ಮೆಟಾ ಕಂಪೆನಿಯಿಂದ ಭಾರತದಲ್ಲಿ 3D ಅವತಾರ್‌ ಬಿಡುಗಡೆ! ವಿಶೇಷತೆ ಏನು?

|

ಮೆಟಾ ಕಂಪೆನಿ ತನ್ನ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ 3D ಅವತಾರ್‌ಗಳನ್ನು ಪರಿಚಯಿಸಿದೆ. ಸದ್ಯ ಭಾರತದಲ್ಲಿ ಮೊದಲ ಬಾರಿಗೆ ಈ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದ್ದು, ಬಳಕೆದಾರರಿಗೆ ತಾವೇ 3D ಅವತಾರಗಳನ್ನು ರಚಿಸಲು ಅವಕಾಶ ಮಾಡಿಕೊಟ್ಟಿದೆ. ಇನ್ನು ನಿಮ್ಮ 3D ಅವತಾರ್ ನಿಮ್ಮ ಕಾರ್ಟೂನ್ ಆವೃತ್ತಿಯಾಗಿರಲಿದ್ದು, ವರ್ಚುವಲ್ ಸೆಟ್ಟಿಂಗ್‌ನಲ್ಲಿ ನೀವು ಹೇಗೆ ಕಾಣುತ್ತೀರಿ ಅನ್ನೊದನ್ನ ಸೆರೆಹಿಡಿಯಲಿದೆ.

ಫೇಸ್‌ಬುಕ್‌

ಹೌದು, ಮೆಟಾ ಕಂಪೆನಿ ಭಾರತದಲ್ಲಿ ಇದೇ ಮೊದಲ ಬಾರಿಗೆ ತ್ರಿಡಿ ಅವತಾರಗಳನ್ನು ಪರಿಚಯಿಸಿದೆ. ಇದರಿಂದ ನೀವು ಕೂಡ ಇನ್ಮುಂದೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ಮೆಸೆಂಜರ್‌ನಲ್ಲಿ ತ್ರಿಡಿ ಅವತಾರಗಳನ್ನು ಕ್ರಿಯೆಟ್‌ ಮಾಡಬಹುದಾಗಿದೆ. ಈ ತ್ರಿಡಿ ಅವತಾರಗಳನ್ನು ನೀವು ಫೇಸ್‌ಬುಕ್, ಮೆಸೆಂಜರ್ ಅಪ್ಲಿಕೇಶನ್, ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ ಮತ್ತು ಡಿಎಂಗಳಲ್ಲಿ ಗಳು ಮತ್ತು ಮೆಟಾ ಕ್ವೆಸ್ಟ್ ಹೆಡ್‌ಸೆಟ್‌ನಲ್ಲಿ ಬಳಸಬಹುದಾಗಿದೆ. ಹಾಗಾದ್ರೆ ಮೆಟಾ ಪರಿಚಯಿಸಿರುವ ಹೊಸ ತ್ರಿಡಿ ಅವತಾರಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಮೆಟಾ ಪರಿಚಯಿಸಿರುವ ಅಪ್ಡೇಟ್‌ 3D ಅವತಾರ್ ಫೀಚರ್ಸ್‌ ನಿಮ್ಮ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಅನುಭವ ನೀಡಲಿದೆ. ಇನ್ನು ಈ ತ್ರಿಡಿ ಅವತಾರ್‌ನಲ್ಲಿ ಕಾಕ್ಲಿಯರ್ ಇಂಪ್ಲಾಂಟ್‌ಗಳು ಮತ್ತು ಕಿವಿಯ ಮೇಲಿನ ಶ್ರವಣ ಡಿವೈಸ್‌ಗಳನ್ನು ಸೇರಿಸುವ ಆಯ್ಕೆಗಳನ್ನು ಕೂಡ ನೀಡಿದೆ. ಇದು ವೀಲ್‌ಚೇರ್‌ಗಳನ್ನು ಸಹ ಒಳಗೊಂಡಿದ್ದು, ಫೇಸ್‌ಬುಕ್‌ ಸ್ಟಿಕ್ಕರ್‌ಗಳಲ್ಲಿ ಕಾಣಿಸುತ್ತದೆ. ನಿಮ್ಮ ತ್ರಿಡಿ ಅವತಾರಗಳನ್ನು ಹೆಚ್ಚು ಅಧಿಕೃತಗೊಳಿಸಲು ಕೆಲವು ಮುಖದ ಆಕಾರಗಳು ಮತ್ತು ಸ್ಕಿನ್ ಶೇಡರ್‌ಗಳಿಗೆ ಮೆಟಾ ಸೂಕ್ಷ್ಮ ಸೆಟ್ಟಿಂಗ್ಸ್‌ಗಳನ್ನು ಕೂಡ ನೀಡಿದೆ.

