ಹೊಸ ಸ್ಮಾರ್ಟ್‌ಗ್ಲಾಸ್‌ ಪರಿಚಯಿಸಿದ ಲೆನೊವೊ ಕಂಪೆನಿ! ವಿಶೇಷತೆ ಏನ್‌ ಗೊತ್ತಾ?

|

ಇತ್ತೀಚಿನ ದಿನಗಳಲ್ಲಿ ಟೆಕ್‌ ವಲಯದಲ್ಲಿ ಸ್ಮಾರ್ಟ್‌ ಗ್ಲಾಸ್‌ಗಳು ಸಾಕಷ್ಟು ಸೌಂಡ್‌ ಮಾಡುತ್ತಿವೆ. ನವೀನ ಮಾದರಿಯ ಟೆಕ್ನಾಲಜಿ ಒಳಗೊಂಡ ಸ್ಮಾರ್ಟ್‌ಗ್ಲಾಸ್‌ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸ್ಮಾರ್ಟ್‌ಗ್ಲಾಸ್‌ಗಳನ್ನು ಪರಿಚಯಿಸಿವೆ. ಇದೇ ಸಾಲಿಗೆ ಇದೀಗ ಲೆನೊವೊ ಕಂಪೆನಿ ಕೂಡ ಸೇರ್ಪಡೆಯಾಗಿದ್ದು, ತನ್ನ ಹೊಸ ಲೆನೊವೊ ಗ್ಲಾಸಸ್‌ T1 ಸ್ಮಾರ್ಟ್‌ಗ್ಲಾಸ್‌ ಲಾಂಚ್‌ ಮಾಡಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ಹೊಸ ಲೆನೊವೊ ಗ್ಲಾಸಸ್‌ T1 ಸ್ಮಾರ್ಟ್‌ಗ್ಲಾಸ್‌ ಬಿಡುಗಡೆ ಮಾಡಿದೆ. ಇದು ವೆರಿಯೆಬಲ್‌ ಸ್ಮಾರ್ಟ್‌ ಗ್ಲಾಸ್‌ ಆಗಿದ್ದು, ಒಎಲ್‌ಇಡಿ ಡಿಸ್‌ಪ್ಲೇಗಳನ್ನು ಹೊಂದಿದೆ. ಇದರಲ್ಲಿ ಇಂಟರ್‌ಬಿಲ್ಸ್‌ ಸ್ಪೀಕರ್‌ಗಳನ್ನು ಕೂಡ ನೀಡಲಾಗಿದೆ. ಇದರಿಂದ ನೀವು ಪ್ರಯಾಣ ಮಾಡುವಾಗಲು ಕೂಡ ಕಂಟೆಂಟ್‌ ಅನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ ಲೋ ಬ್ಲೂ ಲೈಟ್‌ ಹೊರಸೂಸುವಿಕೆಗಾಗಿ TUV ರೈನ್‌ಲ್ಯಾಂಡ್ ಪ್ರಮಾಣೀಕರಿಸಲಾಗಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಗ್ಲಾಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೆನೊವೊ

ಲೆನೊವೊ ಗ್ಲಾಸಸ್‌ T1 ಎರಡು ಮೈಕ್ರೊ OLED ಡಿಸ್‌ಪ್ಲೇಗಳನ್ನು ಹೊಂದಿದೆ. ಪ್ರತಿ ಕಣ್ಣಿಗೆ ಒಂದು ಡಿಸ್‌ಪ್ಲೇ ಹೊಂದಿದ್ದು, ಪ್ರತಿ ಕಣ್ಣಿಗೆ 1,080x1,920 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 60Hz ರಿಫ್ರೆಶ್ ರೇಟ್‌ ಅನ್ನು ನೀಡಲಿದೆ. ಈ ಸ್ಮಾರ್ಟ್ ಗ್ಲಾಸ್‌ಗಳು ಹೈ-ರೆಸಿಸ್ಟೆನ್ಸಿ ಹಿಂಜ್‌ಗಳು, ನೋಸ್ ಪ್ಯಾಡ್‌ಗಳು ಮತ್ತು ಅಡ್ಜಸ್ಟ್‌ ಮಾಡಬುಹುದಾದ ಟೆಂಪಲ್‌ ಆರ್ಮ್ಸ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಡಿಸ್‌ಪ್ಲೇಗಳು TUV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಪ್ರಮಾಣೀಕೃತ ಮತ್ತು TUV ಫ್ಲಿಕರ್ ಕಡಿಮೆಗೊಳಿಸಿದ ಪ್ರಮಾಣೀಕೃತವನ್ನು ಪಡೆದಿದೆ.

