ಫೇಸ್‌ಬುಕ್ ಪೋಸ್ಟ್‌ನಿಂದ ಪಾಪ್ಯುಲರ್ ಆದ ಕ್ಯಾನ್ಸರ್ ರೋಗಿ

By Shwetha
|

ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಕೆಲವು ವ್ಯಕ್ತಿಗಳು ಅನಾವಶ್ಯಕ ಟೀಕೆಗಳನ್ನು ಅನುಭವಿಸುತ್ತಾರೆ. ತಮ್ಮ ದೇಹದೊಳಗೆ ಅನೇಕ ರೋಗಗಳನ್ನು ಹೊತ್ತುಕೊಂಡು ಹೊರಜಗತ್ತಿಗೆ ನಗುಮುಖದಿಂದಲೇ ಕಾಣಿಸಿಕೊಳ್ಳುವ ಈ ವ್ಯಕ್ತಿಗಳ ಟೀಕೆಯನ್ನು ನಾವು ಮಾಡುತ್ತೇವೆ. ಅಂತವರಿಗಾಗಿ ಎಂದೂ ಮಾತನಾಡುವ ಮುನ್ನ ಆಲೋಚಿಸಿ ಎಂಬ ಸುದೃಢ ಸಂದೇಶವನ್ನು ವೆಸ್ಟ್ ಯೋರ್ಕ್‌ಶೈರ್‌ನ ಸ್ಟೇ ವಾಕರ್ ಎಂಬ ಫೇಸ್‌ಬುಕ್ ಬಳಕೆದಾರ ಶೇರ್ ಪೋಸ್ಟ್ ಮಾಡಿದ್ದು ಇದು 30,000 ಲೈಕ್‌ಗಳನ್ನು ಮತ್ತು 10,000 ಶೇರ್ ಅನ್ನು ಪಡೆದುಕೊಂಡಿದೆ.

ಓದಿರಿ: ನಿಮ್ಮ ಫೇಸ್‌ಬುಕ್ ಖಾತೆಯಿಂದ ನಿಮ್ಮ ರಹಸ್ಯ ಬಯಲು

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಘಟನೆಯ ಕುರಿತ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ.

ತೀವ್ರ ಸ್ವರೂಪದ ಕ್ರೋನ್ಸ್ ರೋಗ

ತೀವ್ರ ಸ್ವರೂಪದ ಕ್ರೋನ್ಸ್ ರೋಗ

24 ವರ್ಷದ ಸ್ಟೇ ವಾಕರ್ ತೀವ್ರ ಸ್ವರೂಪದ ಕ್ರೋನ್ಸ್ ರೋಗದಿಂದ ಬಳಲುತ್ತಿದ್ದು, ಇದೊಂದು ರೀತಿಯ ಕರುಳು ಕ್ಯಾನ್ಸರ್ ಆಗಿದೆ. ಕಳೆದ 18 ತಿಂಗಳಿನಿಂದ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಆಪರೇಶನ್

ಆಪರೇಶನ್

ಕಳೆದ ಎರಡು ವರ್ಷಗಳಿಂದ ಆಪರೇಶನ್ ಅನ್ನು ಕೂಡ ಮಾಡಿಸಿಕೊಂಡಿದ್ದಾನೆ.

ಅನಾಮಧೇಯ ವ್ಯಕ್ತಿ

ಅನಾಮಧೇಯ ವ್ಯಕ್ತಿ

ತನ್ನ ಕಾಯಿಲೆಯ ಕುರಿತಾಗಿ ಅನಾಮಧೇಯ ವ್ಯಕ್ತಿಗಳಿಂದ ಈತ ಟೀಕೆಗಳನ್ನು ಪಡೆದುಕೊಂಡಿದ್ದು ಈತನಿಗೆ ಕಾಯಿಲೆ ಹಲವಾರು ಕಾರಣಗಳಿಂದ ಬಂದಿರಬಹುದು ಮತ್ತು ಈತ ಬೇಕೆಂದೇ ರೋಗಿಯಾಗಿದ್ದಾನೆ ಎಂಬ ರೀತಿಯಲ್ಲಿ ಟೀಕೆಗಳು ಇವನನ್ನು ಘಾಸಿಗೊಳಿಸಿದ್ದವು.

ಸಾಮಾಜಿಕ ತಾಣ

ಸಾಮಾಜಿಕ ತಾಣ

ಇದರಿಂದ ನೊಂದ ಸ್ಟೇ ವಾಕರ್ ಸಾಮಾಜಿಕ ತಾಣದಲ್ಲಿ ಪ್ರಬಲವಾದ ಸಂದೇಶವೊಂದನ್ನು ರವಾನಿಸಿದ್ದು ಜನರು ಅತಿ ಬೇಗನೇ ಬೇರೊಬ್ಬರನ್ನು ನಿರ್ಣಯಿಸುತ್ತಾರೆ. ಮತ್ತೊಬ್ಬರ ನೋವೇನು ಎಂಬುದನ್ನು ಅರಿತುಕೊಳ್ಳುವುದಿಲ್ಲ ಎಂಬುದಾಗಿ ಸಂದೇಶದಲ್ಲಿ ತಿಳಿಸಿದ್ದಾನೆ.

ವಿಧವಿಧವಾಗಿ ಬಣ್ಣಿಸಿದ್ದಾನೆ

ವಿಧವಿಧವಾಗಿ ಬಣ್ಣಿಸಿದ್ದಾನೆ

ತಾನು ಆಸ್ಪತ್ರೆಯಲ್ಲಿ ಪಡೆಯುತ್ತಿರುವ ಚಿಕಿತ್ಸೆ ಮತ್ತು ಅದರಿಂದ ಆತನಿಗೆ ಉಂಟಾಗುತ್ತಿರುವ ನೋವನ್ನು ಸ್ಟೇ ವಾಕರ್ ವಿಧವಿಧವಾಗಿ ಬಣ್ಣಿಸಿದ್ದಾನೆ.

ಫೇಕ್ ಚಿತ್ರ

ಫೇಕ್ ಚಿತ್ರ

ಬರಿಯ ಫೇಕ್ ಚಿತ್ರವನ್ನು ಬಳಸಿಕೊಂಡು ತಾಣವನ್ನು ತಪ್ಪಾಗಿ ನೀನು ಬಳಸಿಕೊಳ್ಳುತ್ತಿದ್ದೀಯ. ಇದೆಲ್ಲಾ ಬರಿಯ ನಾಟಕ ಮುಂತಾಗಿ ಟೀಕಾಕಾರರು ಸ್ಟೇ ವಾಕರ್ ಅನ್ನು ಜರೆದಿದ್ದಾರೆ.

ಹೊರ ಜಗತ್ತಿಗೆ ಗೊತ್ತಾಗಲಿ

ಹೊರ ಜಗತ್ತಿಗೆ ಗೊತ್ತಾಗಲಿ

ತಾನು ಅನುಭವಿಸುತ್ತಿರುವುದು ಹೊರ ಜಗತ್ತಿಗೆ ಗೊತ್ತಾಗಲಿ ಎಂಬುದು ಸ್ಟೇ ವಾಕರ್ ಅಭಿಪ್ರಾಯವಾಗಿತ್ತು ಅದಕ್ಕಾಗಿಯೇ ಅವರು ತಮ್ಮ ಆಸ್ಪತ್ರೆಯ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X