ಬರಲಿದೆ ಎಲ್‌ಜಿಯ ಹೊಸ ಸ್ಮಾರ್ಟ್‌ಫೋನ್‌ 'G8S ThinQ'!..ಅಚ್ಚರಿಯ ಡಿಸ್‌ಪ್ಲೇ!

|

ಎಲ್‌ಜಿ ಕಂಪನಿಯು ಕಳೆದ ವಾರವಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ 'ಎಲ್‌ಜಿ W10' ಮತ್ತು 'ಎಲ್‌ಜಿ W30' ಸ್ಮಾರ್ಟ್‌ಫೋನ್‌ಗಳನ್ನು ಬಜೆಟ್‌ ಬೆಲೆಯಲ್ಲಿ ಬಿಡುಗಡೆ ಮಾಡಿ ಮೊಬೈಲ್‌ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿತ್ತು. ಅದರ ಬೆನ್ನಲ್ಲೇ ಕಂಪನಿ ಈಗ ಮತ್ತೆ ತನ್ನ ಜನಪ್ರಿಯ G ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಲು ಮುಂದಾಗಿದ್ದು, ಈ ಸ್ಮಾರ್ಟ್‌ಫೋನ್‌ OLED ಫುಲ್‌ವಿಷನ್ ಡಿಸ್‌ಪ್ಲೇ ಹೊಂದಿರಲಿದೆ.

ಬರಲಿದೆ ಎಲ್‌ಜಿಯ ಹೊಸ ಸ್ಮಾರ್ಟ್‌ಫೋನ್‌ 'G8S ThinQ'!..ಅಚ್ಚರಿಯ ಡಿಸ್‌ಪ್ಲೇ!

ಹೌದು, ಎಲ್‌ಜಿ ಕಂಪನಿಯು ಹೊಸ 'G8S ThinQ' ಸ್ಮಾರ್ಟ್‌ಫೋನ್‌ ಅನ್ನು ಇದೇ ತಿಂಗಳಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. G ಸರಣಿಯಲ್ಲಿನ ಈ ಫೋನ್‌ ಲೆಟೆಸ್ಟ್‌ LTE ಸೌಲಭ್ಯವನ್ನು ಪಡೆದಿದ್ದು, ತ್ರಿವಳಿ ಕ್ಯಾಮೆರಾ, ಫೇಸ್‌ ಅನ್‌ಲಾಕ್‌, ToF ಸೆನ್ಸಾರ್‌ ಮತ್ತು ಹ್ಯಾಂಡ್‌ ಐಡಿ ಹೈಲೈಟ್ ಫೀಚರ್ಸ್‌ಗಳಾಗಿವೆ. ಇದರೊಂದಿಗೆ 6GB RAM ಮತ್ತು 128GB ಆಂತರಿಕ ಸ್ಟೋರೇಜ್‌ ಸ್ಥಳಾವಕಾಶ ಹೊಂದಿದೆ.

ಬರಲಿದೆ ಎಲ್‌ಜಿಯ ಹೊಸ ಸ್ಮಾರ್ಟ್‌ಫೋನ್‌ 'G8S ThinQ'!..ಅಚ್ಚರಿಯ ಡಿಸ್‌ಪ್ಲೇ!

ಎಲ್‌ಜಿಯ ಈ ಸ್ಮಾರ್ಟ್‌ಫೋನ್‌ IP68 ವಾಟರ್‌ಪ್ರೊಫ್‌ ರೆಸಿಸ್ಟನ್ಸ್‌ ಮತ್ತು ಡಸ್ಟ್‌ ರೆಸಿಸ್ಟನ್ಸ್‌ ಸೌಲಭ್ಯಗಳಿದ್ದು, ಹಾಗೆಯೇ ಸ್ಟೀರಿಯೋ ಸ್ಪೀಕರ್ಸ್‌, ಏರ್‌ ಮೋಷನ್, ಗೂಗಲ್ ಲೆನ್ಸ್‌, ಗೂಗಲ್‌ ಅಸಿಸ್ಟನ್ಸ್‌ ಹಾಗೂ ಕ್ವಾಲ್ಕಮ್ 3.0 ಕ್ವಿಕ್‌ ಚಾರ್ಜರ್‌ ಸೌಕರ್ಯವನ್ನು ಅನ್ನು ಪಡೆದುಕೊಂಡಿದು. ಹಾಗಾದರೇ ಎಲ್‌ಜಿ G8S ThinQ ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಕಡಿಮೆ ಬೆಲೆಗೆ ಲಾಂಚ್‌ ಆಯ್ತು 49 ಇಂಚಿನ 'ಶಿಂಕೊ' ಟಿವಿ!.ಕ್ರಿಕೆಟ್‌ ಮೋಡ್‌ ಇದೆ!ಓದಿರಿ : ಕಡಿಮೆ ಬೆಲೆಗೆ ಲಾಂಚ್‌ ಆಯ್ತು 49 ಇಂಚಿನ 'ಶಿಂಕೊ' ಟಿವಿ!.ಕ್ರಿಕೆಟ್‌ ಮೋಡ್‌ ಇದೆ!

ಆಕರ್ಷಕ ಡಿಸೈನ್

ಆಕರ್ಷಕ ಡಿಸೈನ್

ಈ ಸ್ಮಾರ್ಟ್‌ಫೋನ್‌ ಒನ್‌ ಹ್ಯಾಂಡೆಡ್‌ ರಚನೆಯಲ್ಲಿದ್ದು, ಎರ್ಗನೊಮಿಕ್ (ergonomic) ಶೇಪ್‌ ಪಡೆದುಕೊಂಡಿದೆ. ಡಿಸ್‌ಪ್ಲೇಯು ಕಡಿಮೆ ಅಂಚಿನ ಮಾದರಿಯಲ್ಲಿದ್ದು, ನಾಲ್ಕು ಮೂಲೆಗಳು ಅರ್ಧ ವೃತ್ತಾಕಾರವಾಗಿವೆ. 181ಗ್ರಾಂ ತೂಕವಿರುವ ಈ ಫೋನ್‌155.3 x 76.6 x 7.99mm ಸುತ್ತಳತೆಯನ್ನು ಪಡೆದುಕೊಂಡಿದೆ. ಹಿಂಬದಿಯಲ್ಲಿ ಅಡ್ಡಲಾಗಿ ಕ್ಯಾಮೆರಾ ನೀಡಲಾಗಿದ್ದು, ಫಿಂಗರ್‌ ಸೆನ್ಸಾರ್‌ ಸಹ ಇದೆ.

OLED ಡಿಸ್‌ಪ್ಲೇ

OLED ಡಿಸ್‌ಪ್ಲೇ

ಎಲ್‌ಜಿ ಕಂಪನಿಯ 'G8S ThinQ ಸ್ಮಾರ್ಟ್‌ಫೋನ್‌ 2248 x 1080 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ, 6.2 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌, OLED ಫುಲ್‌ವಿಷನ್ ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 18.7:9ರಷ್ಟು ಆಗಿದ್ದು, ಸ್ಕ್ರೀನ್ ರಕ್ಷಣೆಗಾಗಿ 2.5D ಗೊರಿಲ್ಲಾ ಗ್ಲಾಸ್ ಅನ್ನು ನೀಡಲಾಗಿದೆ. ಡಿಸ್‌ಪ್ಲೇ ವೀಕ್ಷಣೆಯ ಗುಣಮಟ್ಟವು ಅತ್ಯುತ್ತಮ ಎನಿಸಲಿದೆ.

ಓದಿರಿ : ಏರ್‌ಟೆಲ್‌ ಗ್ರಾಹಕರೇ 4G ಸಿಮ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ! ಓದಿರಿ : ಏರ್‌ಟೆಲ್‌ ಗ್ರಾಹಕರೇ 4G ಸಿಮ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ!

ಪ್ರೊಸೆಸರ್‌ ಯಾವುದು

ಪ್ರೊಸೆಸರ್‌ ಯಾವುದು

ಎಲ್‌ಜಿಯ ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಶಕ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಆಂಡ್ರಾಯ್ಡ್‌ 9.0 ಪೈ ಓಎಸ್‌ ಬೆಂಬಲ ಪಡೆದಿದೆ. ಹಾಗೆಯೇ 6GB RAM ಮತ್ತು 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಪಡೆದುಕೊಂಡಿದ್ದು, ಇದರೊಂದಿಗೆ ಬಾಹ್ಯಾ ಮೆಮೊರಿಯನ್ನು ಹೆಚ್ಚಿಸಿಕೊಳ್ಳಲು ಆಯ್ಕೆ ನೀಡಲಾಗಿದೆ.

ತ್ರಿವಳಿ ಕ್ಯಾಮೆರಾ

ತ್ರಿವಳಿ ಕ್ಯಾಮೆರಾ

ಈ ಸ್ಮಾರ್ಟ್‌ಫೋನ್‌ ಹಿಂಬದಿ ಮೂರು ಕ್ಯಾಮೆರಾಗಳಿದ್ದು, ಪ್ರಾಥಮಿಕ ಕ್ಯಾಮೆರಾವು 13ಎಂಪಿ ಆಗಿದ್ದು, ಸೂಪರ್‌ ವೈಲ್ಡ್‌ ಲೆನ್ಸ್‌ ಹೊಂದಿದೆ. ಸೆಕೆಂಡರಿ ಕ್ಯಾಮೆರಾ 12ಎಂಪಿ ಆಗಿದ್ದು, ಸ್ಯ್ಟಾಂಡರ್ಡ್‌ ಲೆನ್ಸ್‌ ಹೊಂದಿದೆ ಮತ್ತು ತೃತೀಯ ಕ್ಯಾಮೆರಾವು ಸಹ 12ಎಂಪಿ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ಸೌಲಭ್ಯವನ್ನು ನೀಡಿದೆ.

ಓದಿರಿ : 'ಬ್ರೆವ್‌' ಬ್ರೌಸರ್‌ ಎಂಟ್ರಿಯಿಂದ 'ಗೂಗಲ್‌ ಕ್ರೋಮ್‌'ಗೆ ಶುರುವಾಗಿದೆ ಕಂಟಕ!ಓದಿರಿ : 'ಬ್ರೆವ್‌' ಬ್ರೌಸರ್‌ ಎಂಟ್ರಿಯಿಂದ 'ಗೂಗಲ್‌ ಕ್ರೋಮ್‌'ಗೆ ಶುರುವಾಗಿದೆ ಕಂಟಕ!

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

3550mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದ್ದು, ಇದರೊಂದಿಗೆ ಕ್ವಾಲ್ಕಮ್ 3.0 ಕ್ವಿಕ್‌ ಚಾರ್ಜರ್‌ ತಂತ್ರಜ್ಞಾನವು ಇದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್‌ ಬಹುಬೇಗನೇ ಚಾರ್ಜ್‌ ಪಡೆದುಕೊಳ್ಳುತ್ತದೆ. ಇನ್ನು Wi-Fi 802.11, 5 USBಗಳು, HDR10 , Type-C ಸೌಲಭ್ಯಗಳು ಇವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಎಲ್‌ಜಿ ಕಂಪನಿಯು ಇದೇ ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಲು ಉತ್ಸುಕವಾಗಿದೆ. ಮೊದಲು ಯುರೋಪ್, ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ, ರಾಷ್ಟಗಳಲ್ಲಿ ಬಿಡುಗಡೆ ಆಗಲಿದೆ. ಆನಂತರದಲ್ಲಿ ಭಾರತೀಯ ಮಾರುಕಟ್ಟೆಗೂ ಎಂಟ್ರಿ ಕೊಡಲಿದೆ. ಇದರ ಬೆಲೆಯ ಬಗ್ಗೆ ಕಂಪನಿಯು ನಿಖರವಾಗಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲಾ ಎನ್ನಲಾಗಿದೆ.

ಓದಿರಿ : ಏರ್‌ಟೆಲ್‌ನಿಂದ ಹೊಸ ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್‌!..511GB ಡೇಟಾ ಉಚಿತ! ಓದಿರಿ : ಏರ್‌ಟೆಲ್‌ನಿಂದ ಹೊಸ ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್‌!..511GB ಡೇಟಾ ಉಚಿತ!

Best Mobiles in India

English summary
LG has announced the G8S ThinQ as its latest smartphone, which promises to combine all the best bits of the G-series in one device. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X