ಕಳ್ಳ ಕದ್ದ ಮೊಬೈಲ್ ಅನ್ನು ಸ್ಮಾರ್ಟ್‌ ಆಗಿ ಹುಡುಕಿದ ವಿದ್ಯಾರ್ಥಿನಿ!..ಪೊಲೀಸರಿಂದಲೇ ಶ್ಲಾಘನೆ!!

|

ಮೊಬೈಲ್ ಕಳ್ಳತನ ಮಾಡುವ ಜಾಲವೇ ಬೀಡುಬಿಟ್ಟಿರುವ ಸಮಯದಲ್ಲಿ ಕಳ್ಳರು ಕದ್ದ ಮೊಬೈಲ್ ಅನ್ನು ವಾಪಸ್ ಮರಳಿ ಪಡೆಯುವುದು ಕಷ್ಟವೇ ಸರಿ. ಆದರೆ, ಕಳೆದುಕೊಂಡ ಸ್ಮಾರ್ಟ್​ಫೋನನ್ನು ತನ್ನ ಸ್ನೇಹಿತರ ಮೊಬೈಲ್ ಸಹಾಯದಿಂದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸ್ಮಾರ್ಟ್‌ ಆಗಿ ಹುಡುಕಿದ್ದಾಳೆ. ಇದನ್ನು ಪೊಲೀಸರೇ ಶ್ಲಾಘಿಸಿದ್ದಾರೆ.

ಹೌದು, 19 ವರ್ಷದ ಜೀನತ್ ಬಾನು ಹಕ್ ಯುವತಿಯು ತನಗೆ ತಿಳಿದಿದ್ದ ಸ್ವಲ್ಪ ಮಾಹಿತಿಯಿಂದ ಮೊಬೈಲ್ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತನ್ನ ಮೊಬೈಲ್ ಅನ್ನು ವಾಪಸ್ ಪಡೆಯಲು ಯಶಸ್ವಿಯಾಗಿರುವುದಲ್ಲದೆ, ಮೊಬೈಲ್ ಅನ್ನು ಕದ್ದವನನ್ನು ಕೂಡ ಪೊಲೀಸರಿಗೆ ಖುಷಿಯಲ್ಲಿರುವ ಜೀನತ್ ಬಾನು ಹಕ್ ತಂತ್ರಜ್ಞಾನದ ಸಹಾಯವನ್ನು ಸಹ ಹೊಗಳಿದ್ದಾರೆ.

ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!

ಕಳ್ಳ ಕದ್ದ ಮೊಬೈಲ್ ಅನ್ನು ಸ್ಮಾರ್ಟ್‌ ಆಗಿ ಹುಡುಕಿದ ವಿದ್ಯಾರ್ಥಿನಿ!!

ನಾನು ಪ್ರವಾಸ ಮುಗಿಸಿ ಮನೆಗೆ ವಾಪಸಾದಾಗ ಮೊಬೈಲ್ ನಾಪತ್ತೆಯಾಗಿರುವುದು ಗಮನಕ್ಕೆ ಬಂತು. ಎಲ್ಲರೂ ಮೊಬೈಲ್ ಸಿಗುವುದಿಲ್ಲ ಎಂಬ ಮಾತುಗಳನ್ನೇ ಆಡಿದರು. ಆದರೆ, 'ಸ್ಮಾರ್ಟ್' ಆಗಿ ಫೋನ್ ಹುಡುಕುವ ಯತ್ನ ನನ್ನನ್ನು ಬಿಡಲಿಲ್ಲ ಎಂದು ಈ ಯುವತಿ ಹೇಳಿದ್ದು, ಹಾಗಾದರೆ, ಆಕೆ ಸ್ಮಾರ್ಟ್‌ಆಗಿ ಮೊಬೈಲ್ ಕಳ್ಳನನ್ನು ಹುಡುಕಿದ್ದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

‘ಟ್ರೇಸ್ ಮೈ ಮೊಬೈಲ್’ ಆಯ್ಕೆ!

ಮೊಬೈಲ್ ಕಳೆದುಕೊಂಡಿದ್ದ ಜೀನತ್ ಬಾನು ಹಕ್ ಗೂಗಲ್ ಖಾತೆಯಲ್ಲಿನ ‘ಟ್ರೇಸ್ ಮೈ ಮೊಬೈಲ್' ಆಯ್ಕೆಯ ಬಗ್ಗೆ ತಿಳಿದಿದ್ದಳು. ಹಾಗಾಗಿ, ತನ್ನ ಸ್ನೇಹಿತರ ಮೊಬೈಲ್ ಮೂಲಕ ತಾನು ಕಳೆದುಕೊಂಡಿದ್ದ ಮೊಬೈಲ್‌ನಲ್ಲಿ ಬಳಸುತ್ತಿದ್ದ ಗೂಗಲ್ ಖಾತೆಗೆ ಸೈನ್-ಇನ್ ಆಗಿ ‘ಟ್ರೇಸ್ ಮೈ ಮೊಬೈಲ್' ಆಯ್ಕೆ ಬಳಸಿ ಮೊಬೈಲ್ ಎಲ್ಲಿದೆ ಎಂದು ಹುಡುಕಿದಳು.

'ಮೈ ಆಕ್ಟಿವಿಟಿ’!