ಸ್ಮಾರ್ಟ್

ಇನ್ನು ಈ ಸ್ಮಾರ್ಟ್ ಗ್ಲಾಸ್‌ಗಳು ಹೈ-ಫಿಡೆಲಿಟಿ ಬಿಲ್ಟ್-ಇನ್ ಸ್ಪೀಕರ್‌ಗಳನ್ನು ಒಳಗೊಂಡಿವೆ. ಇವುಗಳನ್ನು ಧರಿಸುವವರು ಮಲ್ಟಿಮೀಡಿಯಾ ಕಂಟೆಂಟ್‌ ಅನ್ನು ವೀಕ್ಷಿಸುವುದಕ್ಕೆ ಮತ್ತು ಕೇಳಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡಲಿದೆ. ಇದಲ್ಲದೆ ಲೆನೊವೊ ಗ್ಲಾಸಸ್‌ T1 ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳ ಜೊತೆಗೆ 'ರೆಡಿ ಫಾರ್' ಬೆಂಬಲವನ್ನು ಸಹ ಹೊಂದಿದೆ. ಇದರಿಂದ ಸ್ಮಾರ್ಟ್‌ಫೋನ್‌ ಮೂಲಕವೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಸ್ಮಾರ್ಟ್‌ಗ್ಲಾಸ್‌

ಈ ಸ್ಮಾರ್ಟ್‌ಗ್ಲಾಸ್‌ ಆಂಡ್ರಾಯ್ಡ್‌, ಐಒಎಸ್‌ ಮತ್ತು ವಿಂಡೋಸ್‌ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೊಳ್ಳುತ್ತದೆ. ಇದರಿಂದ ಆಂಡ್ರಾಯ್ಡ್ ಫೋನ್ ಅಥವಾ ವಿಂಡೋಸ್ ಪಿಸಿಗೆ ಸಂಪರ್ಕಿಸಲು, ತಮ್ಮ ಡಿವೈಸ್‌ ಮತ್ತು ಸ್ಮಾರ್ಟ್ ಗ್ಲಾಸ್‌ಗಳನ್ನು ಕನೆಕ್ಟ್‌ ಮಾಡಲು ಯುಎಸ್‌ಬಿ ಟೈಪ್-ಸಿ ಕೇಬಲ್ ಅನ್ನು ಪ್ಲಗ್ ಮಾಡಬೇಕಾಗುತ್ತದೆ. ಆದರೆ ಐಫೋನ್ ಡಿವೈಸ್‌ ಬಳಸುವವರು ಆಪಲ್‌ ಲೈಟ್ನಿಂಗ್ AV ಅಡಾಪ್ಟರ್‌ನೊಂದಿಗೆ HDMI ಟು ಗ್ಲಾಸಸ್ ಅಡಾಪ್ಟರ್ ಅನ್ನು ಬಳಸಬೇಕಾಗುತ್ತದೆ.

