ಎಲ್‌ಜಿಯ ಪ್ರಥಮ ಪಾರದರ್ಶಕ ಡಿವೈಸ್ ಲಾಂಚ್

Written By:

ಎಲ್‌ಜಿ, ಮೊಜೈಲಾ ಮತ್ತು ಕೆಡಿಡಿಐ ಜಪಾನ್‌ನ ಮೊದಲ ಫೈರ್‌ಫಾಕ್ಸ್ ಓಎಸ್ ಸ್ಮಾರ್ಟ್‌ಫೋನ್, ಎಫ್‌ಎಕ್ಸ್‌ಒ ಅನ್ನು ಬಿಡುಗಡೆ ಮಾಡಿದೆ. ಗುರುವಾರದಂದು ಇದು ಮಾರಾಟವಾಗುತ್ತಿದೆ.

ಎಲ್‌ಜಿ ಎಫ್‌ಎಕ್ಸ್ ಒ ಸ್ಮಾರ್ಟ್‌ಫೋನ್ ಫೈರ್‌ಫಾಕ್ಸ್ ಓಎಸ್ 2.0 ವನ್ನು ಚಾಲನೆ ಮಾಡುತ್ತಿದ್ದು ಇದನ್ನು ವಿನ್ಯಾಸಪಡಿಸಿರುವುದು ತೊಕುಜಿನ್ ಯಶೋಕಿ ಕಂಪೆನಿಯಾಗಿದೆ. ಡಿವೈಸ್‌ನ ಮುಂಭಾಗ ಬದಿ ಮತ್ತು ಹಿಂದಿನ ಪ್ಯಾನೆಲ್‌ಗಳು ಸಂಪೂರ್ಣ ಪಾರದರ್ಶಕವಾಗಿದ್ದು ಫೋನ್‌ನ ಮುಖ್ಯ ಬಟನ್ ಗೋಲ್ಡನ್ ಫೈರ್‌ಫಾಕ್ಸ್ ಲೋಗೋವನ್ನು ಪಡೆದುಕೊಂಡಿದೆ. ಎಲ್‌ಜಿ ಎಫ್‌ಎಕ್ಸ್‌ಒ, ಗಾತ್ರದಲ್ಲಿ ಸಣ್ಣದಾಗಿದ್ದರೂ, ಎಲ್‌ಜಿ ಜಿ3 ಯ ಹೆಚ್ಚು ವಿನ್ಯಾಸಗಳನ್ನು ತನ್ನಲ್ಲಿ ಒಳಪಡಿಸಿಕೊಂಡಿದೆ.

ಎಲ್‌ಜಿಯ ಪ್ರಥಮ ಪಾರದರ್ಶಕ ಡಿವೈಸ್ ಲಾಂಚ್

ಫೈರ್‌ಫಾಕ್ಸ್ ಓಎಸ್ ಆಧಾರಿತ ಎಲ್‌ಜಿ ಎಫ್‌ಎಕ್ಸ್‌ಒ, 4.7 ಇಂಚಿನ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಡ್ ಕೋರ್ ಪ್ರೊಸೆಸರ್ 1.2GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಜೊತೆಗೆ 1.5 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. ಹ್ಯಾಂಡ್‌ಸೆಟ್ 16 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ. ಫೋನ್ 8 ಮೆಗಾಪಿಕ್ಸೆ್ಲ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಮುಂಭಾಗ ಕ್ಯಾಮೆರಾ ಸಾಮರ್ಥ್ಯ 2.1 ಮೆಗಾಪಿಕ್ಸೆಲ್ ಆಗಿದೆ. ಬ್ಯಾಟರಿ ಸಾಮರ್ಥ್ಯ 2370mAh ಆಗಿದೆ.

English summary
This article tells about LG Fx0 Firefox OS 2.0 Smartphone With Transparent Body Launched.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot