Subscribe to Gizbot

ಪ್ರಪ್ರಥಮ ಬಾರಿಗೆ ಟ್ವಿಟ್ಟರಿನಲ್ಲಿ ಹಾಯ್ ಎಂದ ಒಬಾಮಾ ಪತ್ನಿ

Posted By:
ಪ್ರಪ್ರಥಮ ಬಾರಿಗೆ ಟ್ವಿಟ್ಟರಿನಲ್ಲಿ ಹಾಯ್ ಎಂದ ಒಬಾಮಾ ಪತ್ನಿ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಪತ್ನಿ ಮಿಷೆಲ್ ಒಬಾಮಾ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಖಾತೆ ತೆರೆದ ಒಂದು ಗಂಟೆಯಲ್ಲಿ ಆಕೆ ಒಂದು ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಪಡೆದಿದ್ದಾರೆ. ಅಂದಹಾಗೆ ಆಕೆಯ ಖಾತೆ ಹೆಸರು @michelleobama. ನೀವು ಫಾಲೊ ಮಾಡಬಹುದು.

ಆಕೆ ಟ್ಟಿಟ್ಟರ್ ಗೆ ಕಾಲಿಟ್ಟ ಕ್ಷಣದಲ್ಲಿ ಹಾಯ್ ಎಂದು ಟ್ವಿಟ್ಟಿಸಿದ್ದಾರೆ. ನಂತರ ಮಾಡಿದ ಎರಡನೇ(ಕೊನೆಯ) ಟ್ವಿಟ್ ನಲ್ಲಿ ಎಮ್ ಎಲ್ ಕೆ ಡೇ ಸೇವೆಗೆ ಸೇರಬಹುದೇ ಎಂದು ಪ್ರಶ್ನಿಸಿದ್ದಾರೆ. ಎಂಎಲ್ಕೆ ಡೇ ಒಂದು ಸಮುದಾಯ ಖಾತೆಯಾಗಿದ್ದು ಸಾಮಾಜಿಕ ಸೇವೆಗಳನ್ನು ಮಾಡುತ್ತಿದೆ.

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿರುವ ಒಬಾಮಾರ ಚುನಾವಣಾ ಕ್ಯಾಂಪೈನ್ ಹಿನ್ನಲೆಯಲ್ಲಿ ಈ ಟ್ವಿಟ್ಟರ್ ಖಾತೆ ತೆರಿದಿರುವುದಾಗಿ ಅಭಿಪ್ರಾಯಗಳು ಕೇಳಿಬರುತ್ತಿವೆ.

ಆಕೆಯನ್ನು ಲಕ್ಷ ಜನರು ಹಿಂಬಾಲಿಸಿದರೂ ಆಕೆ ಹಿಂಬಾಲಿಸಿದ್ದು ಕೇವಲ ಐದು ಟ್ವಿಟರ್ ಖಾತೆಗಳನ್ನು ಮಾತ್ರ. ಒಬಾಮಾ ಚುನಾವಣಾ ಕ್ಯಾಂಪ್ಯಾನ್ ನ ಮ್ಯಾನೆಜರ್ ಜಿಮ್ ಮೆಸ್ಸಿನಾ ಅವರನ್ನು, ಮತ್ತು ಉಳಿದವು ವೈಟ್ ಹೌಸಿಗೆ ಸಂಬಂಧಿಸಿದ ಟ್ವಿಟ್ಟರ್ ಖಾತೆಗಳಾಗಿವೆ.

ಮಿಷೆಲ್ ಒಬೆಮಾ ಅವರ ಪತಿ ಬರಾಕ್ ಖಾತೆಯನ್ನು ಕೂಡ ಹಿಂಬಾಲಿಸುತ್ತಿದ್ದಾರೆ. ಇವೆಲ್ಲ ಮುಂದಿನ ಚುನಾವಣೆಯ ಪ್ರಣಾಳಿಕೆಗಳಂತೆ ಕಾಣುತ್ತದೆ. ಬರಾಕ್ ಒಬಾಮಾರ ಟ್ವಿಟ್ಟರ್ ಖಾತೆಯನ್ನು ಈಗಾಗಲೇ 1.1 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ.

'ನಮ್ಮ ಖಾಸಗಿ ಜೀವನದ ಸಂಗತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು" ಎಂದು ಇತ್ತೀಚೆಗೆ ತನ್ನ ಮಕ್ಕಳಿಗೆ ಒಬಾಮಾ ಕಿವಿಮಾತು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಚುನಾವಣೆ ಹಿನ್ನಲೆಯಲ್ಲಿ ಟ್ವಿಟ್ಟರ್ ಖಾತೆ ತೆರೆಯುವಂತೆ ಪತ್ನಿಗೆ ಒಬಾಮಾ ಕಿವಿಮಾತು ಹೇಳಿರಬಹುದೇ ಗೊತ್ತಿಲ್ಲ.

Read In English

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot