ಮಾರ್ಚ್‌ನಲ್ಲಿ ಮನೆಮನೆಯಲ್ಲೂ ಜಿಯೋ ಗಿಗಾಫೈಬರ್ ಅಂತರ್ಜಾಲ ಸೇವೆ?

|

2019 ನೇ ವರ್ಷಕ್ಕೆ ಕಾಲಿಟ್ಟಾಗಿದೆ. ಕೆಲವೇ ತಿಂಗಳಲ್ಲಿ ಜಿಯೋ ಗಿಗಾಫೈಬರ್ ಭಾರತದ ಹೆಚ್ಚಿನ ನಗರಗಳನ್ನು ಪ್ರವೇಶಿಸಲಿದೆ. ಸದ್ಯದ ಮಟ್ಟಿಗೆ ನಮಗೆ ತಿಳಿದಿರುವ ಮಾಹಿತಿಯ ಪ್ರಕಾರ ಮಾರ್ಚ್ ವೇಳೆಗಾಗಲೇ ಇದು ಸಾಕಾರವಾಗುತ್ತದೆ. ಈಗಾಗಲೇ ಟ್ರಯಲ್ ಸೇವೆಯು ಉಚಿತವಾಗಿ ಹಲವು ನಗರಗಳಲ್ಲಿ ಲಭ್ಯವಿದೆ ಮತ್ತು ದೆಹಲಿ,ಮುಂಬೈನ ಹಲವಾರು ಗ್ರಾಹಕರು ಜಿಯೋ ಗಿಗಾಫೈಬರ್ ನ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

ಮಾರ್ಚ್ ನಲ್ಲಿ ಕಮರ್ಷಿಯಲ್ ಆಗಿ ಬಿಡುಗಡೆ:

ಮಾರ್ಚ್ ನಲ್ಲಿ ಕಮರ್ಷಿಯಲ್ ಆಗಿ ಬಿಡುಗಡೆ:

ಗಾಜಿಯಾಬಾದ್ ನಲ್ಲಿ ಜಿಯೋಗಿಗಾಫೈಬರ್ ಬಳಸುತ್ತಿರುವವರೊಬ್ಬರ ಅಭಿಪ್ರಾಯ ಸಂಗ್ರಹಿಸಿ ಇತ್ತೀಚೆಗೆ ನಾವೊಂದು ವರದಿ ಸಲ್ಲಿಸಿದ್ದೆವು. ಇದೀಗ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜಿಯೋ ಗಿಗಾಫೈಬರ್ ಸೇವೆಯು 2019 ರ ಮಾರ್ಚ್ ವೇಳೆಗಾಗಲೇ ಕಮರ್ಷಿಯಲ್ ಆಗಿ ಹೆಚ್ಚಿನ ನಗರಗಳಲ್ಲಿ ಲಭ್ಯವಾಗಲಿದೆ ಎಂಬುದಾಗಿ ಸಂಸ್ಥೆಯ ಮೂಲಗಳಿಂದ ತಿಳಿದುಬಂದಿದೆ.

ಕಡಿಮೆ ಬೆಲೆಯಲ್ಲಿ ಮನೆಮನೆಯಲ್ಲೂ ಅಂತರ್ಜಾಲ:

ಕಡಿಮೆ ಬೆಲೆಯಲ್ಲಿ ಮನೆಮನೆಯಲ್ಲೂ ಅಂತರ್ಜಾಲ:

41 ನೇ ಕಂಪೆನಿಯ ವಾರ್ಷಿಕ ಮೀಟಿಂಗ್ ನಲ್ಲಿ ಜಿಯೋ ಗಿಗಾಫೈಬರ್ ಬಗ್ಗೆ ಮೊದಲ ಬಾರಿಗೆ ರಿಲಯನ್ಸ್ ಸಂಸ್ಥೆ ತಿಳಿಸಿತ್ತು. ಫಿಕ್ಸ್ಡ್ ಲೈನ್ಸ್ ಮೂಲಕ ಫೈಬರ್ ಟು ದಿ ಹೋಮ್ (FTTH) ಸೇವೆಯನ್ನು ನೀಡುವುದಾಗಿ ತಿಳಿಸಿದೆ.ಈ ಸೇವೆಯು 50 ಮಿಲಿಯನ್ ಮನೆಯನ್ನು ಭಾರತದಲ್ಲಿ ತಲುಪುವ ಉದ್ದೇಶವನ್ನು ಹೊಂದಿದೆ. ಒಂದು ಮನೆಯಲ್ಲಿ ಜಿಯೋ ಗಿಗಾಫೈಬರ್ ಸೆಟ್ ಅಪ್ ನಲ್ಲಿ ಜಿಯೋ ಗಿಗಾಫೈಬರ್ ರೂಟರ್ ಮತ್ತು ಜಿಯೋ ಗಿಗಾ ಟಿವಿ ಸೆಟ್ ಅಪ್ ಬಾಕ್ಸ್ ಅಳವಡಿಸುವ ಉದ್ದೇಶವನ್ನು ಹೊಂದಲಾಗಿದೆ. ಜಿಯೋ ಗಿಗಾಫೈಬರ್ ರೂಟರ್ ಮೂಲಕ ರನ್ನಿಂಗ್ ಇಂಟರ್ ನೆಟ್ ಸೇವೆಯನ್ನು ಹಲವಾರು ಡಿವೈಸ್ ಗಳಲ್ಲಿ 1Gbps ಸ್ಪೀಡ್ ನಲ್ಲಿ ಬಳಕೆ ಮುವುದಕ್ಕೆ ಅವಕಾಶವಿರುತ್ತದೆ. ನಿಮ್ಮ ಟೆಲಿವಿಷನ್ ಸೇವೆಗಳಿಗೂ ಇದು ನೆರವು ನೀಡುತ್ತದೆ.

ಮುಖೇಶ್ ಅಂಬಾನಿ ಹೇಳಿಕೆ:

ಮುಖೇಶ್ ಅಂಬಾನಿ ಹೇಳಿಕೆ:

ಮುಖೇಶ್ ಅಂಬಾನಿ ತಿಳಿಸಿರುವಂತೆ, ಜಿಯೋ ಗಿಗಾಫೈಬರ್ ದೊಡ್ಡ ಮಟ್ಟದ ಬ್ರಾಡ್ ಬ್ಯಾಂಡ್ ಸೇವೆಯಾಗಲಿದ್ದು ಭಾರತದ ಸುಮಾರು 1,100 ಸಿಟಿಗಳಲ್ಲಿನ ಜನರನ್ನು ತಲುಪಲಿದೆ ಮತ್ತು ವಿಶ್ವದ ಪ್ರಮುಖ ಬ್ರಾಡ್ ಬ್ಯಾಂಡ್ ಸೇವೆಯಾಗಿ ಗುರುತಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

1100 ನಗರಗಳಲ್ಲಿ ಜಿಯೋ ಗಿಗಾಫೈಬರ್:

1100 ನಗರಗಳಲ್ಲಿ ಜಿಯೋ ಗಿಗಾಫೈಬರ್:

ಫೋನ್,ಟಿವಿ, ಕಂಪ್ಯೂಟರ್ ಮತ್ತು ಇತ್ಯಾದಿ ಎಲ್ಲಾ ಡಿವೈಸ್ ಗಳಿಗೂ ಕೂಡ ಒಂದೇ ಸಮಯಕ್ಕೆ ಅಂತರ್ಜಾಲ ಸೇವೆಯನ್ನು ಒದಗಿಸುವ ಉದ್ದೇಶವನ್ನು ಜಿಯೋ ಗಿಗಾಫೈಬರ್ ಹೊಂದಿದೆ. ವಾಲ್-ಟು-ವಾಲ್ FTTH ಸೇವೆ ಎಂದರೆ ವಾಲ್ ನಲ್ಲಿ ಯಾವುದೇ ತೊಂದರೆ ಕಾಣಿಸದೇ ಇದ್ದಲ್ಲಿ ಅಂತರ್ಜಾಲದ ವೇಗದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಮೊದಲ ಹಂತದ ಬಿಡುಗಡೆಯ ಅಂಗವಾಗಿ ಈ ಸೇವೆಯು 1100 ನಗರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿದುಬಂದಿದ್ದು ಮಾರ್ಚ್ ವೇಳೆಗಾಗಲೇ ಲಭ್ಯವಾಗುತ್ತದೆ.

ಜಿಯೋ ಗಿಗಾಫೈಬರ್ ಬೆಟಾ ರನ್ ಉಚಿತವಾಗಿ ಬಳಕೆದಾರರಿಗೆ ಫೈಬರ್ ಅಂತರ್ಜಾಲ ನೀಡುತ್ತದೆ :

ಜಿಯೋ ಗಿಗಾಫೈಬರ್ ಬೆಟಾ ರನ್ ಉಚಿತವಾಗಿ ಬಳಕೆದಾರರಿಗೆ ಫೈಬರ್ ಅಂತರ್ಜಾಲ ನೀಡುತ್ತದೆ :

ಕಮರ್ಷಿಯಲ್ ರೋಲ್ ಔಟ್ ಗೂ ಮುನ್ನ ಸೇವೆಯನ್ನು ಪರೀಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಜಿಯೋ ಕೆಲವು ಪ್ರದೇಶಗಳನ್ನು ಆಯ್ದುಕೊಂಡಿದೆ. ಉದಾಹರಣೆಗೆ ದೆಹಲಿಯ -NCR ಪ್ರದೇಶಗಳಲ್ಲಿ ಕೆಲವು ಕಂಪೆನಿಗಳನ್ನು ಜಿಯೋ ಟಾರ್ಗೆಟ್ ಮಾಡಿಕೊಂಡಿದೆ ಮತ್ತು ಗಾಜಿಯಾಬಾದ್, ಗುರಗಾಂವ್ ಮತ್ತು ನೋಯ್ಡಾದ ಕೆಲವು ದೊಡ್ಡ ದೊಡ್ಡ ಬಿಲ್ಡಿಂಗ್ ಗಳಲ್ಲಿ ಈ ಸೇವೆಯನ್ನು ಉಚಿತವಾಗಿ ಪರೀಕ್ಷಾರ್ಥವಾಗಿ ಪ್ರಯೋಗ ನಡೆಸುತ್ತಿದೆ.

ಸ್ಮಾರ್ಟ್ ಹೋಮ್ ಗೆ ಸಮಯ ಬೇಕು:

ಸ್ಮಾರ್ಟ್ ಹೋಮ್ ಗೆ ಸಮಯ ಬೇಕು:

ಈಗಾಗಲೇ ಗಾಝಿಯಾಬಾದ್ ನಲ್ಲಿ ಬಳಸುತ್ತಿರುವವರಲ್ಲಿ ಒಬ್ಬರು ಮಾರ್ಚ್ ನಲ್ಲಿ ಕಮರ್ಷಿಯಲ್ ಆಗಿ ಜಿಯೋ ಗಿಗಾಫೈಬರ್ ಲಭ್ಯವಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಕಂಪೆನಿಯು ಲ್ಯಾಂಡ್ ಲೈನ್ ಮತ್ತು ಸೆಟ್-ಅಪ್-ಬಾಕ್ಸ್ ಸೇವೆಯನ್ನು ಕೂಡ ಇದೇ ಸಂದರ್ಬದಲ್ಲಿ ಸೇರಿಸುವುದಕ್ಕೆ ಕಂಪೆನಿ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ. ಆದರೆ ಜಿಯೋ ಸ್ಮಾರ್ಟ್ ಹೋಮ್ ಸಲ್ಯೂಷನ್ ನ್ನು ಆಕ್ಟಿವೇಟ್ ಮಾಡುವುದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು,

ಜಿಯೋ ಗಿಗಾಫೈಬರ್ ನ ಪ್ರೀವ್ಯೂ ಆಫರ್

ಜಿಯೋ ಗಿಗಾಫೈಬರ್ ನ ಪ್ರೀವ್ಯೂ ಆಫರ್

ಜಿಯೋ ಪ್ರಿವ್ಯೂ ಆಫರ್ ನ ಅನ್ವಯ ಮೊದಲ ಮೂರು ತಿಂಗಳಿಗೆ 1100ಜಿಬಿ ಪ್ರತಿ ತಿಂಗಳು ಡಾಟಾ ಉಚಿತವಾಗಿ ಲಭ್ಯವಾಗುತ್ತದೆ ಮತ್ತು ಅದರ ಸ್ಪೀಡ್ 100Mbps ಆಗಿರಲಿದೆ. ಕಮರ್ಷಿಯಲ್ ಬಿಡುಗಡೆಯ ಸಂದರ್ಬದಲ್ಲಿ ಅದರ ನೈಜ ಬೆಲೆಯನ್ನು ಪ್ರಕಟಿಸಲಾಗುತ್ತದೆ. ಆದರೆ ಈಗಾಗಲೇ ತಿಳಿದಿರುವಂತೆ ಜಿಯೋ ಗಿಗಾಫೈಬರ್ ಇನ್ಸ್ಟಾಲೇಷನ್ ಚಾರ್ಜ್ ಉಚಿತವಾಗಿರುತ್ತದೆ. ಆದರೆ 4500 ರುಪಾಯಿಯ ಸೆಕ್ಯುರಿಟಿ ಡೆಪಾಸಿಟ್ ನ್ನು ನೀಡುವಂತೆ ಗ್ರಾಹಕರ ಬಳಿ ಕಂಪೆನಿ ಕೇಳುತ್ತದೆ. ಕನೆಕ್ಷನ್ ನ್ನು ಹಿಂಪಡೆದ ಸಂದರ್ಬದಲ್ಲಿ ಇದನ್ನು ಗ್ರಾಹಕರಿಗೆ ಮರುಪಾವತಿ ಮಾಡಲಾಗುತ್ತದೆ.

Best Mobiles in India

English summary
Jio GigaFiber commercial rollout to happen in March, in some areas it is already available for free

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X