ಸೊಶೀಯಲ್‌ ಮೀಡಿಯಾಗಳ ಮೇಲೆ ನಡೆದ ಪ್ರಮುಖ ಹ್ಯಾಕರ್ಸ್‌ ದಾಳಿಗಳು!

|

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಸೇರಿದಂತೆ ವಿಶ್ವದ ಹಲವು ಗಣ್ಯರ ಟ್ವಿಟ್ಟರ್‌ ಅಕೌಂಟ್‌ಗಳನ್ನ ಹ್ಯಾಕರ್ಸ್‌ಗಳು ಜುಲೈ 15 ರಂದು ಹ್ಯಾಕ್‌ ಮಾಡಿ ಬಿಟ್‌ಕಾಯಿನ್‌ ಹಗರಣ ಮಾಡಿರುವುದು ವಿಶ್ವದ ಎಲ್ಲೆಡೆ ಚರ್ಚೆ ಆಗ್ತಿದೆ. ಇದನ್ನ ವಿಶ್ವದ ಅತಿದೊಡ್ಡ ಬಿಟ್‌ಕಾಯಿನ್‌ ಹಗರಣ ಎಂದೇ ಹೆಳಲಾಗ್ತಿದೆ. ಸದ್ಯ ತಡರಾತ್ರಿ ನಡೆದಿರುವ ಈ ಹ್ಯಕಿಂಗ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವನೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ರಂತಹ ಪ್ರಮುಖ ವ್ಯಕ್ತಿಗಳ ಟ್ವಿಟ್ಟರ್‌ ಖಾತೆಗಳಲ್ಲಿ ಬಿಟ್‌ಕಾಯಿನ್‌ ಹಗರಣ ನಡೆದಿರೋದು ಟ್ವಿಟರ್‌ ಖಾತೆ ಸುರಕ್ಷತೆ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಖಾತೆಗಳಲ್ಲಿ ನಡೆದ ಬಿಟ್‌ ಕಾಯಿನ್‌ ಹಗರಣ ಇದೀಗ ವಿಶ್ವದೆಲ್ಲಡೆ ಭಾರಿ ಸದ್ದು ಮಾಡ್ತಿದ್ದು ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೈವಸಿ ಸೆಕ್ಯುರಿಟಿ ಬಗ್ಗೆ ಅನುಮಾನ ಮುಡವಂತೆ ಮಾಡಿದೆ. ಹಾಗಂತ ಸೊಶೀಯಲ್‌ ಮೀಡಿಯಾಗಳ ಮೇಲೆ ಹ್ಯಾಕರ್ಸ್‌ಗಳ ದಾಳಿ ಇದೇ ಮೊದಲೇನಲ್ಲ. ಹಾಗಾದ್ರೆ ಸೊಶೀಯಲ್‌ ಮೀಡಿಯಾಗಳ ಮೇಲೆ ನಡೆದಿರುವ ಹ್ಯಾಕರ್ಸ್‌ ದಾಳಿ ಯಾವುವು? ಯಾವಾಗ ನಡೆದಿತ್ತು, ಇದೆಲ್ಲದರ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ವಿಟರ್

