ಶೀಘ್ರದಲ್ಲೇ ಜಿಯೋ ಸಂಸ್ಥೆಯಿಂದ ಲಭ್ಯವಾಗಲಿದೆ ಜಿಯೋ ಪೇ ಸೇವೆ!

|

ಜಿಯೋ ದೇಶದ ಟೆಲಿಕಾಂ ಇತಿಹಾಸದಲ್ಲಿ ಬರೆದಿರುವ ಸಂಸ್ಥೆ. ಜಿಯೋ ಟೆಲಿಕಾಂ ವಲಯಕ್ಕೆ ಕಾಲಿಟ್ಟ ದಿನದಿಂದಲೂ ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನ ಪರಿಚಯಿಸುತ್ತಲೇ ಬಂದಿದೆ. ಅಷ್ಟೇ ಅಲ್ಲದೆ ದೇಶದ ನಾನಾ ವಲಯಗಳಲ್ಲಿ ತನ್ನ ಹೊಸ ಯೋಜನೆಗಳನ್ನ ಪ್ರಕಟಿಸುತ್ತಿರುವ ಜಿಯೋ ಇದೀಗ ತನ್ನ ಹೊಸ ಡಿಜಿಟಲ್‌ ಪೇಮೆಂಟ್‌ ಸೇವೆಯನ್ನು ಪರಿಚಯಿಸಲು ಮುಂದಾಗಿದೆ. ಇನ್ನು UPI ಅನ್ನು ತನ್ನ 4G-ಶಕ್ತಗೊಂಡ ಜಿಯೋ ಫೋನ್‌ಗೆ ತರಲು ರಿಲಯನ್ಸ್ ಜಿಯೋ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ದೊಂದಿಗೆ ಕೆಲಸ ಮಾಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜಿಯೋ

ಹೌದು, ಜಿಯೋ ಕಂಪೆನಿ ತನ್ನ ಯುಪಿಐ-ಶಕ್ತಗೊಂಡ ‘ಜಿಯೋ ಪೇ' ಅನ್ನು ಪರಿಚಯಿಸಲು ಮುಂದಾಗಿದೆ. ದೇಶದಲ್ಲಿ ಈಗಾಗಲೇ ಡಿಜಿಟಲ್‌ ಪೇಮೆಂಟ್‌ ವ್ಯವಸ್ತೆ ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಳ್ಳುತ್ತಿದೆ. ಅದರಲ್ಲೂ ಯುಪಿಐ ಬೆಂಬಲಿತ ಗೂಗಲ್‌ ಪ್ಲೇ, ಪೋನ್‌ ಪೇ, ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿವೆ. ಇದೀಗ ಜಿಯೋ ಕೂಡ ಯುಪಿಐ ಪೇಮೆಂಟ್‌ ಸೇವೆಯನ್ನ ಪರಿಚಯಿಸಲು ಮುಂದಾಗಿದೆ. ಸದ್ಯ ಲಬ್ಯ ಮಾಹಿತಿಯ ಪ್ರಕಾರ ಜಿಯೋ ಮೊದಲ ಬಾರಿಗೆ ಪರಿಚಯಿಸಿದ್ದ ಜಿಯೋ ಫೋನ್‌ಗಳಲ್ಲಿ ಜಿಯೋ ಪೇ ಸೇವೆಯನ್ನ ಪರೀಕ್ಷಾ ಹಂತವಾಗಿ ಪ್ರಾರಂಭಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇದನ್ನು ವ್ಯಾಪಕವಾಗಿ ಪರಿಚಯಿಸಲಿದೆ ಎನ್ನಲಾಗ್ತಿದೆ.

