ಜಿಯೋ vrs ಏರ್ ಟೆಲ್ vrs ವಡಾಫೋನ್: ಬೆಸ್ಟ್ ರೀಚಾರ್ಜ್ ಪ್ಲಾನ್ ಗಳು

By Gizbot Bureau
|

ವಿಭಿನ್ನ ರೀತಿಯ ಮೊಬೈಲ್ ರೀಚಾರ್ಜ್ ಪ್ಲಾನ್ ಗಳು ಲಭ್ಯವಿದೆ. ಕೆಲವು ಪ್ಲಾನ್ ಗಳು ದೀರ್ಘಾವಧಿ ವ್ಯಾಲಿಡಿಟಿಯನ್ನು ಹೊಂದಿರುತ್ತದೆ ಮತ್ತು ಕೆಲವು ಅತೀ ಹೆಚ್ಚು ಡಾಟಾ ಲಾಭಗಳನ್ನು ಹೊಂದಿರುತ್ತದೆ ಆದರೆ ಇನ್ನೊಂದಿಷ್ಟು ಪ್ಲಾನ್ ಗಳು ಕಾಲಿಂಗ್ ಬೆನಿಫಿಟ್ ಗಳನ್ನು ನೀಡುತ್ತದೆ. ನಿಮಗೆ ಯಾವುದರ ಅಗತ್ಯವಿದೆ ಎಂಬುದನ್ನು ಆಧರಿಸಿ ನೀವು ಪ್ಲಾನ್ ನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಜಿಯೋ vrs ಏರ್ ಟೆಲ್ vrs ವಡಾಫೋನ್: ಬೆಸ್ಟ್ ರೀಚಾರ್ಜ್ ಪ್ಲಾನ್ ಗಳು

ಕೆಲವು ಪ್ಲಾನ್ ಗಳು ಡಾಟಾ ಮತ್ತು ಅನಿಯಮಿತ ಕಾಲಿಂಗ್ ಬೆನಿಫಿಟ್ ಗಳನ್ನು ನೀಡುತ್ತದೆ ಆದರೆ ಅದರ ಮಾಸಿಕ ತಾರಿಫ್ ಅತ್ಯಧಿಕವಾಗಿರುತ್ತದೆ ಮತ್ತು ಅದು ಕೆಲವು ಬಳಕೆದಾರರಿಗೆ ದುಬಾರಿ ಅನ್ನಿಸಲೂ ಬಹುದು. ಇದೇ ಕಾರಣಕ್ಕೆ ಕೆಲವು ಟೆಲಿಕಾಂ ಕಂಪೆನಿಗಳು ಒಂದಷ್ಟು ಟಾಪ್ ಅಪ್ ಪ್ಲಾನ್ ಗಳನ್ನು ಕಡಿಮೆ ಬೆಲೆಗೆ ನೀಡುತ್ತವೆ ಮತ್ತು ಡಾಟಾ ಜೊತೆಗೆ ಕರೆಗಳ ಬೆನಿಫಿಟ್ ನ್ನು ಗ್ರಾಹಕರಿಗೆ ನೀಡುತ್ತದೆ.

ದೊಡ್ಡ ಸಂಖ್ಯೆಯಲ್ಲಿ ವಿಭಿನ್ನ ಟಾಪ್ ಅಪ್ ಪ್ಲಾನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಪ್ಲಾನ್ ನ್ನು ಖರೀದಿಸುವಾಗ ನೀವು ಆಯ್ಕೆ ಮಾಡಿಕೊಂಡಿರುವುದಕ್ಕಿಂತಲೂ ಬೆಟರ್ ಆಗಿರುವ ಪ್ಲಾನ್ ಗಳು ಲಭ್ಯವಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಉತ್ತಮ.

ಬೆಸ್ಟ್ ರೀಚಾರ್ಜ್ ಪ್ಲಾನ್ ಖರೀದಿಸುವುದಕ್ಕಾಗಿ ಮತ್ತು ದಿನನಿತ್ಯದ ಡಾಟಾ ಜೊತೆಗೆ ಕರೆಗಳ ಬೆನಿಫಿಟ್ ನ್ನು ಲಾಭದಾಯಕವಾಗಿ ನೀಡುವ ಪ್ಲಾನ್ ಗಳ ಬಗ್ಗೆ ಒಂದು ಸಣ್ಣ ವರದಿ ಇಲ್ಲಿದೆ. ಮುಂದೆ ಓದಿ.

ಜಿಯೋ ಟಾಪ್-ಅಪ್ ಪ್ಲಾನ್ :

ಜಿಯೋ ಟಾಪ್-ಅಪ್ ಪ್ಲಾನ್ :

ಜಿಯೋದಲ್ಲಿ ಎರಡು ರೀತಿಯ ಟಾಪ್ ಅಪ್ ಪ್ಲಾನ್ ಗಳಿದೆ- ಒಂದು ರೆಗ್ಯುಲರ್ ಟಾಕ್ ಟೈಮ್ ನೀಡುತ್ತದೆ ಮತ್ತು ಮತ್ತೊಂದು ಫುಲ್ ಟಾಕ್ ಟೈಮ್ ಬೆನಿಫಿಟ್ ನ್ನು ನೀಡುತ್ತದೆ. ಜಿಯೋ ಮೂರು ರೆಗ್ಯುಲರ್ ಮತ್ತು 9 ಫುಲ್ ಟಾಕ್ ಟೈಮ್ ಪ್ಲಾನ್ ಗಳನ್ನು ನೀಡುತ್ತದೆ ಆದರೆ ನಾವಿಲ್ಲಿ ನೀವು ಆಯ್ಕೆ ಮಾಡಬಹುದಾದ ಬೆಸ್ಟ್ ಯಾವುದು ಎಂಬುದನ್ನು ತಿಳಿಸುತ್ತಿದ್ದೇವೆ.

-- ನೀವು ಕಡಿಮೆ ಬಜೆಟ್ ನವರಾಗಿದ್ದಲ್ಲಿ 50 ರುಪಾಯಿಯ ಟಾಪ್ ಅಪ್ ಪ್ಲಾನ್ ಖರೀದಿಸುವುದಕ್ಕೆ ನಾವು ಸಲಹೆ ನೀಡುತ್ತೇವೆ. ಇದರಲ್ಲಿ ಅನಿಯಮಿತ ವ್ಯಾಲಿಡಿಟಿ ಮತ್ತು 40.48 ರುಪಾಯಿಯ ಟಾಕ್ ಟೈಮ್ ಲಭ್ಯವಾಗುತ್ತದೆ.

-- ಫುಲ್ ಟಾಕ್ ಟೈಮ್ ರೆಗ್ಯುಲರ್ ಪ್ಲಾನ್ ಗಿಂತ ಯಾವಾಗಲೂ ಬೆಸ್ಟ್ ಪ್ಲಾನ್ ಆಗಿರುತ್ತದೆ ಯಾಕೆಂದರೆ ನೀವು ಪಾವತಿಸುವ ಮೊತ್ತಕ್ಕೆ ಪೂರ್ತಿ ಲಾಭ ಸಿಗುತ್ತದೆ. ಜಿಯೋದಲ್ಲಿ 9 ಫುಲ್ ಟಾಕ್ ಟೈಮ್ ಪ್ಲಾನ್ ಗಳಿದ್ದು ಆರಂಭಿಕ ಬೆಲೆ 100 ರುಪಾಯಿ ಆಗಿದೆ ಮತ್ತು 5000 ರುಪಾಯಿ ವರೆಗೆ ಬೆಲೆಬಾಳುವ ಪ್ಲಾನ್ ಗಳು ಲಭ್ಯವಿದೆ ಆದರೆ 300 ರುಪಾಯಿಗಿಂತ ಹೆಚ್ಚು ಪಾವತಿಸುವುದು ಅಷ್ಟೇನು ಲಾಭದಾಯಕವಲ್ಲ ಅನ್ನಿಸುತ್ತದೆ ಯಾಕೆಂದರೆ (a) ನಿಮಗೆ ಯಾವುದೇ ಡಾಟಾ ಬೆನಿಫಿಟ್ ಇದರಲ್ಲಿ ಲಭ್ಯವಿರುವುದಿಲ್ಲ (b) ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಡಾಟಾ ಮತ್ತು ಕಾಲಿಂಗ್ ಬೆನಿಫಿಟ್ ಎರಡನ್ನೂ ಬಳಕೆದಾರರಿಗೆ ನೀಡುವ ಪ್ಲಾನ್ ಗಳು ಲಭ್ಯವಿದೆ.

-- ಜಿಯೋ Rs 100, Rs 150, Rs 200 ಮತ್ತು Rs 300 ರುಪಾಯಿಯ ಫುಲ್ ಟಾಕ್ ಟೈಮ್ ಇರುವ ಟಾಪ್ ಅಪ್ ಪ್ಲಾನ್ ಗಳನ್ನು ನೀಡುತ್ತದೆ. ಕರೆಗಳು ಯಾವಾಗಲೂ ಉಚಿತವಾಗಿರುತ್ತದೆ.ಟಾಕ್ ಟೈಮ್ ಮೊತ್ತವು ಜಿಯೋ ಚಾರ್ಜೇಬಲ್ ಸೇವೆಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಏರ್ ಟೆಲ್ ಟಾಪ್ ಅಪ್ ಪ್ಲಾನ್:

ಏರ್ ಟೆಲ್ ಟಾಪ್ ಅಪ್ ಪ್ಲಾನ್:

ಏರ್ ಟೆಲ್ ಇತ್ತೀಚೆಗೆ ಹೊಸದಾಗಿ ಐದು ಸ್ಮಾರ್ಟ್ ರೀಚಾರ್ಜ್ ಪ್ಲಾನ್ ಗಳನ್ನು ತನ್ನ ಚಂದಾದಾರರಿಗಾಗಿ ಪರಿಚಯಿಸಿದ್ದು ಅದರಲ್ಲಿ Rs 34, Rs 64, Rs 94, Rs 144 ಮತ್ತು Rs 244 ಒಳಗೊಂಡಿದೆ.

--Rs 34 ಸ್ಮಾರ್ಟ್ ರೀಚಾರ್ಜ್ ಪ್ಲಾನ್ ನಲ್ಲಿ 100MB ಡಾಟಾ ಮತ್ತು Rs 25.66 ಟಾಕ್ ಟೈಮ್ ಮೊತ್ತ ಲಭ್ಯವಾಗುತ್ತದೆ. ಇದರ ವ್ಯಾಲಿಡಿಟಿ 28 ದಿನಗಳ ಅವದಿಗಾಗಿರುತ್ತದೆ ಮತ್ತು ಹೋಮ್ ನೆಟ್ ವರ್ಕ್ ನಿಂದ ಔಟ್ ಗೋಯಿಂಗ್ ಕರೆಗಳಿಗೆ 2.5 ಪೈಸೆ ಪ್ರತಿ ಸೆಕೆಂಡ್ ಗೆ ಚಾರ್ಜ್ ಮಾಡಲಾಗುತ್ತದೆ.

-- 64 ರುಪಾಯಿಯ ರೀಚಾರ್ಜ್ ನ್ನು ನಿಮ್ಮ ಏರ್ ಟೆಲ್ ನಂಬರ್ ಗೆ ಮಾಡಿಸಿಕೊಳ್ಳುವುದರಿಂದಾಗಿ 200MB ಡಾಟಾ ಸಿಗುತ್ತದೆ.54 ರುಪಾಯಿಯ ಟಾಕ್ ಟೈಮ್ ಸಿಗುತ್ತದೆ ಮತ್ತು ಹೋಮ್ ನೆಟ್ ವರ್ಕ್ ನಿಂದ ಔಟ್ ಗೋಯಿಂಗ್ ಕರೆಗಳಿಗೆ 1 ಪೈಸೆ ಪ್ರತಿ ಸೆಕೆಂಡ್ ಗೆ ಚಾರ್ಜ್ ಮಾಡಲಾಗುತ್ತದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.

-- 94 ರುಪಾಯಿಯ ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ಮಾಡಿಸಿಕೊಳ್ಳುವುದರಿಂದಾಗಿ 500MB ಡಾಟಾ ಸಿಗುತ್ತದೆ. ಔಟ್ ಗೋಯಿಂಗ್ ಕರೆಗಳಿಗೆ 30 ಪೈಸೆ ಪ್ರತಿ ನಿಮಿಷಕ್ಕೆ ಚಾರ್ಜ್ ಮಾಡಲಾಗುತ್ತದೆ ಮತ್ತು 28 ದಿನಗಳ ವ್ಯಾಲಿಡಿಟಿಯನ್ನು ಇದು ಹೊಂದಿದೆ.

--ಏರ್ ಟೆಲ್ Rs 144 ಸ್ಮಾರ್ಟ ರೀಚಾರ್ಜ್ ಮಾಡಿಸಿಕೊಳ್ಳುವುದರಿಂದಾಗಿ ರುಪಾಯಿ 144 ಫುಲ್ ಟಾಕ್ ಟೈಮ್ ಜೊತೆಗೆ 1GB ಡಾಟಾ 42 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಔಟ್ ಗೋಯಿಂಗ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 30 ಪೈಸೆ ಚಾರ್ಜ್ ಮಾಡಲಾಗುತ್ತದೆ.

-- ಕೊನೆಯದಾಗಿ Rs 244 ಸ್ಮಾರ್ಟ್ ರೀಚಾರ್ಜ್ ಆಯ್ಕೆಯನ್ನು ಸೆಲೆಕ್ಟ್ ಮಾಡುವುದರಿಂದಾಗಿ ಫುಲ್ ಟಾಕ್ ಟೈಮ್ ಜೊತೆಗೆ 2GB ಡಾಟಾ 84 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಕರೆಗಳಿಗೆ ಪ್ರತಿ ನಿಮಿಷಕ್ಕೆ 30 ಪೈಸೆ ಚಾರ್ಜ್ ಮಾಡಲಾಗುತ್ತದೆ.

ವಡಾಫೋನ್ ಟಾಪ್ ಅಪ್ ಪ್ಲಾನ್ :

ವಡಾಫೋನ್ ಟಾಪ್ ಅಪ್ ಪ್ಲಾನ್ :

ವಡಾಫೋನ್ ರೆಗ್ಯುಲರ್ ಟಾಕ್ ಟೈಮ್ ಆಫರ್ ನ್ನು 10 ರುಪಾಯಿಯಿಂದ ಆರಂಭಿಸುತ್ತದೆ ಮತ್ತು ಇದರಲ್ಲಿ Rs 7.47 ಸಿಗುತ್ತದೆ. ಇನ್ನು ಎರಡು ಟಾಕ್ ಟೈಮ್ ಪ್ಲಾನ್ ಗಳಿದ್ದು ಕ್ರಮವಾಗಿ Rs 1000 ಮತ್ತು Rs 5000 ಲಭ್ಯವಿದೆ.

-- ವಡಾಫೋನ್ ನಲ್ಲಿ Rs 27 ಟಾಪ್ ಅಪ್ ಪ್ಲಾನ್ ಇದ್ದು 450MB ಡಾಟಾ ಜೊತೆಗೆ 28 ದಿನಗಳ ಅವಧಿಗೆ ಲಭ್ಯವಾಗುತ್ತದೆ.

-- ವಡಾಫೋನ್ ನಲ್ಲಿ Rs 49 ವೋಚರ್ ಪ್ಲಾನ್ ಇದ್ದು ಇದು 1ಜಿಬಿ ಡಾಟಾವನ್ನು 28 ದಿನಗಳ ಅವಧಿಗೆ ನೀಡುತ್ತದೆ.

-- ಕೊನೆಯದಾಗಿ 98 ರುಪಾಯಿಯ ಪ್ಲಾನ್ ನಲ್ಲಿ 3GB ಇಂಟರ್ನೆಟ್ ಡಾಟಾವು 287 ದಿನಗಳ ಅವಧಿಗೆ ಲಭ್ಯವಾಗುತ್ತದೆ.

Best Mobiles in India

English summary
Jio Vs Airtel Vs Vodafone: Best top-up recharge plans you can opt for

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X