ಹಳೆ ಬೆಲೆಯಲ್ಲಿಯೇ ಜಿಯೋ ಪ್ಲಾನ್‌ ಹುಡುಕುತ್ತಿದ್ದೀರಾ..? ಇಲ್ಲಿದೆ ಉತ್ತರ..!

By Gizbot Bureau
|

ರಾಷ್ಟ್ರದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರುವ ಬೆಲೆ ಏರಿಕೆಯು ಟೆಲಿಕಾಂ ಬಳಕೆದಾರರನ್ನು ಕಂಗೆಡಿಸಿದೆ. ಭಾರತದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ಲಾನ್‌ಗಳ ಬೆಲೆಯನ್ನು ಶೇ.40 ರಷ್ಟು ಹೆಚ್ಚಿಸಸುವ ಮೂಲಕ ಮೊಬೈಲ್‌ ಬಳಕೆದಾರರನ್ನು ದಿಗ್ಭ್ರಮೆಗೊಳಿಸಿವೆ.

ಜಿಯೋ

ಈ ಸನ್ನಿವೇಶದಲ್ಲಿ ಯಾವುದು ಉತ್ತಮ ಟೆಲಿಕಾಂ ನೆಟ್‌ವರ್ಕ್ ಎಂಬ ಪ್ರಶ್ನೆ ಕಾಡುವವುದಂತೂ ಸತ್ಯ. ಉಚಿತ ಹಾಗೂ ಅನಿಯಮಿತ ಕರೆಗಳನ್ನು ಪಡೆಯುತ್ತಿದ್ದ ಜಿಯೋ ಬಳಕೆದಾರರು ಈಗ ಹೊಸ ಐಯುಸಿ ಶುಲ್ಕ ಮತ್ತು ಪರಿಷ್ಕೃತ ಯೋಜನೆಗಳ ಜಾರಿಯಿಂದ ಬೇಸತ್ತಿದ್ದಾರೆ.

ಜಿಯೋ ತನ್ನ ಗ್ರಾಹಕರಿಗೆ ಬೆಲೆ ಏರಿಕೆಯಿಂದ ದೂರವಿರಲು ಪ್ಲಾನ್‌ಗಳನ್ನು ಸರದಿಯಲ್ಲಿಡಲು ಆಯ್ಕೆಯೊಂದನ್ನು ನೀಡಿತ್ತು. ಬೆಲೆ ಏರಿಕೆಗೂ ಮುನ್ನ ನಿಮ್ಮ ಪ್ಲಾನ್‌ಗಳನ್ನು ಸರದಿಯಲ್ಲಿಡದೆ, ಹೊಸ ಬೆಲೆಗಳು ದುಬಾರಿ ಎಂದು ಅನಿಸಿದರೆ ನೀವೇನು ಮಾಡಬಹುದು ಎಂಬುದಕ್ಕೆ ಉತ್ತರ ಇಲ್ಲಿದೆ. ಹಳೆಯ ಬೆಲೆಯಲ್ಲಿಯೇ ನೀವು ಜಿಯೋ ಯೋಜನೆಗಳನ್ನು ಪಡೆಯಬಹುದು.. ಹೇಗೆ ಅಂತಿರಾ..? ಮುಂದೆ ನೋಡಿ.

ಸಕ್ರಿಯ ಪ್ಲಾನ್‌ ಇರದಿರಲಿ

ಸಕ್ರಿಯ ಪ್ಲಾನ್‌ ಇರದಿರಲಿ

ಟೆಲಿಕಾಂ ಟಾಕ್ ವರದಿ ಪ್ರಕಾರ, ಹಳೇ ಬೆಲೆಯಲ್ಲಿ ಯೋಜನೆಗಳನ್ನು ಖರೀದಿಸಲು ಬಯಸುವ ಬಳಕೆದಾರರು ಬೆಲೆ ಏರಿಕೆ ನಂತರ ಯಾವುದೇ ಹೊಸ ಯೋಜನೆಯನ್ನು ಖರೀದಿಸಿರಬಾರದು. ಸರಳವಾಗಿ ಹೇಳುವುದಾದರೆ, ಹಳೆಯ ಬೆಲೆಯಲ್ಲಿ ಯೋಜನೆ ಪಡೆಯಲು ಬಳಕೆದಾರರ ಖಾತೆಯಲ್ಲಿ ಯಾವುದೇ ಸಕ್ರಿಯ ಯೋಜನೆ ಇರಬಾರದು.

ಹಳೇ ಪ್ಲಾನ್‌ಗಳ ಪ್ರದರ್ಶನ

ಹಳೇ ಪ್ಲಾನ್‌ಗಳ ಪ್ರದರ್ಶನ

ನಿಮ್ಮ ಮೊಬೈಲ್‌ ಸಂಖ್ಯೆಯಲ್ಲಿ ಯಾವುದೇ ಸಕ್ರಿಯ ಯೋಜನೆ ಇಲ್ಲದ ಸಂದರ್ಭದಲ್ಲಿ ನೀವು ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಅಥವಾ ಮೈ ಜಿಯೋ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿದಾಗ, ಕಂಪನಿ ನಿಮಗೆ ಹಳೆಯ ಬೆಲೆಗಳನ್ನು ತೋರಿಸಲಾಗುತ್ತದೆ.

ಆದರೆ, ಕಳೆದ ಕೆಲವು ದಿನಗಳಲ್ಲಿ ನೀವು ಹೊಸ ಪ್ರಿಪೇಯ್ಡ್ ಪ್ಲಾನ್‌ ರೀಚಾರ್ಜ್‌ ಮಾಡಿಸಿದ್ದರೆ ನಿಮಗೆ ಹಳೆಯ ಪ್ಲಾನ್‌ಗಳು ಕಾಣಲ್ಲ.

ಟ್ಯಾರಿಫ್‌ ರಕ್ಷಣೆ ಆಯ್ಕೆ

ಟ್ಯಾರಿಫ್‌ ರಕ್ಷಣೆ ಆಯ್ಕೆ

ಚಂದಾದಾರರು ತಮ್ಮ ಜಿಯೋ ಸಂಖ್ಯೆ ಮತ್ತು ಒಟಿಪಿ ಬಳಸಿ ಜಿಯೋ ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕು. ನಂತರ, ಸೆಟ್ಟಿಂಗ್ಸ್‌ಗೆ ತೆರಳಬೇಕಾಗುತ್ತದೆ. ಅಲ್ಲಿ, ಹಳೆಯ ಯೋಜನೆಗಳನ್ನು ವೀಕ್ಷಿಸಲು ಟ್ಯಾರಿಫ್ ಸಂರಕ್ಷಣೆ ಆಯ್ಕೆಯನ್ನು ಟ್ಯಾಪ್ ಮಾಡಿದರೆ, ಹಳೆಯ ಪ್ಲಾನ್‌ಗಳು ನಿಮ್ಮ ಕಣ್ಣಿಗೆ ಕಾಣುತ್ತವೆ.

ಶೇ.40 ರಷ್ಟು ಬೆಲೆ ಹೆಚ್ಚಳ

ಶೇ.40 ರಷ್ಟು ಬೆಲೆ ಹೆಚ್ಚಳ

ರಿಲಾಯನ್ಸ್‌ ಜಿಯೋ ತನ್ನ ಚಲನಶೀಲ ಯೋಜನೆಗಳ ಬೆಲೆಗಳನ್ನು ಶೇ.40 ರಷ್ಟು ಹೆಚ್ಚಿಸಿದ್ದು, ಹೊಸ ರೀಚಾರ್ಜ್ ಯೋಜನೆಗಳು ಗ್ರಾಹಕರಿಗೆ ಶೇ.300 ರಷ್ಟು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ ಎಂದು ಕಂಪನಿ ಹೇಳಿದೆ. ಜಿಯೋ ತನ್ನ ಹೊಸ ಆಲ್ ಇನ್ ಒನ್ ಪ್ಲಾನ್‌ ಅಡಿಯಲ್ಲಿ ಮಾಸಿಕ, ದ್ವೈಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಎಂಬ ನಾಲ್ಕು ಯೋಜನೆಗಳನ್ನು ತಂದಿದೆ. ಈ ಯೋಜನೆಗಳು 199 ರೂ.ಯಿಂದ ಪ್ರಾರಂಭವಾಗಿ ವಾರ್ಷಿಕ 2,199 ರೂ.ವರೆಗೂ ಬೆಲೆ ಹೊಂದಿದೆ.

Most Read Articles
Best Mobiles in India

Read more about:
English summary
Jio Offering One More Change To Get Recharge Plans At Old Prices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X