Subscribe to Gizbot

ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ಕೊಡಿ. ಸರ್ಕಾರಕ್ಕೆ ಜ್ಞಾನ ಆಯೋಗ ಶಿಫಾರಸು

Posted By: Staff
ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ಕೊಡಿ. ಸರ್ಕಾರಕ್ಕೆ ಜ್ಞಾನ ಆಯೋಗ ಶಿಫಾರಸು

ರಾಜ್ಯದ ಪದವಿ ಮತ್ತು ಸ್ನಾತಕೊತ್ತರ ವಿದ್ಯಾರ್ಥಿಗಳ ಕೈಯಲ್ಲಿ ಇನ್ನು ಟ್ಯಾಬ್ಲೆಟ್‌ ಬರಲಿದೆ. ಕರ್ನಾಟಕ ಜ್ಞಾನ ಆಯೋಗ ರಾಜ್ಯದ ಪದವಿ ಮತ್ತು ಸ್ನಾತಕೊತ್ತರ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಪಠ್ಯವನ್ನು ಒಳಗೊಂಡ ಟ್ಯಾಬ್ಲೆಟ್‌ನ್ನು ಉಚಿತವಾಗಿ ವಿತರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಅಷ್ಟೇ ಅಲ್ಲದೇ ಸರ್ಕಾರದ ವಿದ್ಯಾರ್ಥಿ ವೇತನ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಜಮೆಯಾಗಬೇಕು ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

ಪ್ರಖ್ಯಾತ ಖಗೋಳ ವಿಜ್ಞಾನಿ ಡಾ. ಕೆ. ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ 12 ಮದಿ ಸದ್ಯಸರ ನೇತೃತ್ವದ ಜ್ಞಾನ ಆಯೋಗ ತಂಡ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಆಯೋಗ ಸೋಮವಾರ ಸರ್ಕಾರಕ್ಕೆ ಸಲ್ಲಿಸಿರುವ ಉನ್ನತ ಶಿಕ್ಷಣ ವಿಷನ್‌-2020 ವರದಿಯಲ್ಲಿ ಈ ಸಂಬಂಧ 81 ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಅದರ ಪ್ರಮುಖ ಶಿಫಾರಸುಗಳು ಇಂತಿವೆ.

 
  • ಪ್ರತಿ ವಿದ್ಯಾರ್ಥಿಗೂ ಉಚಿತ ಲ್ಯಾಪ್‌ಟಾಪ್‌ ನೀಡಬೇಕು.

  • ಪ್ರತಿ ಕಾಲೇಜುಗಳಲ್ಲಿ 3ಜಿ/ವೈಫೈ ತಂತ್ರಜ್ಞಾನ ಅಳವಡಿಸಿ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಬೇಕು.

  • ಜ್ಞಾನ ಪ್ರಸರಣಕ್ಕಾಗಿ ಟೆಲಿ- ಶಿಕ್ಷಣ ಮತ್ತು ಸಮುದಾಯ ರೇಡಿಯೋಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.

  • ಎಲ್ಲ ವಿವಿ ಮತ್ತು ಕಾಲೇಜುಗಳನ್ನು ಅಧಿಕ ಸಾಮರ್ಥ್ಯವುಳ್ಳ ಬ್ರಾಡ್‌ಬ್ಯಾಂಡ್‌ ಸಂಪರ್ಕದಡಿ ಒಗ್ಗೂಡಿಸಬೇಕು.

  • ವಿವಿಗಳು ತಮ್ಮ ಹಲವು ರೆಗ್ಯುಲರ್‌ ಕೋರ್ಸ್‌ಗಳ ಪಠ್ಯಕ್ರಮದ ಭಾಗವಾಗಿ ಆನ್‌ಲೈನ್‌ ಕೋರ್ಸ್‌ಗಳನ್ನು ಆರಂಭಿಸಬೇಕು.

  • ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯಿದೆ 2000ಕ್ಕೆ ಸಮಗ್ರ ತಿದ್ದುಪಡಿ ತರಬೇಕು.

 

ಜ್ಞಾನ ಆಯೋಗದ ಎಲ್ಲಾ ಶಿಫಾರಸುಗಳು ಈಗ ಪಿಡಿಎಫ್‌ ಫಾರ್ಮೆಟ್‌ನಲ್ಲಿ ಲಭ್ಯವಿದೆ.ಜ್ಞಾನ ಆಯೋಗದ ವೆಬ್‌ ಸೈಟ್‌ನಿಂದ ನೀವು ಡೌನ್‌ಲೋಡ್‌ ಮಾಡಬಹುದು. ಜ್ಞಾನ ಆಯೋಗ


 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot