ಬಾಲಿವುಡ್‌ ಕ್ವೀನ್‌ ನಟಿ ಕಂಗನಾ ರಣಾವತ್‌ ಟ್ವಿಟರ್‌ ಅಕೌಂಟ್‌ ಬ್ಯಾನ್‌!

|

ಇತ್ತೀಚಿನ ದಿನಗಳಲ್ಲಿ ಸೊಶೀಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದ ಬಾಲಿವುಡ್‌ ಕ್ವೀನ್‌ ಕಂಗಾನಾ ರಣಾವತ್‌ ಅವರ ಟ್ವಿಟರ್‌ ಖಾತೆಯನ್ನು ಸಸ್ಪೆಂಡ್‌ ಮಾಡಲಾಗಿದೆ. ಪಶ್ಚಿಮ ಬಂಗಾಳ ಎಲೆಕ್ಷನ್‌ ರಿಸಲ್ಟ್‌ ಪ್ರಕಟವಾದ ನಂತರ ಬಂಗಾಳದಲ್ಲಿ ನಡೆದ ಘಟನೆಗಳ ಬಗ್ಗೆ ನಟೆ ಕಂಗನಾ ಮಾಡಿದ್ದ ಟ್ವೀಟ್‌ ಸಾಕಷ್ಟು ವಿರೋದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಟ್ವೀಟರ್‌ ಖಾತೆಯ ನಿಯಮವನ್ನು ಪಾಲಿಸಿಲ್ಲ ಎಂದು ಕಂಗನಾ ರಣಾವತ್‌ ಪಾಲಿಸಿಲ್ಲ ಎನ್ನಲಾಗಿದೆ.

ಬಂಗಾಳ

ಹೌದು, ಪಶ್ಚಿಮ ಬಂಗಾಳ ಎಲೆಕ್ಷನ್‌ ರಿಸಲ್ಟ್‌ ಬಂದ ನಂತರ ನಡೆದ ಹಿಂಸಾಚಾರ ವಿಚಾರವಾಗಿ ಕಂಗಾನಾ ಪ್ರಚೋದನಕಾರಿ ಟ್ವೀಟ್‌ ಮಾಡಿದ್ದರು. ಅಲ್ಲದೆ ಪ್ರೋದನಕಾರಿ ವೀಡಿಯೋನ್ನು ಸಹ ಟ್ವೀಟ್‌ ಮಾಡಿದ್ದರು, ಇದೇ ಕಾರಣಕ್ಕೆ ಕಂಗನಾ ರಣಾವತ್‌ ಟ್ವೀಟ್‌ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಹಾಗಾದ್ರೆ ಕಂಗನಾ ರಣಾವತ್‌ ಟ್ವೀಟ್‌ ಖಾತೆಯನ್ನು ಸ್ಥಗಿತಗೊಳಿಸುವುದಕ್ಕೆ ಕಾರಣವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಮತಾ

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಬಹುಮತ ಗಳಿಸಿತ್ತು. ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಕಂಗನಾ ರಣಾವತ್ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಟ್ವೀಟ್ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ವಿವಾದಾತ್ಮಕ ಟ್ವೀಟ್ ನಂತರ ನಟ ಕಂಗನಾ ರನೌತ್ ಭಾವನಾತ್ಮಕ ವೀಡಿಯೋವೊಂದನ್ನು ಪೋಸ್ಟ್‌ ಮಾಡಿದ್ದರು ಇದು ಕೂಡ ಪ್ರಚೋದನಕಾರಿಯಾಗಿದೆ ಎಂದು ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ.

ಕಂಗನಾ

ಕಂಗನಾ ರಣಾವತ್‌ ಟ್ವೀಟ್‌ ಖಾತೆಯು ದ್ವೇಷಪೂರಿತ ನಡವಳಿಕೆ ಮತ್ತು ನಿಂದನಾತ್ಮಕ ನಡವಳಿಕೆ" ವಿಚಾರವನ್ನೇ ಪದೇ ಪದೇ ಟ್ವೀಟ್‌ ಮಾಡಿದ್ದಾರೆ. ಟ್ವಿಟರ್ ನೀತಿಯನ್ನು ಪದೇ ಪದೇ ಉಲ್ಲಂಘಿಸಿದ್ದಾರೆ ಎಂದು ಟ್ವೀಟರ್‌ ತಿಳಿಸಿದೆ. ಆಫ್‌ಲೈನ್ ಹಾನಿಗೆ ಕಾರಣವಾಗುವ ನಡವಳಿಕೆಯ ಮೇಲೆ ನಾವು ಬಲವಾದ ಜಾರಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಮಗೆ ಸ್ಪಷ್ಟವಾಗಿದೆ. ಟ್ವಿಟರ್ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಉಲ್ಲೇಖಿತ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ನಿರ್ದಿಷ್ಟವಾಗಿ ನಮ್ಮ ದ್ವೇಷಪೂರಿತ ನಡವಳಿಕೆ ನೀತಿ ಮತ್ತು ನಿಂದನಾತ್ಮಕ ವರ್ತನೆಯ ನೀತಿ, ಟ್ವಿಟರ್ ವಕ್ತಾರರು, ನಿಯಮಗಳನ್ನು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಎಲ್ಲರಿಗೂ ಅನ್ವಯಿಸಲಾಗಿದೆ ಎಂದು ಟ್ವೀಟ್‌ ಸಂಸ್ಥೆ ಹೇಳಿಕೊಂಡಿದೆ.

ರಣಾವತ್‌

ಇನ್ನು ಟ್ವೀಟ್‌ ಖಾತೆಯನ್ನು ಸಂಸ್ಪೇಡ್‌ ಮಾಡಿದ ನಂತರ ನಟಿ ಕಂಗಾನಾ ರಣಾವತ್‌ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಶ್ಚಿಮ ಬಂಗಾಳದ ಘಟನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ತನ್ನ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸುವ ಬಗ್ಗೆ ಇನ್ನೂ ಏನನ್ನೂ ಹೇಳಿಲ್ಲ.

Most Read Articles
Best Mobiles in India

English summary
Kangana Ranaut Twitter Account Banned Permanently.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X