Subscribe to Gizbot

ಇಂದು ನಿಮಗೆ ಯಾವ ಸ್ಮಾರ್ಟ್‌ಫೋನ್ ಬೇಕು ಬುಕ್ ಮಾಡಿ!..ರೆಡ್‌ಮಿ..ಮೊಟೊ..ಎಲ್ಲವೂ!!

Written By:

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿಗೆ ಈಗಲೂ ಫೈಟ್ ನೀಡುತ್ತಿರುವ ಲೆನೊವೊ ಒಡೆತನದ ಮೊಟೊ ಸೀರಿಸ್‌ನ ಮೊಟೊ ಸಿ ಸ್ಮಾರ್ಟ್‌ಫೋನ್ ಇಂದು ಫ್ಲಾಶ್‌ಸೇಲ್‌ನಲ್ಲಿ ಮಾರಾಟಕ್ಕಿದೆ. ಪ್ರಖ್ಯಾತ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇಂದು 12 ಗಂಟೆಗೆ ಫ್ಲಾಶ್‌ಸೇಲ್ ಪ್ರಾರಂಭವಾಗಲಿದೆ.!!

ಇನ್ನು ಇದರ ಜೊತೆಯಲ್ಲಿಯೇ ಶಿಯೋಮಿ ಕೂಡ ತನ್ನ ನೂತನ ಸ್ಮಾರ್ಟ್‌ಫೋನ್‌ಗಳನ್ನು ಮುಂಗಡ ಬುಕ್ ಮಾಡಲು ಅವಕಾಶ ನೀಡಿದ್ದು, ಶಿಯೋಮಿಯ ಅಫಿಶಿಯಲ್ ಸೈಟ್‌ನಲ್ಲಿ ಸ್ಮಾರ್ಟ್‌ಫೋನ್ ಬುಕ್ ಮಾಡಬಹುದು. ರೆಡ್‌ಮಿ ನೋಟ್ 4, ರೆಡ್‌ಮಿ 4A ಮತ್ತು ರೆಡ್‌ಮಿ 4 ಮೂರು ಸ್ಮಾರ್ಟ್‌ಫೋನ್‌ಗಳು ಸಹ ಮುಂಗಡ ಬುಕ್‌ ಮಾಡಲು ರೆಡಿಯಾಗಿವೆ!!

ಕಡಿಮೆ ಬೆಲೆಯಲ್ಲಿ ಹೆಚ್ಚು ವಿಶೇಷತೆಗಳನ್ನು ಹೊಂದಿರುವ ಮೊಟೊ ಸಿ ಸ್ಮಾರ್ಟ್‌ಫೋನ್ ಇದೇ ಮೊದಲ ಬಾರಿಗೆ ಫ್ಲಾಶ್‌ಸೇಲ್‌ನಲ್ಲಿ ಲಭ್ಯವಿದೆ. ಹಾಗಾದರೆ ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನ್ ವಿಶೇಷತೆ ಏನು? ಬೆಲೆಗೆ ತಕ್ಕ ಫೀಚರ್ಸ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಟೊ ಸಿ ಪ್ಲಸ್ ಡಿಸ್‌ಪ್ಲೇ ಮತ್ತು ಪ್ರೊಸೆಸರ್ !!

ಮೊಟೊ ಸಿ ಪ್ಲಸ್ ಡಿಸ್‌ಪ್ಲೇ ಮತ್ತು ಪ್ರೊಸೆಸರ್ !!

ಮೊಟೊ ಸಿ ಪ್ಲಸ್ 5ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 1280*720 ರೆಸಲ್ಯುಷನ್ ಹೊಂದಿದೆ. ಇನ್ನು 64 ಬಿಟ್ ಕ್ವಾಡ್‌ಕೋರ್ ಮಿಡಿಯಾಟೆಕ್ ಪ್ರೊಸೆಸರ್ ಹೊಂದಿದೆ.!!

RAM ಮತ್ತು ಮೆಮೊರಿ ಎಷ್ಟು?

RAM ಮತ್ತು ಮೆಮೊರಿ ಎಷ್ಟು?

ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, 1GB RAM ಮತ್ತು 2GB RAM ಹಾಗೂ 16GB ಮೆಮೊರಿಯನ್ನು ಹೊಂದಿದೆ.!!

ಕ್ಯಾಮೆರಾ ಹೇಗಿದೆ.!!

ಕ್ಯಾಮೆರಾ ಹೇಗಿದೆ.!!

ಕೇವಲ 8MP ರಿಯರ್ ಕ್ಯಾಮೆರಾ ಹಾಗೂ 2MP ಸೆಲ್ಫಿ ಕ್ಯಾಮೆರಾನ್ನು ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೊಂದಿದೆ.!! ಹಾಗಾಗಿ, ಕ್ಯಾಮೆರಾ ಗುಣಮಟ್ಟದಲ್ಲಿ ಭಾರಿ ಹಿಂದುಳಿದಿದೆ ಎನ್ನಬಹುದು.!!

 ಬ್ಯಾಟರಿ ಮತ್ತು ಬೆಲೆ ಎಷ್ಟು?

ಬ್ಯಾಟರಿ ಮತ್ತು ಬೆಲೆ ಎಷ್ಟು?

ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೊಂದಿರುವ ಅತ್ಯುತ್ತಮ ಫೀಚರ್ ಎಂದರೆ 4000mAh ಬ್ಯಾಟರಿ.!! ಇನ್ನು ಬೆಲೆ 7,500 ರೂಗಳಿಂದ 8000 ರೂಪಾಯಿಗಳಾಗಿದ್ದು, ಕೊಡುವ ಬೆಲೆಗೆ ಪರವಾಗಿಲ್ಲ ಎನ್ನುವ ಫೀಚರ್ಸ್ ಹೊಂದಿದೆಎಂದು ಹೇಳಬಹುದು.!!

ಓದಿರಿ:ಇಂದಿನಿಂದ ಫ್ಲಿಪ್‌ಕಾರ್ಟ್ 'ಡ್ರೀಮ್ ಸ್ಮಾರ್ಟ್‌ಫೋನ್ ಸೇಲ್' ಆರಂಭ!.. ಭಾರಿ ಆಫರ್ಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flipkart is hosting an open sale of the Moto C Plus at 12 noon today. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot