ಜಿಯೋ ಉಚಿತ ಫೋನ್‌ಗೂ ಸೆಡ್ಡು!..ಏರ್‌ಟೆಲ್, ಐಡಿಯಾ ಮಾಡಿರುವ ಪ್ಲಾನ್ ಸೂಪರ್!!?

ಮತ್ತೆ ಫೀಚರ್‌ ಫೋನ್ ಯುಗ ಪ್ರಾರಂಭವಾಗುವುದೇ? ಭವಿಷ್ಯದ ಸ್ಮಾರ್ಟ್‌ಫೋನ್‌ಗಳ ಕಥೆ ಏನು.?

|

ಜಿಯೋ ಫೀಚರ್ ಫೋನ್ ಬಿಡುಗಡೆಯಾಗುತ್ತಿದೆ ಎಂದಾಗಲೇ ಇತರ ಮೊಬೈಲ್ ತಯಾರಿಕಾ ಕಂಪೆನಿಗಳಿಗೆ ನಡುಕಹುಟ್ಟಿದ್ದು, ಭಾರತದಲ್ಲಿ ಮತ್ತೆ ಫೀಚರ್‌ಫೋನ್‌ ಯುಗ ಆರಂಭವಾಗಲಿರುವ ಸೂಚನೆಗಳು ಕಂಡು ಬರುತ್ತಿದೆ.! ಈ ವರ್ಷದ ಅಂತ್ಯದೊಳಗೆ ಪ್ರಮುಖ ಮೊಬೈಲ್ ತಯಾರಿಕಾ ಕಂಪೆನಿಗಳು ಅಗ್ಗದ ಬೆಲೆಯ 4ಜಿ ಫೀಚರ್‌ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿವೆ.!!

ರಿಲಯನ್ಸ್‌ ಜಿಯೊ ಕಂಪೆನಿಯ 4ಜಿ ಫೀಚರ್‌ ಫೋನ್‌ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಇದು ಸಂಪೂರ್ಣ ಉಚಿತವಾಗಿದೆ ಎಂದು ಜಿಯೋ ಮಾಲಿಕ ಅಂಬಾನಿ ಹೇಳಿದ್ದಾರೆ. ಹಾಗಾಗಿ, ರಿಲಯನ್ಸ್‌ಗೆ ತೀವ್ರ ಪೈಪೋಟಿ ನೀಡುವ ಉದ್ದೇಶದಿಂದ ಟೆಲಿಕಾಂಗಳು ಮತ್ತು ಪ್ರಮುಖ ಮೊಬೈಲ್ ತಯಾರಿಕಾ ಕಂಪೆನಿಗಳು ಸಹ ಫೀಚರ್‌ ಫೋನ್‌ ಬಿಡುಗಡೆ ಮಾಡಲು ಕ್ರಮ ಕೈಗೊಂಡಿವೆ.!!

ಹಾಗಾದರೆ, ಮತ್ತೆ ಫೀಚರ್‌ ಫೋನ್ ಯುಗ ಪ್ರಾರಂಭವಾಗುವುದೇ? ಭವಿಷ್ಯದ ಸ್ಮಾರ್ಟ್‌ಫೋನ್‌ಗಳ ಕಥೆ ಏನು? ಟೆಲಿಕಾಂ ಪ್ರಪಂಚದ ತಲ್ಲಣ ಏನು? ಫೀಚರ್‌ ಫೋನ್ ಮೂಲಕ ಅಂಬಾನಿಯ ಪ್ಲಾನ್ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಮತ್ತೆ ಫೀಚರ್‌ ಫೋನ್ ಯುಗ?

ಮತ್ತೆ ಫೀಚರ್‌ ಫೋನ್ ಯುಗ?

ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ನಡುಕ ಶುರುವಾಗಿದ್ದು, ಜಿಯೋ 4G ಫೀಚರ್‌ಫೋನ್ ಏನಾದರೂ ಬಿಡುಗಡೆಯಾದರೆ ಪ್ರಸ್ತುತ ಇರುವ ಫೀಚರ್‌ ಫೋನ್‌ಗಳನ್ನು ಯಾರು ಖರೀದಿಸುವುದಿಲ್ಲ ಎಂದು ಮೊಬೈಲ್ ಕಂಪೆನಿಗಳಿಗೆ ಮನದಟ್ಟಾಗಿದೆ.!! ಹಾಗಾಗಿ, 4G ಫೀಚರ್ಸ್ ಪೋನ್ ಬಿಡುಗಡೆಗೆ ಎಲ್ಲಾ ಕಂಪೆನಿಗಳು ಮುಂದಾಗಿವೆ.!!

ಜಿಯೋ ಫೋನ್‌ಗೆ ಸೆಡ್ಡು.!!

ಜಿಯೋ ಫೋನ್‌ಗೆ ಸೆಡ್ಡು.!!

ಜಿಯೋಗಿಂತಲೂ ಕಡಿಮೆಬೆಲೆಯಲ್ಲಿ 4G ಫೀಚರ್‌ಫೋನ್ ಬಿಡುಗಡೆ ಮಾಡಲು ಮೊಬೈಲ್ ಕಂಪೆನಿಗಳು ಮುಂದಾಗಿದ್ದು, ಕೇವಲ ವೋಲ್ಟ್ ಸೇವೆಗೆ ಮಾತ್ರ ಸಪೋರ್ಟ್ ಮಾಡುವ ಜಿಯೋ ಪೋನ್‌ಗಿಂತ ವಿಭಿನ್ನವಾಗಿ ಎಲ್ಲಾ ನೆಟ್‌ವರ್ಕ್‌ಗೂ ಸಪೋರ್ಟ್ ಆಗುವ 4G ಫೀಚರ್‌ಫೋನ್ ಬಿಡುಗಡೆ ಮಾಡಲು ಎಲ್ಲಾ ಕಂಪೆನಿಗಳು ಮುಂದಾಗಿವೆ.!

ಟೆಲಿಕಾಂ ಕಂಪೆನಿಗಳ ಸಹಭಾಗಿತ್ವ!!

ಟೆಲಿಕಾಂ ಕಂಪೆನಿಗಳ ಸಹಭಾಗಿತ್ವ!!

ಜಿಯೋ 4G ಫೀಚರ್‌ಫೋನ್ ಬಿಡುಗಡೆಯಾಗುತ್ತಿದೆ ಎಂದಾಗಲೇ ಇತರ ಟೆಲಿಕಾಂಗಳು ಸ್ಪರ್ಧೆ ನೀಡಲು ಮುಂದಾಗಿದ್ದು, ಜಿಯೋ 4G ಫೀಚರ್ ಫೋನ್‌ ಬಿಡುಗಡೆ ಸಮಯಕ್ಕೆ ಕಡಿಮೆ ಬೆಲೆಯ 4G ಫೀಚರ್‌ಫೋನ್ ತಯಾರಿಸಲು ಮೊಬೈಲ್ ಕಂಪೆನಿಗಳಿಗೆ ನೆರವಾಗುತ್ತಿವೆ.ಈ ಬಗ್ಗೆ ಏರ್‌ಟೆಲ್ ಮಾಹಿತಿ ನೀಡಿದೆ.!!

ಐಡಿಯಾದಿಂದ ಮೊಬೈಲ್ ಘೋಷಣೆ!!

ಐಡಿಯಾದಿಂದ ಮೊಬೈಲ್ ಘೋಷಣೆ!!

ಜಿಯೋ 4G ಫೀಚರ್‌ಫೋನ್ ಬಿಡುಗಡೆ ಮಾಡುತ್ತಿದೆ ಎಂದ ತಕ್ಷಣವೇ ಐಡಿಯಾ ಕೂಡ 4G ಫೀಚರ್‌ಫೋನ್ ಅನ್ನಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.! 2500 ರೂಪಾಯಿಗೆ ಈ ಫೋನ್ ಬಿಡುಗಡೆಯಾಗಲಿದೆ ಎನ್ನುವ ರೂಮರ್ಸ್ ಈಗಲೇ ಹರಿದಾಡಿದೆ.!!

ಜಿಯೋ ಫೋನ್ ಉಚಿತ?

ಜಿಯೋ ಫೋನ್ ಉಚಿತ?

ಜಿಯೋ ಫೋನ್ ಸಂಪೂರ್ಣ ಉಚಿತವಾಗಿದೆ ಎಂದು ಅಂಬಾನಿ ಹೇಳಿದ್ದರೂ, ಮೂರು ವರ್ಷಗಳವರೆಗೂ ₹1,500 ರೂಪಾಯಿಯನ್ನು ಡೇಪಾಸಿಟ್ ಮಾಡಲು ಹೇಳಿದ್ದಾರೆ.!! ಮೂರು ವರ್ಷದ ನಂತರ ಈ ಹಣವನ್ನು ವಾಪಸ್ ನೀಡುವುದಾಗಿ ಹೇಳಿದ್ದಾರೆ.

ಭವಿಷ್ಯದ ಸ್ಮಾರ್ಟ್‌ಫೋನ್‌ಗಳ ಕಥೆ ಏನು?

ಭವಿಷ್ಯದ ಸ್ಮಾರ್ಟ್‌ಫೋನ್‌ಗಳ ಕಥೆ ಏನು?

ಜಿಯೋ 4G ಫೀಚರ್‌ಫೋನ್ ಮಾರುಕಟ್ಟೆಗೆ ಬಂದರೂ ಭವಿಷ್ಯದ ಸ್ಮಾರ್ಟ್‌ಫೋನ್‌ಗಳ ಭವಿಷ್ಯ ಉತ್ತಮವಾಗಿರಲಿದೆ ಎಂದು ಹೇಳಲಾಗಿದೆ.!! ಸ್ಮಾರ್ಟ್‌ಫೋನ್ ಪ್ರಭಾವವನ್ನು ಯಾವುದೇ ಕಾರಣಕ್ಕೂ ಮತ್ತೆ ಫೀಚರ್‌ಫೋನ್ ಮುರಿಯಲು ಸಾಧ್ಯವಿಲ್ಲಾ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

<strong>ಪ್ರಪಂಚದಲ್ಲಿಯೇ ಶ್ರೀಮಂತ ವ್ಯಕ್ತಿ ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಿರಲಿಲ್ಲ!! ಏಕೆ ಗೊತ್ತಾ?</strong>ಪ್ರಪಂಚದಲ್ಲಿಯೇ ಶ್ರೀಮಂತ ವ್ಯಕ್ತಿ ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಿರಲಿಲ್ಲ!! ಏಕೆ ಗೊತ್ತಾ?

Best Mobiles in India

English summary
Jio Phone is about to hit the market. Airtel has said it plans to partner with such manufacturers to offer bundled plans.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X