ಯೂಟ್ಯೂಬ್‌ನಲ್ಲಿ ಭಾರಿ ಟ್ರೆಂಡ್‌ ಹುಟ್ಟು ಹಾಕಿರುವ ವಿಡಿಯೊಗಳು ಯಾವುವು ಗೊತ್ತಾ?

|

ಈ ಹಿಂದೆ ವಿಡಿಯೊ ಕಾರ್ಯಕ್ರಮಗಳನ್ನು ವೀಕ್ಷಿಸಲು ಟಿವಿಯೊಂದೇ ಆಧಾರವಾಗಿತ್ತು. ಆದರೆ ಸದ್ಯ ಪ್ರೇಕ್ಷಕರಿಗೆ ವಿಡಿಯೊ ಮನರಂಜನೆಗಾಗಿ ಸಾಕಷ್ಟು ಆಯ್ಕೆಗಳು ಲಭ್ಯವಿದ್ದು, ಇಂಟರ್ನೆಟ್‌ ಅದಕ್ಕೆ ಸೂಕ್ತ ಪ್ಲಾಟ್‌ಫಾರ್ಮ್ ಒದಗಿಸಿದೆ. ಆ ಪೈಕಿ ಯೂಟ್ಯೂಬ್ ಸಹ ಒಂದಾಗಿದ್ದು, ವಿಶ್ವದಲ್ಲಿಯೇ ಅಧಿಕ ವೀಕ್ಷಕರನ್ನು ಒಳಗೊಂಡಿದೆ. ಈ ವಿಡಿಯೊ ತಾಣದಲ್ಲಿ ಇಂತಹ ವಿಷಯದ ವಿಡಿಯೊಗಳು ಮಾಹಿತಿ ಸಿಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ಏಕೆಂದರೇ ಯೂಟ್ಯೂಬ್ ವಿಡಿಯೊ ಮಾಹಿತಿಗಳ ಕಣಜವಾಗಿದೆ.

ಗೂಗಲ್ ಒಡೆತನ

ಹೌದು, ಗೂಗಲ್ ಒಡೆತನದ ಯೂಟ್ಯೂಬ್‌ನಲ್ಲಿ ಹೆಚ್ಚಿನ ಜನ ಸಕ್ರಿಯವಾಗಿರುತ್ತಾರೆ. ಅದೇ ರೀತಿ 2019ರಲ್ಲಿಯೂ ಯೂಟ್ಯೂಬ್‌ ವಿಡಿಯೊಗಳನ್ನು ವೀಕ್ಷಿಸಿದವರ ಸಂಖ್ಯೆಯೆನು ಕಡಿಮೆಯಿಲ್ಲ. ಆದರೆ ಈ ವರ್ಷ ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ವೀಕ್ಷಣೆಗೊಂಡ ವಿಡಿಯೊಗಳು ಯಾವುವು ಎನ್ನುವುದನ್ನು ತಿಳಿಯಲು ಎಲ್ಲರಲ್ಲೂ ಕುತೂಹಲ ಇದ್ದೆ ಇರುತ್ತದೆ. ಅದಕ್ಕಾಗಿ ಇಂದಿನ ಈ ಲೇಖನದಲ್ಲಿ 2019ರಲ್ಲಿ ಅತೀ ಹೆಚ್ಚು ವೀಕ್ಷಣೆಗೊಂಡ ಯೂಟ್ಯೂಬ್ ವಿಡಿಯೊಗಳು ಯಾವುವು ಎಂಬದನ್ನು ತಿಳಿಸಲಾಗಿದೆ. ಮುಂದೆ ಓದಿರಿ.

ಡೆಸ್ಪಾಸಿಟೊ - Despacito

ಡೆಸ್ಪಾಸಿಟೊ - Despacito

ಡೆಸ್ಪಾಸಿಟೊ-Despacito-Luis Fonsi ft. Daddy Yankee-ಇದೊಂದು ಸ್ಪಾನಿಶ್ ಹಾಡಾಗಿದ್ದು, 2019ರಲ್ಲಿ ಅಧಿಕ ವೀಕ್ಷಣೆಯನ್ನು ಪಡೆದಿದೆ. ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿರುವ ಈ ಹಾಡು ಯೂಟ್ಯೂಬ್‌ನಲ್ಲಿ ಒಟ್ಟು 6.57 ಬಿಲಿಯನ್ ವೀಕ್ಷಣೆಯನ್ನು ಪಡೆದು ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. 2017ರಿಂದಯೂ ಸಹ ಈ ಸ್ಪಾನಿಶ್ ಹಾಡು ಹೆಚ್ಚು ವೀಕ್ಷಣೆ ಪಡೆಯುತ್ತ ಸಾಗಿದೆ ಅನ್ನೊದು ವಿಶೇಷವಾಗಿದೆ.

ಶೇಪ್‌ ಆಫ್‌ ಯು- Shape of You – Ed Sheeran

ಶೇಪ್‌ ಆಫ್‌ ಯು- Shape of You – Ed Sheeran

ಎಡ್ ಶೀರನ್ ಅವರ - ಶೇಪ್ ಆಫ್ ಯು ಹಾಡು ಸಂಗೀತ ಉದ್ಯಮದಲ್ಲಿಯೇ ಹೆಚ್ಚು ಟ್ರೆಂಡಿಂಗ್‌ನಲ್ಲಿ ಗುರುತಿಸಿಕೊಂಡಿದೆ. ಇನ್ನು ಈ ವಿಡಿಯೊ ಒಟ್ಟು 4.53 ಬಿಲಿಯನ್ ವೀಕ್ಷಣೆಗಳೊಂದಿಗೆ ಹೆಚ್ಚು ವೀಕ್ಷಿಸಿಣೆ ಪಡೆದ ಯೂಟ್ಯೂಬ್ ವಿಡಿಯೊಗಳ ಲಿಸ್ಟ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. 2017 ರಲ್ಲಿ ಬಿಡುಗಡೆಯಾದ ಇದು ಗ್ರ್ಯಾಮಿ ಮತ್ತು ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್ ಸೇರಿದಂತೆ ಪ್ರಶಂಸೆಯನ್ನು ಗಳಿಸಿದೆ.

ಸೀ ಯು ಅಗೇನ್- See You Again

ಸೀ ಯು ಅಗೇನ್- See You Again

ಸೀ ಯು ಅಗೇನ್- ಈ ಹಾಡನ್ನು ಫಾಸ್ಟ್‌ ಅಂಡ್ ಫ್ಯೂರಿಯಸ್‌ 7 ಚಿತ್ರಕ್ಕಾಗಿ (See You Again-Wiz Khalifa ft. Charlie Puth) ಬರೆಯಲಾಗಿದ್ದು, ರಾಪರ್ ವಿಜ್ ಖಲೀಫಾ ಚಾರ್ಲಿ ಪಾತ್ ಅವರು ಈ ಹಾಡನ್ನು ಬರೆದಿದ್ದಾರೆ. ಇನ್ನು ಈ ಹಾಡು ಸಹ ಯೂಟ್ಯೂಬ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಒಟ್ಟು 4.34 ಬಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡು ಟಾಪ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ.

