ಬೆಂಗಳೂರಿನಲ್ಲಿ 4 ಲಕ್ಷ ವರ್ಷಗಳ ಹಿಂದೆಯೇ ಮಾನವರ ಅಸ್ತಿತ್ವ!

By Suneel
|

ಕ್ರಿಸ್ತ ಶಕ 1537 ತನಕ ಬೆಂಗಳೂರು ದಕ್ಷಿಣ ಭಾರತದ ಸಂಸ್ಥಾನಗಳಾದ ಗಂಗರು, ಚೋಳರು, ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ ಕೆಂಪೇಗೌಡರು ಬೆಂಗಳೂರಿನಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು ಎಂಬುದು ಬೆಂಗಳೂರಿನ ಇತಿಹಾಸ.

ಇತಿಹಾಸವೇನೋ ಸರಿ, ಆದ್ರೆ ಬೆಂಗಳೂರಿನ ಪ್ರದೇಶದಲ್ಲಿ ಮನುಷ್ಯರು ಎಷ್ಟು ವರ್ಷಗಳ ಹಿಂದಿನಿಂದ ಜೀವಿಸಿದ್ದರು? ಎಂಬ ಪ್ರಶ್ನೆಗೆ ಯಾರಿಗಾದರೂ ಉತ್ತರವನ್ನೂ ಊಹಿಸಿ ಹೇಳಲಾದರು ಸಾಧ್ಯವೇ? ಬಹುಶಃ ಆಗಲಿಕ್ಕಿಲ್ಲ. ಆದರೆ ಉತ್ತರ ಈಗ ಸಿಕ್ಕಿದೆ. ಬೆಂಗಳೂರು ಪ್ರದೇಶದಲ್ಲಿ 4 ಲಕ್ಷ ವರ್ಷಗಳ ಹಿಂದೆಯೇ ಮಾನವರು ಬದುಕಿದ್ದರು ಎಂಬ ಅಚ್ಚರಿ ಮಾಹಿತಿ ಹೊರಬಿದ್ದಿದೆ.

ಅಂದಹಾಗೆ ನಾಲ್ಕು ಲಕ್ಷ ವರ್ಷಗಳ ಹಿಂದೆಯೇ ಮಾನವರು ಬೆಂಗಳೂರಿನಲ್ಲಿ ಬದುಕಿದ್ದರು ಎಂಬುದನ್ನು ಹೇಳಿರುವುದು ಪುರಾತತ್ವಶಾಸ್ತ್ರಜ್ಞರು. ಅವರು ಯಾರು, ಹೀಗೆ ಹೇಳಲು ಪುರಾವೆ ಏನು ಎಂಬುದನ್ನು ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

120 ವರ್ಷಗಳ ಹಿಂದಿನ ಎಕ್ಸರೇ ತಂತ್ರಜ್ಞಾನ ಹೇಗಿತ್ತು ಗೊತ್ತೇ?

ಬೆಂಗಳೂರು ಇತಿಹಾಸ

ಬೆಂಗಳೂರು ಇತಿಹಾಸ

ಬೆಂಗಳೂರಿನ ಇತಿಹಾಸ ಪೂರ್ವ ಸಾಕ್ಷಿಯನ್ನು ಅಗೆದಿರುವುದು ಇದೇ ಮೊದಲ ಬಾರಿಗೆ.

ಡಾ|| ಕೆ ಬಿ ಶಿವತರಕ್

ಡಾ|| ಕೆ ಬಿ ಶಿವತರಕ್

ಬೆಂಗಳೂರಿನ ಪ್ರದೇಶದಲ್ಲಿ ಶಿಲಾಯುಗದಲ್ಲೇ ಮಾನವರು ಇದ್ದ ಪುರಾವೆ ದೊರಕಿದೆ ಎಂಬ ಮಾಹಿತಿಯನ್ನು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ 'ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ' ಪ್ರೊಫೆಸರ್‌ ಆದ ಡಾ|| ಕೆ ಬಿ ಶಿವತರಕ್‌ ಹೇಳಿದ್ದಾರೆ.

ಪುರಾವೆ

ಪುರಾವೆ

2016 ಮೇ ತಿಂಗಳಲ್ಲಿ ಬೆಂಗಳೂರಿನ ಕದಿರೆನಹಳ್ಳಿ ಕೆಳರಸ್ತೆ ಬನಶಂಕರಿ ಎರಡನೇ ಹಂತದ ಹತ್ತಿರ ಹೋಗಬೇಕಾದರೆ ಅಲ್ಲಿ ರಸ್ತೆಯ ಪಕ್ಕದಲ್ಲಿ ನೀರು ಸೋರಿಕೆ ನಿಲ್ಲಿಸುವ ಕಾಮಗಾರಿ ನಡೆಯುತ್ತಿತ್ತು. ಕೆಲಸಗಾರರು ಅಗೆಯುತ್ತಿದ್ದ ಕಲ್ಲನ್ನು ನೋಡಿದಾಗ ತುಂಬ ಕುತೂಹಲವಾಗಿ ಕಾಣಿಸಿತು. ನಂತರ ಕೆಲವು ಕಲ್ಲುಗಳನ್ನು ತೆಗೆದುಕೊಂಡು ಸ್ವಚ್ಛಗೊಳಿಸಿದೆ. ಕಲ್ಲು ಪ್ರಬಲವಾಗಿ ಕಾಣಿಸಿದರಿಂದ, ಅವುಗಳ ಜೊತೆಗೆ ತುಮಕೂರು, ಮಂಡ್ಯ, ಚಿತ್ರದುರ್ಗ ಜಿಲ್ಲೆಯ ಕಲ್ಲುಗಳನ್ನು ಸಂಗ್ರಹಿಸಿದ್ದೆ ಎಂದು ಶಿವತರಕ್‌ ಹೇಳಿದ್ದಾರೆ. ಮುಂದೆ ಓದಿರಿ

ಪುರಾವೆ

ಪುರಾವೆ

ಬನಶಂಕರಿಯಲ್ಲಿ 5 ಕಲ್ಲಿನ ಉಪಕರಣಗಳನ್ನು ( ಕೈಕೊಡಲಿ, ಕುಯ್ಯುವ ಸಲಕರಣೆ, ಸುತ್ತಿಗೆ ಕಲ್ಲು, ಚಿಕಣಿ ಕೈ ಕೊಡಲಿ) ಸಂಗ್ರಹಿಸಿದೆ. 7-11 ಸೆಂಮೀ ಉದ್ದ ಮತ್ತು 4-7 ಸೆಂಮೀ ಅಗಲ ಇದ್ದವು. ಇವುಗಳು ಇತ್ತೀಚೆಗೆ ಹಲವು ಕೆಲಸಗಳಿಗಾಗಿ ಬಳಕೆಯಾಗಿರುವುದು ತಿಳಿಯಿತು ಎಂದು ಶಿವತರಕ್‌ ಹೇಳಿದ್ದರು. ಈ ಕಲ್ಲಿನ ಉಪಕರಣಗಳ ಶೈಲಿಯ ಕಲ್ಲುಗಳನ್ನೇ ಶಿಲಾಯುಗದ ಮಾನವರು ಭೇಟೆಗಾಗಿ ಮತ್ತು ಪ್ರಾಣಿಗಳ ಚರ್ಮ ಸುಲಿಯಲು ಬಳಸುತ್ತಿದ್ದರು ಎಂದು ಶಿವತರಕ್‌ ವಿವರಿಸಿದ್ದಾರೆ.

ಪೂರ್ವ ಶಿಲಾಯುಗ

ಪೂರ್ವ ಶಿಲಾಯುಗ

ಪೂರ್ವ ಶಿಲಾಯುಗದ (ಪ್ಯಾಲಿಯೋಲಿಥಿಕ್‌) ಸಂಸ್ಕೃತಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಇದೇ ರೀತಿಯ ಕಲ್ಲಿನ ಉಪಕರಣಗಳನ್ನು ಕೆಂಗೇರಿ ಅಭಿಮಾನ್‌ ಸ್ಟುಡಿಯೋ ಹತ್ತಿರ ಅಗೆಯಲು ಬಳಸಲಾಗುತ್ತಿತ್ತು. ನಾನು ಈ ಪತ್ತೆ ಬಗ್ಗೆ ವಿವರವಾಗಿ ಅಧ್ಯಯನ ಮಾಡುತ್ತಿದ್ದೇನೆ ಎಂದು ಶಿವತರಕ್‌ ಹೇಳಿದ್ದಾರೆ. ಅಲ್ಲದೇ ಇವರ ಸಂಶೋಧನೆ ಬಗ್ಗೆ ಪುರಾತತ್ವ ಇಲಾಖೆಗೆ ತಿಳಿಸಲಿದ್ದಾರೆ.

ಇತರೆ ಪುರಾತತ್ವಶಾಸ್ತ್ರಜ್ಞರು

ಇತರೆ ಪುರಾತತ್ವಶಾಸ್ತ್ರಜ್ಞರು

ಇತರೆ ಪುರಾತತ್ವಶಾಸ್ತ್ರಜ್ಞರು ಶಿವತರಕ್‌ರವರ ಸಂಶೋಧನೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಒಂದು ವೇಳೆ ಶಿಲಾಯುಗದ ಮಾನವರು ಇಲ್ಲಿ ನೆಲೆಸಿದ್ದರೇ ನಂತರ ಬೆಂಗಳೂರು ಎಲ್ಲಿ ಬೆಳೆಯುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕ, ಮತ್ತು ತುಮಕೂರಿನ ಕಿಬ್ಬನಹಳ್ಳಿಯಲ್ಲಿ ಮಾತ್ರ ಕಲ್ಲಿನ ಉಪಕರಣಗಳು ಕಾಣಿಸಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ವಿಶ್ವಿವಿದ್ಯಾಲಯದ ನಿವೃತ್ತ ಪುರಾತತ್ವ ಪ್ರೊಫೆಸರ್‌ 'ರವಿ ಕೊರಿ ಸೆಟ್ಟರ್‌'ರವರು ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಬ್ರಿಟಿಷ್‌ ಮಹಿಳೆಯ ಖಾತೆಯನ್ನು ಬ್ಯಾನ್ ಮಾಡಿದ ಫೇಸ್‌ಬುಕ್; ಹೆಸರು ISISಬ್ರಿಟಿಷ್‌ ಮಹಿಳೆಯ ಖಾತೆಯನ್ನು ಬ್ಯಾನ್ ಮಾಡಿದ ಫೇಸ್‌ಬುಕ್; ಹೆಸರು ISIS

120 ವರ್ಷಗಳ ಹಿಂದಿನ ಎಕ್ಸರೇ ತಂತ್ರಜ್ಞಾನ ಹೇಗಿತ್ತು ಗೊತ್ತೇ?120 ವರ್ಷಗಳ ಹಿಂದಿನ ಎಕ್ಸರೇ ತಂತ್ರಜ್ಞಾನ ಹೇಗಿತ್ತು ಗೊತ್ತೇ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Man existed in Bengaluru 4 lakh years ago: Archaeologist. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X