ಜಿಯೋ ಗಿಗಾಫೈಬರ್ ಬ್ರಾಡ್ ಬ್ಯಾಂಡ್: ಹೊಸ ಕನೆಕ್ಷನ್ ಗಾಗಿ ನೀವೆಷ್ಟು ಪಾವತಿಸಬೇಕು ಗೊತ್ತಾ?

By Gizbot Bureau
|

ರಿಲಯನ್ಸ್ ಜಿಯೋ ಇದುವರೆಗೂ ಕಮರ್ಷಿಯಲ್ ಆಗಿ ಯಾವಾಗ FTTH ಬ್ರಾಡ್ ಬ್ಯಾಂಡ್ ಸೇವೆ ಜಿಯಾ ಗಿಗಾಫೈಬರ್ ಕನೆಕ್ಷನ್ ಆರಂಭವಾಗುತ್ತದೆ ಎಂಬ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ ಆದರೆ ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತದ ಪ್ರಮುಖ ಸಿಟಿಗಳಲ್ಲಿ ಜಿಯೋ ಗಿಗಾಫೈಬರ್ ಬರುವ ಸಾಧ್ಯತೆ ಇದೆ. ಈಗಾಗಲೇ ಕೆಲವು ಸಿಟಿಗಳಲ್ಲಿ ಉಚಿತವಾಗಿ ಟ್ರಯಲ್ ರನ್ ನಡೆಯುತ್ತಿದೆ. ಆದರೆ ಅದಕ್ಕಾಗಿ ಕೆಲವು ಆಯ್ದ ಪ್ರದೇಶಗಳನ್ನು ಮಾತ್ರವೇ ತೆಗೆದುಕೊಳ್ಳಲಾಗಿದೆ.

ಮಾರ್ಚ್ ನಲ್ಲಿ ಸಾಧ್ಯವಿಲ್ಲ:

ಮಾರ್ಚ್ ನಲ್ಲಿ ಸಾಧ್ಯವಿಲ್ಲ:

ಈ ಹಿಂಗೆ ಮಾರ್ಚ್ ನಲ್ಲಿ ಇದರ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಸದ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಇದರ ಬಿಡುಗಡೆ ಇನ್ನೂ ಮುಂದೆ ಹೋಗುವ ಸಾಧ್ಯತೆ ಇದ್ದು ಜೂನ್ ಅಥವಾ ಜುಲೈ ವೇಳೆಗೆ ದೇಶದ ಪ್ರಮುಖ ಸಿಟಿಗಳಲ್ಲಿ ಜಿಯೋ ಗಿಗಾಫೈಬರ್ ಲಭ್ಯವಾಗುವ ಸಾಧ್ಯತೆ ಇದೆ.

ಕನೆಕ್ಷನ್ ಯಾರಿಗೆ ಕೊಡುವುದು?

ಕನೆಕ್ಷನ್ ಯಾರಿಗೆ ಕೊಡುವುದು?

ಸದ್ಯ ಜಿಯೋ ಸೇಲ್ ಗಾಗಿ ಪ್ರದೇಶವನ್ನು ಅಣಿಗೊಳಿಸುತ್ತಿದೆ(ರೆಡಿ ಫಾರ್ ಸೇಲ್ (RFS)). RFS ಅಂದರೆ ಜಿಯೋ ಅಧಿಕಾರಿಗಳು ತಮಗೆ ನೀಡಲಾಗಿರುವ ಪ್ರದೇಶವನ್ನು ಪ್ರವೇಶಿಸಿ ಅಲ್ಲಿರುವ ಮನೆಗಳಲ್ಲಿ ಮತ್ತು ಆಫೀಸಿನಂತ ಪ್ರದೇಶದಲ್ಲಿ ಜಿಯೋ ಗಿಗಾ ಸೇವೆಯ ಬಗ್ಗೆ ತಿಳಿಸಿ ಅವರ ಬಳಿ ಗಿಗಾ ಫೈಬರ್ ಸೇವೆ ಹಾಕಿಸಿಕೊಳ್ಳುವುದಕ್ಕೆ ಮನವೊಲಿಸಿ ಸೇವೆ ಪಡೆಯುವಂತೆ ಮಾಡುವುದು. ಒಂದು ವೇಳೆ ಅವರು ಸೇವೆ ಪಡೆಯಲು ಒಪ್ಪಿಕೊಂಡರೆ ಆ ಪ್ರದೇಶದಲ್ಲಿರುವ ಎಕ್ಸಿಕ್ಯೂಟ್ ಗಳು ಅವರಿಗೆ ಗಿಗಾ ಫೈಬರ್ ಸೇವೆಯನ್ನು ಅಳವಡಿಸಿಕೊಡುತ್ತಾರೆ.

