ಹೊಸ ನೆಕ್‌ಬ್ಯಾಂಡ್‌ ಪರಿಚಯಿಸಿದ ಲಾವಾ ಕಂಪೆನಿ! 42 ಗಂಟೆಯ ಪ್ಲೇ ಬ್ಯಾಕ್‌!

|

ಟೆಕ್‌ ಮಾರುಕಟ್ಟೆಯಲ್ಲಿ ಲಾವಾ ಕಂಪೆನಿ ತನ್ನ ಭಿನ್ನ ಶ್ರೇಣಿಯ ಡಿವೈಸ್‌ಗಳ ಮೂಲಕ ಗುರುತಿಸಿಕೊಂಡಿದೆ. ವಿವಿಧ ಮಾದರಿಯ ಇಯರ್‌ಫೋನ್‌ಗಳನ್ನು ಕೂಡ ಪರಿಚಯಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ನೆಕ್‌ಬ್ಯಾಂಡ್‌ - ಪ್ರೊ ಬಡ್ಸ್‌ N11 ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ನೆಕ್‌ಬ್ಯಾಂಡ್ ರಿಚ್‌ ಸೌಂಡ್‌ ಔಟ್‌ಪುಟ್‌ ಅನ್ನು ನೀಡಲಿದೆ. ಇದು ನಿಮಗೆ 42 ಗಂಟೆಗಳ ಪ್ಲೇಟೈಮ್ ಮತ್ತು 10 ನಿಮಿಷಗಳ ತ್ವರಿತ ಚಾರ್ಜ್ ಸಮಯವನ್ನು ನೀಡುತ್ತದೆ ಎನ್ನಲಾಗಿದೆ.

ಲಾವಾ

ಹೌದು, ಲಾವಾ ಕಂಪೆನಿ ಭಾರತದಲ್ಲಿ ಹೊಸ ನೆಕ್‌ಬ್ಯಾಂಡ್‌ ಪ್ರೊ ಬಡ್ಸ್‌ N11 ಲಾಂಚ್‌ ಮಾಡಿದೆ. ಈ ನೆಕ್‌ಬ್ಯಾಂಡ್‌ 13 ಗಂಟೆಗಳ ಪ್ಲೇಬ್ಯಾಕ್ ಟೈಂ ನೀಡಲಿದೆ. ಈ ಇಯರ್‌ ಫೋನ್‌ ಡ್ಯುಯಲ್ ಹಾಲ್‌ಸ್ವಿಚ್ ಫಂಕ್ಷನ್-ಡ್ಯಾಶ್ ಸ್ವಿಚ್, ಟರ್ಬೊ ಲೇಟೆನ್ಸಿ ಮತ್ತು ಪ್ರೊ ಗೇಮ್ ಮೋಡ್, ಎನ್ವಿರಾನ್‌ಮೆಂಟ್ ನಾಯ್ಸ್ ಕ್ಯಾನ್ಸಲೇಶನ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ನೆಕ್‌ಬ್ಯಾಂಡ್‌ ಪ್ರೊ ಬಡ್ಸ್‌ N11 ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪ್ರೊ ಬಡ್ಸ್‌ N11 ನೆಕ್‌ಬ್ಯಾಂಡ್‌

ಲಾವಾ ಪರಿಚಯಿಸಿರುವ ಪ್ರೊ ಬಡ್ಸ್‌ N11 ನೆಕ್‌ಬ್ಯಾಂಡ್‌ ಶೈಲಿಯನ್ನು ಹೊಂದಿದೆ. ಇದು ಡ್ಯುಯಲ್ ಹಾಲ್‌ಸ್ವಿಚ್ ಫಂಕ್ಷನ್-ಡ್ಯಾಶ್ ಸ್ವಿಚ್, ಟರ್ಬೊ ಲೇಟೆನ್ಸಿ ಮತ್ತು ಪ್ರೊ ಗೇಮ್ ಮೋಡ್, ಎನ್ವಿರಾನ್‌ಮೆಂಟ್ ನಾಯ್ಸ್ ಕ್ಯಾನ್ಸಲೇಶನ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ನೆಕ್‌ಬ್ಯಾಂಡ್‌ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, ಥಂಪಿಂಗ್ ಬಾಸ್ ಜೊತೆಗೆ ಪವರ್‌ಫುಲ್‌ ಸೌಂಡ್‌ ಅನ್ನು ನೀಡಲಿದೆ. ಅಲ್ಲದೆ ಈ ಇಯರ್‌ಫೋನ್‌ಗಳನ್ನು ಕುಟುಂಬದ ಸದಸ್ಯರು ಅಥವಾ ಸ್ನೇಹಿತರೊಂದಿಗೆ ಶೇರ್‌ ಮಾಡಿಕೊಳ್ಳುವುದಕ್ಕಾಗಿ ಡ್ಯುಯಲ್ ಕನೆಕಟಿವಿಟಿಯನ್ನು ಕೂಡ ನೀಡಲಿದೆ.