ಮೆಟಾ

ಇದೀಗ ಮೆಟಾ ಪರಿಚಯಿಸಿರುವ ತ್ರೀಡಿ ಅವತಾರ್‌ ಫೀಚರ್ಸ್‌ ಭಾರತೀಯ ಬಳಕೆದಾರರಿಗೆ ಲಭ್ಯವಿದೆ. ಇದರ ಮೂಲಕ ನಿಮ್ಮದೇ ಆದ ತ್ರೀಡಿ ಅವತಾರ್‌ಗಳನ್ನು ಕ್ರಿಯೆಟ್‌ ಮಾಡಬಹುದು. ಅಲ್ಲದೆ ಇದನ್ನು ಫೇಸ್‌ಬುಕ್‌ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಿಮ್ಮದೆ ಆದ ಅವತಾರ್ ಅನ್ನು ರಚಿಸಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಮೊದಲಿಗೆ ನೀವು ನಿಮ್ಮ ಫೋನ್‌ನಲ್ಲಿ ಫೇಸ್‌ಬುಕ್‌ ಅಪ್ಲಿಕೇಶನ್‌ ತೆರೆಯಿರಿ ಮತ್ತು ಮೆನುಗೆ ಹೋಗಿ.
* ನಂತರ ಅವತಾರ್‌ಗಳಿಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ನಿಮ್ಮ ಅವತಾರ್ ಎಡಿಟ್ ಮಾಡಿ" ಆಯ್ಕೆಯ ಮೇಲೆ ಟ್ಯಾಪ್ ಮಾಡಿ
* ಇದರಲ್ಲಿ, ಉಡುಗೆಗಳು, ಮುಖದ ಆಕಾರಗಳು, ಕಣ್ಣಿನ ಆಕಾರಗಳು, ಕೇಶವಿನ್ಯಾಸ ಇತ್ಯಾದಿಗಳನ್ನು ಒಳಗೊಂಡಂತೆ ನಿಮ್ಮ ಅವತಾರ್ ಅನ್ನು ಕಸ್ಟಮೈಸ್ ಮಾಡಲು ಫೇಸ್‌ಬುಕ್‌ ನಿಮಗೆ ಅನೇಕ ಆಯ್ಕೆಗಳನ್ನು ನೀಡುತ್ತದೆ.
* ಇದರಲ್ಲಿ ನಿಮ್ಮ ಅವತಾರವನ್ನು ನಿಮ್ಮ ಇಚ್ಛೆಯಂತೆ ಕಸ್ಟಮೈಸ್ ಮಾಡಿ ಮತ್ತು ಅದನ್ನು ಕ್ರಿಯೆಟ್‌ ಮಾಡಿ.
* ನಂತರ ನೀವು ಕ್ರಿಯೆಟ್‌ ಮಾಡಿರುವ ಹೊಸ 3D ಅವತಾರ್ ಅನ್ನು ಶೇರ್‌ ಮಾಡಬಹುದಾಗಿದೆ.
* ಇದಕ್ಕಾಗಿ ನೀವು ಅವತಾರಗಳಿಗೆ ಹೋಗಿ
* ನಂತರ ಕೆಳಗಿರುವ "Share to Feed ಆಯ್ಕೆಯನ್ನು ಟ್ಯಾಪ್ ಮಾಡಿ
* ಇದೀಗ ನಿಮ್ಮ ಅವತಾರವನ್ನು ನಿಮ್ಮ ಫೀಡ್‌ನಲ್ಲಿ ಶೇರ್‌ ಮಾಡಬಹುದು.

ನೀವು ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡುವ ಮೂಲಕ ಮತ್ತು "ಅವತಾರ್" ಅನ್ನು ಟ್ಯಾಪ್ ಮಾಡುವ ಮೂಲಕ ತ್ರಿಡಿ ಅವತಾರ್‌ ಅನ್ನು ಶೇರ್‌ ಮಾಡಬಹುದಾಗಿದೆ.

ಇನ್ನು ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ತ್ರೀಡಿ ಅವತಾರ್‌ಗಳನ್ನು ಶೇರ್‌ ಮಾಡುವುದು ಹೇಗೆ?

ಇನ್ನು ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ತ್ರೀಡಿ ಅವತಾರ್‌ಗಳನ್ನು ಶೇರ್‌ ಮಾಡುವುದು ಹೇಗೆ?

ಮೆಸೆಂಜರ್ ಚಾಟ್‌ಗಳಲ್ಲಿ ನಿಮ್ಮ ಅವತಾರ್‌ನ ಸ್ಟಿಕ್ಕರ್‌ಗಳನ್ನು ನೀವು ಹೇಗೆ ಕಳುಹಿಸಬಹುದು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

* ಮೊದಲಿಗೆ ನೀವು ಮೆಸೆಂಜರ್ ಅಪ್ಲಿಕೇಶನ್ ತೆರೆಯಿರಿ ಮತ್ತು ಚಾಟ್‌ ಮೇಲೆ ಟ್ಯಾಪ್ ಮಾಡಿ
* ನೀವು ನಿಮ್ಮ ಅವತಾರ್ ಸ್ಟಿಕ್ಕರ್ ಪ್ಯಾಕ್ ವೀಕ್ಷಿಸಲು ಸ್ಟಿಕ್ಕರ್‌ಗಳ ಮೇಲೆ ಟ್ಯಾಪ್ ಮಾಡಿ
* ನಂತರ ನೀವು ಕಳುಹಿಸಲು ಬಯಸುವ ಸ್ಟಿಕ್ಕರ್ ಅನ್ನು ಆರಿಸಿ ಮತ್ತು ಸೆಂಡ್‌ ಮಾಡಲು ಅದರ ಮೇಲೆ ಟ್ಯಾಪ್ ಮಾಡಿ.

Best Mobiles in India

Read more about:
English summary
Your 3D Avatar is a cartoon version of yourself that is supposed to capture how you look in a virtual setting.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X