ಮೊಬೈಲ್‌ ಬಳಕೆಯಿಂದ ಪುರಷತ್ವ ಕುಂಠಿತ: ವಿಜ್ಞಾನಿಗಳ ಹೇಳಿಕೆ

By Suneel
|

ತಂತ್ರಜ್ಞಾನ ಎಷ್ಟು ಉಪಯೋಗಕಾರಿಯೋ ಅಷ್ಟೇ ಮಟ್ಟದಲ್ಲಿ ಮಾರಕ ಎಂಬುದನ್ನು ಹಲವು ವೇಳೆ ನೆನಪು ಮಾಡಿಕೊಳ್ಳುವುದುಂಟು. ಆದರೆ ಅಂತಹ ನೆನಪು ಈಗ ಪ್ರತಿಯೊಬ್ಬರಲ್ಲಿ ಉಳಿಯಬೇಕಾಗಿದೆ. ಯಾಕಂದ್ರೆ 1 ಗಂಟೆ ಸಮಯ ಯಾವ ವ್ಯಕ್ತಿ ಮೊಬೈಲ್‌ಗಳಲ್ಲಿ ಮಾತನಾಡುತ್ತಾನೋ, ಅವನಲ್ಲಿ ವೀರ್ಯದ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರ ನೀಡಿದ್ದಾರೆ. ಮೊಬೈಲ್‌ ಫೋನ್‌ ಬಳಕೆ ಮಾಡುವ ಪ್ರತಿಯೊಬ್ಬರು ಸಹ ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಓದಿರಿ: ಯೂಟ್ಯೂಬ್‌ ವೀಡಿಯೋಗಳ ಡೌನ್‌ಲೋಡ್‌ ಹೇಗೆ?

ಮೊಬೈಲ್‌ ಬಳಕೆ

ಮೊಬೈಲ್‌ ಬಳಕೆ

ಯಾವ ಪುರುಷರು ದಿನವೊಂದರಲ್ಲಿ ಒಂದು ಗಂಟೆ ಸಮಯ ಮೊಬೈಲ್‌ನಲ್ಲಿ ಮಾತನಾಡುತ್ತಾರೋ ಅವರಲ್ಲಿ ವೀರ್ಯದ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರ ನೀಡಿದ್ದಾರೆ.
ಚಿತ್ರ ಕೃಪೆ : Getty images

ಪಕ್ಕದಲ್ಲಿದ್ದರು  ತೊಂದರೆ

ಪಕ್ಕದಲ್ಲಿದ್ದರು ತೊಂದರೆ

ಪುರುಷರು ಮೊಬೈಲ್‌ ಅನ್ನು ಪಕ್ಕದ ಟೇಬಲ್‌ಗಳಲ್ಲಿ ಅತಿ ಸನಿಹದಲ್ಲಿ ಇರಿಸಿದ್ದರು ಸಹ, ಜೇಬಿನಲ್ಲಿ ಇರಿಸಿದ್ದರು ಸಹ ನಕರಾತ್ಮಕ ಪರಿಣಾಮ ಉಂಟಾಗುತ್ತದೆ.

ಮೊಬೈಲ್‌ನಲ್ಲಿನ ಇಲೆಕ್ಟ್ರೋ ಮ್ಯಾಗ್ನಟಿಕ್‌

ಮೊಬೈಲ್‌ನಲ್ಲಿನ ಇಲೆಕ್ಟ್ರೋ ಮ್ಯಾಗ್ನಟಿಕ್‌

ಶಾಖ ಮತ್ತು ಇಲೆಕ್ಟ್ರೋ ಮ್ಯಾಗ್ನಟಿಕ್‌ ಚಟವಟಿಕೆಯು ಮೊಬೈಲ್‌ನಲ್ಲಿ ಏರ್ಪಟ್ಟು ವೀರ್ಯ ಉತ್ಪಾದನೆಯಲ್ಲಿ ಪಾತ್ರವಹಿಸಿ ವೀರ್ಯ ನಾಶಹೊಂದಲು ಕಾರಣವಾಗುತ್ತದೆ ಎನ್ನಲಾಗಿದೆ.

ಬ್ರಿಟಿಷ್‌ ವೀರ್ಯ ತಜ್ಞರಿಂದ ಸಲಹೆ

ಬ್ರಿಟಿಷ್‌ ವೀರ್ಯ ತಜ್ಞರಿಂದ ಸಲಹೆ

ಬ್ರಿಟಿಷ್‌ ವೀರ್ಯ ತಜ್ಞರು ಮೊಬೈಲ್‌ ಬಳಕೆಯಿಂದ ವೀರ್ಯ ಉತ್ಪಾದನೆ ಕುಂಟಿತಗೊಳ್ಳುವ ಬಗ್ಗೆ ಸಂಶೋಧನೆ ನಡೆಸಿ, ಪುರುಷರು ಹೆಚ್ಚು ಮೊಬೈಲ್‌ ಬಳಸುವ ಹವ್ಯಾಸಕ್ಕೆ ಎಚ್ಚರ ನೀಡಿದ್ದಾರೆ.

