ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ ಸಾಧ್ಯತೆ? ಏಕೆ? ಇಲ್ಲಿದೆ ವಿವರ?

|

ನೀವು ಹೊಸ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದುಕೊಂಡಿದ್ದೀರಾ? ಹಾಗಾದ್ರೆ ನೀವು ಸದ್ಯದಲ್ಲೇ ಸ್ಮಾರ್ಟ್‌ಫೋನ್‌ ಖರೀದಿಸುವುದು ಉತ್ತಮ. ಯಾಕಂದ್ರೆ ಭಾರತದಲ್ಲಿ ಕೆಲವು ದಿನಗಳ ನಂತರ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆಯಾಗುವ ಸಾದ್ಯತೆಯಿದೆ. ಆದರಿಂದ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂದುಕೊಂಡವರ ಜೇಬಿಗೆ ಕತ್ತರಿ ಬೀಳುವುದು ಪಕ್ಕಾ ಆಗಲಿದೆ. ಸದ್ಯ ಭಾರತದಲ್ಲಿ ಬಜೆಟ್‌ ಬೆಲೆಯಿಂದ ಹಿಡಿದು ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಬೆಲೆ ಕೂಡ ಹೆಚ್ಚಾಗಲಿದೆ ಎನ್ನಲಾಗಿದೆ.

ಭಾರತದಲ್ಲಿ

ಹೌದು, ಭಾರತದಲ್ಲಿ ಶೀಘ್ರದಲ್ಲೇ ಮೇಡ್‌ ಇನ್‌ ಇಂಡಿಯಾ ಮೊಬೈಲ್‌ ಫೋನ್‌ಗಳ ಬೆಲೆ ಏರಿಕೆಯಾಗುವ ಸಾದ್ಯತೆಯಿದೆ. ಇದರಿಂದ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂದು ಕೊಂಡವರು ಇಂದಿಗಿಂತ ಹೆಚ್ಚಿನ ಬೆಲೆಯನ್ನು ನೀಡಬೇಕಾಗಬಹುದು. ಭಾರತದಲ್ಲಿ ಮೊಬೈಲ್‌ ಫೋನ್‌ಗಳ ಬಿಡಿ ಘಟಕಗಳ ಮೇಲೆ ವಿಧಿಸಲಾಗುತ್ತಿರುವ ಹೆಚ್ಚಿನ ಕಸ್ಟಮ್‌ ಟ್ಯಾಕ್ಸ್‌ ಇದೆಲ್ಲದಕ್ಕೀ ಕಾರಣ ಎನ್ನಲಾಗ್ತಿದೆ. ಫೋನ್‌ ಬಿಡಿಭಾಗಗಳ ಮೇಲೆ ಟ್ಯಾಕ್ಸ್‌ ಹೆಚ್ಚಾದರೆ ಅದರ ಹೆಚ್ಚುವರಿ ವೆಚ್ಚ ಗ್ರಾಹಕರ ಮೇಲೆ ಬೀಳಲಿದೆ. ಇದರಿಂದ ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚಾಗುವ ಸಾದ್ಯತೆಯಿದೆ. ಹಾಗಾದ್ರೆ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚಳಕ್ಕೆ ಅಸಲಿ ಕಾರಣ ಏನು? ಇದೆಲ್ಲದರ ಪರಿಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸ್ಮಾರ್ಟ್‌ಫೋನ್‌

ಸದ್ಯದಲ್ಲೇ ಸ್ಮಾರ್ಟ್‌ಫೋನ್‌ ಪ್ರಿಯರು ಬೆಲೆ ಏರಿಕೆಯ ಬಿಸಿ ಅನುಭವಿಸುವ ಸಾಧ್ಯತೆಯಿದೆ. ಮೊಬೈಲ್‌ ಬಿಡಿಭಾಗಗಳ ಮೇಲೆ ಕಸ್ಟಮ್‌ ಟ್ಯಾಕ್ಸ್‌ನಲ್ಲಾಗುವ ಬದಲಾವಣೆ ಪರೊಕ್ಷವಾಗಿ ಗ್ರಾಹಕರ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗಿದೆ. ಮೊಬೈಲ್ ಫೋನ್‌ಗಳಲ್ಲಿ ಬಳಸುವ ಇನ್‌ಪುಟ್‌ಗಳ ಆಧಾರದ ಮೇಲೆ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಗುತ್ತದೆ ಎಂದು ಅಪೆಕ್ಸ್ ಇನ್‌ಡೈರೆಕ್ಟ್ ಟ್ಯಾಕ್ಸ್ ಆದೇಶವನ್ನು ಹೊರಡಿಸಿದೆ. ಇದು ಸ್ಮಾರ್ಟ್‌ಫೋನ್‌ ವಲಯದಲ್ಲಿ ಬೆಲೆ ಏರಿಕೆಯ ಸುಳಿವನ್ನು ನೀಡಿದೆ.

ಡಿಸ್‌ಪ್ಲೇ

ಅಂದರೆ ಪಿಟಿಐನ ವರದಿಯ ಪ್ರಕಾರ, ಭಾರತದಲ್ಲಿ ಬ್ಯಾಕ್ ಸಪೋರ್ಟ್ ಫ್ರೇಮ್‌ಗಳ ಜೊತೆಗೆ ಇಂಪೋರ್ಟ್‌ ಡಿಸ್‌ಪ್ಲೇ ಅಸೆಂಬ್ಲಿ ಆಪ್‌ ಸ್ಮಾರ್ಟ್‌ಫೋನ್‌ ಮೂಲ ಕಸ್ಟಮ್ ಡ್ಯೂಟಿ 10% ಆಗಿದೆ. ಆದರೆ, ಡಿಸ್‌ಪ್ಲೇ ಜೋಡಣೆಯೊಂದಿಗೆ ಆಂಟೆನಾ ಪಿನ್, ಪವರ್ ಕೀಗಳು ಮತ್ತು ಇತರ ಘಟಕಗಳನ್ನು ಆಮದು ಮಾಡಿಕೊಂಡರೆ, ಕಸ್ಟಮ್ ಸುಂಕದ 5% ಹೆಚ್ಚಾಗುತ್ತದೆ. ಇದರಿಂದ ಒಟ್ಟು ಶುಲ್ಕವು 15% ಇರಲಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್‌ ಇಂನ್‌ಡೈರೆಕ್ಟ್ ಟ್ಯಾಕ್ಸಸ್‌ ಅಂಡ್ ಕಸ್ಟಮ್ಸ್ (CBIC) ಹೇಳಿದೆ. ಇದರಿಂದ ಫೋನ್‌ಗಳಿಗೆ ಬಳಸುವ ಬಿಡಿಭಾಗಗಳ ಮೇಲೆ ಹೆಚ್ಚಿನ ಟ್ಯಾಕ್ಸ್‌ ಬೀಳಲಿದೆ.

ಪವರ್

ಸ್ಮಾರ್ಟ್‌ಫೋನ್‌ಗಳ ಬಿಡಿ ಭಾಗಗಳಾದ ಸಿಮ್ ಟ್ರೇ, ಆಂಟೆನಾ ಪಿನ್, ಸ್ಪೀಕರ್ ನೆಟ್, ಪವರ್ ಕೀ, ಸ್ಲೈಡರ್ ಸ್ವಿಚ್, ಬ್ಯಾಟರಿ ವಿಭಾಗ, ಫ್ಲೆಕ್ಸಿಬಲ್ ಪ್ರಿಂಟೆಡ್ ಸರ್ಕ್ಯೂಟ್‌ಗಳು (ಎಫ್‌ಪಿಸಿಗಳು) ವಾಲ್ಯೂಮ್, ಪವರ್, ಸೆನ್ಸರ್‌ಗಳು, ಸ್ಪೀಕರ್‌ಗಳು, ಫಿಂಗರ್‌ಪ್ರಿಂಟ್ ಇತ್ಯಾದಿ ಯಾವುದೇ ಇತರ ಐಟಂಗಳನ್ನು ಡಿಸ್‌ಪ್ಲೇ ಅಸೆಂಬ್ಲಿಯೊಂದಿಗೆ ಅಳವಡಿಸಲಾಗಿದೆ. ಇದರಿಂದ ಲೋಹ/ಪ್ಲಾಸ್ಟಿಕ್‌ನ ಬ್ಯಾಕ್ ಸಪೋರ್ಟ್ ಫ್ರೇಮ್‌ ಇಲ್ಲದೆಯೇ, ಇಡೀ ಡಿಸ್‌ಪ್ಲೇ ಅಸೆಂಬ್ಲಿಯು 15% ಬಿಸಿಡಿ ರೇಟ್‌ ಆಗಲಿದೆ ಎಂದು CBIC ಹೇಳಿದೆ.

ಸೇರಿಸಿದರೆ

ಡಿಸ್‌ಪ್ಲೇ ಅಸೆಂಬ್ಲಿ ವಿಭಾಗದಲ್ಲಿ ನೀವು ಇತರೆ ಬಿಡಿಭಾಗಗಳನ್ನು ಸೇರಿಸಿದರೆ ಅದು ವಿನಾಯಿತಿ ಅಧಿಸೂಚನೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎಂದು CBIC ಹೇಳಿದೆ. ಆದರೆ ಮೊಬೈಲ್‌ ಉದ್ಯಮ ಮೊಬೈಲ್ ಫೋನ್‌ನಲ್ಲಿ ವಿಷಯವನ್ನು ಪ್ರದರ್ಶಿಸಲು ಲಗತ್ತಿಸಲಾದ ಎಲ್ಲಾ ಯೂನಿಟ್‌ಗಳನ್ನು ಡಿಸ್‌ಪ್ಲೇ ಅಸೆಂಬ್ಲಿ ಅಡಿಯಲ್ಲಿ ಪರಿಗಣಿಸಬೇಕು ಎಂದು ಹೇಳಿಕೊಂಡಿದೆ. ಮೊಬೈಲ್‌ ಉದ್ಯಮದ ಮಾತನ್ನು ಪರಿಗಣಿಸಿದರೆ ಕಸ್ಟಮ್‌ ಸುಂಕ ಕೇವಲ 10%ನಲ್ಲಿಯೇ ಉಳಿಯಲಿದೆ. ಆದರೆ ಭಾರತ ಡಿಸ್‌ಪ್ಲೇ ಅಸೆಂಬ್ಲಿ ಘಟಕಗಳ ಜೊತೆ ಇತರ ಘಟಕಗಳಿಗೂ ಕಸ್ಟಮ್ ಸುಂಕ ವಿಧಿಸಲು ಮುಂದಾಗಿದೆ.

ಕೇಂದ್ರ

ಇದನ್ನು ಸ್ಪಷ್ಟವಾಗಿ ತಿಳಿಸುವುದಕ್ಕಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಡಿಸ್‌ಪ್ಲೇ ಅಸೆಂಬ್ಲಿಗಳ ವಿವರವಾದ ಪಟ್ಟಿಯನ್ನು ಒದಗಿಸಿದೆ. ಇದರ ಪ್ರಕಾರ ಡಿಸ್‌ಪ್ಲೇ ಅಸೆಂಬ್ಲಿಯಲ್ಲಿ ಟಚ್ ಪ್ಯಾನೆಲ್, ಕವರ್ ಗ್ಲಾಸ್, ಬ್ರೈಟ್‌ನೆಸ್ ವರ್ಧನೆ ಫಿಲ್ಮ್, ಇಂಡಿಕೇಟರ್ ಗೈಡ್ ಲೈಟ್, ರಿಫ್ಲೆಕ್ಟರ್, ಎಲ್‌ಇಡಿ ಬ್ಯಾಕ್‌ಲೈಟ್, ಪೋಲರೈಸರ್‌ಗಳು ಮತ್ತು ಫ್ಲಿಬಲ್ ಪ್ರಿಂಟೆಡ್ ಸರ್ಕ್ಯೂಟ್ ನಲ್ಲಿ ಅಳವಡಿಸಲಾಗಿರುವ ಎಲ್‌ಸಿಡಿ ಡ್ರೈವರ್‌ಗಳು ಮಾತ್ರ ಬರಲಿವೆ ಎನ್ನಲಾಗಿದೆ. ಇದರಿಂದ ಒಟ್ಟು ಕಸ್ಟಮ್‌ ಟ್ಯಾಕ್ಸ್‌ 15%ಗೆ ಏರಿಕೆ ಆಗೊದು ಪಕ್ಕಾ ಆಗಿದೆ.

ವಿವೋ

ಭಾರತದಲ್ಲಿ ಚೀನಾ ಮೂಲದ ವಿವೋ ಮತ್ತು ಒಪ್ಪೋ ಕಂಪೆನಿಗಳು ಕಸ್ಟಮ್‌ ಟ್ಯಾಕ್ಸ್‌ ವಂಚನೆಯ ಪ್ರಕರಣವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಚಿಂತನೆಯನ್ನು CBIC ನಡೆಸಿದೆ. ಸೆಲ್ಯುಲಾರ್ ಫೋನ್‌ಗಳಲ್ಲಿನ ಪ್ರಮುಖ ಘಟಕಗಳ ಮೇಲಿನ ಕಸ್ಟಮ್ ಸುಂಕದ ಶುಲ್ಕಗಳ ಬಗ್ಗೆ ಸ್ಪಷ್ಟತೆ ಕೊರತೆಯ ಕಾರಣಕ್ಕೆ ಈ ರೀತಿಯ ಘಟನೆ ಜರುಗಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಮೊಬೈಲ್‌ ಘಟನಕಗಳ ಮೇಲಿನ ಕಸ್ಟಂ ಟ್ಯಾಕ್ಸ್‌ ಬಗ್ಗೆ ಪರಿಪೂರ್ಣ ಮಾಹಿತಿ ನೀಡಲು CBIC ಮುಂದಾಗಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚಳವಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗಿದೆ.

Best Mobiles in India

English summary
Mobile phones price colud increase in the near future in india.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X