ಶಿಯೋಮಿಯ ಕಸ್ಟಮ್ ಆಂಡ್ರಾಯ್ಡ್ ಸ್ಕಿನ್ MIUI 12 ಭಾರತದಲ್ಲಿ ಬಿಡುಗಡೆ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ತನ್ನ ಇತ್ತೀಚಿನ ಕಸ್ಟಮ್ ಆಂಡ್ರಾಯ್ಡ್ ಸ್ಕಿನ್ MIUI 12 ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಕಸ್ಟಮ್ ಸ್ಕಿನ್‌ ಅದರ ಹಿಂದಿನ MIUI 11 ಗೆ ಹೋಲಿಸಿದರೆ ಉತ್ತಮ ಅನುಭವವನ್ನು ನೀಡುವುದಲ್ಲದೆ ಹೊಸ ಆಪ್ಡೇಟ್‌ಗಳನ್ನು ಒಳಗೊಂಡಿದೆ ಎನ್ನಲಾಗಿದೆ.ಅಲ್ಲದೆ ಈ MIUI 12 ಇಂಟರ್ಫೇಸ್ ಈಗ ಇಮೇಜ್‌ಗಳು ಮತ್ತು ಟೆಕ್ಸ್ಟ್‌ಗಳ ನಡುವಿನ ಕ್ಲಿನರ್‌ ಆಂಡ್‌ ವೈಡ್‌ ಆಂಗಲ್‌ ಅನ್ನು ಹೊಂದಿದೆ. ಇದಲ್ಲದೆ ಇದು ಹೊಸ ವಾಲ್‌ಪೇಪರ್‌ಗಳು, ಅನಿಮೇಷನ್‌ಗಳು, ಗೆಸ್ಚರ್‌ಗಳು, ವರ್ಧಿತ ಗೌಪ್ಯತೆ ನಿಯಂತ್ರಣಗಳು ಮತ್ತು ಸೂಪರ್ ವಿಷುಯಲ್ ವಿನ್ಯಾಸವನ್ನು ಸಹ ಒಳಗೊಂಡಿದೆ.

ಶಿಯೋಮಿ

ಹೌದು, ಶಿಯೋಮಿ ತನ್ನ ಹೊಸ ಕಸ್ಟಮ್‌ ಆಂಡ್ರಾಯ್ಡ್‌ ಸ್ಕಿನ್‌ MIUI12 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಲಭ್ಯವಿರುವ ಸ್ಟೋರೇಜ್‌, ಬ್ಯಾಟರಿ ಸಾಮರ್ಥ್ಯ ಮತ್ತು ಹೊಸ ಗ್ರಾಫ್‌ಗಳು ಮತ್ತು ದೃಶ್ಯ ರೇಖಾಚಿತ್ರಗಳ ರೂಪದಲ್ಲಿ ಲಭ್ಯವಿರುವ ಎಲ್ಲಾ ಪ್ರಮುಖ ಡೇಟಾವನ್ನು ಡಿಸ್‌ಪ್ಲೇ ಮಾಡಲಿದೆ. ಅಲ್ಲದೆ ಇದರಲ್ಲಿ ಕಂಟ್ರೋಲ್-ಸೆಂಟರ್ ವಿನ್ಯಾಸವನ್ನು ಸಹ ರಿಫ್ರೆಶ್ ಮಾಡಲಾಗಿದೆ. ಜೊತೆಗೆ ಇದು ಐಒಎಸ್‌ನಿಂದ ಪ್ರೇರಿತವಾಗಿದೆ ಎಂದು ಹೇಳಲಾಗ್ತಿದೆ. ಇನ್ನು ಇದು ವಾಲ್‌ಪೇಪರ್ ಬ್ಲರ್‌ ಮತ್ತು ಫಾಂಟ್ ಸೆಟ್ಟಿಂಗ್‌ ಹಾಗೂ ಆಪ್ಡೇಟ್‌ ಡಾರ್ಕ್ ಮೋಡ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಶಿಯೋಮಿಯ MIUI 12ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶಿಯೋಮಿ

ಇದೀಗ ಶಿಯೋಮಿ ಬಿಡುಗಡೆ ಮಾಡಿರುವ ಕಸ್ಟಮ್‌ ಆಂಡ್ರಾಯ್ಡ್‌ ಸ್ಕಿನ್‌ MIUI 12 ಫೀಚರ್ಸ್‌ಗಳು ಹೊಸ ಮಾದರಿಯ ಆಪ್ಡೇಟ್‌ ಅನ್ನು ಹೊಂದಿವೆ. ಈ ಫೀಚರ್ಸ್‌ಗಳು ವಿನ್ಯಾಸ, ಗೌಪ್ಯತೆ, ಮಲ್ಟಿ ವರ್ಕ್‌ ಮತ್ತು ಸುರಕ್ಷತೆಯ ಮೇಲೆ ಕೇಂದ್ರೀಕರಿಸುತ್ತವೆ. ಇನ್ನು ಯುಐ ಹೊಸ ಸೂಪರ್ ವಿಷುಯಲ್ ವಿನ್ಯಾಸವನ್ನು ಹೊಂದಿದೆ, ಇದು ಲಭ್ಯವಿರುವ ಸ್ಟೋರೇಜ್‌, ಬ್ಯಾಟರಿ ಸಾಮರ್ಥ್ಯವನ್ನು ಹೊಸ ಗ್ರಾಫ್ ಮತ್ತು ವಿಶ್ಯುಯಲ್‌ ರೇಖಾಚಿತ್ರಗಳ ರೂಪದಲ್ಲಿ ಡಿಸ್‌ಪ್ಲೇ ಮಾಡಲಿದೆ. ಅಲ್ಲದೆ ಇದು ಕಣ್ಣಿಗೆ ಹೆಚ್ಚು ತಂಪನ್ನು ನೀಡಲಿದ್ದು, ಡೈನಾಮಿಕ್ ಡಾರ್ಕ್ ಮೋಡ್ 2.0 ಮತ್ತು ಸನ್ಲೈಟ್ ಮೋಡ್ ಅನ್ನು ಸಹ ಒಳಗೊಂಡಿದೆ.

MIUI12

ಇನ್ನು MIUI12 ಹೊಸ ಫ್ಲೋಟಿಂಗ್ ವಿಂಡೋ, ಅಪ್ಲಿಕೇಶನ್ ಡ್ರಾಯರ್ ಹೊಂದಿರುವ ಲಾಂಚರ್ ಮತ್ತು ಸುಧಾರಿತ ಅಲ್ಟ್ರಾ ಬ್ಯಾಟರಿ ಸೇವರ್ ಮೋಡ್ ಅನ್ನು ಸಹ ಒಳಗೊಂಡಿದೆ. ಶಿಯೋಮಿ ತನ್ನ ಹೊಸ ಕಸ್ಟಮ್ ಆಂಡ್ರಾಯ್ಡ್ ಸ್ಕಿನ್‌ನಲ್ಲಿ ಭೂಮಿ, ಚಂದ್ರ ಮತ್ತು ಮಂಗಳ ಗ್ರಹಗಳ 3ಡಿ ಭೂದೃಶ್ಯಗಳ ಹೊಸ ಸೂಪರ್ ವಾಲ್‌ಪೇಪರ್‌ಗಳನ್ನು ಸಹ ಸೇರಿಸಿದೆ. ಅಲ್ಲದೆ ಈ ವಾಲ್‌ಪೇಪರ್‌ಗಳು ಪ್ರಸ್ತುತ ಥೀಮ್‌ನ ಆಧಾರದ ಮೇಲೆ ಬಣ್ಣಗಳನ್ನು ಬದಲಾಯಿಸುತ್ತವೆ ಮತ್ತು ನೀವು ಹ್ಯಾಂಡ್‌ಸೆಟ್ ಅನ್ನು ಅನ್ಲಾಕ್ ಮಾಡಿದಾಗ ಜೂಮ್ ಇನ್ ಮತ್ತು ಔಟ್‌ ಮಾಡಬಹುದಾಗಿದೆ.

ಅಪ್ಲಿಕೇಶನ್‌

ಇದಲ್ಲದೆ ನಿವು ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸುವಾಗ ಅಥವಾ ಮುಚ್ಚುವಾಗ ಮತ್ತು ನ್ಯಾವಿಗೇಷನ್ ಮಾಡಲು ಹೊಸ ಅನಿಮೇಷನ್‌ಗಳನ್ನ ಇದರಲ್ಲಿ ನೀಡಲಾಗಿದೆ. ಇನ್ನು ಹೆಚ್ಚುವರಿಯಾಗಿ, ಕಂಟ್ರೋಲ್‌ ಸೆಂಟರ್‌ ವೈ-ಫೈ, ಬ್ಲೂಟೂತ್, ಮೊಬೈಲ್ ಡೇಟಾ ಮತ್ತು ದುಂಡಾದ ಆಯತಾಕಾರದ ಗುಂಡಿಗಳೊಂದಿಗೆ ಹೆಚ್ಚಿನ ಗ್ರಿಡ್ ಮಾದರಿಯ ಇನ್ಸಟಂಟ್‌ ಸೆಟ್ಟಿಂಗ್ ಶಾರ್ಟ್‌ಕಟ್‌ಗಳನ್ನು ಹೊಂದಿದೆ. ಗೌಪ್ಯತೆಗೆ ಸಂಬಂಧಿಸಿದಂತೆ, MIUI 12 ಅಪ್ಲಿಕೇಶನ್ ಅನುಮತಿಗಳು ಮತ್ತು ಸೂಕ್ಷ್ಮ ಮಾಹಿತಿಯನ್ನು ಮೇಲ್ವಿಚಾರಣೆ ಮಾಡಬಹುದಾಗಿದೆ.

Best Mobiles in India

English summary
MIUI 12 brings a design overhaul and is rolling out to some Xiaomi phones in India already.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X