ಜಿಯೋ

ಇನ್ನು ಜಿಯೋ ಸಂಸ್ಥೆಯ ಜಿಯೋ ಪೇ ಸೇವೆ ಸಾವಿರಕ್ಕೂ ಹೆಚ್ಚು ಜಿಯೋಫೋನ್ ಬಳಕೆದಾರರಿಗೆ ಸಾರ್ವಜನಿಕ ಪರೀಕ್ಷೆಯ ಹಂತದಲ್ಲಿ ಲಭ್ಯವಿದೆ ಎಂದು ಹೇಳಲಾಗ್ತಿದೆ. ಹಾಗಂತ ಜಿಯೋ ಏಕಾಏಕಿ ಈ ಸೇವೆಯನ್ನು ಪರಿಚಯಿಸಲು ಮುಂದಾಗಿಲ್ಲ, ಕಳೆದ ಒಂದು ವರ್ಷದಿಂದಲೂ ಜಿಯೋ ಆಂತರಿಕವಾಗಿ ಯುಪಿಐ ಶಕ್ತಗೊಂಡ ‘ಜಿಯೋ ಪೇ' ಅನ್ನು ಪರೀಕ್ಷೆ ಮಾಡುತ್ತಿದೆ ಎಂದು ಹೇಳಲಾಗಿದೆ. ಇನ್ನು ಈ ಜಿಯೋ ಪೇ ಅಪ್ಲಿಕೇಶನ್ ಯುಪಿಐ ಅನ್ನು ಬಳಸುತ್ತದೆ ಮತ್ತು ಬಳಕೆದಾರರು "ಯುಪಿಐ ಆಡ್ ಬ್ಯಾಂಕ್, ಸ್ಕ್ಯಾನ್ ಮತ್ತು ಪೇ, ವಿಪಿಎ ಮೂಲಕ ಪಾವತಿಸಿ, ವಹಿವಾಟು ಹಿಸ್ಟರಿ ಸೇರಿದಂತೆ ಸಂಪೂರ್ಣ ಫೀಚರ್ಸ್‌ಗಳನ್ನು ಬೆಂಬಲಿಸುತ್ತದೆ" ಎಂದು ದೃಡಪಡಿಸಲಾಗಿದೆ.

ಜಿಯೋ

ಇದಲ್ಲದೆ ಜಿಯೋ ಫೋನ್‌ಗಾಗಿ ಜಿಯೋ ಪೇ ಅನ್ನು ಟೋಕನೈಸೇಶನ್ ಪ್ಲಾಟ್‌ಫಾರ್ಮ್ ಮೂಲಕ ನಿರ್ಮಿಸಲಾಗಿದೆ. ಇದು ಯಾವುದೇ ಎನ್‌ಎಫ್‌ಸಿ ಶಕ್ತಗೊಂಡ ಪಿಓಎಸ್ ಯಂತ್ರದಲ್ಲಿ ಎನ್‌ಎಫ್‌ಸಿ ಮೂಲಕ ‘ಟ್ಯಾಪ್ ಮತ್ತು ಪೇ' ಸಂಪರ್ಕವಿಲ್ಲದ ಪಾವತಿಯನ್ನು ಬಳಸುತ್ತದೆ. ಈಗಿನಂತೆ ಜಿಯೋ ಆನ್‌ಬೋರ್ಡ್ ಆಕ್ಸಿಸ್, ಐಸಿಐಸಿಐ, ಎಚ್‌ಡಿಎಫ್‌ಸಿ, ಸ್ಟ್ಯಾಂಡರ್ಡ್ ಚಾರ್ಟರ್ಡ್, ಇಂಡಸ್ಇಂಡ್, ಎಸ್‌ಬಿಐ, ಕೊಟಾಕ್, ಯೆಸ್‌ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್ ಅನ್ನು ಹೊಂದಿದೆ. ಈ ಬ್ಯಾಂಕುಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಟೋಕನೈಸ್ ಮಾಡಬಹುದಾಗಿದೆ ಮತ್ತು ಪಾವತಿಗೆ ಬಳಸಬಹುದು ಎಂದು ಸಹ ಹೇಳಲಾಗುತ್ತಿದೆ.

ಜಿಯೋ

ಇನ್ನು ರಿಲಯನ್ಸ್ ಜಿಯೋ ಜಿಯೋ ಫೋನ್‌ನಲ್ಲಿ ಕೈ ಓಎಸ್ ಆಪರೇಟಿಂಗ್ ಸಿಸ್ಟಮ್‌ಗಾಗಿ ಎನ್‌ಪಿಸಿಐನ ಯುಪಿಐ ಪಾವತಿ ವಹಿವಾಟು ವ್ಯವಸ್ಥೆಯನ್ನು ಪುನಃ ಕೆಲಸ ಮಾಡಿದೆ. ಏಕೆಂದರೆ ಎಲ್ಲಾ ಯುಪಿಐ ವಹಿವಾಟುಗಳಿಗೆ ಬಳಕೆದಾರರು ತಮ್ಮ ಯುಪಿಐ ಪಿನ್ ಅನ್ನು ನಮೂದಿಸುವ ಪಾವತಿ ಪರದೆಯನ್ನು ತರುವ ಜವಾಬ್ದಾರಿಯನ್ನು ಎನ್‌ಪಿಸಿಐ ಲೈಬ್ರರಿ ಹೊಂದಿದೆ. ಸದ್ಯ ಜಿಯೋ ಪೇ ವ್ಯಾಪಕವಾಗಿ ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Most Read Articles
Best Mobiles in India

English summary
'Jio Pay' is now available to over a thousand JioPhone users in public testing phase, and the telco is getting ready for a wider rollout very soon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X