ಜಿಯೋ ಎಫೆಕ್ಟ್: ಜೂನ್ 30 ರ ವರೆಗೆ ಬಿಎಸ್ಎನ್ಎಲ್ ಬಂಪರ್ ಆಫರ್ ವಿಸ್ತರಣೆ

By Gizbot Bureau
|

ಟೆಲಿಕಾಂ ಆಪರೇಟರ್ ಬಿಎಸ್ಎನ್ಎಲ್ ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಬಂಪರ್ ಆಫರ್ ನ್ನು ಮುಂದುವರಿಸುತ್ತಲೇ ಇದೆ. ಇದೀಗ ಈ ಆಫರ್ ಜೂನ್ 30 ರ ವರೆಗೂ ಕೂಡ ತನ್ನ ಬಳಕೆದಾರರಿಗೆ ಲಭ್ಯವಾಗಲಿದ್ದು ಹೆಚ್ಚುವರಿಯಾಗಿ 2.21ಜಿಬಿ ಡಾಟಾ ಪ್ರತಿದಿನ ಉಚಿತವಾಗಿರುತ್ತದೆ.

ಉಚಿತವಾಗಿ 2.21ಜಿಬಿ ಡಾಟಾ:

ಉಚಿತವಾಗಿ 2.21ಜಿಬಿ ಡಾಟಾ:

ಯಾವ ಗ್ರಾಹಕರು Rs 186, Rs 429, Rs 485, Rs 666, Rs 999, ಮತ್ತು Rs 1,699 ಪ್ರೀಪೇಯ್ಡ್ ಪ್ಲಾನ್ ನ್ನು ಖರೀದಿಸುತ್ತಾರೋ ಅವರಿಗೆ ಹೆಚ್ಚುವರಿಯಾಗಿ 2.21ಜಿಬಿ ಡಾಟಾ ಪ್ರತಿದಿನ ಉಚಿತವಾಗಿರುತ್ತದೆ. ಈ ಮೊದಲು ಈ ಆಫರ್ ನ್ನು ಎಪ್ರಿಲ್ 30ರ ವರೆಗೆ ಜನವರಿಯಲ್ಲಿ ವಿಸ್ತರಿಸಲಾಗಿತ್ತು ಮತ್ತು ಸೆಪ್ಟೆಂಬರ್ 18 ರಲ್ಲೂ ಕೂಡ ಇದೇ ರೀತಿಯ ಆಫರ್ ನ್ನು ಪ್ರಕಟಿಸಲಾಗಿತ್ತು.

ಬದಲಾದ ಪ್ಲಾನ್ ಗಳು:

ಬದಲಾದ ಪ್ಲಾನ್ ಗಳು:

ಇದೀಗ ಬದಲಾಗಿರುವ ಪ್ಲಾನ್ ನ ಅಡಿಯಲ್ಲಿ ಬಳಕೆದಾರರಿಗೆ ಪ್ರತಿದಿನ 3.21ಜಿಬಿ ಡಾಟಾ ಸಿಗುತ್ತದೆ. 186 ರುಪಾಯಿ ಮತ್ತು 429 ರುಪಾಯಿ ರೀಚಾರ್ಜ್ ಪ್ಲಾನ್ ನ ಅಡಿಯಲ್ಲಿ 1 ಜಿಬಿ ಡಾಟಾದ ಬದಲಾಗಿ ಹೆಚ್ಚುವರಿ ಡಾಟಾ ಸಿಗುತ್ತದೆ.

ಹೆಚ್ಚುವರಿ ಡಾಟಾ:

ಹೆಚ್ಚುವರಿ ಡಾಟಾ:

ರುಪಾಯಿ 485 ಮತ್ತು ರುಪಾಯಿ 666 ರ ರೀಚಾರ್ಜ್ ಪ್ಲಾನ್ ಗಳು 3.7ಜಿಬಿ ಡಾಟಾವನ್ನು ಪ್ರತಿದಿನ ನೀಡುತ್ತವೆ. ಇನ್ನು ರುಪಾಯಿ 1,699 ರೀಚಾರ್ಜ್ ಪ್ಲಾನ್ ನಲ್ಲಿ ಇದೀಗ 4.21 ಜಿಬಿ ಡಾಟಾ ಪ್ರತಿದಿನ ಲಾಭವಾಗಿ ಸಿಗುತ್ತದೆ. ಈ ಮೊದಲು 2ಜಿಬಿ ಡಾಟಾ ಈ ಪ್ಲಾನಿನ ಅಡಿಯಲ್ಲಿ ಲಭ್ಯವಾಗುತ್ತಿತ್ತು.

ಚೆನೈ ಮತ್ತು ತಮಿಳುನಾಡಿಗೆ ಮಾತ್ರ:

ಚೆನೈ ಮತ್ತು ತಮಿಳುನಾಡಿಗೆ ಮಾತ್ರ:

ಆದರೆ ವಿಸ್ತರಣೆಯಾಗಿರುವ ಈ ಪ್ಲಾನ್ ಗಳು ಚೆನೈ ಮತ್ತು ತಮಿಳುನಾಡು ಸರ್ಕಲ್ ನಲ್ಲಿ ಮಾತ್ರವೇ ಲಭ್ಯವಾಗುತ್ತದೆ. ಈ ಪ್ರತಿದಿನದ ಡಾಟಾ ವಿಸ್ತರಣೆಯ ಆಫರ್ ಆಯ್ದ ಕೆಲವು STV ಗಳಿಗೂ ಅನ್ವಯಿಸುತ್ತದೆ ಉದಾಹರಣೆಗೆ STV 187, STV 349, STV 399 ಮತ್ತು STV 447.

ಜಿಯೋ ಎಫೆಕ್ಟ್:

ಜಿಯೋ ಎಫೆಕ್ಟ್:

ಈ ರೀತಿಯ ಬದಲಾವಣೆಯನ್ನು ಬಿಎಸ್ಎನ್ಎಲ್ ಮಾಡುತ್ತಿರುವುದಕ್ಕೆ ಪ್ರಮುಖ ಕಾರಣ ಜಿಯೋದಿಂದ ಬಿಎಸ್ಎನ್ಎಲ್ ಎದುರಿಸುತ್ತಿರುವ ಸ್ಪರ್ಧೆ. ಹೌದು ಜಿಯೋ ಕೂಡ ಇಂತಹ ಭರ್ಜರಿ ಡಾಟಾ ಆಫರ್ ಗಳನ್ನು ನೀಡುತ್ತಿರುವುದರ ಪರಿಣಾಮ ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವುದಕ್ಕೆ ಬಿಎಸ್ಎನ್ಎಲ್ ಈ ತಂತ್ರಗಾರಿಕೆಯನ್ನು ಬಳಸುತ್ತಿದೆ ಮತ್ತು ಹೊಸ ಗ್ರಾಹಕರನ್ನು ಸೆಳೆಯುವುದಕ್ಕೂ ಕೂಡ ಪ್ರಯತ್ನಿಸುತ್ತಿದೆ.

Best Mobiles in India

English summary
Jio Effect: BSNL Bumper Offer Extended Till June 30, Offers 2.21GB Data per day

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X