ಗೂಗಲ್‌ ಪ್ಲೇ ಸ್ಟೋರ್‌ನಿಂದ ಮಿತ್ರಾನ್‌ ಆಪ್‌ಗೆ ಗೇಟ್‌ಪಾಸ್‌!

|

ಇತ್ತೀಚಿನ ದಿನಗಳಲ್ಲಿ ಟಿಕ್‌ಟಾಕ್‌ಗೆ ಪ್ರತಿಸ್ಫರ್ದಿಯಾಗಿ ಭಾರತದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಮಿತ್ರಾನ್‌ ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ. ಚೀನಿ ಆಪ್‌ ಅನ್ನು ರಿಮೋವ್‌ ಮಾಡಿ ಸ್ವದೇಶಿ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ ಎಂಬ ಅಭಿಯಾನಕ್ಕೆ ಪೂರಕವಾಗಿ ಭಾರತದಲ್ಲಿ ಮಿತ್ರಾನ್‌ ಆಪ್‌ ಜನಪ್ರಿಯತೆಯನ್ನ ಗಳಿಸಿಕೊಂಡಿತ್ತು. ಅಷ್ಟೇ ಅಲ್ಲ ಕೆಲವೇ ದಿನಗಳ ಅಂತರದಲ್ಲಿ ಕೊಟ್ಯಾಂತರ ಭಾರತೀಯರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹೋಗಿ ಡೌನ್‌ಲೋಡ್‌ ಮಾಡಿಕೊಂಡಿದ್ದರು, ಆದರೆ ಇದೀಗ ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದಲೇ ಮಿತ್ರಾನ್‌ ಆಪ್‌ಗೆ ಗೇಟ್ ಪಾಸ್‌ ನೀಡಿದೆ.

ಮಿತ್ರಾನ್‌ ಆಪ್‌

ಹೌದು, ಟಿಕ್‌ಟಾಕ್‌ಗೆ ಪ್ರತಿಸ್ಪರ್ಧಿ ಅಂತಾನೆ ಸಂಚಲನ ಮೂಡಿಸಿದ್ದ ಮಿತ್ರಾನ್‌ ಆಪ್‌ಗೆ ಸಧ್ಯಕ್ಕೆ ಗೇಟ್‌ಪಾಸ್‌ ನೀಡಲಾಗಿದೆ. ಇದಕ್ಕೆ ಕಾರಣವಾಗಿರೋದು ಮಿತ್ರಾನ್‌ ಆಪ್‌ನಲ್ಲಿ ಇರುವ ಭದ್ರತಾ ದೋಷಗಳು ಎಂದು ಗೂಗಲ್‌ ಪ್ಲೇ ಸ್ಟೋರ್‌ ಹೇಳಿಕೊಂಡಿದೆ. ಇದಲ್ಲದೆ ಮಿತ್ರಾನ್‌ ಆಪ್‌ನಲ್ಲಿ ಕೆಲವು ನೀತಿ ನಿಯಮಗಳನ್ನ ಗಾಳಿಗೆ ತೂರಲಾಗಿದೆ ಎಂದು ಸಹ ಹೇಳಲಾಗಿದೆ. ಹಾಗಾದ್ರೆ ಮಿತ್ರಾನ್‌ ಆಪ್‌ ನಲ್ಲಿ ಕಂಡು ಬಂದಿರುವ ಭದ್ರತಾ ದುರ್ಬಲತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮಿತ್ರಾನ್‌ ಅಪ್ಲಿಕೇಶನ್

ಸದ್ಯ ಮಿತ್ರಾನ್‌ ಅಪ್ಲಿಕೇಶನ್ ಅನ್ನು ಈಗ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಕೆಲವು ನೀತಿ ನಿಯಮಗಳ ಉಲ್ಲಂಘನೆಗಳಿಂದಾಗಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಗೂಗಲ್‌ ಅಪ್ಲಿಕೇಶನ್ ಅನ್ನು ಅಳಿಸಿದೆ. ಸದ್ಯ ಮಿತ್ರಾನ್‌ ಅಪ್ಲಿಕೇಶನ್ ಕಂಪನಿಯ ಸ್ಪ್ಯಾಮ್ ಮತ್ತು ಕ್ರಿಯಾತ್ಮಕತೆ ನೀತಿಯನ್ನು ಉಲ್ಲಂಘಿಸಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಯಾವುದೇ ಮೂಲ ಮಾದರಿಯ ಬದಲಾವಣೆಗಳ್ನು ಸೇರಿಸದೆಯೇ ಇತರ ಅಪ್ಲಿಕೇಶನ್‌ಗಳಿಂದ ವಿಷಯವನ್ನು ನಕಲಿಸಿದೆ ಎಂದು ಗೂಗಲ್‌ ಮಿತ್ರಾನ್‌ ಆಪ್‌ ತೆಗೆದು ಹಾಕಲು ಕಾರಣ ನೀಡಿದೆ.

ಗೂಗಲ್‌ ಪ್ಲೇ ಸ್ಟೋರ್‌

ಇದಲ್ಲದೆ ಈಗಾಗಲೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ "ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈಗಾಗಲೇ ಇತರ ಅಪ್ಲಿಕೇಶನ್‌ಗಳಂತೆಯೇ ಅನುಭವವನ್ನು ಒದಗಿಸುವ ಅಪ್ಲಿಕೇಶನ್‌ಗಳನ್ನು ನಾವು ಅನುಮತಿಸುವುದಿಲ್ಲ. ಅನನ್ಯ ವಿಷಯ ಅಥವಾ ಸೇವೆಗಳ ರಚನೆಯ ಮೂಲಕ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಮೌಲ್ಯವನ್ನು ಒದಗಿಸಬೇಕು ಎಂದು ನೀತಿ ಹೇಳುತ್ತದೆ ಎಂದು ಗೂಗಲ್‌ ಹೇಳಿಕೊಂಡಿದೆ. ಅಲ್ಲದೆ ಮಿತ್ರಾನ್ ಅಪ್ಲಿಕೇಶನ್ ಅನ್ನು ಐಐಟಿ ರೂರ್ಕಿ ವಿದ್ಯಾರ್ಥಿಯು ಅಭಿವೃದ್ಧಿಪಡಿಸಿಲ್ಲ ಎನ್ನುವ ವಿಚಾರ ಕೂಡ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ.

ಮಿತ್ರಾನ್‌ ಆಪ್‌

ಸದ್ಯ ಮಿತ್ರಾನ್‌ ಆಪ್‌ನ ಡೆವಲಪರ್ ಕೇವಲ ಲೋಗೋವನ್ನು ಮಾತ್ರ ಬದಲಾಯಿಸಿದ್ದಾರೆ, ಅಲ್ಲದೆ ಇದರ ಮೂಲ ಸಾಪ್ಟವೇರ್‌ ಪಾಕಿಸ್ತಾನಿ ಆಪ್‌ನದ್ದು ಅನ್ನುವ ಮಾತು ಕೂಡ ಕೇಳಿ ಬಂದಿದೆ. ಅಷ್ಟೇ ಅಲ್ಲ ಇದನ್ನು ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ ಎಂದು ಕರೆಯುವುದಕ್ಕೆ ಹೇಗೆ ಸಾಧ್ಯ ಅನ್ನುವ ಮಾತು ಕೂಡ ಚರ್ಚೆಯಲ್ಲಿದೆ. ಇದೀಗ ಗೂಗಲ್‌ ಪ್ಲೇ ಸ್ಟೋರ್‌ ಕೂಡ ಗೇಟ್‌ಪಾಸ್‌ ನೀಡಿರೋದು ಮಿತ್ರಾನ್‌ ಆಪ್‌ನ ಭದ್ರತೆಯ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದೆ.

Most Read Articles
Best Mobiles in India

English summary
It is being reported that the Mitron app violated Google's "spam and minimum functionality" policy.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X