ಗೂಗಲ್ ಖಾತೆಯಲ್ಲಿನ ‘ಟ್ರೇಸ್ ಮೈ ಮೊಬೈಲ್' ಆಯ್ಕೆಯಲ್ಲು 'ಮೈ ಆಕ್ಟಿವಿಟಿ' ಮೂಲಕ ತನ್ನ ಗೂಗಲ್ ಖಾತೆ ಎಲ್ಲ ಬಳಕೆಯಾಗುತ್ತಿದೆ ಮತ್ತು ಯಾವ ಫೋನಿನಲ್ಲಿ ಬಳಕೆಯಾಗುತ್ತಿದೆ ಎಂಬುದನ್ನು ತಿಳಿಯಬಹುದು. ಹೀಗೆ ತನ್ನ ಮೊಬೈಲ್​ನಲ್ಲಿ ಯಾವ ಆಪ್ ಬಳಕೆಯಾಗುತ್ತಿದೆ? ಯಾವ್ಯಾವ ಚಟುವಟಿಕೆ ನಡೆದಿದೆ? ಎನ್ನುವುದನ್ನು ಜೀನತ್ ಬಾನು ಹಕ್ ಹುಡುಕಿದಳು.

ಡ್ರೈವಿಂಗ್‌ನಲ್ಲಿರುವಾಗ ಫೋನ್ ಬಳಸಿದಳು! ಮುಂದೇನಾಯಿತು ವೀಡಿಯೊ ನೋಡಿ

ಕಳ್ಳನ ಚಟುವಟಿಕೆ ಜಾಡು ಹಿಡಿದಳು!

ಕದ್ದ ತನ್ನ ಮೊಬೈಲ್‌ನಲ್ಲಿ ಕಳ್ಳ ಏನೆನೆಲ್ಲಾ ಹುಡುಕಿದ್ದ ಎಂಬುದನ್ನು ಜೀನತ್ ಬಾನು ನೋಡಿದಳು. ತನ್ನ ಫೋನಿನಲ್ಲಿ ಶೇರ್‌ಇಟ್ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದ ಕಳ್ಳ ವಾಟ್ಸ್ಆಪ್ ಅನ್ನು ಅಪ್‌ಡೇಟ್ ಮಾಡಿಕೊಂಡಿದ್ದ. ಹಾಗೆಯೇ, ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಲು ಆಪ್ ಅನ್ನು ಸಹ ಡೌನ್‌ಲೋಡ್ ಮಾಡಿದ್ದನ್ನು ಕಂಡುಕೊಂಡಳು.

ರೇಲ್ವೆ ಟಿಕೆಟ್ ಬುಕ್ ಮಾಡಿ ಸಿಕ್ಕಿಬಿದ್ದ!

ಇದಾದ ನಂತರ ಮೊಬೈಲ್ ಬಳಸಿ ವ್ಯಕ್ತಿಯೋರ್ವ ದಾದರ್-ತಿರುವಣ್ಣಮಲೈಗೆ ರೇಲ್ವೆ ಟಿಕೆಟ್ ಬುಕ್ ಮಾಡಿರುವುದು ಕಂಡುಬಂತು. ತಕ್ಷಣವೇ ಎಚ್ಚೆತ್ತ ಯುವತಿ ಗೂಗಲ್ ಫೋಟೋಸ್ ಮೂಲಕ ಟಿಕೆಟ್, ರೇಲ್ವೆ ವಿವರ ಪಡೆದುಕೊಂಡಳು. 9.30ಕ್ಕೆ ರೈಲು ನಿರ್ಗಮಿಸುವುದನ್ನು ಖಾತ್ರಿ ಮಾಡಿಕೊಂಡು ಮೊಬೈಲ್ ಕದ್ದಿದ್ದ ಸೆಲ್ವರಾಜ್ ಶೆಟ್ಟಿ ಎಂಬುವನನ್ನು ಕಂಡುಹಿಡಿದು ಪೊಲೀಸರಿಗೆ ಒಪ್ಪಿಸಿದಳು

ಮೊಬೈಲ್ ಕಳುವಾದಾಗ ಏನು ಮಾಡಬಹುದು?

ಇಂದಿನ ಮೊಬೈಲ್ ಕಳೆದುಕೊಂಡರೆ ಐಎಂಇಐ ಮೂಲಕ ಪೊಲೀಸರು ಆ ಮೊಬೈಲ್ ಅನ್ನು ಟ್ರೇಸ್ ಮಾಡಬಹುದು. ಆದರೆ, ಜನ ಸಾಮಾನ್ಯರಿಗೆ ಇದು ಸಾಧ್ಯವಿಲ್ಲ.! ಒಂದು ವೇಳೆ ಕಳ್ಳನು ಮೊಬೈಲ್ ಬಳಕೆ ಬಗ್ಗೆ ಹೆಚ್ಚು ತಿಳಿಯದೇ ಇದ್ದರೆ, ನೀವು ಮೊಬೈಲ್ ಕಳೆದುಕೊಂಡರೆ ಏನು ಮಾಡಬಹುದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಮೈ ಆಕ್ಟಿವಿಟಿ ಆಯ್ಕೆ

ನಿಮ್ಮ ಸ್ಮಾರ್ಟ್​ಫೋನಲ್ಲಿ ಲಾಗ್​ಇನ್ ಆಗಿರುವ ಗೂಗಲ್ ಖಾತೆಗೆ ಕಂಪ್ಯೂಟರ್ ಅಥವಾ ಮತ್ತೊಂದು ಮೊಬೈಲ್‌ನಿಂದ ಲಾಗ್ ಇನ್ ಆಗಿ. ನಂತರ ಅಲ್ಲಿ ಅಕೌಂಟ್ ಕ್ಲಿಕ್ ಮಾಡಿ, ಟ್ರೇಸ್ ಮೈ ಮೊಬೈಲ್ ಹಾಗೂ ಮೈ ಆಕ್ಟಿವಿಟಿ ಆಯ್ಕೆ ಮೂಲಕ ಕಳುವಾದ ಮೊಬೈಲ್​ನಲ್ಲಿ ಏನೇನು ಮಾಡಲಾಗುತ್ತಿದೆ ಎನ್ನುವ ಮಾಹಿತಿ ಪಡೆಯಬಹುದು.

ಲಾಕ್ ಯುವರ್ ಫೋನ್

ಟ್ರೇಸ್ ಮೈ ಮೊಬೈಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರಲಾಕ್ ಯುವರ್ ಫೋನ್ ಅವಕಾಶದ ಮೂಲಕ 4 ಅಂಕೆಯ ಪಾಸ್​ವರ್ಡ್ ಹಾಗೂ ಪರಿಚಿತರ ದೂರವಾಣಿ ಸಂಖ್ಯೆ ಹಾಕಿ ಮೊಬೈಲ್ ಅನ್ನು ಲಾಕ್ ಮಾಡಬಹುದು.ಕಾಲಿಂಗ್ ಯುವರ್ ಫೋನ್ ಅವಕಾಶದ ಮೂಲಕ ಸೈಲೆಂಟ್ ಮೋಡ್​ನಲ್ಲಿದ್ದರೂ ನಿಮ್ಮ ಮೊಬೈಲ್ ರಿಂಗ್ ಮಾಡಬಹುದು.

ಔಟ್ ಆನ್ ಯುವರ್ ಫೋನ್

ಮೊಬೈಲ್ ಸಿಗದಿದ್ದರೂ ಪರವಾಗಿಲ್ಲ ಆದರೆ ನನ್ನೆಲ್ಲಾ ಗೂಗಲ್ ಮಾಹಿತಿಗಳು ಸುರಕ್ಷಿತವಾಗಿರಲು ನೀವು ನಿಮ್ಮ ಮೊಬೈಲ್ ಖಾತೆಗಳನ್ನು ಸೈನ್ ಔಟ್ ಮಾಡಬಹುದು. ಗೂಗಲ್ ಅಕೌಂಟ್ಸ್‌ನಲ್ಲಿ ಸೈನ್ ಔಟ್ ಆನ್ ಯುವರ್ ಫೋನ್ ಆಯ್ಕೆ ಮೂಲಕ ಮೊಬೈಲ್​ನಲ್ಲಿನ ಎಲ್ಲ ಖಾತೆಗಳನ್ನು ಸೈನ್ ಔಟ್ ಮಾಡಬಹುದಾಗಿದೆ.

ಲಾಕ್‌ಔಟ್ ಅಪ್ಲಿಕೇಷನ್

ಲಾಕ್‌ಔಟ್ ಅಪ್ಲಿಕೇಷನ್ ನಿಮ್ಮ ಮೊಬೈಲ್‌ನಲ್ಲಿದ್ದರೆ ಒಳ್ಳೆಯದು. ಇದು, ಫೋನ್ ಬುಕ್, ಫೋಟೋ ಮತ್ತು ಕಾಲ್ ಹಿಸ್ಟರಿಯ ಬ್ಯಾಕ್ ಅಪ್ ಪಡೆಯುವುದ್ಕಕೆ ಸಹಾಯ ಮಾಡುವುದರ ಜತೆಗೆ ನಿಮ್ಮ ಫೋನ್ ಎಲ್ಲಿದೆ ಎಂದು ಹುಡುಕಲು ಅಥವಾ ಇನ್ಯಾರೂ ಉಪಯೋಗ ಮಾಡಬಲ್ಲುದು. ಇದರಿಂದ ನಿಮ್ಮ ಮಾಹಿತಿ ಸೇಫ್ ಆಗಿರುತ್ತದೆ.

ಡ್ರೈವಿಂಗ್‌ನಲ್ಲಿರುವಾಗ ಫೋನ್ ಬಳಸಿದಳು! ಮುಂದೇನಾಯಿತು ವೀಡಿಯೊ ನೋಡಿ

ಸಿಮ್ ಲಾಕ್ ಮಾಡಿಸಿ.

ನೀವು ಬಳಸುವ ನೆಟ್ವರ್ಕ್ ಕಂಪನಿಯನ್ನು ಸಂಪರ್ಕಿಸಿ ಮತ್ತು ಫೋನ್ ಕಾಣೆಯಾಗಿದೆ ಎಂದು ಎಚ್ಚರಿಸುವುದು ಎಲ್ಲಕ್ಕಿಂತ ಮೊದಲ ಹಂತ.ನಿಮ್ಮ ಫೋನ್ ಇನ್ನೊಬ್ಬರ ಕೈಯಲ್ಲಿದ್ದರೆ, ಸೇವೆಯನ್ನು ನಿಲ್ಲಿಸಲು ಕಸ್ಟಮರ ಕೇರ್ ಗೆ ಕರೆ ಮಾಡಿ. ಬ್ಯಾಂಕ್‌ಗಳನ್ನು ಸಂಪರ್ಕಿಸಿ ನಿಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಿಸಿ.

ಪೊಲೀಸ್ ಠಾಣೆಗೆ ದೂರು ನೀಡಿ.

ಮೊಬೈಲ್ ಕಳೆದ ತಕ್ಷಣವವೇ ಪೊಲೀಸರಿಗೆ ದೂರು ನೀಡಿತಕ್ಷಣ ಆಗಬಹುದಾದ ಅನಾಹುತಗಳಿದ ತಪ್ಪಿಸಿಕೊಳ್ಳಬಹುದು. ರೀಚ್ ಔಟ್ ಯುವರ್ ಕ್ಯಾರಿಯರ್ ಮೂಲಕ ಸಿಮ್ ಬ್ಲಾಕ್ ಮಾಡಬಹುದು ಇನ್ನು ಕಳ್ಳ ಚಾಲಾಕಿಯಾಗಿದ್ದರೆ ಫೋನ್ ಅನ್ನು ನಾವು ಹುಡುಕುವುದು ಕಷ್ಟವೇ ಸರಿ. ಆದರೆ, ಪೊಲೀಸರಿಗೆ ಇದು ಕಷ್ಟದ ಕೆಲಸವಲ್ಲ.!

