ಜಿಯೋ ಫೋನ್ 2 ಮಾರಾಟದ ದಿನ ಅಗಸ್ಟ್ 30: ನಿಮಗೂ ಫೋನ್ ಬೇಕಿದ್ದರೆ ಹೀಗೆ ಮಾಡಿ

By GizBot Bureau
|

ರಿಲಯನ್ಸ್ ಜಿಯೋದ ನೂತನ ವೈಶಿಷ್ಟ್ಯಗಳಿರುವ ಫೋನ್ ಜಿಯೋಫೋನ್2 ಮೊದಲ ಬಾರಿಗೆ ಅಗಸ್ಟ್ 16 ರಂದು ಫ್ಲ್ಯಾಶ್ ಸೇಲ್ ಮೂಲಕ ಮಾರಾಟಗೊಂಡಿತ್ತು. ಮೊದಲ ಸೇಲ್ ನಲ್ಲಿ ಖರೀದಿಸಿರುವ ಗ್ರಾಹಕರು ನೀವಾಗಿದ್ದರೆ ಖಂಡಿತ ಈಗಾಗಲೇ ಯಾವಾಗ ನಿಮ್ಮ ಫೋನ್ ನಿಮ್ಮ ಮನೆಗೆ ಬರುತ್ತದೆ ಎಂದು ಕಾಯುತ್ತಿರುತ್ತೀರಿ.

ಜಿಯೋ ಫೋನ್ 2 ಮಾರಾಟದ ದಿನ ಅಗಸ್ಟ್ 30: ನಿಮಗೂ ಫೋನ್ ಬೇಕಿದ್ದರೆ ಹೀಗೆ ಮಾಡಿ

ಜಿಯೋ ಫೋನ್ 2: ನಿಮ್ಮ ಫೋನ್ ಡೆಲಿವರ್ ಆಗುವುದಕ್ಕೆ ಇನ್ನೆಷ್ಟು ದಿನ ಕಾಯಬೇಕು?

ವರದಿಯ ಅನುಸಾರ ರಿಲಯನ್ಸ್ ಜಿಯೋ ಫೋನ್ ಜಿಯೋಫೋನ್2 ಗ್ರಾಹಕರಿಗೆ ಅವರು ಬುಕ್ ಮಾಡಿದ 5 ರಿಂದ 7 ದಿನಗಳ ಒಳಗೆ ಲಭ್ಯವಾಗುತ್ತದೆ. ನಿಮ್ಮ ಸ್ಥಳದ ಅನುಸಾರ ಖಂಡಿತ ಅದು ನಿರ್ಧಾರವಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ. ಈಗಾಗಲೇ ಅಧಿಕವಾಗಿ ಆರ್ಡರ್ ಬಂದಿರುವ ಕಾರಣದಿಂದಾಗಿ ಗ್ರಾಹಕರಿಗೆ ಫೋನ್ ತಲುಪುವ ಸಮಯವು ಸ್ವಲ್ಪ ಮಟ್ಟಿಗೆ ಜಾಸ್ತಿಯಾಗಬಹುದು ಎಂಬುದಾಗಿ ಸಂಸ್ಥೆ ತಿಳಿಸಿದೆ.ಒಮ್ಮೆ ನೀವು ಜಿಯೋಫೋನ್2 ವನ್ನು ರಿಸೀವ್ ಮಾಡಿದ ನಂತರ ಅದು ಕೆಲಸ ಪ್ರಾರಂಭಿಸುವುದಕ್ಕೆ ನೀವು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಯಾಕೆಂದರೆ ಅದರಲ್ಲಿ ಪ್ರೀ ಆಕ್ಟಿವೇಡೆಟ್ ಸಿಮ್ ಇರುವುದಿಲ್ಲ. ಅದಕ್ಕಾಗಿ ನೀವು ಹತ್ತಿರದ ಜಿಯೋ ಸ್ಟೋರ್ ಗೆ ತೆರಳಬೇಕಾಗುತ್ತದೆ ಮತ್ತು 4ಜಿ ಡಾಟಾ ಮತ್ತು ಸಿಮ್ ನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ.