ಇಸ್ರೇಲಿ ವಿಜ್ಞಾನಿಗಳಿಂದ ಮೇಲ್ವಿಚಾರಣೆ

ಇಸ್ರೇಲಿ ವಿಜ್ಞಾನಿಗಳಿಂದ ಮೇಲ್ವಿಚಾರಣೆ

ಇಸ್ರೇಲಿ ವಿಜ್ಞಾನಿಗಳು ಗರ್ಭಧಾನ ಕ್ಲಿನಿಕ್‌ನಲ್ಲಿ ಒಂದು ವರ್ಷಗಳ ಕಾಲ 106 ಪುರುಷರ ಮೇಲೆ ಗಮನವಿಟ್ಟು ಪರೀಕ್ಷೆ ನಡೆಸಿದ್ದಾರೆ.

ಸಂಶೋಧನೆಯ ಫಲಿತಾಂಶ

ಸಂಶೋಧನೆಯ ಫಲಿತಾಂಶ

ಯಾವ ಪುರುಷರು ಮೊಬೈಲ್‌ನಲ್ಲಿ 1 ಗಂಟೆಗಿಂತ ಅಧಿಕ ಸಮಯ ದಿನನಿತ್ಯ ಚಾಟಿಂಗ್ ಮಾಡುತ್ತಿರುತ್ತಾರೋ , ಹಾಗೂ ಯಾವ ಪುರುಷರು ದಿನನಿತ್ಯ ಒಂದು ಗಂಟೆ ಸಮಯ ಮೊಬೈಲ್‌ನಲ್ಲಿ ಮಾತನಾಡುತ್ತಾರೊ ಅವರು ಎರಡು ಪಟ್ಟು ವೀರ್ಯ ಗುಣಮಟ್ಟವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ಜನನಾಂಗದ ಪಕ್ಕದಲ್ಲಿ ಮೊಬೈಲ್‌ ಇರಿಸುವಿಕೆ

ಜನನಾಂಗದ ಪಕ್ಕದಲ್ಲಿ ಮೊಬೈಲ್‌ ಇರಿಸುವಿಕೆ

ಶೇಕಡ 47 ರಷ್ಟು ಪುರುಷರು ಜನನಾಂಗದಿಂದ 12 ಇಂಚಿನಷ್ಟು ದೂರದಲ್ಲಿ ಪ್ಯಾಂಟ್‌ಗಳ ಜೇಬಿನಲ್ಲಿ ಮೊಬೈಲ್‌ ಇರಿಸಿದ್ದರು ಸಹ ಅವರ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸಂತಾನದಲ್ಲಿ ವಿಳಂಬ

ಸಂತಾನದಲ್ಲಿ ವಿಳಂಬ

ಯಾವ ಪುರುಷರು ಒಂದು ವರ್ಷದಿಂದ ಸಂತಾನಕ್ಕಾಗಿ ಪ್ರಯತ್ನಿಸಿ ಫಲಕಾರಿಯಾಗಿಲ್ಲವೊ, ಅಂತಹವರು ಖಂಡಿತವಾಗಿ ತಾವು ಮೊಬೈಲ್‌ ಬಳಸುವ ಹವ್ಯಾಸ ಕಾರಣ ಎಂದು ಚಿಂತಿಸಬೇಕಾಗಿದೆ. ಕಾರಣ ಪಶ್ಷಿಮ ದೇಶಗಳಲ್ಲಿ ಈ ರೀತಿಯ ಕಾರಣದಿಂದ ಶೇಕಡ 40 ರಷ್ಟು ದಂಪತಿಗಳಿಗೆ ಸಂತಾನ ಭಾಗ್ಯ ದೊರೆತಿಲ್ಲ ಎನ್ನಲಾಗಿದೆ ಎಂದು ಅಧ್ಯಯನ ಕುರಿತ ವರದಿಯಲ್ಲಿ ಹೇಳಲಾಗಿದೆ.

 Pro. Gedis Grudzinskas

Pro. Gedis Grudzinskas

Pro. Gedis Grudzinskas ರವರು, ಸೆಂಟ್‌ ಜಾರ್ಜ್‌ ಆಸ್ಪತ್ರೆಯ ವೀರ್ಯ ತಜ್ಞರಾಗಿದ್ದು " ಪುರುಷರು ಮೊಬೈಲ್‌ ಬಳಕೆಯ ಅತಿಯಾದ ಗೀಳು ಹವ್ಯಾಸದ ಬಗ್ಗೆ ಚಿಂತಿಸಿ ಅದನ್ನು ಆದಷ್ಟು ಕಡಿಮೆ ಬಳಕೆ ಮಾಡುವ, ಹಾಗೂ ಚಾರ್ಜಿಂಗ್ ಮಾಡುವ ವೇಳೆ ದೂರವಿರಿಸುವ ಕ್ರಮ ಕೈಗೊಳ್ಳಬೇಕು" ಎಂದು ಸಲಹೆ ನೀಡಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
Men who talk on their cell phones for an hour a day 'are have low sperm quality'. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X