ಗಂಗ್ನಂ ಖ್ಯಾತಿಯ ಸೈಯಿಂದ ಮತ್ತೊಂದು ಸುಪರ್‌ ಹಿಟ್‌ ಸಾಂಗ್‌

Written By:

ಗಂಗ್ನಂ ನೃತ್ಯದ ಮೂಲಕ ಇಡೀ ವಿಶ್ವದಾದ್ಯಂತ ಮನೆಮಾತಾದ ಜೇ ಸ್ಯಾಂಗ್‌ ಇದೀಗ ಮತ್ತೂಂದು ಹೊಸ ಹಾಡು ಮತ್ತು ನೃತ್ಯ ಶೈಲಿಯನ್ನು ವಿಶ್ವಕ್ಕೆ ಪರಿಚಯಿಸಿದ್ದಾನೆ.

ಕಳೆದ ಶನಿವಾರವಷ್ಟೇ ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್‌ 'ಜಂಟಲ್‌ವುನ್‌' ಹೆಸರಿನ ನೃತ್ಯ ಮತ್ತು ಹಾಡು ಸೂಪರ್‌ಹಿಟ್‌ ಆಗಿದ್ದು ಕೇವಲ ಮೂರೇ ದಿನದಲ್ಲಿ 5 ಕೋಟಿಗೂ ಹೆಚ್ಚಿನ ಹಿಟ್ಸ್‌ಗಳನ್ನು ಕಂಡಿದೆ.

ಗಂಗ್ನಂ ಖ್ಯಾತಿಯ ಸೈಯಿಂದ ಮತ್ತೊಂದು ಸುಪರ್‌ ಹಿಟ್‌ ಸಾಂಗ್‌

ಕೊರಿಯಾ ಮೂಲದ ಪಾಪ್‌ ಕೊರಿಯಾ ಮೂಲದ ಗಾಯಕ, ಡ್ಯಾನ್ಸರ್‌ ಪಾರ್ಕ್‌ ಪರಿಚಯಿಸಿದ ಮ್ಯೂಸಿಕ್‌ ವಿಡಿಯೋ ಆಲ್ಬಂ 'ಗಂಗ್ನಂ ಸ್ಟೈಲ್‌ ಯೂಟ್ಯೂಬ್‌ನಲ್ಲಿ ಈಗಾಗ್ಲೇ ಮಿಂಚು ಹರಿಸಿದ್ದು 150 ಕೋಟಿಗೂ ಹೆಚ್ಚಿನ ಹಿಟ್ಸ್‌ ಕಾಣುವ ಮೂಲಕ ವಿಶ್ವದಾಖಲೆ ಸ್ಥಾಪಿಸಿತ್ತು.

ಗಂಗ್ನಂ ಜನಪ್ರಿಯತೆ ಬೆನ್ನಲ್ಲೇ, ಪಾರ್ಕ್‌ನ ಎರಡನೇ ಹಾಡಿನ ಬಗ್ಗೆಯೂ ಜನರು ಇದೀಗ ಕುತೂಹಲಗೊಂಡಿದ್ದು, ಹೊಸ ಹಾಡನ್ನು ವೀಕ್ಷಿಸಲು ಯೂಟ್ಯೂಬ್‌ಗ ಮುಗಿಬಿದ್ದಿದ್ದಾರೆ. ಈ ವೀಡಿಯೋ ಕಳೆದ ಶನಿವಾರ ರಾತ್ರಿ 9 ಗಂಟೆಗೆ ಅಪ್‌ಲೋಡ್‌ ಆಗಿದ್ದು,ಆಪ್‌ಲೋಡ್‌ ಆದ 24 ಗಂಟೆಯಲ್ಲೇ 20 ಮಿಲಿಯನ್‌ ಜನ ವೀಕ್ಷಣೆ ಮಾಡಿದ್ದಾರೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot