮೊಬೈಲ್

ಇದಲ್ಲದೆ SES ಸಂಸ್ಥೆ ಉತ್ತಮ ಗುಣಮಟ್ಟದ ಕನೆಕ್ಟಿವಿಟಿ ಸಲ್ಯೂಶನ್‌ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಭೂಮಿಯಲ್ಲಿ, ಸಮುದ್ರದಲ್ಲಿ ಅಥವಾ ಗಾಳಿಯಲ್ಲಿ ಎಲ್ಲ ವಲಯದಲ್ಲೂ ವಿಶ್ವದ ಪ್ರಮುಖ ಸಂಸ್ಥೆಗಳ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ದೂರಸಂಪರ್ಕ ಕಂಪನಿಗಳು, ಮೊಬೈಲ್ ನೆಟ್‌ವರ್ಕ್ ಆಪರೇಟರ್‌ಗಳು, ಸರ್ಕಾರಗಳು, ಕನೆಕ್ಟಿವಿಟಿ ಮತ್ತು ಕ್ಲೌಡ್ ಸೇವಾ ಪೂರೈಕೆದಾರರು, ವೀಡಿಯೊ ವೇದಿಕೆ ನಿರ್ವಾಹಕರ ಜೊತೆಗೆ ಒಪ್ಪಂದ ಮಾಡಿದೆ. ಸಿಎಸ್‌ ಕಂಪೆನಿ ಇಲ್ಲಿಯನ ತನಕ 8,500 ಕ್ಕೂ ಹೆಚ್ಚು ಚಾನಲ್‌ಗಳನ್ನು ಹೊಂದಿದೆ.

ಜಿಯೋ

ಈ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ಜಿಯೋ ಡೈರೆಕ್ಟರ್‌ ಆಕಾಶ್ ಅಂಬಾನಿ, ನಾವು ನಮ್ಮ ಫೈಬರ್-ಆಧಾರಿತ ಸಂಪರ್ಕ ಮತ್ತು FTTH ವ್ಯವಹಾರವನ್ನು ವಿಸ್ತರಿಸುವುದನ್ನು ಮುಂದುವರೆಸುತ್ತೇವೆ. ಜೊತೆಗೆ 5G ನಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ. SES ನೊಂದಿಗೆ ಈ ಹೊಸ ಸಹಭಾಗಿತ್ವ ಮಲ್ಟಿಗಿಗಾಬಿಟ್ ಬ್ರಾಡ್‌ಬ್ಯಾಂಡ್‌ನ ಬೆಳವಣಿಗೆಯನ್ನು ಇನ್ನಷ್ಟು ವೇಗಗೊಳಿಸುತ್ತದೆ ಎಂದು ಹೇಳಿದ್ದಾರೆ. ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್‌ ಸೇವೆಯಿಂದ ಹೆಚ್ಚುವರಿ ಕವರೇಜ್ ಮತ್ತು ಸಾಮರ್ಥ್ಯಪಡೆಯಬಹುದು. ದೂರದ ಪಟ್ಟಣಗಳು ಮತ್ತು ಹಳ್ಳಿಗಳು, ಉದ್ಯಮಗಳು, ಸರ್ಕಾರಿ ಸಂಸ್ಥೆಗಳು ಮತ್ತು ಗ್ರಾಹಕರನ್ನು ಹೊಸ ಡಿಜಿಟಲ್ ಇಂಡಿಯಾಕ್ಕೆ ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

Best Mobiles in India

English summary
Reliance Jio announces it will launch satellite-based broadband services across India Partnership With SES

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X