Subscribe to Gizbot

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

Posted By:

ಫೇಸ್‌ಬುಕ್‌ ನಂಬರ್‌ ಒನ್‌ ಸೋಶಿಯಲ್‌ ನೆಟ್‌ವರ್ಕ್ ಆಗಿ ಈಗಾಗಲೇ ಗುರುತಿಸಿಕೊಂಡಿದೆ. ಈ ವಿಚಾರ ನಿಮಗೆ ಈಗಾಗಲೇ ತಿಳಿದಿದೆ. ಆದರೆ ನಂಬರ್‌ ಒನ್‌ ಸೋಶಿಯಲ್‌ ನೆಟ್‌ವರ್ಕ್, ಹುಟ್ಟಿ 9 ವರ್ಷದಲ್ಲೇ ಫೇಸ್‌ಬುಕ್‌ ಬಿಲಿಯನ್‌ ಡಾಲರ್‌ ಕಂಪೆನಿಯಾಗಿ ರೂಪುಗೊಂಡದ್ದು ಹೇಗೆ ಎಂದು ನೀವು ಕೆಳಬಹುದು.ತನ್ನ ಉದ್ಯೋಗಿಗಳಿಗೆ ನೀಡುತ್ತಿರುವ ಅತ್ಯುತ್ತಮ ಗುಣಮಟ್ಟದ ಸೌಲಭ್ಯ,ಕಾಳಜಿಯಿಂದಾಗಿ ಫೇಸ್‌ಬುಕ್‌ ಈಗ ವಿಶ್ವದ ದೊಡ್ಡ ಬಿಲಿಯನೇರ್‌ ಕಂಪೆನಿಯಾಗಿ ಗುರುತಿಸಿಕೊಂಡಿದೆ.

ಹಾಗಾದ್ರೆ ಫೇಸ್‌ಬುಕ್‌ನಲ್ಲಿ ಉದ್ಯೋಗಿಗಳಿಗೆ ನೀಡುತ್ತಿರುವ ಸೌಲಭ್ಯ ಎಂಥಹದ್ದು ಎಂಬುದಕ್ಕೆ ಗಿಜ್ಬಾಟ್‌ ಮಾಹಿತಿ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಫೇಸ್‌ಬುಕ್ ಸಂಸ್ಥಾಪಕನಿಗೆ ಮತ್ತೊಂದು ಪಟ್ಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾರಕ್ಕೊಮ್ಮೆ ಮಾರ್ಕ್‌ ಜುಕರ್‌ಬರ್ಗ್ ಸಂವಾದ

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ಪ್ರತಿ ಶುಕ್ರವಾರ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಉದ್ಯೋಗಿಗಳ ಜೊತೆ ಸಂವಾದ ನಡೆಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಉದ್ಯೋಗಿಗಳು ತಮ್ಮ ಅಭಿಪ್ರಾಯವನ್ನು ಜ್ಯುಕರ್‌ ಬರ್ಗ್‌ ಜೊತೆ ಹೇಳುತ್ತಾರೆ.

ಫೇಸ್‌ಬುಕ್‌ನಲ್ಲೇ ಸಂವಹನ

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ಆಫೀಸ್‌ ಸಮಯದಲ್ಲಿ ಎಲ್ಲಾ ಉದ್ಯೋಗಿಗಳು ಆಂತರಿಕ ಸಂವಹನಕ್ಕಾಗಿ ಫೇಸ್‌ಬುಕ್‌ನಲ್ಲಿರುವ ತಮ್ಮ ನಿಗದಿ ಪಡಿಸಿದ ಗ್ರೂಪ್‌ನಲ್ಲೇ ವ್ಯವಹಾರ ನಡೆಸುತ್ತಾರೆ.

ವರ್ಷಕ್ಕೊಮ್ಮೆ ಪಾರ್ಟಿ

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ಫೇಸ್‌ಬುಕ್‌ ಹುಟ್ಟು ಹಬ್ಬದ ಸಂದರ್ಭಲ್ಲಿ ಪ್ರತಿವರ್ಷ ತನ್ನ ಉದ್ಯೋಗಿಗಳಿಗೆ ಫೇಸ್‌ಬುಕ್‌ ಪಾರ್ಟಿ ಆಯೋಜಿಸುತ್ತದೆ.ಈ ಸಂದರ್ಭದಲ್ಲಿ ಪ್ರತಿ ಉದ್ಯೋಗಿಗೆ ಒಂದು ಉಡುಗೊರೆ ನೀಡಲಾಗುತ್ತದೆ.

ಹೊಸ ಉದ್ಯೋಗಿಯ ಸಂಬಳ 67 ಸಾವಿರ ಡಾಲರ್‌

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ಹೊಸದಾಗಿ ಫೇಸ್‌ಬುಕ್‌ನಲ್ಲಿ ಸೇರಿದ ಉದ್ಯೋಗಿಗೆ ಫೇಸ್‌ಬುಕ್‌ ಗ್ಲಾಸ್‌ಡೂರ್‌ ಮಾಹಿತಿಯಂತೆ ವಾರ್ಷಿಕವಾಗಿ 67 ಸಾವಿರ ಡಾಲರ್‌ಗಿಂತಲೂ ಹೆಚ್ಚು ಸಂಬಳ ನೀಡುತ್ತದೆ.

ಒಂದೇ ವಾರದಲ್ಲಿ ಕೆಲಸ

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ಹೊಸದಾಗಿ ಸೇರಿದ ಉದ್ಯೋಗಿ ಒಂದೇ ವಾರದಲ್ಲಿ ಇಂಟರ್‌ನೆಟ್‌ನಲ್ಲಿ ಲೈವ್‌ಆಗಿ ಕೆಲಸ ಮಾಡಬೇಕು.

ದಿನವಿಡಿ ಉಚಿತ ಆಹಾರ

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ಫೇಸ್‌ಬುಕ್‌ ತನ್ನ ಉದ್ಯೋಗಳ ಹಿತಕ್ಕಾಗಿ ಎಪಿಕ್‌ ಕೆಫೆ ಹೊಟೇಲ್‌ನ್ನು ತೆರೆದಿದೆ.ನ್ಯೂಯಾರ್ಕ್‌ನ ಪ್ರಖ್ಯಾತ ಏಸ್‌ ಹೊಟೇಲ್‌ನವರು ನವರು ಈ ಹೊಟೇಲ್‌ ವಿನ್ಯಾಸ ಪಡಿಸಿದ್ದು, ಫೇಸ್‌ಬುಕ್‌ ಉದ್ಯೋಗಿಗಳು ಇಲ್ಲಿ ದಿನವಿಡಿ ಉಚಿತವಾಗಿ ಆಹಾರವನ್ನು ಸೇವಿಸಬಹುದು.

ಫೇಸ್‌ಬುಕ್‌ ಆಫೀಸ್‌ನಲ್ಲೇ ಡಾಕ್ಟರ್

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ಫೇಸ್‌ಬುಕ್ ತನ್ನ ಉದ್ಯೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದು ಆಫೀಸ್‌ನಲ್ಲೇ ಡಾಕ್ಟರ್,ಫಿಸಿಕಲ್‌ ಥೆರಪಸ್ಟ್‌ಗಳನ್ನು ನಿಯೋಜಿಸಿದೆ.

ಹಾಳಾದ್ರೆ ಚಿಂತೆ ಬೇಡ

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ಒಂದು ವೇಳೆ ಉದ್ಯೋಗಿಗಳು ಕೆಲಸ ಮಾಡುತ್ತಿರುವ ಕೀಬೋರ್ಡ್ ಚೆನ್ನಾಗಿ ಕೆಲಸ ಮಾಡದಿದ್ರೆ, ಮೌಸ್‌ನಲ್ಲಿ ಸಮಸ್ಯೆ ಉಂಟಾದರೆ ಆಫೀಸ್‌ನಲ್ಲೇ ಒಂದು ಜಾಗದಲ್ಲಿ ಮೌಸ್‌,ಕೀಬೋರ್ಡ್‌, ಲ್ಯಾಪ್‌ಟಾಪ್‌ ಚಾರ್ಜರ್‌ಗಳನ್ನು ಇರಿಸಿದ್ದು, ಉದ್ಯೋಗಿಗಳು ತಮಗೆ ಬೇಕಾದ ವಸ್ತುಗಳನ್ನು ಆರಿಸಿಕೊಂಡು ಕೆಲಸ ಮಾಡಬಹುದು.

ಭಿನ್ನ ಭಿನ್ನ ಹೆಸರಿನ ಮೀಟಿಂಗ್‌ ರೂಮ್‌

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ಫೇಸ್‌ಬುಕ್‌ನಲ್ಲಿ ಮೀಟಿಂಗ್‌ ರೂಮ್‌ಗಳಿದ್ದು. ಈ ರೂಮ್‌ಗಳಿಗೆ ಉದ್ಯೋಗಿಗಳೇ ನೀಡಿರುವ ಹೆಸರನ್ನು ಇರಿಸಲಾಗಿದೆ.

ವರ್ಷಕ್ಕೊಮ್ಮೆ ಪಾರ್ಕ್‌ನಲ್ಲಿ ಆಟ

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ಫೇಸ್‌ಬುಕ್‌ ವರ್ಷದಲ್ಲಿ ಒಂದು ದಿನ ಹತ್ತಿರದಲ್ಲಿರುವ ಪಾರ್ಕ್‌ನ್ನು ಒಂದು ದಿನಕ್ಕೆ ಬಾಡಿಗೆಗೆ ಪಡೆಯುತ್ತದೆ. ಈ ದಿನ ಫೇಸ್‌ಬುಕ್‌ನ ಎಲ್ಲಾ ಉದ್ಯೋಗಿಗಳು ಈ ಪಾರ್ಕ್‌ನಲ್ಲಿ ವಿವಿಧ ಆಟಗಳನ್ನು ಆಡುತ್ತಾರೆ.

ಫುಲ್‌ ಫ್ರೀಡಂ..

ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ಫೇಸ್‌ಬುಕ್‌ ಕಂಪ್ಯೂಟರ್ ಆಪರೇಟಿಂಗ್‌ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಉದ್ಯೋಗಿಗಳಿಗೆ ಇದೇ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಕಂಪ್ಯೂಟರ್‌ ಬಳಸಬೇಕು ಎಂದು ಕಡ್ಡಾಯ ಮಾಡಿಲ್ಲ. ಮ್ಯಾಕ್‌ ಬೇಕಾದವರಿಗೆ ಮ್ಯಾಕ್‌,ಲೈನಕ್ಸ್‌ ಬೇಕಾದವರಿಗೆ ಲೈನಕ್ಸ್,ವಿಂಡೋಸ್‌ ಕಂಪ್ಯೂಟರ್‌ ಬೇಕಾದವರಿಗೆ ವಿಂಡೋಸ್‌ ಕಂಪ್ಯೂಟರ್‌ಗಳನ್ನು ಆಯ್ಕೆಯ ಸ್ವಾತಂತ್ರ್ಯ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot