LGಯ ಹೊಸ OLED ಟಿವಿ ಪಾರದರ್ಶಕವಾಗಿದ್ದು, ಮಡಚಬಹುದಂತೆ..!!!

ಇದೇ ಮೊದಲ ಬಾರಿಗೆ 77 ಇಂಚಿನ OLED ಡಿಸ್ ಪ್ಲೇಯನ್ನು ಬಿಡುಗಡೆ ಮಾಡಿದೆ. ಈ ಟಿವಿ ಫ್ಲೆಕ್ಸಿಬಲ್ ಆಗಿದ್ದು, ಪಾರದರ್ಶಕವಾಗಿದೆ ಎನ್ನಲಾಗಿದೆ.

By Precilla Dias
|

ಟೆಲಿವಿಷನ್ ತಯಾರಿಕೆಯಲ್ಲಿ LG ಬಹಳ ಮುಂದುವರೆದಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ 77 ಇಂಚಿನ OLED ಡಿಸ್ ಪ್ಲೇಯನ್ನು ಬಿಡುಗಡೆ ಮಾಡಿದೆ. ಈ ಟಿವಿ ಫ್ಲೆಕ್ಸಿಬಲ್ ಆಗಿದ್ದು, ಪಾರದರ್ಶಕವಾಗಿದೆ ಎನ್ನಲಾಗಿದೆ. ಇದನ್ನು ಮಡಚಿ ಎತ್ತಿಇಡಬಹುದಾಗಿದೆ. ಇದು ಎಲ್ಲಾ ಸೈಜಿನಲ್ಲಿಯೂ ದೊರೆಯಲಿದ ಎನ್ನಲಾಗಿದೆ.

LGಯ ಹೊಸ OLED ಟಿವಿ ಪಾರದರ್ಶಕವಾಗಿದ್ದು, ಮಡಚಬಹುದಂತೆ..!!!

ಇದೇ ಮೊದಲ ಬಾರಿಗೆ LG 77 ಇಂಚಿನ ಕಾರ್ನರ್ ಟೂ ಕಾರ್ನಲ್ ಡಿಸ್ ಪ್ಲೇಯನ್ನು ಪರಿಚಯಿಸಿದ್ದು, ಇದು ಹೊಸ ಸಂಶೋಧನೆಯಾಗಿದೆ. ಇದು ಟಿವಿ ಇತಿಹಾಸದಲ್ಲೇ ಮೈಲಿಗಲ್ಲಗಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಅಲ್ಲದೆ ಇದು ವಿಶ್ವದ ಮೊದಲ 77 ಇಂಚಿನ ಫ್ಲಿಕ್ಸಿಬಲ್ OLED ಡಿಸ್ ಪ್ಲೇಯಾಗಿದ್ದು, 4K ರೆಸಲ್ಯೂಷನ್ ಹೊಂದಿದ್ದು ಗಾಜಿನ ಮಾದರಿಯಲ್ಲಿ ಪಾರದರ್ಶಕವಾಗಿದೆ ಎನ್ನಲಾಗಿದೆ. ಇದು 3840*2160 ಪಿಕ್ಸಲ್ ಹೊಂದಿದೆ.

LGಯ ಹೊಸ OLED ಟಿವಿ ಪಾರದರ್ಶಕವಾಗಿದ್ದು, ಮಡಚಬಹುದಂತೆ..!!!

LG ಈ ಮಾದರಿಯ ಟಿವಿಯನ್ನು ತಯಾರಿಸಬೇಕು ಎನ್ನುವ ಕಾರಣಕ್ಕೆ 2012ರಿಂದ ಸಂಶೋಧನೆಯಲ್ಲಿ ತೊಡಗಿದೆ ಎನ್ನಲಾಗಿದೆ. LG ಯ ಈ ಸಂಶೋಧನೆಯೂ ಟಿವಿ, ಮೊಬೈಲ್ ವಲಯದಲ್ಲಿ ಭಾರಿ ಸಂಚಲವನ್ನು ಮೂಡಿಸಲಿದೆ.

OLED ಡಿಸ್ ಪ್ಲೇಗಳು ಇಂದು ಮೊಬೈಲ್ ಮತ್ತು ಟಿವಿಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಸಂಶೋಧನೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಇದು OLED ಮಾರುಕಟ್ಟೆಯಲ್ಲಿ LGಗೆ ಹೆಚ್ಚಿನ ಖ್ಯಾತಿಯನ್ನು ತಂದುಕೊಡಲಿದೆ.

Best Mobiles in India

English summary
LG Display has just unveiled the largest flexible transparent OLED display in the world.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X