ಜಿಯೋ ರಿಚಾರ್ಜ್ ಮಾಡಿದರೆ ಶಾಪಿಂಗ್ ಕೂಪನ್ ಗಳು ಉಚಿತ! ಉಚಿತ! ಉಚಿತ!

By Gizbot Bureau
|

ಟೆಲಿಕಾಂ ಸರ್ವೀಸ್ ಪ್ರೊವೈಡರ್ ರಿಲಯನ್ಸ್ ಜಿಯೋ ಹೊಸ ಬೆನಿಫಿಟ್ ನ್ನು ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಪ್ರಕಟಿಸಿದೆ.ಕಂಪೆನಿಯ ರಿಟೇಲ್ ಸಂಸ್ಥೆ ಎಜಿಯೋದಿಂದ ಶಾಪಿಂಗ್ ಮಾಡುವುದಕ್ಕಾಗಿ ರಿಯಾಯಿತಿ ಸಿಗುವ ಕೂಪಲ್ ಗಳನ್ನು ಅರ್ಹ ಜಿಯೋ ಗ್ರಾಹಕರಿಗೆ ನೀಡುವ ಸೌಲಭ್ಯವನ್ನು ರಿಲಯನ್ಸ್ ಜಿಯೋ ಪ್ರಕಟಿಸಿದೆ.

ಆಫರ್ ಏನು?

ಆಫರ್ ಏನು?

ಯಾರು ತಮ್ಮ ರಿಲಯನ್ಸ್ ಜಿಯೋ ನಂಬರ್ ನ್ನು ರುಪಾಯಿ 198, ರುಪಾಯಿ 399ಕ್ಕೆ ರೀಚಾರ್ಜ್ ಮಾಡುತ್ತಾರೋ ಅವರಿಗೆ ಈ ಕೂಪನ್ ಗಳು ಲಭ್ಯವಾಗುತ್ತದೆ. ರೀಚಾರ್ಜ್ ನ ನಂತರ ರುಪಾಯಿ 198, ರುಪಾಯಿ 399 ರ 5 ಕೂಪನ್ ಗಳು ಕ್ರಮವಾಗಿ ಲಭ್ಯವಾಗುತ್ತದೆ.

ಒಟ್ಟು ಕೂಪನ್ ಮೊತ್ತ ಎಷ್ಟು ಗೊತ್ತಾ?

ಒಟ್ಟು ಕೂಪನ್ ಮೊತ್ತ ಎಷ್ಟು ಗೊತ್ತಾ?

ಅಂದರೆ ಯಾವ ರಿಲಯನ್ಸ್ ಜಿಯೋ ಗ್ರಾಹಕರು 198 ರುಪಾಯಿ ರೀಚಾರ್ಜ್ ಮಾಡುತ್ತಾರೋ ಅವರಿಗೆ ರುಪಾಯಿ 990ರಷ್ಟು ಬೆಲೆಬಾಳುವ ಅಜಿಯೋ ಕೂಪನ್ ಗಳು ಲಭ್ಯವಾಗುತ್ತದೆ. ಇನ್ನು 399 ರುಪಾಯಿ ರೀಚಾರ್ಜ್ ಮಾಡಿದ ಗ್ರಾಹಕರಿಗೆ 1,995 ರುಪಾಯಿ ಬೆಲೆಬಾಳುವಷ್ಟು ಅಜಿಯೋ ಶಾಪಿಂಗ್ ಕೂಪನ್ ಗಳು ಸಿಗುತ್ತದೆ.

ಕನಿಷ್ಟ ಶಾಪಿಂಗ್ ಮೊತ್ತ:

ಕನಿಷ್ಟ ಶಾಪಿಂಗ್ ಮೊತ್ತ:

ಈ ಕೂಪನ್ ಗಳನ್ನು ಪ್ರತಿ ತಿಂಗಳಿಗೆ ಒಂದರಂತೆ ಕನಿಷ್ಟ ನಿಗದಿತ ಮೊತ್ತದ ಶಾಪಿಂಗ್ ನಲ್ಲಿ ರಿಯಾಯಿತಿ ಪಡೆಯುವುದಕ್ಕೆ ಬಳಸಿಕೊಳ್ಳಬಹುದು. ರುಪಾಯಿ 198ರ ಕೂಪನ್ ನ್ನು ಕನಿಷ್ಟ 999 ರುಪಾಯಿ ಬೆಲೆಬಾಳುವ ಶಾಪಿಂಗ್ ನಲ್ಲಿ ಬಳಸಿಕೊಳ್ಳಬಹುದು. ಇನ್ನು 399 ರುಪಾಯಿ ಕೂಪನ್ ನ್ನು ಕನಿಷ್ಟ 1,399 ರುಪಾಯಿ ಶಾಪಿಂಗ್ ನಲ್ಲಿ ರಿಯಾಯಿತಿ ಪಡೆಯುವುದಕ್ಕೆ ಬಳಸಿಕೊಳ್ಳಬಹುದು.

ಕೆಲವೇ ದಿನಗಳ ಆಫರ್:

ಕೆಲವೇ ದಿನಗಳ ಆಫರ್:

ಈ ಆಫರ್ ರಿಲಯನ್ಸ್ ಜಿಯೋದ ಹೊಸ ಮತ್ತು ಹಳೆಯ ಎಲ್ಲಾ ಗ್ರಾಹಕರಿಗೂ ಕೂಡ ಲಭ್ಯವಾಗುತ್ತದೆ. ಮತ್ತು ಜೂನ್ 3 ರಿಂದ ಜೂನ್ 14ರ ವರೆಗೆ ಮಾತ್ರವೇ ಆಫರ್ ಲಭ್ಯವಿರುತ್ತದೆ.

ಕ್ರಿಕೆಟ್ ಪ್ರೇಮಿಗಳಿಗೆ ಸ್ಪೆಷಲ್ ಡಾಟಾ ಆಫರ್:

ಕ್ರಿಕೆಟ್ ಪ್ರೇಮಿಗಳಿಗೆ ಸ್ಪೆಷಲ್ ಡಾಟಾ ಆಫರ್:

ಇತ್ತೀಚೆಗೆ ರಿಲಯನ್ಸ್ ಜಿಯೋ ಹೊಸದಾಗಿ ಸ್ಪೆಷಲ್ ಡಾಟಾ ಆಫರ್ ನ್ನು ಕ್ರಿಕೆಟ್ ವರ್ಲ್ಡ್ ಕಪ್ ಸೀಸನ್ ಗಾಗಿ ಪರಿಚಯಿಸಿತ್ತು. ಜಿಯೋ ಕ್ರಿಕೆಟ್ ಸೀಸನ್ ಸ್ಪೆಷಲ್ ಡಾಟಾ ಪ್ಯಾಕ್ ಜಿಯೋ ಬಳಕೆದಾರರಿಗೆ 251 ರುಪಾಯಿ ಬೆಲೆಯಲ್ಲಿ ಲಭ್ಯವಾಗುತ್ತದೆ. ಈ ಪ್ಯಾಕ್ ನಲ್ಲಿ 102ಜಿಬಿ ಹೈ ಸ್ಪೀಡ್ ಡಾಟಾ 51 ದಿನಗಳ ಅವಧಿಗೆ ಸಿಗುತ್ತದೆ.

ಕ್ರಿಕೆಟ್ ಅಭಿಮಾನಿಗಳಿಗಾಗಿ ಸ್ಪೆಷಲ್ ಆಫರ್:

ಕ್ರಿಕೆಟ್ ಅಭಿಮಾನಿಗಳಿಗಾಗಿ ಸ್ಪೆಷಲ್ ಆಫರ್:

ರಿಲಯನ್ಸ್ ಜಿಯೋ ಹೊಸದಾಗಿ ಜಿಯೋ ಕ್ರಿಕೆಟ್ ಪ್ಲೇ ಎಲಾಂಗ್ ಫೀಚರ್ ನ್ನು ಕೂಡ ಪರಿಚಯಿಸಿದೆ. ಜಿಯೋ ಕ್ರಿಕೆಟ್ ಪ್ಲೇ ಎಲಾಂಗ್ ಆಕರ್ಷಕ ಕಾನ್ಪೆಪ್ಟ್ ಆಗಿದ್ದು ಬಳಕೆದಾರರು ಕ್ರಿಕೆಟ್ ಮ್ಯಾಚ್ ಪ್ರತಿ ಸೀಸನ್ ನ್ನು ಕ್ರಿಕೆಟ್ ಜೊತೆಗೆ ಗೇಮಿಂಗ್ ಮೂಲಕ ಎಂಜಾಯ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಟಿವಿಯಲ್ಲಿ ಮ್ಯಾಚ್ ಲೈವ್ ನೋಡುತ್ತಲೇ ಮೊಬೈಲ್ ಸ್ಕ್ರೀನ್ ನಲ್ಲಿ ಬಳಕೆದಾರರು ಜಿಯೋ ಕ್ರಿಕೆಟ್ ಪ್ಲೇ ಎಲಾಂಗ್ ನಲ್ಲಿ ತೊಡಗಿಕೊಳ್ಳಬಹುದು.

ರಿಯಲ್ ಟೈಮ್ ನಲ್ಲಿ ಮ್ಯಾಚ್ ಮುಂದೇನಾಗುತ್ತದೆ ಎಂದು ಊಹಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ವಿಶೇಷ ನೇರ ಅವಕಾಶವನ್ನು ಜಿಯೋ ಗ್ರಾಹಕರಿಗೆ ಕರುಣಿಸುತ್ತಿದೆ. ಖಂಡಿತ ಇದನ್ನು ಕ್ರಿಕೆಟ್ ಅಭಿಮಾನಿಗಳು ಎಂಜಾಯ್ ಮಾಡುವುದರಲ್ಲಿ ಅನುಮಾನವಿಲ್ಲ.

Best Mobiles in India

Read more about:
English summary
Jio Now Offers Rs. 1,995 AJIO Coupon With Select Recharge Plans

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X