LG ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ V30: ಬಿಡುಗಡೆ ಯಾವಾಗ..?

By: Precilla Dias

LG ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಶೀಘ್ರವೇ LG ಟಾಪ್ ಎಂಡ್ ಸ್ಮಾರ್ಟ್ ಫೋನ್ ಸದ್ದು ಶುರು ಮಾಡಲಿದೆ ಎಂದು ET ನ್ಯೂಸ್ ವರದಿ ಮಾಡಿದೆ.

LG ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ V30: ಬಿಡುಗಡೆ ಯಾವಾಗ..?

2017ರಲ್ಲಿ ಬರ್ಲಿನ್ ನಲ್ಲಿ ನಡೆಯಲಿರುವ IFA ಕಾರ್ಯಕ್ರಮದಲ್ಲಿ V30 ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಮತ್ತೊಂದು ಮಾಹಿತಿಯ ಪ್ರಕಾರ ಆಗಸ್ಟ್ 31 ರಂದು ಈ ಫೋನಿನ ಕುರಿತು ಅಧಿಕೃತವಾಗಿ ಘೋಷಣೆಯಾಗಲಿದೆ ಎನ್ನಲಾಗಿದೆ.

ಇದೇ ಸೆಪ್ಟೆಂಬರ್ 1 ರಿಂದ 6ನೇ ತಾರೀಕಿನವರೆಗೆ ನಡೆಯಲಿದೆ. ಈ ಫೋನ್ ಮೊದಲಿಗೆ ದಕ್ಷಿಣ ಕೋರಿಯಾ ದಲ್ಲಿ ಲಾಂಚ್ ಆಗಲಿದೆ. ಈ LG V30 ಸ್ಮಾರ್ಟ್ ಫೋನ್ 800,000 KRW ($700 ಅಥಾವ ರೂ.45,220)ಆಗಲಿದ್ದು, ಇದು ಅಧಿಕೃತವಾಗಿ ಸೆಪ್ಟೆಂಬರ್ ನಿಂದ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದಾದ ನಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಇದು LG V ಸರಣಿಗೆ ಸೇರಿಸುತ್ತಿರುವ ಮೂರನೇ ಸ್ಮಾರ್ಟ್ ಫೋನ್ ಇದಾಗಿದೆ. ಈ ಹಿಂದೆ LG V10 ಮತ್ತು V20 ಸ್ಮಾರ್ಟ್ ಫೋನ್ ಅನ್ನು ಕ್ರಮವಾಗಿ 2015 ಮತ್ತು 2016 ನಲ್ಲಿ ಲಾಂಚ್ ಮಾಡಿತ್ತು. ಇದನ್ನು ಸ್ಯಾಮ್ ಸಂಗ್ ಗ್ಯಾಲೆಕ್ಸಿ S7 ಮತ್ತು ಗ್ಯಾಲೆಕ್ಸಿ S8ಗೆ ಎದುರಾಗಿ ಬಿಡುಗಡೆ ಮಾಡಿತ್ತು.

ಈ ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ ಅಲ್ಲದೇ 6GB RAM ಕಾಣಬಹುದಾಗಿದೆ, ಅಲ್ಲದೇ ಆಂಡ್ರಾಯ್ಡ್ 8ನಲ್ಲಿ ಇದು ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.

Read more about:
English summary
LG V30 is coming soon to the market.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot