ಜಿಯೋ 251ರೂ. ಪ್ಲ್ಯಾನ್: ವರ್ಕ್ ಫ್ರಂ ಹೋಮ್‌ಗಾಗಿ 102GB ಡೇಟಾ ಸೌಲಭ್ಯ!

|

ಜಿಯೋ ಟೆಲಿಕಾಂ ಸಂಸ್ಥೆಯು ಆಕರ್ಷಕ ಡೇಟಾ ಪ್ಲ್ಯಾನ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಕೊರೊನಾ ವೈರಸ್‌ ಹಾವಳಿಯ ಹಿನ್ನಲೆಯಲ್ಲಿ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಅವಕಾಶ ನೀಡಿವೆ. ಈ ನಿಟ್ಟಿನಲ್ಲಿ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್‌ ಕೆಲಸಕ್ಕೆ ನೆರವಾಗಲೆಂದು ಜಿಯೋ ಅಧಿಕ ಡೇಟಾ ಪ್ರೀಪೇಯ್ಡ್‌ ಪ್ಲ್ಯಾನ್ ಪರಿಚಯಿಸಿದೆ. ಈ ಕೊಡುಗೆಯಲ್ಲಿ ಸೂಕ್ತ ವ್ಯಾಲಿಡಿಟಿ ಅವಧಿಯು ಲಭ್ಯವಾಗಲಿದೆ.

ರಿಲಾಯನ್ಸ್‌ ಜಿಯೋ ಟೆಲಿಕಾಂ

ಹೌದು, ರಿಲಾಯನ್ಸ್‌ ಜಿಯೋ ಟೆಲಿಕಾಂ ಈಗ 251ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನಿನಲ್ಲಿ ಹೆಚ್ಚಿನ ಪ್ರಯೋಜನ ಘೋಷಿಸಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 102GB ಡೇಟಾ ಸೌಲಭ್ಯ ಸಿಗಲಿದ್ದು, ಅದರೊಂದಿಗೆ 51 ದಿನಗಳ ವ್ಯಾಲಿಡಿಟಿ ಅವಧಿಯು ದೊರೆಯುತ್ತದೆ. ಇನ್ನು ಈ ಪ್ಲ್ಯಾನಿನಲ್ಲಿ ಇಂಟರ್ನೆಟ್ ವೇಗವು 64 kbps ಸಾಮರ್ಥ್ಯದಲ್ಲಿರಲಿದೆ. ಮನೆಯಿಂದ ಕೆಲಸ ಮಾಡುವ ನೌಕರರಿಗೆ ಪೂರಕವಾಗಿದೆ.

ಜಿಯೋ 251ರೂ. ಪ್ಲ್ಯಾನ್‌

ಜಿಯೋ 251ರೂ. ಪ್ಲ್ಯಾನ್‌

ವರ್ಕ್‌ ಫ್ರಂ ಹೋಮ್ ವ್ಯವಸ್ಥೆಯನ್ನು ಬೆಂಬಲಿಸಿ ಜಿಯೋ ಈ ಕೊಡುಗೆಯನ್ನು ನೀಡಿದೆ. ಈ ಪ್ರೀಪೇಯ್ಡ್‌ ಒಟ್ಟು 51 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯಲಿದೆ. ಅಂದರೇ ಒಟ್ಟು ವ್ಯಾಲಿಡಿಟಿ ಅವಧಿಗೆ 102GB ಡೇಟಾ ಸೌಲಭ್ಯ ಲಭ್ಯವಾಗುತ್ತದೆ. ಇನ್ನು ಇಂಟರ್ನೆಟ್ ವೇಗವು 64 kbps ಸಾಮರ್ಥ್ಯದಲ್ಲಿರಲಿದೆ. ಆದರೆ ಈ ಯೋಜನೆಯಲ್ಲಿ ಯಾವುದೇ ಎಸ್‌ಎಮ್‌ಎಸ್‌ ಹಾಗೂ ವಾಯಿಸ್‌ ಕರೆಯ ಪ್ರಯೋಜನೆಗಳು ಇರುವುದಿಲ್ಲ. ಜಿಯೋ ಇತ್ತೀಚಿಗಷ್ಟೆ ಡೇಟಾ ವೋಚರ್‌ಗಳಲ್ಲಿಯೂ ಡಬಲ್ ಧಮಾಕಾ ಕೊಡುಗೆ ನೀಡಿದೆ. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

ಡೇಟಾ ಸೌಲಭ್ಯ ಹೆಚ್ಚಿಸಿದ ಜಿಯೋ

ಡೇಟಾ ಸೌಲಭ್ಯ ಹೆಚ್ಚಿಸಿದ ಜಿಯೋ

ಜಿಯೋ ತನ್ನ ಐದು 4G ಡಾಟಾ ವೋಚರ್ಸ್‌ ಪೈಕಿ 11ರೂ, 21ರೂ, 51ರೂ ಮತ್ತು 101ರೂ. ಪ್ಲ್ಯಾನ್‌ಗಳಲ್ಲಿ ಬದಲಾವಣೆ ಮಾಡಿದೆ. ಈ ಯೋಜನೆಗಳಲ್ಲಿ ಈ ಮೊದಲು ಲಭ್ಯವಿದ್ದ ಡೇಟಾ ಸೌಲಭ್ಯದ ಎರಡರಷ್ಟು ಡೇಟಾ ಪ್ರಯೋಜನ ಇದೀಗ ದೊರೆಯಲಿದೆ. ಹಾಗೆಯೇ ಜಿಯೋ ದಿಂದ ಇತರೆ ಟೆಲಿಕಾಂಗಳಿಗೆ ಲಭ್ಯವಿದ್ದ ಉಚಿತ ನಿಮಿಷಗಳ ಸೌಲಭ್ಯ ಪ್ರಯೋಜನಗಳನ್ನು ನೀಡಿದೆ.

ಪರಿಷ್ಕೃತ ಡೇಟಾ ಸೌಲಭ್ಯ

ಪರಿಷ್ಕೃತ ಡೇಟಾ ಸೌಲಭ್ಯ

ಜಿಯೋ ಸಂಸ್ಥೆಯ ಆರಂಭಿಕ 11ರೂ. ಡೇಟಾ ವೋಚರ್ ನಲ್ಲಿ ಇದೀಗ 800MB ಡೇಟಾ ಸಿಗಲಿದೆ(ಈ ಮೊದಲು 400MB). ಅದೇ ರೀತಿ 21ರೂ. ವೋಚರ್‌ನಲ್ಲಿ 2GB ಡೇಟಾ(ಈ ಮೊದಲು 1GB) ಹಾಗೂ 51ರೂ. ನಲ್ಲಿ 6GB ಡೇಟಾ (ಈ ಮೊದಲು 3GB) ಸೌಲಭ್ಯ ದೊರೆಯುತ್ತದೆ. ಇನ್ನು 101ರೂ. ಡೇಟಾ ವೋಚರ್ ಪ್ಲ್ಯಾನಿನಲ್ಲಿ ಒಟ್ಟು 12GB(ಈ ಮೊಲದು 6GB) ಡೇಟಾ ಸಿಗಲಿದೆ.

ಕರೆಯ ಸೌಲಭ್ಯ

ಕರೆಯ ಸೌಲಭ್ಯ

ಜಿಯೋ 11ರೂ. ಡೇಟಾ ವೋಚರ್ ನಲ್ಲಿ ಜಿಯೋ ಟು ಇತರೆ ನೆಟವರ್ಕ್‌ಗಳಿಗೆ 75 ನಿಮಿಷಗಳ ಕರೆ ಸೌಲಭ್ಯ. ಅದೇ ರೀತಿ 21ರೂ. ವೋಚರ್‌ನಲ್ಲಿ 200 ನಿಮಿಷಗಳ ಅವಧಿ ಸಿಗಲಿದೆ. 51ರೂ. ಪ್ಲ್ಯಾನಿ ನಲ್ಲಿ 500 ನಿಮಿಷಗಳ ಅವಧಿ ಲಭ್ಯ. ಇನ್ನು 101ರೂ. ಡೇಟಾ ವೋಚರ್‌ನಲ್ಲಿ 1000 ನಿಮಿಷಗಳ ಅವಧಿ ದೊರೆಯುತ್ತದೆ.

Most Read Articles
Best Mobiles in India

English summary
Jio plan is priced at Rs 251 and it offers 2GB data per day for 51 days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X