ಸರ್ಕಾರದ ಹಲವು ಉಪಯುಕ್ತ ಆಪ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ

ಪ್ರತಿಯೊಬ್ಬ ಭಾರತೀಯ ಬಳಸಲೇಬೇಕಾದ 20 ಉಪಯುಕ್ತ ಸರ್ಕಾರಿ ಆಪ್‌ಗಳು..!

ಡಿಜಿಟಲ್ ಇಂಡಿಯಾದ ಸಾಕಾರಕ್ಕಾಗಿ ಸರ್ಕಾರ ಸಾರ್ವಜನಿಕರಿಗಾಗಿ ಹೊಸ ಹೊಸ ಆಪ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ತಾನೇ ಎಂಪಾಸ್‌ಪೋರ್ಟ್‌ ಸೇವಾ ಆಪ್‌ನ್ನು ಅಪ್‌ಡೇಟ್ ಮಾಡಿದ್ದ ಕೇಂದ್ರ ಸರ್ಕಾರ ಎಲ್ಲಿಂದ ಬೇಕಾದರೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಿತ್ತು. ಅದೇ ರೀತಿ ಚುನಾವಣಾ ಆಯೋಗ ಕೂಡ ಸಿವಿಜಿಲ್ ಎಂಬ ಆಪ್ ಬಿಡುಗಡೆ ಮಾಡಿ ಚುನಾವಣೆ ಸಮಯದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿತ್ತು.

ಇದೇ ರೀತಿ ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಂತೆ ಅನೇಕ ಆಪ್‌ಗಳು ಕೆಲಸ ಮಾಡುತ್ತವೆ. ಎಲ್ಲಾ ಇಲಾಖೆಗಳು ತಮ್ಮ ಸೇವೆಗಳನ್ನು ಜನರ ಬಳಿ ತಲುಪಿಸಲು ಆಪ್‌ಗಳ ಮೊರ ಹೋಗುತ್ತಿವೆ. ಯಾಕಂದ್ರೇ, ಸದ್ಯ ಎಲ್ಲರ ಬಳಿ ಸ್ಮಾರ್ಟ್‌ಫೋನ್‌ಗಳು ಇದ್ದೇ ಇರುವುದರಿಂದ ಸಾರ್ವಜನಿಕ ಸೇವೆಗಳು ಜನಕ್ಕೆ ವೇಗವಾಗಿ, ಪಾರದರ್ಶಕವಾಗಿ ತಲುಪಲಿ ಎಂಬ ಕಳಕಳಿ ಹೊಂದಿವೆ. ಒಂದು ಬಾರಿ ಈ ಕೆಳಗೆ ನೀಡಿದ 20 ಸರ್ಕಾರದ ಉಪಯುಕ್ತ ಆಪ್‌ಗಳನ್ನು ಇನ್ಸ್ಟಾಲ್ ಮಾಡಿಕೊಂಡು ನೋಡಿ. ಯಾವಾಗಾದರೂ ಅಗತ್ಯ ಕಾರ್ಯಕ್ಕೆ ಆದರೂ ಆಗಬಹುದು.

1. ಇಂಡಿಯನ್ ಪೊಲೀಸ್ ಆನ್ ಕಾಲ್ ಆಪ್ Indian Police on Call app

ಹೆಸರೇ ಹೇಳುವಂತೆ ಸಾರ್ವಜನಿಕರಿಗೆ ಹತ್ತಿರದ ಪೊಲೀಸ್ ಠಾಣೆಯನ್ನು ಹುಡುಕಿ ಕೊಡುತ್ತದೆ. ಹತ್ತಿರದ ಪೊಲೀಸ್ ಠಾಣೆ ತಲುಪಲು ಬೇಕಾದ ಮಾರ್ಗ, ದೂರವನ್ನು ಗೂಗಲ್ ಮ್ಯಾಪ್‌ನಂತೆ ತೋರಿಸುತ್ತದೆ. ಜಿಲ್ಲಾ ಕಂಟ್ರೋಲ್ ರೂಂ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಪೋನ್ ಸಂಖ್ಯೆಯನ್ನು ಬಳಕೆದಾರರಿಗೆ ತೋರಿಸುತ್ತದೆ. ಅಗತ್ಯವಿದ್ದಾಗ ಒಂದು ಪೋನ್ ಕರೆ ಬಹಳಷ್ಟು ಉಪಯುಕ್ತವಾಗುತ್ತದೆ.

