ಜಿ - ಪೆನ್ ಸ್ಟೈಲಸ್ ಜೊತೆಗೆ ಹೊಸ ಎಲ್‌ಜಿ ಜಿ4

Written By:

2015 ರ ಪ್ರಾರಂಭದಲ್ಲೇ ಸ್ಯಾಮ್‌ಸಂಗ್ ಮಾರುಕಟ್ಟೆಯನ್ನೇ ಧೂಳೀಪಟ ಮಾಡುವ ಅತಿವಿಶೇಷತೆಯುಳ್ಳದ್ದನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದ್ದರೆ ಇತ್ತ ಎಲ್‌ಜಿ ಕೂಡ ಕೈಕಟ್ಟಿ ಕೂರದೇ ಸ್ಯಾಮ್‌ಸಂಗ್‌ಗೆ ಬಿಗಿ ಪೈಪೋಟಿಯನ್ನು ನೀಡುವ ಉತ್ಸಾಹದಲ್ಲಿದೆ. ಇನ್ನು ವದಂತಿಗಳು ಹೇಳುವಂತೆ ಸ್ಯಾಮ್‌ಸಂಗ್‌ನ ಜನಪ್ರಿಯ ನೋಟ್ ಸಿರೀಸ್ ಕಾನ್ಸೆಪ್ಟ್ ಅನ್ನು ತನ್ನ ಜಿ4 ಫ್ಲ್ಯಾಗ್‌ಶಿಪ್‌ಗೆ ಅಳವಡಿಸುವ ಇರಾದೆಯಲ್ಲಿ ಎಲ್‌ಜಿ ಇದೆ.

ಈ ವರ್ಷದ ಐಎಫ್‌ಎ ಬರ್ಲಿನ್ ಟೆಕ್ ಶೋದಲ್ಲಿ, ಎಲ್‌ಜಿ ಜಿ3 ಸ್ಟೈಲಸ್ ಆಗಮನವನ್ನು ನಾವು ನೋಡಿರುವೆವು. 'ಜಿಪೆನ್' ಸ್ಟೈಲ್‌ನೊಂದಿಗೆ ಜಿ4 ಬರಲಿದ್ದು ಹೊಸ ಬಗೆಯ ತಯಾರಿಗೆ ಎಲ್‌ಜಿ ಸಜ್ಜಾಗಿದೆ. ಸ್ಯಾಮ್‌ಸಂಗ್‌ನ 'ಎಸ್ - ಪೆನ್‌ಗೆ' ಹೋಲುವ ಹೊಸ ಸ್ಟೈಲಸ್‌ಗಾಗಿ ಎಲ್‌ಜಿ ಕಾರ್ಯನಿರ್ವಹಿಸುತ್ತಿದೆ.

ಜಿ - ಪೆನ್ ಸ್ಟೈಲಸ್ ಜೊತೆಗೆ ಹೊಸ ಎಲ್‌ಜಿ ಜಿ4

ಇದುವರೆಗೆ ಇನ್ನಷ್ಟು ಮಾಹಿತಿ ಎಲ್‌ಜಿ ಕಡೆಯಿಂದ ಬಂದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ಎಲ್ಲಿಯಾದರೂ ಎಲ್‌ಜಿ ಜಿ4 ಕಾರ್ಯನಿರ್ವಹಿಸುವ ಸ್ಟೈಲಸ್‌ ಜೊತೆಗೆ ಬಂದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಗೆ ಇದು ಭರ್ಜರಿ ಪೈಪೋಟಿ ಎಂದೆನಿಸಲಿದೆ. ಹೆಚ್ಚಿನ ಮೀಡಿಯಾ ವರದಿಗಳ ಪ್ರಕಾರ, ಎಲ್‌ಜಿ ಜಿ4, 5.7 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇ ಜೊತೆಗೆ, ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಅನ್ನು ಪಡೆದುಕೊಂಡಿದೆ. ಡಿವೈಸ್ 4 ಜಿಬಿ RAM ಅನ್ನು ಪಡೆದುಕೊಂಡಿದ್ದು 32ಜಿಬಿ ಸಂಗ್ರಹಣಾ ಸಾಮರ್ಥ್ಯ ಡಿವೈಸ್‌ನಲ್ಲಿದೆ. ಫೋನ್‌ನ ರಿಯರ್ ಕ್ಯಾಮೆರಾ 20.7 ಎಮ್‌ಪಿ ಯಾಗಿದ್ದು 3,500mAh ಬ್ಯಾಟರಿ ಹಾಗೂ ಆಂಡ್ರಾಯ್ಡ್ 5.0 ಮತ್ತು ಇನ್ನಷ್ಟನ್ನು ನೀವು ಡಿವೈಸ್‌ನಲ್ಲಿ ಕಾಣಬಹುದು.

English summary
With Samsung already expected to release its next-big thing in the first half of 2015, LG isn't far behind in the cut throat competition.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot