Just In
- 13 min ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 1 hr ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 17 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 18 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
Don't Miss
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- News
ವಿಚ್ಛೇದನ ಪ್ರಕರಣ: ಪತ್ನಿಯ ಜೀವನಾಂಶ ₹40 ಲಕ್ಷಕ್ಕೆ ಹೆಚ್ಚಿಸಿದ ಹೈಕೋರ್ಟ್
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Movies
ಮಂಗ್ಲಿ ಹಾಡೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು? ಸ್ಯಾಂಡಲ್ವುಡ್ನಲ್ಲಿ ಕ್ರೇಜ್ ಹೇಗಿದೆ?
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
120 ವರ್ಷಗಳ ಹಿಂದಿನ ಎಕ್ಸರೇ ತಂತ್ರಜ್ಞಾನ ಹೇಗಿತ್ತು ಗೊತ್ತೇ?
ಕೆಲವೊಂದು ಟೆಕ್ನಾಲಜಿ ಪ್ರಕ್ರಿಯೆಗಳು ಇಂದು ಎಷ್ಟೇ ಅದ್ಭುತವಾಗಿ, ಆಶ್ಚರ್ಯಕರವಾಗಿ ಕಾಣಿಸಿದರು ಸಹ ಆ ಟೆಕ್ನಾಲಜಿಗಳು ಹಲವು ದಶಕಗಳ ಹಿಂದೆಯೇ ಪ್ರಾಥಮಿಕವಾಗಿ ಅನ್ವೇಷಣೆಯಾಗಿದ್ದವು ಎಂಬುದನ್ನು ಮರೆಯೋಹಾಗಿಲ್ಲ.
ಯಾಕಂದ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಎಕ್ಸರೇರೇ ಮತ್ತು ಸ್ಕ್ಯಾನಿಂಗ್ ಎಂಬ ಟೆಕ್ನಾಲಜಿ ಎಷ್ಟೇ ವಿನೂತನವಾಗಿ ಕಂಡರೂ ಸಹ ಮೊಟ್ಟ ಮೊದಲ ಬಾರಿಗೆ ಎಕ್ಸರೇ ಟೆಕ್ನಾಲಜಿಯನ್ನು 120 ವರ್ಷಗಳ ಹಿಂದೆಯೇ ಪರಿಚಯಿಸಲಾಗಿತ್ತು.
120 ವರ್ಷಗಳ ಹಿಂದೆ ಪರಿಚಯಿಸಿದ ಕೆಲವು ಎಕ್ಷರೇಗಳನ್ನು ಇಂದೂ ಸಹ ಅಪಾಯಕಾರಿ ಎಂದೇ ಪರಿಗಣಿಸಲಾಗಿದ್ದರೂ ಸಹ, ಆ ಎಕ್ಸರೇ ಟೆಕ್ನಾಲಜಿಗಳೇ ಇಂದು ಪರಿಣಾಮಕಾರಿಯಾಗಿ ರೋಗಮುಕ್ತ ಮಾಡಲು ಮತ್ತು ಚಿಕಿತ್ಸೆ ನೀಡಲು ಪ್ರಗತಿಗೆ ಅವಕಾಶ ನೀಡಿವೆ ಎಂಬುದನ್ನು ಮರೆಯುವ ಹಾಗಿಲ್ಲ. ಅಂದಹಾಗೆ 120 ವರ್ಷಗಳ ಹಿಂದೆ ಎಕ್ಸರೇ ಟೆಕ್ನಾಲಜಿ ಹೇಗಿತ್ತು, ಎಕ್ಸರೇ ಹೇಗೆ ಮಾಡಲಾಗುತ್ತಿತ್ತು ಎಂಬುದನ್ನು ಪ್ರದರ್ಶಿಸುವ ಕೆಲವು ವಿಂಟೇಜ್ ಫೋಟೋಗಳನ್ನು ಇಂದಿನ ಲೇಖನದ ಸ್ಲೈಡರ್‌ನಲ್ಲಿ ಮಾಹಿತಿ ಸಹಿತ ನಿಮಗೆ ಪರಿಚಯಿಸುತ್ತಿದ್ದೇವೆ.
ಪ್ರಖ್ಯಾತ ಟೆಕ್ ಕಂಪನಿಗಳ ಸಂದರ್ಶನದಲ್ಲಿ ಕೇಳಲಾದ 13 ಕಠಿಣ ಪ್ರಶ್ನೆಗಳುಫೋಟೋ ಕೃಪೆ; historydaily.org

ಎಕ್ಸರೇ ವಿಂಟೇಜ್ ಫೋಟೋಗಳು
1910 ರಲ್ಲಿ ಆಸ್ಟ್ರೀಯಾದ 'ಸರ್ಕಾ'ದಲ್ಲಿ ವ್ಯಕ್ತಿಯೊಬ್ಬರು ಎಕ್ಸರೇ ಸ್ವೀಕರಿಸುತ್ತಿರುವುದು.

ಕೊಚ್ಚಿನ್ ಆಸ್ಪತ್ರೆ
1914 ರಲ್ಲಿ ಪ್ಯಾರಿಸ್‌ನ ಕೊಚ್ಚಿನ್ ಆಸ್ಪತ್ರೆಯ ಪ್ರೊ. ಮೆನಾರ್ಡ್'ರವರ ರೇಡಿಯೋಲಾಜಿ ವಿಭಾಗದಲ್ಲಿ ಎದೆಯ ಎಕ್ಸರೇ ಪ್ರಗತಿಯಲ್ಲಿರುವ ದೃಶ್ಯ.

ರೋನ್‌ಟೈನ್
1929 ರಲ್ಲಿ ರೋನ್‌ಟೈನ್ ಸಂಸ್ಥೆಯಲ್ಲಿ ಇದ್ದ ಮಷಿನ್ ಒಂದು ದೈಹಿಕವಾಗಿ ಆಗುವ ಗಾಯಗಳ ಬಗ್ಗೆ ಮುನ್ಸೂಚನೆ ನೀಡುವ ಫೀಚರ್ ಅನ್ನು ಹೊಂದಿದ್ದಂತೆ. ಆ ಆಧುನಿಕ ಮಷಿನ್‌ನಲ್ಲಿ ಮಹಿಳೆಯೊಬ್ಬರು ಎಕ್ಸರೇಗೆ ಒಳಗಾಗಿರುವ ಚಿತ್ರವಿದು.

ಎಕ್ಸರೇ ಪ್ರದರ್ಶನ
1928 ರಲ್ಲಿ ಎಕ್ಸರೇ ಪ್ರದರ್ಶನದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರು ಸಹ ಹೊಸ ಮೆಡಿಕಲ್ ಉಪಕರಣವನ್ನು ಪ್ರತಿಪಾದಿಸಲು ಪ್ರಯೋಗದಲ್ಲಿ ತೊಡಗಿರುವ ದೃಶ್ಯ.

ಜುಡಿತ್ ಅಲೆನ್
ಅಮೆರಿಕದ ಸಿನಿಮಾ ಸ್ಟಾರ್ 'ಜುಡಿತ್ ಅಲೆನ್'ರವರು 1930 ರಲ್ಲಿ ರೇಡಿಯೋಗ್ರಾಪ್ ಎಕ್ಸರೇಯಲ್ಲಿ ತೊಡಗಿರುವುದು.

ವಿನೂತನ ಎಕ್ಸರೇ ಉಪಕರಣ
1932 ರಲ್ಲಿ ವ್ಯಕ್ತಿಯೊಬ್ಬರು ವಿನೂತನ ಎಕ್ಸರೇ ಉಪಕರಣದ ಪ್ರದರ್ಶನದಲ್ಲಿ ತೊಡಗಿರುವ ದೃಶ್ಯ.

ಹಳೆಯ ಸುರಕ್ಷತಾ ಗ್ಯಾಜೆಟ್
ಹಳೆಯ ಸುರಕ್ಷತಾ ಗ್ಯಾಜೆಟ್ ಧರಿಸಿ ಎಕ್ಸರೇ ಉಪಕರಣ ಆಪರೇಟ್ ಮಾಡುತ್ತಿರುವ ದೃಶ್ಯ. ಆದರೆ ಆಧನಿಕ ಎಕ್ಸರೇಗೆ ಈ ಸುರಕ್ಷತಾ ಗ್ಯಾಜೆಟ್‌ಗಳ ಅವಶ್ಯಕತೆ ಇಲ್ಲ. ಈ ದೃಶ್ಯವು 1934 ರಲ್ಲಿ ವೆಸ್ಟ್‌ಮಿನಿಸ್ಟರ್‌ನ ಸೆಂಟ್ರಲ್ ಹಾಲ್‌ನಲ್ಲಿ ಕಂಡು ಬಂದಿದ್ದು ಹೀಗೆ.

ಲಂಡನ್
ಲಂಡನ್ ಮೆಡಿಕಲ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಶಾಕ್ ಪ್ರೂಫ್ ಉಪಕರಣದಲ್ಲಿ ತಲೆ ಎಕ್ಷರೇಗೆ ಒಳಗಾಗಿರುವ ದೃಶ್ಯ.

ರಿಯೋ ದಿ ಜನೈರೊ
1937 ರ ಅಕ್ಟೋಬರ್‌ನಲ್ಲಿ ಬ್ರೆಜಿಲ್‌ನ 'ರಿಯೋ ದಿ ಜನೈರೊ'ದಲ್ಲಿ ಭೌತ ವಿಜ್ಞಾನಿ 'ಮೋರಾಯಿಸ್ ಡಿ ಅಬ್ರಿಯೋ' ಎಂಬುವವರು ರೇಡಿಯೋಗ್ರಾಫ್ ಒಂದನ್ನು ಅನ್ವೇಷಣೆ ಮಾಡಿದ್ದರು. ಈ ರೇಡಿಯೋಗ್ರಾಫ್ ಅನ್ನು ಶ್ವಾಸಕೋಶ ರೋಗಗಳನ್ನು ಪತ್ತೆಹಚ್ಚಲು ಅಭಿವೃದ್ದಿಪಡಿಸಲಾಗಿತ್ತು.

ಎರಡನೇ ಮಹಾಯುದ್ಧ
ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಗಾಯಗೊಂಡ ಸೈನಿಕನೊಂದಿಗೆ ಅಮೆರಿಕ ವೈದ್ಯಕೀಯ ದಳದ ಎಕ್ಸರೇ ತಂತ್ರಜ್ಞ ಕಾಣಿಸಿಕೊಂಡ ದೃಶ್ಯವಿದು.

ಎಕ್ಸರೇ ಮಷಿನ್
1947 ರಲ್ಲಿ ವೈದ್ಯರು ಎಕ್ಸರೇ ಮಷಿನ್ ಬಳಸಿ ರೋಗಿಯ ಹೃದಯಕ್ಕೆ ಅಬಿಧಮನಿಯ ಕ್ಯಾತಿಟರ್ ನೀಡುತ್ತಿರುವ ದೃಶ್ಯ.

ಛೆಲ್ಸಿಯಾ ಚೆಸ್ಟ್ ಕ್ಲಿನಿಕ್
1949 ರಲ್ಲಿ ಛೆಲ್ಸಿಯಾ ಚೆಸ್ಟ್ ಕ್ಲಿನಿಕ್‌ನಲ್ಲಿ ಮಗುವೊಂದು ಎದೆ ಎಕ್ಸರೇಗೆ ಒಳಗಾಗಿರುವಾಗ ಕ್ಯಾಪ್ಚರ್ ಮಾಡಿದ ವಿಂಟೇಜ್ ಫೋಟೋ.

ಡೆಂಟಲ್ ಎಕ್ಸರೇ
ಚಿತ್ರದಲ್ಲಿ ನೀವು ನೋಡುತ್ತಿರುವ ಮಷಿನ್ ಅನ್ನು ಡೆಂಟಲ್ ಎಕ್ಸರೇಗಾಗಿ 1953 ರಲ್ಲಿ ಬಳಸುತ್ತಿದ್ದರು.

ಬಿಕ್ಕಳಿಕೆಯಿಂದ ಹತಾಶೆಗೊಂಡ ರೋಗಿ
ಕೇವಲ ಬಿಕ್ಕಳಿಕೆಯಿಂದ ಹತಾಶೆಗೊಂಡ ರೋಗಿಯನ್ನು ನ್ಯೂಯಾರ್ಕ್ ನಗರದ 'ಫ್ಲವರ್ ಫಿಫ್ತ್ ಆಸ್ಪತ್ರೆ'ಯಲ್ಲಿ ಎಕ್ಸರೇ ಮಾಡಿದ ದೃಶ್ಯ.

ಹಲ್ಲುಗಳ ಪನೋರಮಿಕ್ ಚಿತ್ರ
1960 ರಲ್ಲಿ ಎಕ್ಸರೇ ಯಂತ್ರವೊಂದು ಹಲ್ಲುಗಳ ಪನೋರಮಿಕ್ ಚಿತ್ರ ಕ್ಯಾಪ್ಚರ್ ಮಾಡಿಕೊಳ್ಳಲು ತಲೆಯನ್ನು ಸುತ್ತುವರೆದ ಫೋಟೋ.

ಗಿಜ್‌ಬಾಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470