ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ಕೊಟ್ಟ ಜಿಯೋ!..ನಾನ್‌ ಜಿಯೋ ಕಾಲ್‌ ಕೂಡ ಫ್ರೀ!

|

ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ರಿಲಾಯನ್ಸ್‌ ಜಿಯೋ ಹೊಸ ವರ್ಷದ ಪ್ರಯುಕ್ತ ತನ್ನ ಬಳಕೆದಾರರಿಗೆ ಭರ್ಜರಿ ಉಡುಗೊರೆಯನ್ನ ನೀಡಿದೆ. ಈಗಾಲೇ ಹಲವು ಮಾದರಿಯ ಪ್ಲ್ಯಾನ್‌ಗಳನ್ನ ಪರಿಚಯಿಸಿ ಇತರೆ ಟೆಲಿಕಾಂಳಿಗೆ ಸೆಡ್ಡು ಹೊಡೆದಿರುವ ಜಿಯೋ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಸಿದೆ. ಸದ್ಯ ಇದೀಗ ಇದೇ ಜನವರಿ 1, 2021 ರಿಂದ ಜಿಯೋ ತನ್ನ ನೆಟ್‌ವರ್ಕ್‌ ಮೂಲಕ ಇತರೆ ನೆಟ್‌ವರ್ಕ್‌ಗೆ ಉಚಿತ ವಾಯ್ಸ್‌ ಕಾಲ್‌ ಆಫರ್‌ ಅನ್ನು ನೀಡಿದೆ. ಈ ಮೂಲಕ ಬಳಕೆದಾರರಿಗೆ ಮತ್ತೊಂದು ದೊಡ್ಡ ಮಟ್ಟದ ಆಫರ್ ಅನ್ನು ನೀಡಿ ಗ್ರಾಹಕರ ಗಮನಸೆಳೆದಿದೆ.

ಹೌದು, ದೇಶದ ಟೆಲಿಕಾಂ ಮಾರುಕಟ್ಟೆಯಲ್ಲೇ ದೊಡ್ಡ 4G ನೆಟ್‌ವರ್ಕ್ ಹೊಂದಿರುವ ರಿಲಾಯನ್ಸ್ ಜಿಯೋ, ತನ್ನ ಬಳಕೆದಾರರಿಗೆ ಮತ್ತೊಮ್ಮೆ ಆಫ್-ನೆಟ್ ದೇಶೀಯ ವಾಯ್ಸ್‌ ಕಾಲ್‌ ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ. ಬೇರೆ ನೆಟ್‌ವರ್ಕ್‌ಗಳಿಗೆ ಜಿಯೋ ನೆಟ್‌ವರ್ಕ್‌ನಿಂದ ಕರೆ ಮಾಡಿದರೆ ಚಂದಾದಾರರಿಗೆ ಶುಲ್ಕ ವಿಧಿಸಲು ಪ್ರಾರಂಭಿಸಿದ ಒಂದು ವರ್ಷದ ನಂತರ ಮತ್ತೇ ವಾಯ್ಸ್‌ ಕಾಲ್‌ ಫ್ರಿ ಆಗಿ ನೀಡಲಿದೆ. ಇನ್ನುಳಿದಂತೆ ಈ ಆಫರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ

ರಿಲಾಯನ್ಸ್‌ ಜಿಯೋ ಇಷ್ಟು ದಿನ ನಾನ್‌ ಜಿಯೋ ಕರೆಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನ ಇದೀಗ ಉಚಿತವಾಗಿ ನೀಡಲಿದೆ. ಇದರಿಂದಾಗಿ ನಾನ್‌ ಜಿಯೋ ಕರೆಗಳಿಗೆ ಇನ್ಮುಂದೆ ಯಾವುದೇ ರೀತಿಯ ಶುಲ್ಕವನ್ನು ಕಡಿತವಾಗುವುದಿಲ್ಲ ಎನ್ನಲಾಗಿದೆ. ಸದ್ಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಜನವರಿ 1 ರಿಂದ ದೇಶದಲ್ಲಿ ಜಾರಿಗೆ ತರುತ್ತಿರುವ ‘ಬಿಲ್ ಅಂಡ್ ಕೀಪ್' ಕಾಯ್ದೆಯ ಫಲವಾಗಿ ಈ ಹೊಸ ನಿರ್ಧಾರಕ್ಕೆ ಜಿಯೋ ಬಂದಿದ್ದು, ಇದು ಎಲ್ಲಾ ದೇಶೀಯ ವಾಯ್ಸ್‌ ಕಾಲ್‌ಗಳಿಗೆ ಇಂಟರ್‌ಕಾಮ್‌ ಬಳಕೆಯ ಶುಲ್ಕವನ್ನು ಕೊನೆಗೊಳಿಸಲಿದೆ.

ಜಿಯೋ

ಈ ಹೊಸ ಉಡುಗೊರೆಯ ಮೂಲಕ ಜಿಯೋ ಹೊಸ ವರ್ಷದಂದು ಬಳಕೆದಾರರಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದೆ. ಜಿಯೋದಲ್ಲಿನ ಚಂದಾದಾರರು ಇದೀಗ ದೇಶದ ಯಾವುದೇ ಮೊಬೈಲ್ ನೆಟ್‌ವರ್ಕ್‌ಗೆ ಉಚಿತ ವಾಯ್ಸ್‌ ಕಾಲ್‌ ಗಳನ್ನು ಮಾಡಲು ಸಾಧ್ಯವಾಗಲಿದೆ. ರಿಲಯನ್ಸ್ ಜಿಯೋ ಸಂಖ್ಯೆಯಿಂದ ಬೇರೆ ಯಾವುದೇ ನೆಟ್‌ವರ್ಕ್‌ಗೆ, ಭಾರತದಲ್ಲಿ ಎಲ್ಲಿಯಾದರೂ ಹೊಸ ವರ್ಷದಿಂದ ಪ್ರಾರಂಭವಾಗುವ ಎಲ್ಲಾ ಧ್ವನಿ ಕರೆಗಳು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಇದು ಏರ್‌ಟೆಲ್ ಮತ್ತು ವಿ (ವೊಡಾಫೋನ್ ಐಡಿಯಾ) ಸೇರಿದಂತೆ ಇತರ ಟೆಲ್ಕೋಗಳಿಗೆ ಸ್ಪರ್ಧೆಯನ್ನು ಇನ್ನಷ್ಟು ಕಠಿಣಗೊಳಿಸುವ ಸಾಧ್ಯತೆಯಿದೆ.

ಜಿಯೋ

ಸದ್ಯ ಜಿಯೋ ಟೆಲಿಕಾಂ ಆಪರೇಟರ್ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ, "ಮಾನ್ಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (" TRAI ") ನಿರ್ದೇಶನದಂತೆ, ಬಿಲ್ ಮತ್ತು ಕೀಪ್ ಆಡಳಿತವನ್ನು 2021 ರ ಜನವರಿ 1 ರಿಂದ ದೇಶದಲ್ಲಿ ಜಾರಿಗೆ ತರಲಾಗುತ್ತಿದೆ, ಇದರಿಂದಾಗಿ ಇಂಟರ್‌ ಕಾಮ್‌ ಬಳಕೆಯ ಶುಲ್ಕಗಳು ಕೊನೆಗೊಳ್ಳುತ್ತವೆ ಎಂದು ಹೇಳಿದೆ. ಇಂಟರ್‌ಕಾಮ್‌ ಶುಲ್ಕಗಳು ರದ್ದುಗೊಳಿಸಿದ ತಕ್ಷಣ, ಇತರೆ ನೆಟ್‌ವರ್ಕ್‌ಗಳಿಗೆ ಜಿಯೋ ನೆಟ್‌ವರ್ಕ್‌ನಿಂದ ಉಚಿತ ಕರೆ ಮಾಡಬಹುದಾಗಿದೆ ಎಂದು ಜಿಯೋ ಹೇಳಿದೆ.

Best Mobiles in India

English summary
Reliance Jio has a new year surprise for its users in the country. The telecom operator has announced to end interconnect usage charges (IUC) for all domestic voice calls.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X