ಮಕ್ಕಳಿಗಾಗಿ ಎಲ್‌ಜಿ ಯಿಂದ ಕಿಜೋನ್ ಬ್ಯಾಂಡ್

By Shwetha
|

ಆಂಡ್ರಾಯ್ಡ್ ಚಾಲಿತ ಜಿ ವಾಚ್ ಅನ್ನು ಇತ್ತೀಚೆಗೆ ಲಾಂಚ್ ಮಾಡಿರುವ ಎಲ್‌ಜಿ ತನ್ನ ಹೊಸ ವೆರಿಯೇಬಲ್ ಅನ್ನು ಘೋಷಿಸಿದೆ. ಕಿಜೋನ್ ವೃಸ್ಟ್‌ಬ್ಯಾಂಡ್ ಎಂಬ ಹೆಸರನ್ನು ಹೊಂದಿರುವ ಇದು ಪಾಲಕರಿಗೆ ತಮ್ಮ ಮಕ್ಕಳ ಮೇಲೆ ನಿಗಾ ಇರಿಸಲು ಸಹಾಯ ಮಾಡುತ್ತದಂತೆ.

ಸಣ್ಣ ಮಕ್ಕಳು ಮತ್ತು ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿಯೇ ವಿಶೇಷವಾಗಿ ಈ ವೃಸ್ಟ್ ಬ್ಯಾಂಡ್ ಅನ್ನು ಕಂಪೆನಿ ತಯಾರಿಸಿದ್ದು ಜಿಪಿಎಸ್, ವೈಫೈ ಮತ್ತು ರಿಯಲ್ ಟೈಮ್ ಲೊಕೇಶನ್ ಮಾಹಿತಿಯನ್ನು ಇದು ಒದಗಿಸುತ್ತದೆ.

ಮಕ್ಕಳ ಸುರಕ್ಷತೆಯನ್ನು ಮಾಡುವ ಕಿಜೋನ್ ಬ್ಯಾಂಡ್

ಒಂದೇ ಒಂದು ಕರೆಯ ಮೂಲಕ, ಪಾಲಕರು ತಮ್ಮ ಮಕ್ಕಳೊಂದಿಗೆ ಸುಲಭವಾಗಿ ಸಂವಹನ ನಡೆಸಬಹುದಾಗಿದ್ದು ಈ ಬ್ಯಾಂಡ್ ಮಕ್ಕಳು ಇರುವ ಸ್ಥಳವನ್ನೂ ಕೂಡ ದಿನಪೂರ್ತಿ ಪಾಲಕರಿಗೆ ತಿಳಿಸುತ್ತಿರುತ್ತದೆ. ಪಾಲಕರು ಮಾತ್ರವಲ್ಲದೆ ಮಕ್ಕಳೂ ಕೂಡ ಇದರಲ್ಲಿ ಫೋನ್ ಅನ್ನು ಮಾಡಬಹುದಾಗಿದ್ದು ಇದರಲ್ಲಿ ಚಾಲನೆಯಾಗುತ್ತಿರುವ ಓಎಸ್ ಆಂಡ್ರಾಯ್ಡ್ 4.1 ಅಥವಾ ಹೆಚ್ಚಿನದ್ದಾಗಿದೆ.

ಮಕ್ಕಳು ಪಾಲಕರಿಗೆ ಕರೆ ಮಾಡಲು ವಿಫಲಗೊಂಡಲ್ಲಿ ಕೂಡಲೇ ಕಿಜೋನ್ ಈ ಕರೆಯನ್ನು ಪಾಲಕರಿಗೆ ಬಿಲ್ಟ್ ಇನ್ ಮೈಕ್ರೋಫೋನ್ ಮೂಲಕ ಸ್ವಯಂಚಾಲಿತವಾಗಿ ಸಂಪರ್ಕಪಡಿಸುತ್ತದೆ. ದಿನಪೂರ್ತಿ ನಿರ್ದಿಷ್ಟ ಸಮಯದಲ್ಲಿ ಸ್ಥಳ ನೆನಪನ್ನು ಪೂರ್ವ-ಯೋಜಿತವಾಗಿ ಹೊಂದಿಸುವ ಸಾಮರ್ಥ್ಯವನ್ನು ದೊಡ್ಡವರಿಗೆ ಕಿಜೋನ್ ನೀಡುತ್ತದೆ. ಬ್ಯಾಟರಿ ಸೂಚನೆಯನ್ನು ಕೂಡ ಈ ಡಿವೈಸ್ ಹೊಂದಿದ್ದು ಬ್ಯಾಟರಿ ಚಾರ್ಜ್ ಮಾಡುವಂತೆ ಪಾಲಕರಿಗೆ ಸೂಚಿಸುತ್ತದೆ.

ಪ್ರಮುಖ ವೈಶಿಷ್ಟ್ಯತೆಗಳು
ಈ ಧರಿಸಬಹುದಾದ ಡಿವೈಸ್ 64 ಎಮ್‌ಬಿ RAM ಮತ್ತು 125 ಎಮ್‌ಬಿ ROM ನೊಂದಿಗೆ ಬಂದಿದೆ. ಇದು 400mAh ಪವರ್ ಚಾಲಿತ ಶಕ್ತಿಯೊಂದಿಗೆ ಬಂದಿದ್ದು ಇದರ 34.7 x 55.2 x 13.9mm ಅಳತೆಯಾಗಿದೆ ಮತ್ತು 2ಜಿ ಹಾಗೂ 3ಜಿನಲ್ಲೂ ಇದು ಬೆಂಬಲವನ್ನು ನೀಡುತ್ತದೆ. ಡಿವೈಸ್ ನೀಲಿ, ಪಿಂಕ್ ಮತ್ತು ಹಸಿರು ಬಣ್ಣಗಳಲ್ಲಿ ಲಭ್ಯವಿದೆ. ಕಿಜಾನ್ ತನ್ನ ಸಾರ್ವಜನಿಕ ಪ್ರದರ್ಶನವನ್ನು ದಕ್ಷಿಣ ಕೊರಿಯಾದಲ್ಲಿ ಜುಲೈ 10 ರಂದು ಮಾಡಲಿದೆ ಮತ್ತು ಈ ವರ್ಷದ ನಂತರ ಅಮೇರಿಕಾ ಯುರೋಪ್‌ನಲ್ಲಿ ಪ್ರಸ್ತುತಪಡಿಸಲಿದೆ. ಇನ್ನು ಇದರ ಮಾಹಿತಿ ಮತ್ತು ದರ ಸ್ಥಳೀಯವಾಗಿ ಘೋಷಣೆಯಾಗಲಿದೆ.

Best Mobiles in India

Read more about:
English summary
This article tells that Lg launches Kizon wearable device designed for the safety of kids.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X