ಜಿಯೋ ಟ್ರಿಪಲ್ ಪ್ಲೇ ಪ್ಲಾನ್ ಟೆಸ್ಟಿಂಗ್ ನಡೆಸುತ್ತಿರುವ ರಿಲಯನ್ಸ್ ಜಿಯೋ ಸಂಸ್ಥೆ

By Gizbot Bureau
|

ರಿಲಯನ್ಸ್ ಜಿಯೋ ನಿರಂತರವಾಗಿ ಟ್ರಿಪಲ್ ಪ್ಲೇ ಪ್ಲಾನ್ ನ್ನು ಜಿಯೋ ಗಿಗಾಫೈಬರ್ ಗಾಗಿ ಟೆಸ್ಟ್ ಮಾಡುತ್ತಿದೆ. ಈ ಟ್ರಿಪಲ್ ಪ್ಲೇ ಪ್ಲಾನ್ ಜಿಯೋ ಗಿಗಾಫೈಬರ್, ಜಿಯೋ ಹೋಮ್ ಟಿವಿ ಮತ್ತು ಜಿಯೋ ಆಪ್ಸ್ ಗಳಿಗೆ ಮಾಸಿಕ ಏಕೈಕ ಪ್ಯಾಕೇಜ್ ನಲ್ಲಿ ಲಭ್ಯವಾಗುವ ಬಂಡಲ್ ಆಕ್ಸಿಸ್ ಆಗಿರುತ್ತದೆ.

ಜಿಯೋ ಟ್ರಿಪಲ್ ಪ್ಲೇ ಪ್ಲಾನ್ ಟೆಸ್ಟಿಂಗ್ ನಡೆಸುತ್ತಿರುವ ರಿಲಯನ್ಸ್ ಜಿಯೋ ಸಂಸ್ಥೆ

ಅಷ್ಟೇ ಅಲ್ಲದೆ ರಿಲಯನ್ಸ್ ಜಿಯೋ ದೇಶದ ಕೆಲವು ಆಯ್ದ ಸಿಟಿಗಳಲ್ಲಿ ಈಗಾಗಲೇ ಜಿಯೋ ಗಿಗಾಫೈಬರ್ ನ್ನು ಆಫರ್ ಮಾಡುವುದಕ್ಕೆ ಆರಂಭಿಸಿದೆ.

ಪ್ರಿವ್ಯೂ ಆಫರ್ ಅಡಿಯಲ್ಲಿ ಸೇವೆ:

ಪ್ರಿವ್ಯೂ ಆಫರ್ ಅಡಿಯಲ್ಲಿ ಸೇವೆ:

ಕಂಪೆನಿಯು ಅಧಿಕೃತ ಪ್ಲಾನ್ ಗಳನ್ನು ಪ್ರಕಟಿಸುವುದು ಬಾಕಿ ಇದೆ. ಸದ್ಯ ಇರುವ ಗ್ರಾಹಕರು ಪ್ರಿವ್ಯೂ ಆಫರ್ ನ ಅಡಿಯಲ್ಲಿ ಸೇವೆಯನ್ನು ಪಡೆಯುತ್ತಿದ್ದಾರೆ.

ಸಂಪೂರ್ಣ ಮಾಹಿತಿ ಲಭ್ಯವಿಲ್ಲ:

ಸಂಪೂರ್ಣ ಮಾಹಿತಿ ಲಭ್ಯವಿಲ್ಲ:

ರಿಲಯನ್ಸ್ ಜಿಯೋ ಸಂಸ್ಥೆ ಗಿಗಾಫೈಬರ್ ಪ್ಲಾನ್ ಗಳ ಬಗ್ಗೆ ಮತ್ತು ಯಾವಾಗ ಎಲ್ಲೆಲ್ಲಿ ಬಿಡುಗಡೆಗೊಳ್ಳುತ್ತದೆ ಎಂಬ ಬಗೆಗಿನ ಸಂಪೂರ್ಣ ವಿವರವನ್ನು ಇದುವರೆಗೂ ಖಾತ್ರಿಗೊಳಿಸಿಲ್ಲ.

ಟ್ರಿಪಲ್ ಪ್ಲೇ ಪ್ಲಾನ್ ಟೆಸ್ಟಿಂಗ್:

ಟ್ರಿಪಲ್ ಪ್ಲೇ ಪ್ಲಾನ್ ಟೆಸ್ಟಿಂಗ್:

ಟೆಲಿಕಾಂ ಟಾಕ್ ನ ವರದಿಯ ಪ್ರಕಾರವೇ ಹೇಳುವುದಾದರೆ ರಿಲಯನ್ಸ್ ಜಿಯೋ ಇದೀಗ ಟ್ರಿಪಲ್ ಪ್ಲಾನ್ ಬಗ್ಗೆ ಟೆಸ್ಟಿಂಗ್ ಕೆಲಸವನ್ನು ತನ್ನ ಕಾರ್ಮಿಕರ ಜೊತೆಗೆ ಮಾಡುತ್ತಿದೆ ಅಷ್ಟೇ ಅಲ್ಲ ಈ ಪ್ಲಾನ್ ನ್ನು ಗಿಗಾಫೈಬರ್ ಅಕೌಂಟಿನ ಡ್ಯಾಷ್ ಬೋರ್ಡ್ ನಲ್ಲಿ ಗಮನಿಸುವುದಕ್ಕೆ ಸಾಧ್ಯವಾಗುತ್ತಿದೆ.

ಏಕೈಕ ಟ್ರಿಪಲ್ ಪ್ಲೆ ಪ್ಲಾನ್,28 ದಿನಗಳ ಅವಧಿ:

ಏಕೈಕ ಟ್ರಿಪಲ್ ಪ್ಲೆ ಪ್ಲಾನ್,28 ದಿನಗಳ ಅವಧಿ:

ಇದುವರೆಗೆ ಕಂಪೆನಿಯು ಏಕೈಕ ಟ್ರಿಪಲ್ ಪ್ಲೇ ಪ್ಲಾನ್ ನ್ನು ನೀಡಿದ್ದು 28 ದಿನಗಳ ಅವಧಿಯನ್ನು ಅದು ಹೊಂದಿದೆ. ಈ ಪ್ಲಾನ್ ನ ಅಡಿಯಲ್ಲಿ ಅನಿಯಮಿತ ವಾಯ್ಸ್ ಕರೆಗಳು ಮತ್ತು 100ಜಿಬಿ ವರೆಗೆ ಡಾಟಾ ಆಕ್ಸಿಸ್, ಜಿಯೋ ಹೋಮ್ ಟಿವಿಗೆ ಆಕ್ಸಿಸ್ ಮತ್ತು ಜಿಯೋ ಆಪ್ಸ್ ಗಳಿಗೆ ಕಾಂಪ್ಲಿಮೆಂಟರಿ ಚಂದಾದಾರಿಕೆಯು ಲಭ್ಯವಾಗುತ್ತದೆ. ಟ್ರಿಪಲ್ ಪ್ಲೇ ಪ್ಲಾನ್ ಗೆ ಇದುವರೆಗೂ ಯಾವುದೇ ಚಾರ್ಜಸ್ ಇಲ್ಲ ಯಾಕೆಂದರೆ ಇದು ಟೆಸ್ಟಿಂಗ್ ಹಂತದಲ್ಲಿ ಇದೆ.

ಜಿಯೋ ಗಿಗಾಟಿವಿಯ ರೀಬ್ರ್ಯಾಂಡಿಂಗ್:

ಜಿಯೋ ಗಿಗಾಟಿವಿಯ ರೀಬ್ರ್ಯಾಂಡಿಂಗ್:

ಬಹಳ ಕುತೂಹಲಕಾರಿ ವಿಚಾರವೇನೆಂದರೆ ಟ್ರಿಪಲ್ ಪ್ಲೇ ಪ್ಲಾನ್ ನಲ್ಲಿ ಜಿಯೋ ಹೋಮ್ ಟಿವಿ ಸೇವೆಯನ್ನು ಕೂಡ ಒಳಗೊಂಡಿರುತ್ತದೆ.ಅಂದರೆ ರಿಲಯನ್ಸ್ ಜಿಯೋ ಗಿಗಾ ಟಿವಿ ಸೇವೆಯನ್ನು ರೀಬ್ರ್ಯಾಂಡ್ ಮಾಡುತ್ತಿರುವಂತೆ ಕಾಣುತ್ತಿದೆ ಮತ್ತು ಅದನ್ನು ಜಿಯೋ ಹೋಮ್ ಟಿವಿ ಎಂದು ಹೇಳುತ್ತಿದೆ. ಅಷ್ಟೇ ಅಲ್ಲ ಇದೀಗ ಗಿಗಾಫೈಬರ್ ಸೇವೆಯು ಕೆಲವು ಆಯ್ದ ಗ್ರಾಹಕರಿಗೆ ಮಾತ್ರವೇ ಲಭ್ಯವಿದ್ದು ಜಿಯೋ ಹೋಮ್ ಟಿವಿ ಯಾವಾಗ ಬಿಡುಗಡೆಗೊಳ್ಳುತ್ತದೆ ಎಂಬ ಬಗ್ಗೆ ಸಂಪೂರ್ಣ ವಿವರ ಇದುವರೆಗೂ ಲಭ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ.ಟ್ರಿಪಲ್ ಪ್ಲೇ ಪ್ಲಾನ್ ಮೂಲಕ ಕಾರ್ಮಿಕರ ಜೊತೆಗೆ ಮೊದಲು ಟೆಸ್ಟಿಂಗ್ ಕೆಲಸವನ್ನು ಪೂರ್ಣಗೊಳಿಸಿದ ನಂತರ ಕಂಪೆನಿಯು ಇದನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.

ನಿರೀಕ್ಷೆ:

ನಿರೀಕ್ಷೆ:

ರೆಗ್ಯುಲರ್ ಜಿಯೋ ಗಿಗಾಫೈಬರ್ ಬಳಕೆದಾರರಿಗೆ ಯಾವಾಗ ಈ ಟ್ರಿಪಲ್ ಪ್ಲೇ ಪ್ಲಾನ್ ಲಭ್ಯವಾಗುತ್ತದೆ ಎಂಬ ಬಗ್ಗೆಯೂ ಕೂಡ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಧಿಕೃತವಾಗಿ ಈ ಸೇವೆಯನ್ನು ಬಿಡುಗಡೆಗೊಳಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.

Best Mobiles in India

English summary
Jio Triple Play Plan for GigaFiber Being Tested, Access to Jio Home TV in Tow: Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X