ಮೊಬೈಲ್‌ನಲ್ಲಿ ಫೋಟೊ ತೆಗೆಯುವಾಗ ಈ ರೀತಿಯ ಟಿಪ್ಸ್‌ ಬಳಸಿ; ಆಮೇಲೆ ನೋಡಿ!

|

ಪ್ರಸ್ತುತ ಎಲ್ಲರೂ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿದ್ದಾರೆ. ದೀಪಗಳ ಅಲಂಕಾರ ಸೇರಿದಂತೆ ಹಬ್ಬದ ಇತರೆ ಸಂಭ್ರಮದ ಕ್ಷಣಗಳನ್ನು ಅತ್ಯುತ್ತಮ ಫೋಟೊ ಮೂಲಕ ಸೆರೆಹಿಡಿಯಲು ಇಚ್ಛಿಸುತ್ತಾರೆ. ಸದ್ಯ, ಅನೇಕರ ಬಳಿ ಉತ್ತಮ ಕ್ಯಾಮೆರಾ ಸೆನ್ಸಾರ್‌ನ ಫೋನ್‌ಗಳು ಇದ್ದು, ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿಯಬಹುದಾಗಿದೆ. ಜೊತೆಗೆ ಫೋಟೊಗ್ರಫಿ ಬಗ್ಗೆ ಆಸಕ್ತಿ ಇದ್ದರೆ ಉತ್ತಮ ಫೋಟೊಗಳು ಖಂಡಿತಾ ಸಾಧ್ಯ.

ಕ್ಷಣಗಳನ್ನು

ಹೌದು, ಹಬ್ಬದ ವೇಳೆ ಕೆಲವು ಸಂತಸದ ಕ್ಷಣಗಳನ್ನು ಪ್ರತಿಯೊಬ್ಬರು ತಮ್ಮ ಬಳಿ ಇರುವ ಫೋನ್‌ಗಳಲ್ಲಿ ಫೋಟೊ ಕ್ಲಿಕ್ಕಿಸಲು ಮುಂದಾಗುತ್ತಾರೆ. ಇನ್ನು ಬಳಕೆದಾರರು ತಮ್ಮ ಬಳಿ ಇರುವ ಸ್ಮಾರ್ಟ್‌ಫೋನಿನಲ್ಲಿಯೇ ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿಯಬಹುದಾಗಿದೆ. ಆದರೆ ಫೋಟೊ ಕ್ಲಿಕ್ಕಿಸುವಾಗ ಫೋಟೊಗ್ರಫಿ ಬೇಸಿಕ್ ಕ್ರಮಗಳನ್ನು ಮರೆಯದೆ ಅನುಸರಿಸಬೇಕು. ಹಾಗಾದರೆ ನಿಮ್ಮ ಫೋನಿನಲ್ಲಿಯೇ ಅತ್ಯುತ್ತಮ ಫೋಟೊಗಳನ್ನು ಕ್ಲಿಕ್ ಮಾಡಲು ಯಾವೆಲ್ಲಾ ಕ್ರಮಗಳನ್ನು ಫಾಲೋ ಮಾಡಬೇಕು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೋನ್‌ ಫೋಟೊಗಳಿಗೆ ಸಿದ್ಧವಾಗಿರಲಿ

ಫೋನ್‌ ಫೋಟೊಗಳಿಗೆ ಸಿದ್ಧವಾಗಿರಲಿ

ಸ್ಮಾರ್ಟ್‌ಫೋನ್‌ ಮೂಲಕ ಫೋಟೊಗಳನ್ನು ಸೆರೆಹಿಡಿಯುವ ಮುನ್ನ ನಿಮ್ಮ ಫೋನ್‌ ಕ್ಯಾಮೆರಾ ಲೆನ್ಸ್‌ ಸ್ವಚ್ಛವಾಗಿಸಿ. ಲೆನ್ಸ್‌ಗಳ ಬಗ್ಗೆ ಕಾಳಜಿ ಇರಬೇಕು ಅವುಗಳು ಸ್ವಚ್ಛವಿಲ್ಲದಿದ್ದರೇ ಫೋಟೊ ಉತ್ತಮವಾಗಿ ಮೂಡಲು ಹೇಗೆ ಸಾಧ್ಯ.? ಇದರೊಂದಿಗೆ ಫೋನಿನ ಬ್ಯಾಟರಿ ಸರಿಯಾಗಿ ಚಾರ್ಜ್ ಮಾಡಿಕೊಂಡಿರಿ. ಇದಲ್ಲದೇ ಫೋನಿನಲ್ಲಿ ಫೋಟೊಗಳು ಸೇವ್ ಆಗಲು ಸ್ಥಳಾವಕಾಶ (ಸ್ಟೋರೇಜ್‌) ಇರಲಿ. ಹಾಗೆಯೇ ಮೋಷನ್ ಟ್ರ್ಯಾಕಿಂಗ್, ಹೆಚ್‌ಆರ್‌ಡಿ ಮೋಡ್, ಗ್ರಿಡ್‌ ಲೈನ್‌ಗಳಂತಹ ಆಯ್ಕೆ ಸಕ್ರಿಯವಾಗಿರಲಿ.

ಜೂಮ್ ಮಾಡಿ, ಆದರೆ ಅತೀಯಾಗಿ ಬೇಡ

ಜೂಮ್ ಮಾಡಿ, ಆದರೆ ಅತೀಯಾಗಿ ಬೇಡ

ಹತ್ತಿರದ/ ಕ್ಲೋಸ್ ಅಪ್ ಇಮೇಜ್‌ಗಳನ್ನು ಸೆರೆಹಿಡಿಯಲು ಹಾಗೂ ಅನಗತ್ಯ ಭಾಗ ಸೆರೆಯಾಗುವುದನ್ನು ತಪ್ಪಿಸಲು (Zoom) ಝೂಮ್ ಇನ್ ಮಾಡುವುದು ಉತ್ತಮವೇ. ಆದಾಗ್ಯೂ, ಸ್ಮಾರ್ಟ್‌ಫೋನ್‌ನೊಂದಿಗೆ ಸೇರಿಸಲಾದ ಆಪ್ಟಿಕಲ್ ಟೆಲಿಫೋಟೋ ಲೆನ್ಸ್‌ನ ಮಿತಿಗೆ ಪೂರಕವಾಗಿ ಜೂಮ್ ಅನ್ನು ಬಳಸಿ. ಅದಕ್ಕೂ ಅಧಿಕ ಜೂಮ್ ಫೋಟೊಗಳ ಗುಣಮಮಟ್ಟ ಕಡಿಮೆ ಮಾಡುತ್ತಾರೆ.

ರೂಲ್‌ ಆಫ್‌ ಥರ್ಡ್ಸ್

ರೂಲ್‌ ಆಫ್‌ ಥರ್ಡ್ಸ್

ಫೋಟೊ ಸೆರೆಹಿಡಿಯುವಾಗ ಮುಖ್ಯ ವ್ಯಕ್ತಿಯ/ ಫೋಕಸ್‌ ವಸ್ತುವನ್ನು ಎಡ ಅಥವಾ ಬಲ ಭಾಗದ ಒಂದು ಬದಿಯಲ್ಲಿ ಕಾಣುವಂತೆ ಮಾಡಿ ಫೋಟೊ ಕ್ಲಿಕ್ಕಿಸುವುದೇ ಈ ನಿಯಮವಾಗಿದೆ. ಫೋಟೊಗ್ರಫಿಯಲ್ಲಿ ಬಹುತೇಕರು ಈ ನಿಯಮ ಪಾಲನೆ ಮಾಡುತ್ತಾರೆ. ಈ ರೀತಿ ಸೆರೆಹಿಡಿಯುವ ಫೋಟೊಗಳು ಆಕರ್ಷಕ ಅನಿಸುತ್ತವೆ.

ಕ್ಯಾಮೆರಾ ಕಾಳಜಿ

ಕ್ಯಾಮೆರಾ ಕಾಳಜಿ

ಅತ್ಯುತ್ತಮ ಫೋಟೊ ಸೆರೆಹಿಡಿಯಬೇಕೆಂದರೇ ಕ್ರಿಯೆಟಿವ್ ಐಡಿಯಾಗಳಿರಬೇಕು ಜೊತೆಗೆ ಸೂಕ್ತ ವಾತಾವರಣ ಆಯ್ಕೆ ಮಾಡಬೇಕು. ಇವುಗಳ ಜೊತೆಗೆ ಒಬ್ಬ ಛಾಯಾಚಿತ್ರಗಾರನಿಗೆ ಅವರು ಬಳಸುವ ಕ್ಯಾಮೆರಾ ಸ್ವಚ್ಛತೆಯ ಬಗ್ಗೆಯು ಗಮನ ನೀಡಬೇಕು.

ಕ್ಯಾಮೆರಾ ಸ್ಥಿರವಾಗಿರಲಿ ಹಿಡಿಯಿರಿ

ಕ್ಯಾಮೆರಾ ಸ್ಥಿರವಾಗಿರಲಿ ಹಿಡಿಯಿರಿ

ಫೋಟೊ ಕ್ಲಿಕ್ಕಿಸುವಾಗ ಕ್ಯಾಮೆರಾವನ್ನು ಸ್ಥಿರವಾಗಿ ಹಿಡಿಯಬೇಕು. ಒಂದು ವೇಳೆ ಕ್ಯಾಮೆರಾ ಶೇಕ್ ಮಾಡಿದರೇ ಫೋಟೊಗಳು ಬ್ಲರ್ ಆಗಿ ಮೂಡಿಬರುವ ಸಾಧ್ಯತೆಗಳು ಇರುತ್ತವೆ. ಕೈಯಿಂದ ಕ್ಯಾಮೆರಾ ಸ್ಥಿರವಾಗಿ ಹಿಡಿಯಲು ಅನುಕೂಲ ಅನಿಸದಿದ್ದರೇ ಟ್ರೈಪಾಡ್ ಬಳಕೆ ಮಾಡುವುದು ಉತ್ತಮ.

ರೆಸಲ್ಯೂಶನ್ ಉತ್ತಮವಾಗಿರಲಿ

ರೆಸಲ್ಯೂಶನ್ ಉತ್ತಮವಾಗಿರಲಿ

ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿಯುವಾಗ ಫೋಟೊಗಳ ರೆಸಲ್ಯೂಶನ್ ಬಗ್ಗೆಯೂ ಹೆಚ್ಚು ಗಮನ ನೀಡಬೇಕಿರುತ್ತದೆ. ರೆಸಲ್ಯೂಶನ್ ಉತ್ತಮವಾಗಿದ್ದರೇ ಫೋಟೊಗಳ ಸ್ಪಷ್ಟತೆ ಹೆಚ್ಚಿರುತ್ತದೆ ಹಾಗೂ ಹೈ ರೆಸಲ್ಯೂಶನ್ ಇದ್ದರೇ ಪಿಕ್ಸಲ್ ಒಡೆಯುವುದಿಲ್ಲ.

ಹೆಚ್ಚಿನ ಫೋಟೊ ಕ್ಲಿಕ್ಕಿಸಿ

ಹೆಚ್ಚಿನ ಫೋಟೊ ಕ್ಲಿಕ್ಕಿಸಿ

ವೃತ್ತಿಪರ ಛಾಯಾಗ್ರಾಹಕ ಒಂದು ಫೋಟೊ ಸೆರೆಹಿಡಿಯುವಾಗ ಹೆಚ್ಚಿನ ಕ್ಲಿಕ್ಕ್‌ಗಳನ್ನು ಮಾಡಿರುತ್ತಾರೆ. ಅವುಗಳಲ್ಲಿ ಅತ್ಯುತ್ತಮವಾದ ಒಂದೆರಡನ್ನು ಫೈನಲ್ ಮಾಡುತ್ತಾರೆ. ಹಾಗೆಯೇ ಫೋಟೊ ಸೆರೆಹಿಡಿಯುವಾಗ ಕೇವಲ ಒಂದೇ ಕ್ಲಿಕ್ ಮಾಡುವ ಬದಲು ಕೆಲವು ಹೆಚ್ಚಿನ ಕ್ಲಿಕ್ ಮಾಡಿಕೊಳ್ಳಿ ಮತ್ತು ನಂತರ ಅವುಗಳಲ್ಲಿ ಅತ್ಯುತ್ತವಾದ ಒಂದು ಅಥವಾ ಎರಡು ಫೋಟೊಗಳನ್ನು ಆಯ್ದುಕೊಳ್ಳಿರಿ.

Best Mobiles in India

English summary
Mobile Photography: Few best tips to take photos from your Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X