2. ಇಪಾಠಶಾಲಾ ಆಪ್ ePathshala app

ಈ ಆಪ್‌ನ್ನು ಮಾನವ ಸಂಪನ್ಮೂಲ ಇಲಾಖೆ ಮತ್ತು ಎನ್‌ಸಿಇಆರ್‌ಟಿ ಸಂಯೋಜನೆಯಲ್ಲಿ ರೂಪಿಸಲಾಗಿದೆ. ಎಲೆಕ್ಟ್ರಾನಿಕ್ ಪುಸ್ತಕಗಳನ್ನು ಮೊಬೈಲ್ ಪೋನ್‌ಗಳಲ್ಲಿ, ಟ್ಯಾಬ್ಲೆಟ್‌ಗಳಲ್ಲಿ ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಚಕರು ಈ ಆಪ್ ಮೂಲಕ ಅಕ್ಸೇಸ್ ಪಡೆಯಬಹುದು. ಇದರಿಂದ ಡಿವೈಸ್ ಸ್ಟೊರೇಜ್‌ಗನುಗುಣವಾಗಿ ಒಬ್ಬ ವ್ಯಕ್ತಿ ಎಷ್ಟು ಪುಸ್ತಕಗಳನ್ನು ಬೇಕಾದರೂ ಹೊಂದಿರಬಹುದು. ಇಪಾಠಶಾಲಾ ಆಪ್‌ನಲ್ಲಿ ಪಿಂಚ್, ಗುರುತಿಸುವ, ಹೈಲೈಟ್‌ ಮಾಡುವ ಮತ್ತು ಟೆಕ್ಸ್ಟ್‌-ಟು-ಸ್ಪೀಚ್ ಆಯ್ಕೆ ಬಳಸಿ ಅಲ್ಲಿನ ಟೆಕ್ಸ್ಟ್ ಕೇಳಬಹುದಾದ ಫೀಚರ್ಸ್ ಹೊಂದಿದೆ.

3. ಎಂಪರಿವಾಹನ್ ಆಪ್ mParivahan app

ಬಳಕೆದಾರರು ಈ ಆಪ್ ಮೂಲಕ ಚಾಲನಾ ಪರವಾನಗಿಯನ್ನು ಮತ್ತು ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಃನಗಳ ನೋಂದಣಿ ಪತ್ರವನ್ನು ಡಿಜಿಟಲ್ ಪ್ರತಿಯನ್ನು ಇಟ್ಟುಕೊಳ್ಳಬಹುದಾಗಿದೆ. ಅದಲ್ಲದೇ ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ನಾಗರೀಕರು ಕಾರು ನೊಂದಣಿಯ ವಿವರ ಮತ್ತು ನೊಂದಣಿಯಾದ ದಿನಾಂಕವನ್ನು ನೋಡಬಹುದಾಗಿದೆ.

4. ಸ್ಟಾರ್ಟ್‌ಅಪ್ ಇಂಡಿಯಾ Startup India

ಸ್ಟಾರ್ಟ್‌ಅಪ್ ಇಂಡಿಯಾ ಆಪ್ ಉಸಯೋನ್ಮುಖ ಉದ್ಯಮಿಗಳಿಗೆ ಸ್ಟಾರ್ಟ್‌ಅಪ್ ವಾತಾವರಣವನ್ನು ಅರ್ಥ ಮಾಡಿಕೊಳ್ಳಲು ಮಾಹಿತಿಯನ್ನು ನೀಡುತ್ತದೆ. ಈ ಆಪ್ ಮೂಲಕ ಸ್ಟಾರ್ಟ್‌ಅಪ್ ಕುರಿತು ಸರ್ಕಾರ ಹಮ್ಮಿಕೊಂಡ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

5. ಡಿಜಿ ಸೇವಕ್ ಆಪ್ DigiSevak app

ನೀವು ಉತ್ತಮ ಭಾರತಕ್ಕಾಗಿ ಸ್ವಯಂ ಮುಂದೆ ಬಂದು ಸೇವೆ ಸಲ್ಲಿಸುತ್ತೇನೆ ಎಂದರೆ ನಿಮಗೆ ಡಿಜಿ ಸೇವಕ್ ಆಪ್ ಒಳ್ಳೆ ಆಯ್ಕೆ. ನೀವು ಹೊಂದಿರುವ ಕೌಶಲ್ಯ ಮತ್ತು ನಿಮ್ಮ ಆಸಕ್ತಿಗನುಗುಣವಾಗಿ ವಿವಿಧ ಇಲಾಖೆಗಳಿಂದ ನಿಮಗೆ ಕೆಲಸವನ್ನು ನಿಗದಿ ಮಾಡಲಾಗುತ್ತದೆ. ಬೇರೆ ವಾಲ್ಯುಂಟರ್ಸ್‌ಗಳು ಮೌಲ್ಯಿಕರಿಸಿರುವ ಟಾಸ್ಕ್‌ಗಳಿಗೂ ನೀವು ನೋಂದಣಿಯಾಗಬಹುದು.

6. ಜಿಎಸ್‌ಟಿ ರೇಟ್ ಫೈಂಡರ್GST Rate Finder

ಜಿಎಸ್‌ಟಿ ಜಾರಿಯಾಗಿ ಒಂದು ವರ್ಷ ಕಳೆದಿದೆ. ಇನ್ನು ನಿಮಗೆ ಜಿಎಸ್‌ಟಿ ಬಗ್ಗೆ ಗೊಂದಲಗಳಿದ್ದರೆ, ಯಾವ ಸರಕು ಮತ್ತು ಸೇವೆಗಳಿಗೆ ಎಷ್ಟೇಷ್ಟು ಜಿಎಸ್‌ಟಿ ಅನ್ವಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ಜಿಎಸ್‌ಟಿ ರೇಟ್‌ ಫೈಂಡರ್ ಆಪ್ ಡೌನ್‌ಲೋಡ್ ಮಾಡಿಕೊಂಡು ನೋಡಿ. ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿ ಜಿಎಸ್‌ಟಿ ವಿವರಗಳನ್ನು ನೀಡಲಾಗಿದೆ.

7. ಉಮಾಂಗ್ UMANG (Unified Mobile Application for New-age Governance)

ಎಲೆಕ್ಟ್ರಾನಿಕ್ದ್‌ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ (MeitY) ಹಾಗೂ ರಾಷ್ಟ್ರೀಯ ವಿದ್ಯುನ್ಮಾನ ಆಡಳಿತ ವಿಭಾಗ (NeGD) ಜಂಟಿಯಾಗಿ ಉಮಾಂಗ್ ಆಪ್ ಅಭಿವೃದ್ಧಿಪಡಿಸಿವೆ. ಈ ಆಪ್ ಒಂದೇ ವೇದಿಕೆಯಲ್ಲಿ ಎಲ್ಲಾ ಇಲಾಖೆಗಳ ಸೇವೆಯನ್ನು ನಾಗರೀಕರಿಗೆ ಉತ್ತಮ ಹಾಗೂ ಸರಳವಾದ ರೀತಿಯಲ್ಲಿ ನೀಡುತ್ತದೆ. ಆಧಾರ್, ಡಿಜಿಲಾಕರ್, ಪೇಗೋವ್‌ನಂತಹ ಡಿಜಿಟಲ್ ಇಂಡಿಯಾದ ಅನೇಕ ಸೇವೆಗಳು ಇದರಲ್ಲಿ ಲಭ್ಯವಿವೆ.

8. ಇನ್‌ಕ್ರಿಡೆಬಲ್ ಇಂಡಿಯಾ .Incredible India

ಪ್ರವಾಸಕ್ಕೆ ಸಂಬಂಧಿಸಿದ ಹಲವು ಪ್ರಮುಖ ಮಾಹಿತಿಯನ್ನು ಇನ್‌ಕ್ರಿಡೆಬಲ್ ಇಂಡಿಯಾ ಆಪ್ ನೀಡುತ್ತಿದೆ. ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸಿರುವ ಈ ಆಪ್‌ನಲ್ಲಿ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾಹಿತಿಯನ್ನು ಪಡೆಯಬಹುದಾಗಿದೆ. ಪ್ರವಾಸಿ ಸ್ಥಳದಲ್ಲಿನ ಟೂರ್ ಆಪರೇಟರ್ಸ್, ಸಾರಿಗೆ ಆಪರೇಟರ್ಸ್, ಟ್ರಾವೆಲ್ ಏಜೆಂಟ್‌ಗಳು, ಪ್ರಾದೇಶಿಕ ಮಾರ್ಗದರ್ಶಕರು, ಹೋಟೆಲ್‌ಗಳ ಬಗ್ಗೆ ಮಾಹಿತಿ ಇದೆ.

9. ಎಂಪಾಸ್‌ಪೋರ್ಟ್‌ ಸೇವಾ mPassport Seva

ಹೆಸರೇ ಹೇಳುವಂತೆ ಈ ಆಪ್ ಪಾಸ್‌ಪೋರ್ಟ್‌ಗೆ ಸಂಬಂಧಿಸಿದ್ದು, ಪಾಸ್‌ಪೋರ್ಟ್‌ ಅರ್ಜಿ, ಅಪ್ಲಿಕೇಷನ್ ಸ್ಟೇಟಸ್ ಟ್ರಾಕ್ ಮತ್ತು ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ಗುರುತಿಸುವುದಕ್ಕೆ ಉಪಯುಕ್ತವಾಗಿದೆ. ಅದರಂತೆ. ಇತ್ತೀಚೆಗೆ ತಾನೆ ಈ ಆಪ್ ಅಪ್‌ಡೇಟ್ ಆಗಿದ್ದು, ಎಲ್ಲಿಂದ ಬೇಕಾದರೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.

10. ಎಂಆಧಾರ್ mAadhaar app

ಯುಐಡಿಎಐನ ಎಂಆಧಾರ್ ಆಪ್ ಮತ್ತೊಂದು ಉಪಯುಕ್ತ ಆಪ್ ಆಗಿದ್ದು, ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆಧಾರ್ ಗುರುತನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ನಾಗರೀಕರು ಹೊಂದಬೇಕು ಎನ್ನುವ ಗುರಿಯೊಂದಿಗೆ ಈ ಆಪ್ ಬಿಡುಗಡೆಗೊಳಿಸಲಾಗಿದೆ. ಈ ಆಪ್‌ನ ಮತ್ತೊಂದು ಉಪಯೋಗ ಏನೆಂದರೆ eKYC ಮಾಹಿತಿಯನ್ನು ಯಾವ ಸರ್ವೀಸ್ ಪ್ರಾವಿಡರ್‌ಗೂ ಬೇಕಾದರೂ ಹಂಚಿಕೆ ಮಾಡುವ ಆಯ್ಕೆ ಇದೆ. ಕ್ಯೂಆರ್ ಕೋಡ್ ಮೂಲಕ ಆಧಾರ್ ಪ್ರೊಪೈಲ್ ನೋಡುವ ಮತ್ತು ಶೇರ್ ಮಾಡುವ ಆಯ್ಕೆ ಇದೆ. ಅದಲ್ಲದೇ ಬಳಕೆದಾರರ ಬಯೋಮೆಟ್ರಿಕ್ ಡಾಟಾವನ್ನು ಯಾವಾಗ ಬೇಕಾದರೂ ಬ್ಲಾಕ್ ಮಾಡುವ ಅಧಿಕಾರವನ್ನು ಬಳಕೆದಾರರಿಗೆ ನೀಡಲಾಗಿದೆ.

11. ಪೋಸ್ಟ್‌ಇನ್ಫೋ​ Postinfo

ಪೋಸ್ಟ್‌ಇನ್ಫೋ ಆಪ್ ಅಂಚೆ ಇಲಾಖೆಯಿಂದ ಬಿಡುಗಡೆಗೊಳಿಸಿದ್ದು, ಸೇಂಟರ್ ಫಾರ್ ಎಕ್ಸಲೆನ್ಸ್‌ ಇನ್ ಪೋಸ್ಟಾಲ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದೆ. ಈ ಆಪ್‌ನಿಂದ ಪಾರ್ಸಲ್‌ಗಳನ್ನು ಟ್ರಾಕ್ ಮಾಡುವ, ಅಂಚೆ ಕಚೇರಿ ಹುಡುಕುವ, ಪೋಸ್ಟೇಜ್ ಕ್ಯಾಲ್ಕ್ಯುಲೇಟರ್ ಇನ್ಸೂರೆನ್ಸ್ ಪ್ರಿಮಿಯಂ ಕ್ಯಾಲ್ಕ್ಯುಲೇಟರ್ ಮತ್ತು ಬಡ್ಡಿ ಕ್ಯಾಲ್ಕ್ಯುಲೇಟರ್ ಫೀಚರ್ ಹೊಂದಿದೆ. ಅಂಚೆ ಇಲಾಖೆಯ ಜೀವ ವಿಮಾ ಪಾಲಿಸಿ ಹಾಗೂ ಗ್ರಾಮೀಣ ಪೋಸ್ಟಾಲ್ ಜೀವ ವಿಮಾದ ಬಗ್ಗೆ ಮಾಹಿತಿ ಹೊಂದಿದ್ದು, ಪ್ರೀಮಿಯಂಗಳನ್ನು ಪಾವತಿಸುವ ಆಯ್ಕೆಯನ್ನು ಆಪ್‌ನಲ್ಲಿ ನೀಡಲಾಗಿದೆ.

12. ಮೈಗೋವ್ MyGov

ಮೈ ಗೋವ್ ಆಪ್ ಸರ್ಕಾರದಲ್ಲಿ ನಾಗರೀಕರ ಸಹಭಾಗಿತ್ವವನ್ನು ಹೆಚ್ಚಿಸುವ ಸಲುವಾಗಿ ಬಿಡುಗಡೆಯಾಗಿದೆ. ಬಳಕೆದಾರರು ವಿವಿಧ ಮಂತ್ರಾಲಯಗಳಿಗೆ ಮತ್ತು ಸಹಭಾಗಿತ್ವದ ಸಂಸ್ಥೆಗಳಿಗೆ ಹೊಸ ಐಡಿಯಾಗಳನ್ನು, ಕಮೆಂಟ್ , ಸಲಹೆಗಳನ್ನು ನೀಡಬಹುದಾಗಿದೆ. ಅದಲ್ಲದೇ ಹೊಸ ಯೋಜನೆಯ ಅಥವಾ ಕಾಯ್ದೆಯ ರೂಪಿಸುವಲ್ಲಿ ನೇರವಾಗಿ ಭಾಗವಹಿಸಬಹುದು.

13. ಮೈಸ್ಪೀಡ್ MySpeed (TRAI)

ಈ ಆಪ್‌ ಡೇಟಾ ವೇಗವನ್ನು ಮಾಪನ ಮಾಡಿ ಟ್ರಾಯ್‌ಗೆ ಮಾಹಿತಿಯನ್ನು ನೀಡುತ್ತದೆ. ಡಿವೈಸ್ ಮತ್ತು ಲೊಕೇಷನ್ ವಿವರ ಸೇರಿ ಡೇಟಾ ವೇಗ ಮತ್ತು ನೆಟ್‌ವರ್ಕ್‌ ಮಾಹಿತಿಯನ್ನು ಟ್ರಾಯ್‌ಗೆ ನೀಡುತ್ತದೆ. ಆದರೆ, ಈ ಆಪ್ ಯಾವುದೇ ವೈಯಕ್ತಿಕ ಮಾಹಿತಿಯನ್ನು ನೀಡುವುದಿಲ್ಲ. ಎಲ್ಲಾ ಮಾಹಿತಿಗಳು ಗೌಪ್ಯವಾಗಿಯೇ ಮುಂದುವರೆಯುತ್ತವೆ.

14. ಎಂಕವಚ್ mKavach

ಈ ಆಪ್ ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಮಾತ್ರ ಲಭ್ಯವಿದೆ.ಮೊಬೈಲ್ ಫೋನ್ ಸಂಬಂಧಿತ ಸಮಸ್ಯೆಗಳನ್ನು ಈ ಆಪ್ ತಿಳಿಸುತ್ತದೆ. ಸ್ಪಾಮ್ ಎಸ್‌ಎಂಎಸ್‌ ಬ್ಲಾಕ್‌ ಮಾಡಬಹುದಾಗಿದೆ. ನಿಮ್ಮ ಮಾಹಿತಿ ಕದಿಯುವ ಮಾಲ್‌ವೇರ್‌ಗಳ ಬಗ್ಗೆ ಮಾಹಿತಿ ನೀಡುತ್ತದೆ.

15. ಸ್ವಚ್ಛ ಭಾರತ ಅಭಿಯಾನ Swachh Bharat Abhiyaan

ಹೆಸರೇ ಹೇಳುವಂತೆ ನಮ್ಮ ಸುತ್ತಲಿನ ಪರಿಸರದ ನೈರ್ಮಲ್ಯ ಕಾಪಾಡಲು ಈ ಆಪ್ ಬಳಕೆಯಾಗುತ್ತಿದೆ. ಈ ಆಪ್ ಮೂಲಕ ನಾಗರೀಕರು ಜ್ವಲಂತ ಸಮಸ್ಯೆಗಳ ಬಗ್ಗೆ ಚಿತ್ರಗಳನ್ನು ಪೋಸ್ಟ್‌ ಮಾಡಿ ಸಂಬಂಧಿಸಿದ ನಗರಾಡಳಿತದ ಗಮನ ಸೆಳೆಯಬಹುದು. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಈ ಆಪ್‌ನಲ್ಲಿ ಲಿಂಕ್ ಹೊಂದಿದ್ದು, ಜಿಯೋ ಲೊಕೇಷನ್ ಮೂಲಕ ದೂರಿನ ಚಿತ್ರ ಪೋಸ್ಟ್ ಆಗಿರುವ ಕುರಿತು ನಿಖರ ಸ್ಥಳದ ಮಾಹಿತಿ ಪಡೆದು ಸಮಸ್ಯೆ ಪರಿಹರಿಸುವ ಆಯ್ಕೆ ಲಭ್ಯವಿದೆ.

16. ಭೀಮ್ BHIM

ಭೀಮ್ ಯುಪಿಐ ಆಪ್‌ನ್ನು ಭಾರತ ಸರ್ಕಾರದ ಒಡೆತನದಲ್ಲಿರುವ ನ್ಯಾಷನಲ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡುತ್ತಿದೆ. ಆದ್ದರಿಂದ ಬೇರೆ ಎಲ್ಲ ಆಪ್‌ಗಳಿಗಿಂತ ಈ ಆಪ್‌ನ್ನು ಜನ ನಂಬಬಹುದಾಗಿದೆ. ಡಿಸೆಂಬರ್ 30, 2016ರಲ್ಲಿ ಈ ಆಪ್ ಬಿಡುಗಡೆಯಾಗಿದ್ದು, ಹಣ ವರ್ಗಾವಣೆ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ, ಮುಂತಾದ ಪಾವತಿಗಳನ್ನು ಮಾಡಬಹುದಾಗಿದೆ. ಭೀಮ್‌ ಸೇವೆಯನ್ನು ಸಾಧಾರಣ ಜಾವಾ ಮೊಬೈಲ್‌ಗಳಲ್ಲಿಯೂ ಪಡೆಯಬಹುದಾಗಿದೆ. *99# ಕೋಡ್ ಮೂಲಕ ಭೀಮ್ ಬಳಸಬಹುದು.

17. ಐಆರ್‌ಸಿಟಿಸಿ IRCTC

ಸರ್ಕಾರದ ಜನಪ್ರಿಯ ಆಪ್‌ಗಳಲ್ಲಿ ಒಂದಾದ ಐಆರ್‌ಸಿಟಿಸಿ ಆಪ್‌ನಲ್ಲಿ ರೈಲ್ವೇ ಟಿಕೇಟ್ ಬುಕ್ ಮಾಡಲು ಉಪಯುಕ್ತವಾಗಿದೆ. ಈಗ ಐಆರ್‌ಸಿಟಿಸಿ ಇ-ವ್ಯಾಲೆಟ್ ಒಳಗೊಂಡಿದ್ದು, ವೇಗ ಮತ್ತು ಸಲಭದ ಟ್ರಾನ್ಸ್ಯಾಕ್ಷನ್‌ಗೆ ಉಪಯೋಗವಾಗಲಿದೆ.

18. ಆಯ್ಕರ ಸೇತು Aaykar Setu

ಈ ಆಪ್ ಆದಾಯ ತೆರಿಗೆ ಇಲಾಖೆಯ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಆನ್‌ಲೈನ್‌ನಲ್ಲಿ ತೆರಿಗೆ ಪಾವತಿ, ಆನ್‌ಲೈನಿನಲ್ಲಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮತ್ತು ತೆರಿಗೆ ಕ್ಯಾಲ್ಕ್ಯುಲೇಟರ್ ಫೀಚರ್ ಹೊಂದಿದೆ. ಅದಲ್ಲದೇ ತೆರಿಎ ಪಾವತಿದಾರರು ತಮ್ಮ ಸಂದೇಹಗಳಿಗೆ ತಜ್ಞರಿಂದ ಉತ್ತರ ಪಡೆಯಬಹುದಾಗಿದೆ.

19. ಕಿಸಾನ್ ಸುವೀಧಾ Kisan Suvidha app

ಈ ಆಪ್ ಕೃಷಿಗೆ ಸಂಬಂಧಿಸಿದ್ದಾಗಿದ್ದು, ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತಿದೆ. ರೈತರು ಇಲ್ಲಿ ಹವಾಮಾನ ಮಾಹಿತಿ, ಮಾರುಕಟ್ಟೆ ದರ, ಕೃಷಿ ಸಲಹೆಗಳನ್ನು ಕೃಷಿ ಸುವೀಧಾ ಆಪ್ ಮೂಲಕ ಪಡಯಬಹುದಾಗಿದೆ.

20. ಸಿವಿಜಿಲ್ cVigil

ಚುನಾವಣಾ ಆಯೋಗವು ಸಿವಿಜಿಲ್ ಎಂಬ ಆಪ್ ಬಿಡುಗಡೆಗೊಳಿಸಿದ್ದು, ಚುನಾವಣಾ ಸಮಯದಲ್ಲಿ ನಡೆಯುವ ಅಕ್ರಮ ಚಟುವಟಿಕೆ, ನೀತಿ ಸಂಹಿತೆ ಉಲ್ಲಂಘನೆಯಂತಹ ಘಟನೆಗಳ ಚಿಡಿಯೋ ಮತ್ತು ಪೋಟೋಗಳನ್ನು ಕಳಿಸಬಹುದಾಗಿದ್ದು, ಚುನಾವಣಾ ಅಕ್ರಮಗಳನ್ನು ತಡೆಯಲು ಉತ್ತಮ ಆಪ್ ಆಗಲಿದೆ.

ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!

Most Read Articles
Best Mobiles in India

English summary
How a Mumbai woman tracked down the man who stole her phone. to know more visit to kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more