ಜಿಯೋ ಫೋನ್ 2: ಭಾರತೀಯ ಬೆಲೆ, ಆಫರ್ ಗಳು, ಮುಂದಿನ ಸೇಲ್ ದಿನಾಂಕ

ಜಿಯೋಫೋನ್2 ಬೆಲೆ ಭಾರತದಲ್ಲಿ 2,999 ರುಪಾಯಿಗಳಾಗಿದೆ. ಇತರೆ ಜಿಯೋಫೋನ್ ಗಳಿಗಿಂತ ಸ್ವಲ್ಪ ದುಬಾರಿಯಾಗಿದೆ.ಸದ್ಯ ಜಿಯೋಫೋನ್2 ಗೆ ಯಾವುದೇ ಕುತೂಹಲಕಾರಿ ಆಫರ್ ಗಳು ಲಭ್ಯವಿಲ್ಲ. ಇದರ ಜೊತೆಗೆ ನೀವು 99 ರುಪಾಯಿಯ ಡೆಲಿವರಿ ಚಾರ್ಜಸ್ ನ್ನು ಕೂಡ ನೀಡಬೇಕಾಗುತ್ತದೆ. ಅಂದರೆ ಒಟ್ಟು ಬೆಲೆ 3,098 ರುಪಾಯಿಗಳಾಗುತ್ತದೆ. ಒಂದು ವೇಳೆ ಮೊದಲ ಸೇಲ್ ನಲ್ಲಿ ನಿಮಗೆ ಈ ಫೋನ್ ಸಿಗದೇ ಇದ್ದು ಮತ್ತೆ ಖರೀದಿಸಬೇಕು ಎಂದು ಕಾಯುತ್ತಿದ್ದೀರಾದರೆ ಅದಕ್ಕೆ ಅಗಸ್ಟ್ 30 ರಂದು ಅವಕಾಶವಿದೆ. ಹೌದು ಅಗಸ್ಟ್ 30 ರ ಮಧ್ಯಾಹ್ನ 12 ಗಂಟೆಗೆ ಜಿಯೋಫೋನ್ 2 ರ ಎರಡನೇ ಫ್ಲ್ಯಾಶ್ ಸೇಲ್ ನಡೆಯಲಿದೆ.

ಜಿಯೋಫೋನ್ 2: ವೈಶಿಷ್ಟ್ಯತೆಗಳು ಮತ್ತು ವಿಶೇಷಣಗಳು

ಜಿಯೋಫೋನ್ ಮತ್ತು ಜಿಯೋಫೋನ್ 2 ನಡುವೆ ಇರುವ ಪ್ರಮುಖ ವ್ಯತ್ಯಾಸವೆಂದರೆ ಅದು ಡಿಸೈನ್. ಜಿಯೋಫೋನ್ ಸಾಮಾನ್ಯ ಕ್ಯಾಂಡ್ಬೈಬಾರ್ ಡಿಸೈನ್ ನ್ನು ಹೊಂದಿದೆ. ಆದರೆ ಜಿಯೋಫೋನ್ 2 ಬ್ಲಾಕ್ ಬೆರ್ರಿಯಿಂದ ಪ್ರಭಾವಿತವಾಗಿರುವ ಫಿಸಿಕಲ್ QWERTY ಕೀಪ್ಯಾಡ್ ನ್ನು ಹೊಂದಿದೆ.ಹೊರಗಿನಿಂದ ಸಂಪೂರ್ಣ ವಿಭಿನ್ನವಾಗಿ ಜಿಯೋಫೋನ್ 2 ಕಾಣಿಸುತ್ತದೆ. ಆದರೆ ಜಿಯೋಫೋನ್ ಒಂದರಲ್ಲಿ ಇರುವಂತೆ ಜಿಯೋಫೋನ್ 2 ರಲ್ಲಿ ಕೂಡ 2.4- ಇಂಚಿನ ಡಿಸ್ಪ್ಲೇ ಜೊತೆಗೆ QVGA ರೆಸಲ್ಯೂಷನ್ ನ್ನೇ ಹೊಂದಿದೆ. ಈ ವಿಚಾರದಲ್ಲಿ ಯಾವುದೇ ಪ್ರಮುಖ ವ್ಯತ್ಯಾಸ ಕಾಣಿಸುವುದಿಲ್ಲ. ಜಿಯೋಫೋನ್ ನಂತೆ ಜಿಯೋಫೋನ್ 2 ಕೂಡ quad-core ಪ್ರೋಸೆಸರ್ ಮೂಲಕವೇ ರನ್ ಆಗುತ್ತದೆ ಮತ್ತು ಇದು 1 GHz ಸಾಮರ್ಥ್ಯ ಹೊಂದಿದೆ.

ಮೆಮೊರಿ ವಿಚಾರಕ್ಕೆ ಬಂದರೆ ಇದರಲ್ಲಿ 4GB ಇಂಟರ್ನಲ್ ಮೆಮೊರಿ ಮತ್ತು 512MB RAM ಇದೆ. ಮೈಕ್ರೋ ಎಸ್ ಡಿ ಕಾರ್ಡ್ ಹಾಕಿಕೊಳ್ಳುವುದಕ್ಕೂ ಅವಕಾಶವಿದ್ದು ಅದನ್ನು 128ಜಿಬಿ ವರೆಗೆ ಹಿಗ್ಗಿಸಿಕೊಳ್ಳಬಹುದು.

ಆಪ್ಟಿಕ್ಸ್ ಗಳ ಬಗ್ಗೆ ಪ್ರಸ್ತಾಪಿಸುವುದಾದರೆ ಜಿಯೋಫೋನ್ 2 ರಲ್ಲಿ 2ಎಂಪಿ ರೆಸಲ್ಯೂಷನ್ ನ ಹಿಂಭಾಗದ ಕ್ಯಾಮರಾವಿದೆ ಮತ್ತು 0.3 ಎಂಪಿ VGA ರೆಸಲ್ಯೂಷನ್ ಸ್ನ್ಯಾಪರ್ ಮುಂಭಾಗದಲ್ಲಿದ್ದು ವೀಡಿಯೋ ಕಾಲಿಂಗ್ ಗೆ ಸಹಕರಿಸುತ್ತದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ Wi-Fi 802.11 b/g/n, ಬ್ಲೂಟೂತ್ 4.1 ಕಡಿಮೆ ಎನರ್ಜಿ, GPS, NFC, FM radio, 4G VoLTE, ಮತ್ತು VoWiFi ಇದೆ.

ಜಿಯೋಫೋನ್ ಮತ್ತು ಜಿಯೋಫೋನ್ 2 ಎರಡರಲ್ಲೂ ಕೂಡ ಎರಡು ಸಿಮ್ ಕಾರ್ಡ್ ಗಳನ್ನು ಬಳಸಬಹುದಾಗಿದೆ. ಇದರ ಬ್ಯಾಟರಿ ಕೆಪಾಸಿಟಿ 2000mAh ಆಗಿದೆ. KaiOS ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಮೂಲಕ ಇದು ರನ್ ಆಗುತ್ತದೆ. ಜಿಯೋಫೋನ್ 2 ಸುಮಾರು 22 ಭಾರತೀಯ ಭಾಷೆಗಳಿಗೆ ಬೆಂಬಲ ನೀಡುತ್ತದೆ. ಅಸ್ಸಾಮಿ, ಬೆಂಗಾಲಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ,ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಳೆಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಓರಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ,ಸಿಂಧಿ, ತಮಿಳು,ತೆಲುಗು ಮತ್ತು ಉರ್ದು ಭಾಷೆಗಳು ಇದರಲ್ಲಿ ಸೇರಿವೆ.

ಇದರಲ್ಲಿ ವಾಯ್ಸ್ ಅಸಿಸ್ಟೆಂಟ್ ಗೂ ಬೆಂಬಲವಿದ್ದು, ವಾಯ್ಸ್ ಅನೇಬಲ್ ಸರ್ಚ್ ಕೂಡ ಮಾಡಬಹುದು. ಟಾರ್ಚ್, ಕ್ಯಾಲ್ಕುಲೇಟರ್, ಅಲಾರಾಂ, ಕ್ಯಾಲೆಂಡರ್, ಗ್ಯಾಲರಿ ಹಾಗೂ ಇತ್ಯಾದಿ ಅವಕಾಶಗಳಿದೆ. ಜಿಯೋ ಸ್ಟೋರ್ ಆಪ್ ಮೂಲಕ ಇನ್ನಷ್ಟು ಆಪ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಜಿಯೋಸ್ಟೋರ್ ನಲ್ಲಿ ಈಗಾಗಲೇ ಫೇಸ್ ಬುಕ್ ಮತ್ತು ಯುಟ್ಯೂಬ್ ಗಳ ಲಭ್ಯತೆ ಇರುವುದು ನಿಮಗೆ ತಿಳಿದಿದೆ. ಆದರೆ ಜಿಯೋಫೋನ್ ಮಾಲೀಕರು ವಾಟ್ಸ್ ಆಪ್ ಬಳಸುವುದಕ್ಕೆ ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ.

Best Mobiles in India

Read more about:
English summary
Jio Phone 2 Next Sale Date is August 30: This is How Long You Have to Wait to Get it Delivered

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X