ಡಿಸ್ನಿ + ಹಾಟ್‌ಸ್ಟಾರ್‌ನ ಹೊಸ ಪ್ಲಾನ್‌ಗಳನ್ನು ಫ್ರೀಯಾಗಿ ಪಡೆಯಲು ಹೀಗೆ ಮಾಡಿ!

|

ಭಾರತದಲ್ಲಿ ಲಭ್ಯವಿರುವ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ ಕೂಡ ಒಂದಾಗಿದೆ. ಇನ್ನು ಡಿಸ್ನಿ + ಹಾಟ್‌ಸ್ಟಾರ್‌ ಇಂದಿನಿಂದ ತನ್ನ ಚಂದಾದಾರಿಕೆ ಯೋಜನೆಗಳಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಹೊಸ ಪ್ಲಾನ್‌ಗಳನ್ನು ಆರಂಭಿಸಿದೆ. ಇದರ ಜೊತೆಗೆ ಜಿಯೋ, ಏರ್‌ಟೆಲ್ ಮತ್ತು ವಿ ಟೆಲಿಕಾಂ ಕಂಪೆನಿಗಳು ಕೂಡ ತಮ್ಮ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಷ್ಕರಿಸಿದ್ದು, ಹೊಸ ಡಿಸ್ನಿ+ಹಾಟ್‌ಸ್ಟಾರ್ ಪ್ಲಾನ್‌ಗಳು ಉಚಿತವಾಗಿ ಸಿಗಲಿದೆ.

ಡಿಸ್ನಿ + ಹಾಟ್‌ಸ್ಟಾರ್‌

ಹೌದು, ಡಿಸ್ನಿ + ಹಾಟ್‌ಸ್ಟಾರ್‌ ಅನ್ನು ನೀವು ಫ್ರೀಯಾಗಿ ಸ್ಟ್ರೀಮಿಂಗ್‌ ಮಾಡುವುದಕ್ಕೆ ಅವಕಾಶವಿದೆ. ಇದಕ್ಕೆಂದೆ ಜಿಯೋ, ಏರ್‌ಟೆಲ್ ಮತ್ತು ವಿ ಕಂಪೆನಿಗಳು ಕೆಲವು ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ ಅನ್ನು ಉಚಿತವಾಗಿ ನೀಡುತ್ತಿವೆ. ಬದಲಾದ ಡಿಸ್ನಿ + ಹಾಟ್‌ಸ್ಟಾರ್‌ ಯೋಜನೆಗಳನ್ನು ಮೂರು ಟೆಲಿಕಾಂ ಕಂಪೆನಿಗಳು 499ರೂ ಬೆಲೆಯ ಮೊಬೈಲ್-ಓನ್ಲಿ ಪ್ಲ್ಯಾನ್‌ ಮೂಲಕ ಫ್ರೀ ಯಾಗಿ ನೀಡಲಿವೆ. ಡಿಸ್ನಿ +ಹಾಟ್‌ಸ್ಟಾರ್‌ ಅನ್ನು ಫ್ರೀ ಯಾಗಿ ಸ್ಟ್ರೀಮಿಂಗ್‌ ಮಾಡುವುದಕ್ಕೆ ಅವಕಾಶ ನೀಡುವ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್ನಿ+ ಹಾಟ್‌ಸ್ಟಾರ್ 499ರೂ, ಪ್ಲಾನ್

ಡಿಸ್ನಿ+ ಹಾಟ್‌ಸ್ಟಾರ್ 499ರೂ, ಪ್ಲಾನ್

499ರೂ ಗಳ ಡಿಸ್ನಿ+ ಹಾಟ್‌ಸ್ಟಾರ್ ಪ್ಲ್ಯಾನ್‌ ಹೊಸ ಮೂಲಭೂತ "ಮೊಬೈಲ್" ಓನ್ಲಿ ವಾರ್ಷಿಕ ಯೋಜನೆಯಾಗಿದೆ. ಇದು ಒಂದು ಸಮಯದಲ್ಲಿ ಒಂದು ಡಿವೈಸ್‌ ಅನ್ನು ಮಾತ್ರ ಬೆಂಬಲಿಸುತ್ತದೆ. ಅಲ್ಲದೆ ಈ ಯೋಜನೆಯ ಬಳಕೆದಾರರಿಗೆ ಮೊಬೈಲ್ ನಲ್ಲಿ ಲೈವ್ ಸ್ಪೋರ್ಟ್ಸ್, ಡಿಸ್ನಿ+ಒರಿಜಿನಲ್‌ಗಳಂತಹ ಪಾವತಿಸಿದ ವಿಷಯವನ್ನು ಆನಂದಿಸಲು ಮಾತ್ರ ಅವಕಾಶ ನೀಡುತ್ತದೆ.

ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ಲಾನ್‌ ಜೊತೆಗೆ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ಗಳು

ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ಲಾನ್‌ ಜೊತೆಗೆ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ಗಳು

ಏರ್‌ಟೆಲ್‌ ಟೆಲಿಕಾಂ ಮೂರು ಡಿಸ್ನಿ+ ಹಾಟ್ ಸ್ಟಾರ್ ಪ್ಲಾನ್‌ಗಳನ್ನು ಹೊಂದಿದೆ. ಇದರಲ್ಲಿ 2,798 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಕೂಡ ಸೇರಿದೆ. ಇದು ಏರ್‌ಟೆಲ್‌ ಟೆಲಿಕಾಣ ವಾರ್ಷಿ ಪ್ಲ್ಯಾನ್‌ ಆಗಿದ್ದು, ಈ ಯೋಜನೆಯಲ್ಲಿ ಅನಿಯಮಿತ ಕರೆಗಳು, ದಿನನಿತ್ಯ 2GB ಡೇಟಾ ಜೊತೆಗೆ, ಒಂದು ವರ್ಷದ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಲಭ್ಯವಾಗುವ ಡಿಸ್ನಿ + ಹಾಟ್‌ಸ್ಟಾರ್‌ ಚಂದಾದಾರಿಕೆಯು ಮೊಬೈಲ್-ಒನ್ಲಿ ಚಂದಾದಾರಿಕೆಯಾಗಿರಲಿದೆ.

ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ಲಾನ್‌ ಜೊತೆಗೆ ಜಿಯೋ ಪ್ರಿಪೇಯ್ಡ್ ಪ್ಲಾನ್‌ಗಳು

ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ಲಾನ್‌ ಜೊತೆಗೆ ಜಿಯೋ ಪ್ರಿಪೇಯ್ಡ್ ಪ್ಲಾನ್‌ಗಳು

ಜಿಯೋ ಟೆಲಿಕಾಂ ಕೂಡ ಇದೀಗ ತನ್ನ ಪ್ರಿಪೇಯ್ಡ್ ಯೋಜನೆಗಳನ್ನು ಪರಿಷ್ಕರಿಸಿದೆ. ಅದರಲ್ಲಿ ಇದೀಗ ಹೊಸ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್-ಒನ್ಲಿ ಚಂದಾದಾರಿಕೆ ಪ್ಲಾನ್‌ ಅನ್ನು ನೀಡುತ್ತಿದೆ. ಏರ್‌ಟೆಲ್‌ನಂತೆಯೇ, ಜಿಯೋ ಕೂಡ ತನ್ನ ಪ್ರಿಪೇಯ್ಡ್ ರೀಚಾರ್ಜ್ ಆಫರ್‌ಗಳ ಭಾಗವಾಗಿ 499ರೂ, ಗಳ ಮೊಬೈಲ್-ಓನ್ಲಿ ಡಿಸ್ನಿ+ಹಾಟ್‌ಸ್ಟಾರ್ ಪ್ಲಾನ್ ಅನ್ನು ಒದಗಿಸಲಿದೆ. ಇದರಲ್ಲಿ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆಗೆ ಒಂದು ವರ್ಷದ ಮಾನ್ಯತೆ ಇರಲಿದೆ.

ಡಿಸ್ನಿ+ ಹಾಟ್‌ಸ್ಟಾರ್ ಪ್ಲಾನ್‌ ಜೊತೆಗೆ ವಿ ಪ್ರಿಪೇಯ್ಡ್ ಯೋಜನೆಗಳು

ಡಿಸ್ನಿ+ ಹಾಟ್‌ಸ್ಟಾರ್ ಪ್ಲಾನ್‌ ಜೊತೆಗೆ ವಿ ಪ್ರಿಪೇಯ್ಡ್ ಯೋಜನೆಗಳು

ವಿ ಟೆಲಿಕಾಂ ಕೂಡ ಡಿಸ್ನಿ + ಹಾಟ್‌ಸ್ಟಾರ್‌ ಚಂದಾದಾರಿಕೆ ನೀಡುವ ಮೂರು ಪ್ರಿಪೇಯ್ಡ್ ಪ್ಲಾನ್ ಗಳನ್ನು ಹೊಂದಿದೆ. ಇದರಲ್ಲಿ ಹೊಸ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು 501ರೂ,ಗಳ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡುತ್ತದೆ. ಈ ಪ್ಲಾನ್‌ ದಿನಕ್ಕೆ 3ಜಿಬಿ ಡೇಟಾ, ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ , ಡೈಲಿ 100 ಎಸ್‌ಎಂಎಸ್, ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಪ್ಲಾನ್‌ ಸಿಗಲಿದೆ. ಇದಲ್ಲದೆ ವಿ ಟೆಲಿಕಾಂ 601 ಡೇಟಾ ಆಡ್-ಆನ್ ಪ್ಯಾಕ್ ಹೊಂದಿದೆ, ಇದರಲ್ಲಿ 75 ಜಿಬಿ ಡೇಟಾ ಮತ್ತು ಒಂದು ವರ್ಷದ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಪ್ಲಾನ್ ಪ್ರಯೋಜನ ದೊರೆಯಲಿದೆ.

Most Read Articles
Best Mobiles in India

Read more about:
English summary
Prepaid plans from Jio, Airtel and Vi that offer the new Disney+ Hotstar subscription for free.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X