ನೆಕ್‌ಬ್ಯಾಂಡ್

ಈ ನೆಕ್‌ಬ್ಯಾಂಡ್ ENC ಫೀಚರ್ಸ್‌ ಅನ್ನು ಹೊಂದಿದ್ದು, ಉತ್ತಮ ಕರೆ ಅನುಭವ ಮತ್ತು ನಾಯ್ಸ್‌ ಫ್ರೀ ವಾಯ್ಸ್‌ ಅನ್ನು ನೀಡಲಿದೆ. ಇದು ಮ್ಯಾಗ್ನೆಟಿಕ್ ಹಾಲ್‌ಸ್ವಿಚ್- ಡ್ಯಾಶ್ ಸ್ವಿಚ್ ಬಳಕೆದಾರರಿಗೆ ಮ್ಯೂಸಿಕ್‌ ಅನ್ನು ಪ್ಲೇ ಮಾಡಲು ಅಥವಾ ವಿರಾಮಗೊಳಿಸಲು ಅನುಮತಿಸಲಿದೆ. ಈ ನೆಕ್‌ಬ್ಯಾಂಡ್ ರಿಚ್‌ ಸೌಂಡ್‌ ಔಟ್‌ಪುಟ್‌ ನೀಡಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಪ್ರೊಬಡ್ಸ್‌ ಗೂಗಲ್‌ ಮತ್ತು ಸಿರಿ ಎರಡನ್ನು ಕೂಡ ಬೆಂಬಲಿಸಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಬಾಕ್ಸ್ ಮೈಕ್ರೋ USB ಡೇಟಾ ಕೇಬಲ್ ಮತ್ತು ಸಿಲಿಕೋನ್ ಇಯರ್‌ಪ್ಲಗ್‌ಗಳೊಂದಿಗೆ ಬರುತ್ತದೆ.

280mAh

ಇದು 280mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ನಿಮಗೆ 42 ಗಂಟೆಗಳ ಪ್ಲೇಟೈಮ್ ಮತ್ತು 10 ನಿಮಿಷಗಳ ತ್ವರಿತ ಚಾರ್ಜ್ ಸಮಯವನ್ನು ನೀಡುತ್ತದೆ. ಜೊತೆಗೆ ಇದು 13 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಈ ನೆಕ್‌ಬ್ಯಾಂಡ್‌ ಲಾಂಚ್‌ ಆಫರ್‌ ಸೆಪ್ಟೆಂಬರ್ 10, 2022 ರಿಂದ ಪ್ರಾರಂಭವಾಗುತ್ತದೆ. ಆಫರ್‌ನಲ್ಲಿ ಖರೀದಿಸುವವರಿಗೆ ಇದು ಬೆಸ್ಟ್‌ ಟೈಮ ಆಗಿದೆ . ಏಕೆಂದರೆ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಸೆಪ್ಟೆಂಬರ್ 12, 2022 ರವರೆಗೆ ಬೆಳಿಗ್ಗೆ 11:00 ಗಂಟೆಗೆ ಸರಿಯಾಗಿ ಖರೀದಿಸುವವರಿಗೆ ಇದು ಕೇವಲ 11ರೂ. ಗಳಿಗೆ ಲಭ್ಯವಾಗಲಿದೆ.

ಲಾವಾ

ಇದಲ್ಲದೆ ನೀವು ಸೆಪ್ಟೆಂಬರ್‌ 13ರಿಂದ ಸೆಪ್ಟೆಂಬರ್‌ 16ರ ವರೆಗೆ N11 ಅನ್ನು 999ರೂ ಬೆಲೆಗೆ ಖರೀದಿಸಬಹುದಾಗಿದೆ. ಲಾಂಚ್‌ ಆಫರ್‌ ನಂತರ ಈ ನೆಕ್‌ಬ್ಯಾಂಡ್‌ ಸೆಪ್ಟೆಂಬರ್ 17ರಿಂದ ಲಾವಾ ಇ-ಸ್ಟೋರ್‌, ಅಮೆಜಾನ್‌ ಮತ್ತು ಕಂಪನಿಯ 100K+ PAN ಇಂಡಿಯಾ ಸ್ಟೋರ್‌ಗಳಲ್ಲಿನ ಗ್ರಾಹಕರಿಗೆ 1499ರೂ. ಬೆಲೆಗೆ ಲಭ್ಯವಾಗಲಿದೆ. ಈ ನೆಕ್‌ಬ್ಯಾಂಡ್ ಫೈರ್‌ಫ್ಲೈ ಗ್ರೀನ್, ಕೈ ಆರೆಂಜ್ ಮತ್ತು ಪ್ಯಾಂಥರ್ ಬ್ಲ್ಯಾಕ್‌ ಬಣ್ಣಗಳ ಆಯ್ಕೆಯಲ್ಲಿ ಬರಲಿದೆ.

ಕಂಪೆನಿ

ಇನ್ನುಳಿದಂತೆ ಲಾವಾ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಸರ್ವಿಸ್‌ ಅಟ್‌ ಹೋಮ್‌ ಪ್ರೋಗ್ರಾಂ ಮೂಲಕ ಬಳಕೆದಾರರ ಮನೆ ಬಾಗಿಲಿಗೆ ಬಂದು ಸೇವೆ ನೀಡುವುದಾಗಿ ಹೇಳಿದೆ. ಈ ಸೇವೆ ಮೊದಲು ಲಾವಾ ಬ್ಲೇಜ್ ಫೋನ್‌ಗಳಿಗೆ ಮಾತ್ರ ಲಭ್ಯವಿತ್ತು. ಆದರೆ ಇದೀಗ ಮುಂದೆ ಬಿಡುಗಡೆಯಾಗಲಿರುವ ಎಲ್ಲಾ ಲಾವಾ ಸ್ಮಾರ್ಟ್‌ಫೊನ್‌ ಮಾದರಿಗಳಿಗೂ ಲಭ್ಯವಾಗಲಿದೆ. ಇದರ ಮೂಲಕ ಫೋನ್‌ನ ವಾರಂಟೆ ಸಮಯದೊಳಗೆ ಗ್ರಾಹಕರು ಸರ್ವಿಸ್‌ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Lava Probuds N11 neckband launched in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X