ಮಾಶಾ ಆಂಡ್ ಬೇಯರ್ - Masha and the Bear: Recipe for Disaster

ಮಾಶಾ ಆಂಡ್ ಬೇಯರ್ - Masha and the Bear: Recipe for Disaster

ಇದು ಮಾಶಾ ಆಂಡ್ ಬೇಯರ್ ಎನ್ನುವ ಅನಿಮೇಟೆಡ್‌ ಪಾತ್ರಗಳ ವಿಡಿಯೊ ಆಗಿದ್ದು, ಇನ್ನು ಈ ವಿಡಿಯೊ ರಷ್ಯಿಯನ್ ಬೆಸ್ಟ್ ಅನಿಮೇಟ್ ವಿಡಿಯೊ ಸರಣಿಯಾಗಿದೆ. ಯೂಟ್ಯೂಬ್ ಅಷ್ಟೇ ಅಲ್ಲದೇ ನೆಟ್‌ಫ್ಲಿಕ್ಸ್‌, ಸೇರಿದಂತೆ ಇತರೆ ತಾಣಗಳಲ್ಲಿಯೂ ಈ ಅನಿಮೇಟೆಡ್ ವಿಡಿಯೊ ಹವಾ ಕ್ರಿಯೆಟ್ ಮಾಡಿದೆ. ಮಕ್ಕಳಿಗೆ ಇಷ್ಟವಾಗಿದೆ. ಮಾಶಾ ಆಂಡ್ ಬೇಯರ್ ಪಾತ್ರಗಳು ಅಡುಗೆ ಮಾಡುವ ವಿಡಿಯೊ ಇದಾಗಿದ್ದು, ಯೂಟ್ಯೂಬ್‌ನಲ್ಲಿ ಒಟ್ಟು 4.2 ಬಿಲಿಯನ್ ವೀಕ್ಷಣೆಗಳನ್ನು ಪಡೆದಿವೆ. ಮ್ಯೂಸಿಕ್ ವಿಡಿಯೊ ಹೊರತುಪಡಿಸಿ ಟಾಪ್‌ ಟೆನ್‌ ಲಿಸ್ಟ್‌ನಲ್ಲಿ ಈ ಸಹ ವಿಡಿಯೊ ಗುರುತಿಸಿಕೊಂಡಿದೆ.

ಬೇಬಿ ಶಾರ್ಕ್ ಡಾನ್ಸ್‌-Baby Shark Dance – Pinkfong

ಬೇಬಿ ಶಾರ್ಕ್ ಡಾನ್ಸ್‌-Baby Shark Dance – Pinkfong

ಅತೀ ಹೆಚ್ಚು ವೀಕ್ಷಣೆ ಪಡೆದ ಯೂಟ್ಯೂಬ್ ವಿಡಿಯೊಗಳಲ್ಲಿ ಬೇಬಿ ಶಾರ್ಕ್ ಡಾನ್ಸ್ (Baby Shark Dance) ವಿಡಿಯೊ ಐದನೇ ಸ್ಥಾನ ಪಡೆದಿದೆ. ಚಿಕ್ಕ ಮಕ್ಕಳನ್ನು ಹೆಚ್ಚಾಗಿ ಸೆಳೆದಿರುವ ಈ ಡಾನ್ಸ್ ಪ್ಲಸ್ ಮ್ಯೂಸಿಕ್ ವಿಡಿಯೊ ಒಟ್ಟು 4.17 ಬಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಅಂದಹಾಗೆ ಈ ಹಾಡು ಇಂಗ್ಲಿಷ್, ಸ್ಪಾನಿಶ್, ಕೋರಿಯನ್, ಜಪಾನಿ ಮತ್ತು ಚೀನಿ ಭಾಷೆಗಳಲ್ಲಿಯೂ ಬಿಡುಗಡೆ ಆಗಿದೆ.

ಅಪ್‌ಟೌನ್ ಫಂಕ್- Uptown Funk – Mark Ronson Ft. Bruno Mars

ಅಪ್‌ಟೌನ್ ಫಂಕ್- Uptown Funk – Mark Ronson Ft. Bruno Mars

ಅಪ್‌ಟೌನ್‌ ಫಂಕ್ ಒಂದು ಮ್ಯೂಸಿಕ್ ವಿಡಿಯೊ ಆಗಿದ್ದು, ಈ ವಿಡಿಯೊ ಸಂಗ್ 2014ರಲ್ಲಿಯೇ ಬಿಡುಗಡೆ ಆಗಿದೆ. ಅಂದಿನಿಂದಲೂ ಟ್ರೆಂಡಿಂಗ್‌ನಲ್ಲಿರುವ ಈ ಹಾಡು ಇದೀಗ ಒಟ್ಟು 3.74 ಬಿಲಿಯನ್ ವೀಕ್ಷಣೆಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ 2019ರಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಯೂಟ್ಯೂಬ್‌ನ ಆರನೇ ಸ್ಥಾನವನ್ನು ಅಲಂಕರಿಸಿದೆ.

ಗಂಗ್ನಮ್ ಸ್ಟೈಲ್-Gangnam Style – Psy

ಗಂಗ್ನಮ್ ಸ್ಟೈಲ್-Gangnam Style – Psy

ಗಂಗ್ನಮ್ ಸ್ಟೈಲ್‌ ಹಾಡನ್ನು ಬಹುತೇಕ ಎಲ್ಲರೂ ಗುನುಗಿದ್ದಾರೆ ಎನ್ನಬಹುದಾಗಿದೆ. ದಕ್ಷಿಣ ಕೋರಿಯಾದ ಮ್ಯೂಸಿಕ್ ಡೈರೆಕ್ಟರ್ ರಚಿಸಿರುವ ಈ ಗಂಗ್ನಮ್ ಸ್ಟೈಲ್‌-psy ಹಾಡು ಸಹ ಕ್ರೇಜ್ ಮೂಡಿಸಿದ್ದು, ಪ್ರಸಕ್ತ ವರ್ಷದಲ್ಲಿ ಒಟ್ಟು 3.48 ಬಿಲಿಯನ್ ವೀಕ್ಷಣೆಯನ್ನು ತಲುಪಿದೆ. ಇದೀಗ ಯುಕೆ, ರಷ್ಯಾ, ಸ್ಪೆನ್, ಫ್ರಾನ್ಸ್‌ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿಯು ಸದ್ದು ಮಾಡುತ್ತಿದೆ.

ಸಾರಿ-Sorry – Justin Bieber

ಸಾರಿ-Sorry – Justin Bieber

ಸಾರಿ-Sorry ಹಾಡು ಜಸ್ಟಿನ್ Bieber ಅವರ ನಾಲ್ಕನೇ ಅಲ್ಬಮ್ ಸಾಂಗ್ ಇದಾಗಿದ್ದು, ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಮೂಡಿಸಿದೆ. ಅತೀ ಹೆಚ್ಚು ವೀಕ್ಷಣೆ ಪಡೆದ ವಿಡಿಯೊಗಳಲ್ಲಿ ಇದು ಸಹ ಒಂದಾಗಿದೆ. ಒಟ್ಟು 3.23 ಬಿಲಿಯನ್ ವೀಕ್ಷಣೆಯನ್ನು ಕಂಡಿರುವ ಈ ಹಾಡು ಯುವಸಮೂಹವನ್ನು ಆಕರ್ಷಿಸಿದೆ.

ಶುಗರ್-Sugar – Maroon 5

ಶುಗರ್-Sugar – Maroon 5

ಶುಗರ್ ಹಾಡು ಸಹ ಟ್ರೆಂಡಿಂಗ್‌ನಲ್ಲಿದ್ದು, ಯೂಟ್ಯೂಬ್‌ನಲ್ಲಿ ಒಟ್ಟು 3.1 ಬಿಲಿಯನ್ ವೀಕ್ಷಣೆಗಳನ್ನು ತನ್ನದಾಗಿಸಿಕೊಂಡಿದೆ. ನಿಜ ಜೀವನದ ವೈವಾಹಿಕ ಕಥಾ ಹಂದರದ ವಿಷಯವನ್ನು ಒಳಗೊಂಡಿರುವ ಈ ಮ್ಯೂಸಿಕ್ ಕ್ಲಿಕ್ ಆಗಿದೆ. ಡೆವಿಡ್ ಡಬ್ಕಿನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡನ್ನು ಆಡೆಮ್ ಹಾಡಿದ್ದಾರೆ.

ರೋರ್- Roar – Katy Perry

ರೋರ್- Roar – Katy Perry

ರೋರ್-(Roar - Katy Perry) ಹಾಡು ಸಹ ಅತೀ ಹೆಚ್ಚಿ ವೀಕ್ಷಣೆಯನ್ನು ಗಳಿಸಿದ್ದು, ಹತ್ತನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. 2013ರಲ್ಲಿ ಬಿಡುಗಡೆ ಆಗಿದ್ದ ಈ ಹಾಡು 56ನೇ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.

Most Read Articles
Best Mobiles in India

English summary
here we list the most viewed YouTube videos in 2019.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more