ಲೆನೊವೊ

ಲೆನೊವೊ ಗ್ಲಾಸಸ್‌ T1 ಜೊತೆಗೆ ಮೂರು ಹೊಂದಾಣಿಕೆ ಮಾಡಬಹುದಾದ ನೋಸ್ ಪ್ಯಾಡ್‌ಗಳು, ಕ್ಯಾರಿಂಗ್‌ ಕೇಸ್, ಪ್ರಿಸ್ಕ್ರಿಪ್ಷನ್ ಲೆನ್ಸ್ ಫ್ರೇಮ್, ಕ್ಲೀನಿಂಗ್ ಬಟ್ಟೆ ಮತ್ತು ಆಂಟಿ-ಸ್ಲಿಪ್ ಅಡಾಪ್ಟರ್ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದಲ್ಲದೆ ಲೆನೊವೊ ಸ್ಮಾರ್ಟ್ ಗ್ಲಾಸ್‌ಗಳಿಗೆ ಐಚ್ಛಿಕ ಬಿಡಿಭಾಗಗಳಾಗಿ ಎರಡು ಅಡಾಪ್ಟರ್‌ಗಳನ್ನು ಸಹ ನೀಡುತ್ತದೆ. ಆದರೆ ಇವುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ ಎಂದು ಲೆನೊವೊ ಕಂಪೆನಿ ಹೇಳಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲೆನೊವೊ ಗ್ಲಾಸಸ್‌ T1 ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಸ್ಮಾರ್ಟ್‌ಗ್ಲಾಸ್‌ ಚೀನಾದಲ್ಲಿ ಲೆನೊವೊ ಯೋಗ ಗ್ಲಾಸಸ್‌ ಹೆಸರಿನಲ್ಲಿ ಮಾರಾಟವಾಗಲಿದೆ. ಇದು 2022 ರ ಕೊನೆಯಲ್ಲಿ ಚೀನಾದಲ್ಲಿ ಮಾರಾಟವಾಗಲಿದ್ದು, ಜಾಗತಿಕ ಮಾರುಕಟ್ಟೆಗೆ 2023ರ ಆರಂಭದಲ್ಲಿ ಎಂಟ್ರಿ ನೀಡಲಿದೆ. ಎನ್ನಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಗ್ಲಾಸ್‌ಗಳು ಮಾರುಕಟ್ಟೆಗೆ ಬಂದ ನಂತರ ಅವುಗಳ ಬೆಲೆಯನ್ನು ಬಹಿರಂಗಪಡಿಸಲಾಗುವುದು ಎಂದು ಲೆನೊವೊ ಕಂಪೆನಿ ಹೇಳಿದೆ. ಇನ್ನು ಈ ಸ್ಮಾರ್ಟ್‌ಗ್ಲಾಸ್‌ ಭಾರತದಲ್ಲಿಯು ಬಿಡುಗಡೆ ಆಗಲಿದೆಯಾ ಎನ್ನುವುದರ ಬಗ್ಗೆ ಇನ್ನು ಕೂಡ ಯಾವುದೇ ರೀತಿಯ ವಿವರಗಳು ಬಹಿರಂಗಗೊಂಡಿಲ್ಲ.

ಸ್ಮಾರ್ಟ್‌ಗ್ಲಾಸ್‌

ಇನ್ನು ಟೆಕ್‌ ಮಾರುಕಟ್ಟೆಗೆ ಇತ್ತೀಚಿನ ದಿನಗಳಲ್ಲಿ ನಾಯ್ಸ್‌ ಕಂಪನಿಯ ಸ್ಮಾರ್ಟ್‌ಗ್ಲಾಸ್‌ ಎಂಟ್ರಿ ನೀಡಿತ್ತು. ಇದನ್ನು ನಾಯ್ಸ್‌ i1 ಸ್ಮಾರ್ಟ್‌ಗ್ಲಾಸ್‌ ಎಂದು ಹೆಸರಿಸಲಾಗಿದ್ದು, ಇದು ಆಡಿಯೋ ಕೇಂದ್ರಿತ ಸ್ಮಾರ್ಟ್‌ಗ್ಲಾಸ್‌ ಆಗಿದೆ. ಇದನ್ನು ನಾಯ್ಸ್ ಲ್ಯಾಬ್ಸ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲೂ ಈ ಸ್ಮಾರ್ಟ್‌ ಗ್ಲಾಸ್‌ ಮೇಡ್ ಇನ್ ಇಂಡಿಯಾ ಆಗಿದ್ದು, ಮೋಷನ್ ಎಸ್ಟಿಮೇಶನ್, ಮೋಷನ್ ಕಾಂಪೆನ್ಸೇಶನ್ (MEMS) ಕರೆಗಾಗಿ ಮೈಕ್, ಮ್ಯಾಗ್ನೆಟಿಕ್ ಚಾರ್ಜಿಂಗ್ ಮತ್ತು ಹ್ಯಾಂಡ್ಸ್-ಫ್ರೀ ವಾಯ್ಸ್‌ ಕಂಟ್ರೋಲ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ.

Best Mobiles in India

English summary
Lenovo Glasses T1 sports two Micro OLED displays, one for each eye, with a 1,080x1,920 pixels resolution per eye and a 60Hz refresh rate.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X