ಟ್ವಿಟರ್

ಸದ್ಯ ಟ್ವಿಟರ್‌ ಕಂಪನಿಯ ಆಂತರಿಕ ವ್ಯವಸ್ಥೆಯನ್ನೇ ಬೇದಿಸಿರುವ ಹ್ಯಾಕರ್‌ಗಳು ಜುಲೈ 15ರಂದು ಹ್ಯಾಕ್ ಮಾಡಿದ್ದಾರೆ ಅನ್ನೊದು ತಿಳಿದು ಬಂದಿದೆ.ಆದರೆ ಟ್ವಿಟರ್‌ ಮೇಲೆ ಹ್ಯಾಕರ್ಸ್‌ಗಳು ದಾಳಿ ನಡೆಸಿರೋದು ಇದೇ ಮದೊಲೇನಲ್ಲ. ಈ ಹಿಂದೇ ಟ್ವಿಟರ್‌ ಬಲಸುವ ಖಾಸಗಿ ವ್ಯಕ್ತಿಗಳ ಮಾಹಿತಿಯನ್ನು ಕದಿಯುವ ಪ್ರಯತ್ನ ನಡೆದಿತ್ತು. ಇದಕ್ಕಾಗಿ ಸೌದಿ ಅರೇಬಿಯಾ ಪರ ಬೇಹುಗಾರಿಕೆ ನಡೆಸಿದ್ದಾರೆ ಎಂದು ಇಬ್ಬರು ಮಾಜಿ ಟ್ವಿಟ್ಟರ್ ನೌಕರರ ಮೇಲೆ 2019 ರ ನವೆಂಬರ್‌ನಲ್ಲಿ ಅಮೆರಿಕ ಆರೋಪ ಮಾಡಿತ್ತು. ಅಷ್ಟೇ ಅಲ್ಲ ಟ್ವಿಟರ್ ತನ್ನ 14 ವರ್ಷಗಳ ಇತಿಹಾಸದುದ್ದಕ್ಕೂ ಭದ್ರತಾ ಉಲ್ಲಂಘನೆ ಮತ್ತು ಪ್ರಮುಖ ಟ್ವಿಟರ್ ಬಳಕೆದಾರರ ಮೇಲೆ ಉದ್ದೇಶಿತ ದಾಳಿಯನ್ನು ಎದುರಿಸಿದೆ. ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಜ್ಯಾಕ್ ಡಾರ್ಸಿಯವರ ಖಾತೆಯನ್ನು ಆಗಸ್ಟ್ 2019 ರಲ್ಲಿ ಹ್ಯಾಕ್ ಮಾಡಲಾಗಿದ್ದು, ಅನಧಿಕೃತ ವ್ಯಕ್ತಿಗೆ ಜನಾಂಗೀಯ ನಿಂದನೆ ಪದಗಳನ್ನ ಬಳಸುವಂತೆ ಟ್ವಿಟ್‌ ಮಾಡಲಾಗಿತ್ತು.
ಹ್ಯಾಕ್ ಮಾಡಲಾದ ಇತರ ಟ್ವಿಟ್ಟರ್ ಖಾತೆಗಳಲ್ಲಿ 2013 ರಲ್ಲಿ ಅಸೋಸಿಯೇಟೆಡ್ ಪ್ರೆಸ್ ಮತ್ತು ಗಾರ್ಡಿಯನ್, ಮತ್ತು 2015 ರಲ್ಲಿ ಟೇಲರ್ ಸ್ವಿಫ್ಟ್ ಮತ್ತು 2013 ರಲ್ಲಿ ಡೊನಾಲ್ಡ್ ಟ್ರಂಪ್ ಅವರಂತಹ ಪ್ರಸಿದ್ಧ ವ್ಯಕ್ತಿಗಳು ಸೇರಿದ್ದಾರೆ.

ಫೇಸ್‌ಬುಕ್

ಫೇಸ್‌ಬುಕ್

ಸೊಶೀಯಲ್‌ ಮೀಡಿಯಾಗಳ ಮೇಲಿನ ಹ್ಯಾಕರ್ಸ್‌ ದಾಳಿಗೆ ಫೇಸ್‌ಬುಕ್‌ ಕುಡ ತುತ್ತಾಗಿದೆ. ಪೇಸ್‌ಬುಕ್‌ ಪ್ರೈವೆಸಿ ಸುರಕ್ಷತೆಯನ್ನು ಸಹ ಬೇದಿಸಿರುವ ಹ್ಯಾಕರ್ಸ್‌ಗಳು ಹಲವು ಬಾರಿ ಫೇಸ್‌ಬುಕ್‌ ಅನ್ನು ಹ್ಯಾಕ್‌ ಮಾಡಿದ್ದಾರೆ. ಸೆಪ್ಟೆಂಬರ್ 2018 ರಲ್ಲಿ, 50 ಮಿಲಿಯನ್ ಬಳಕೆದಾರರ ಖಾತೆಗಳನ್ನು ಹ್ಯಾಕರ್ಸ್‌ಗಳು ಹ್ಯಾಕ್‌ ಮಾಡಿದ್ದರು ಅನ್ನೊದನ್ನ ಫೇಸ್‌ಬುಕ್‌ ಮೂಲಗಳೆ ತಿಳಿಸುತ್ತವೆ. ಅಷ್ಟೇ ಯಾಕೆ 30 ವಾರಗಳ ಕಾಲ ಬಳಕೆದಾರರು ತಮ್ಮ ಅಕೌಂಟ್‌ಗಳನ್ನ ಚೆಕ್‌ ಮಾಡದಿದ್ದರೆ ಹ್ಯಾಕರ್ಸ್‌ಗಳು ಅವರ ಮಾಹಿತಿಯನ್ನ ಕದಿಯುವ ಸಾದ್ಯತೆ ಇರಲಿದೆ ಎಂದು ಸಹ ಹೇಳಿತ್ತು. ಇದಲ್ಲದೆ 87 ದಶಲಕ್ಷ ಬಳಕೆದಾರರಿಂದ ಪ್ರೊಫೈಲ್ ವಿವರಗಳನ್ನು ರಾಜಕೀಯ ದತ್ತಾಂಶ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾ ಪಡೆದುಕೊಂಡಿತ್ತು ಅನ್ನೊದು ಸಹ ಕೇಳಿ ಬಂದಿತ್ತು.

ವಾಟ್ಸಾಪ್

ಇನ್ನು ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ 2019 ರ ಮೇ ತಿಂಗಳಲ್ಲಿ ಭದ್ರತಾ ಉಲ್ಲಂಘನೆಯನ್ನು ಬಹಿರಂಗಪಡಿಸಿದೆ ಎಂದು ಹೇಳಲಾಗುತ್ತದೆ. ಇದು ಅಪ್ಲಿಕೇಶನ್‌ನ ಫೋನ್ ಕರೆ ಕಾರ್ಯದ ಮೂಲಕ ದಾಳಿಕೋರರಿಗೆ ಫೋನ್‌ಗಳಲ್ಲಿ ಸ್ಪೈವೇರ್ ಅನ್ನು ಪ್ರವೇಶಿಸಲು ಅವಕಾಶ ಮಾಡಿಕೊಡಲಿದೆ ಎನ್ನುವ ಆರೋಪ ಮಾಡಲಾಗಿತ್ತು.

ಟೆಲಿಗ್ರಾಮ್

ಟೆಲಿಗ್ರಾಮ್

ಇದಲ್ಲದೆ ಟೆಲಿಗ್ರಾಮ್‌ ಅಪ್ಲಿಕೇಶನ್‌ ಕೂಡ ಹ್ಯಾಕರ್ಸ್‌ಗಳ ದಾಳಿಯನ್ನ ಎದುರಿಸಿತ್ತು. 2016 ರಲ್ಲಿ, ಇರಾನಿನ ಹ್ಯಾಕರ್‌ಗಳು ಟೆಲಿಗ್ರಾಮ್ ಇನ್ಸಟಂಟ್‌ ಸಂದೇಶ ಸೇವೆಯಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಖಾತೆಗಳನ್ನು ಹೊಂದಾಣಿಕೆ ಮಾಡಿಕೊಂಡು ಮತ್ತು 15 ದಶಲಕ್ಷ ಇರಾನಿನ ಬಳಕೆದಾರರ ದೂರವಾಣಿ ಸಂಖ್ಯೆಗಳನ್ನು ಹ್ಯಾಕ್‌ ಮಾಡಿದ್ದರು. ಅಲ್ಲದೆ ಎನ್‌ಕ್ರಿಪ್ಟ್ ಮಾಡಲಾದ ಸಂವಹನ ವ್ಯವಸ್ಥೆಯ ಅತಿದೊಡ್ಡ ಹ್ಯಾಕಿಂಗ್‌ ಎಂದು ಸೈಬರ್ ಸಂಶೋಧಕರು ಹೇಳಿಕೊಂಡಿದ್ದರು.

ಲಿಂಕ್ಡ್‌ಇನ್

ಲಿಂಕ್ಡ್‌ಇನ್

ಮೈಕ್ರೋಸಾಫ್ಟ್ ಒಡೆತನದ ವೃತ್ತಿಪರ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್‌ ಕೂಡ 2012 ರಲ್ಲಿ ಭದ್ರತಾ ಉಲ್ಲಂಘನೆಯನ್ನು ಅನುಭವಿಸಿತ್ತು. ಅಲ್ಲದೆ ಹ್ಯಾಕರ್‌ಗಳು ಅದರ ಲಕ್ಷಾಂತರ ಬಳಕೆದಾರರ ಪಾಸ್‌ವರ್ಡ್‌ಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದು ಸಹ ದೊಡ್ಡ ಹ್ಯಾಕಿಂಗ್‌ ದಾಲಿ ಎಂದು ಹೇಳಲಾಗುತ್ತದೆ.

Best Mobiles in India

English summary
Twitter and other platforms like Facebook and WhatsApp have suffered major security breaches in the past.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X