ಕಂಪೆನಿಯ ಟಾರ್ಗೆಟ್:

ಕಂಪೆನಿಯ ಟಾರ್ಗೆಟ್:

ಕಂಪೆನಿಯು ಮೊದಲು ಮಲ್ಟಿಪಟ್ ಡ್ವೆಲ್ಲಿಂಗ್ ಯುನಿಟ್ (MDU) ಮಾಡುತ್ತಿದೆ ಉದಾಹರಣೆಗೆ ಹೈ ರೈಸಿಂಗ್ ಸೊಸೈಟಿಗಳು ಅಂದರೆ ಆಫೀಸ್ಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಮತ್ತು ನಂತರ ಸಿಂಗಲ್ ಡ್ವೆಲ್ಲಿಂಗ್ ಯುನಿಟ್ ಗಳು ಉದಾಹರಣೆಗೆ ವಯಕ್ತಿಕ ಮನೆಗಳು ಇತ್ಯಾದಿ.

ಪ್ರಿವ್ಯೂ ಆಫರ್:

ಪ್ರಿವ್ಯೂ ಆಫರ್:

ಜಿಯೋ ಗಿಗಾಫೈಬರ್ ಪ್ರಿವ್ಯೂ ಆಫರ್ ನ್ನು ನೀಡುತ್ತಿದ್ದು ಅದರ ಅಡಿಯಲ್ಲಿ 1100ಜಿಬಿ ಡಾಟಾ ಬೆನಿಫಿಟ್ ಜೊತೆಗೆ 100Mbps ಸ್ಪೀಡ್ ನಲ್ಲಿ ಮೊದಲ ಮೂರು ತಿಂಗಳ ಅವಧಿಗೆ ನೀಡಲಾಗುತ್ತಿದೆ. ಜಿಯೋ ಗಿಗಾಫೈಬರ್ ಸೇವೆಯು ಸದ್ಯಕ್ಕೆ ಉಚಿತವಾಗಿ ಸಿಗುತ್ತಿದೆ. ಕಂಪೆನಿ ಯಾವುದೇ ಇನ್ಸ್ಟಾಲೇಷನ್ ಫೀಸ್ ಅಥವಾ ಕನೆಕ್ಷನ್ ಮಾಡಿರುವ ವಯರ್ರಿನ ಚಾರ್ಜ್ ನ್ನು ಕೂಡ ಕೇಳುತ್ತಿಲ್ಲ.

ಡಿವೈಸ್ ಇನ್ಸ್ಟಾಲೇಷನ್:

ಡಿವೈಸ್ ಇನ್ಸ್ಟಾಲೇಷನ್:

ಆದರೆ ಬಳಕೆದಾರರು 4500 ರುಪಾಯಿಯನ್ನು ಇನ್ಸ್ಟಾಲೇಷನ್ ಗಾಗಿ ಮುಂದಿನ ದಿನಗಳಲ್ಲಿ ಸೆಕ್ಯುರಿಟಿ ಡೆಪಾಸಿಟ್ ಆಗಿ ಪಾವತಿ ಮಾಡಬೇಕಾಗುತ್ತದೆ ಮತ್ತು ಈ ಮೊತ್ತವು ನೀವು ಕನೆಕ್ಷನ್ ನ್ನು ಹಿಂತಿರುಗಿಸಿದಾಗ ಸಂಪೂರ್ಣ ಮರುಪಾವತಿ ಮಾಡಲಾಗುತ್ತದೆ. ಕನೆಕ್ಷನ್ ಪಡೆಯುವುದಕ್ಕಾಗಿ ಯಾವುದೇ ಗರಿಷ್ಟ ಅಥವಾ ಕನಿಷ್ಟ ದಿನಗಳ ಲಿಮಿಟ್ ಇರುವುದಿಲ್ಲ . ಡಿವೈಸ್ ನ್ನು ನೀವು ಎಷ್ಟು ದಿನಗಳಿಗೆ ಬೇಕಿದ್ದರೂ ಬಳಕೆಗಾಗಿ ಖರೀದಿಸಲು ಅವಕಾಶವಿರುತ್ತದೆ. ಎರಡು ದಿನ ಅಥವಾ ಎರಡು ವರ್ಷ ಬೇಕಿದ್ದರೂ ನೀವು ಡಿವೈಸ್ ಬಳಕೆ ಮಾಡಬಹುದು. ಡಿವೈಸ್ ವರ್ಕಿಂಗ್ ಕಂಡೀಷನ್ನಿನಲ್ಲಿ ಇದ್ದು ಯಾವುದೇ ದೈಹಿಕ ಡ್ಯಾಮೇಜ್ ಡಿವೈಸ್ ಗೆ ಆಗದೇ ಇದ್ದಲ್ಲಿ ಸಂಪೂರ್ಣ ಮೊತ್ತ ಮರುಪಾವತಿಯಾಗುತ್ತದೆ.

ಆರಂಭಿಕ ಪ್ಲಾನ್ ಬೆಲೆ 500 ರುಪಾಯಿ:

ಆರಂಭಿಕ ಪ್ಲಾನ್ ಬೆಲೆ 500 ರುಪಾಯಿ:

ಇದು ಸದ್ಯ ಪ್ರಿವ್ಯೂ ಆಫರ್ ನಲ್ಲಿ ಲಭ್ಯವಿರುವ ಜಿಯೋ ಗಿಗಾಫೈಬರ್ ಬೆಲೆ. ಮುಂದಿನ ದಿನಗಳಲ್ಲೂ ಕೂಡ ಇದೇ ಬೆಲೆ ಕಮರ್ಷಿಯಲ್ ಆಗಿ ಇರುತ್ತದೆ ಎಂದು ನಂಬಲಾಗಿದೆ. ಜಿಯೋ ಆರಂಭಿಕವಾಗಿ 500 ರುಪಾಯಿ ಬೆಲೆಯ ಬ್ರಾಡ್ ಬ್ಯಾಂಡ್ ಪ್ಲಾನ್ ನ್ನು ಆರಂಭಿಸಲಿದ್ದು 300ಜಿಬಿ ಮಾಸಿಕ ಡಾಟಾ ಇದರಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.ಪ್ಲಾನ್ ಮೂರು ವಿಭಿನ್ನ ಕೆಟಗರಿಯಲ್ಲಿ ಸಿಗುತ್ತದೆ - ಜಿಯೋ ಗಿಗೈಫೈಬರ್ ಸ್ಪೀಡ್ ಆಧಾರಿತ ಪ್ಲಾನ್, ಜಿಯೋ ಗಿಗಾಫೈಬರ್ ವಾಲ್ಯೂಮ್ ಆಧಾರಿತ ಪ್ಲಾನ್ ಮತ್ತು ಜಿಯೋ ಗಿಗಾಫೈಬರ್ ಸ್ಪೆಷಲ್ ಬ್ರಾಡ್ ಬ್ಯಾಂಡ್ ಪ್ಲಾನ್.

Best Mobiles in India

Read more about:
English summary
Jio GigaFiber broadband: This is how much you may have to pay for a new connection

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X