ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!

By Gizbot Bureau
|

ಸರ್ಕಾರ ಮತ್ತು ಅಧಿಕಾರಿಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದ ಸಾರ್ವಜನಿಕರಿಗೆ ಸಿಹಿಸುದ್ದಿಯೊಂದನ್ನು ರಸ್ತೆ ಸಾರಿಗೆ ಸಚಿವಾಲಯ ಪ್ರಕಟಿಸಿದೆ. ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪತ್ರ (ಆರ್‌ಸಿ) ಮತ್ತು ಇನ್ಶೂರೆನ್ಸ್ ದಾಖಲೆ ಪತ್ರಗಳ ಮೂಲ ದಾಖಲೆಯೇ ಪರಿಶೀಲನೆಗೆ ಬೇಕೆಂದು ಕೇಳುವಂತಿಲ್ಲ ಎಂದು ಸಚಿವಾಲಯ ಸೂಚಿಸಿದೆ.

ಹೌದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಗಳಂತೆ ವಾಹನ ಸವಾರರಿಂದ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪತ್ರ ಮತ್ತು ಇನ್ಶೂರೆನ್ಸ್ ಪತ್ರಗಳ ಮೂಲ ದಾಖಲೆಯನ್ನೇ ಕೇಳುವಂತಿಲ್ಲ. ಇದು ರಾಜ್ಯ ಸರ್ಕಾರದ ವ್ಯಾಪ್ತಿಗೂ ಒಳಪಡಲಿದ್ದು, 'ಎಲೆಕ್ಟ್ರಾನಿಕ್‌ ಸ್ವರೂಪದ' ದಾಖಲೆಗಳನ್ನು ಅಧಿಕೃತವೆಂದೇ ಅಧಿಕಾರಿಗಳು ಪರಿಗಣಿಸತಕ್ಕದ್ದು ಎಂದು ಸಚಿವಾಲಯ ತಿಳಿಸಿದೆ.

 ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!

ಸರಕಾರದ ಡಿಜಿಲಾಕರ್ ಅಥವಾ ಎಂಪರಿವಹನ್‌ ಆಪ್‌ಗಳ ಮೂಲಕ ದೃಢೀಕರಿಸಲಾದ 'ಎಲೆಕ್ಟ್ರಾನಿಕ್‌ ಸ್ವರೂಪದ' ದಾಖಲೆಗಳನ್ನು ಅಧಿಕೃತವೆಂದೇ ಪರಿಗಣಿಸತಕ್ಕದ್ದು ಎಂದು ಸಚಿವಾಲಯ ಹೇಳಿದೆ.! ಹಾಗಾದರೆ, ಮೂಲ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಳ್ಳಬೇಕಿಲ್ಲ ಎಂದು ಕೇಂದ್ರ ಹೇಳಿದ್ದೇಕೆ? ಸಾರ್ವಜನಿಕರಿಗೆ ಇದು ಹೇಗೆ ಸಹಾಯ ಎಂಬುದನ್ನು ಮುಂದೆ ತಿಳಿಯಿರಿ.

ಓದಿರಿ: ಸ್ಮಾರ್ಟ್‌ಫೋನ್‌ ಬಳಕೆಯನ್ನೇ ಬದಲಾಯಿಸುತ್ತೇ ಅತ್ಯಾಧುನಿಕ ಒನ್‌ಪ್ಲಸ್‌ 6T..!

ಮೂಲ ದಾಖಲೆ ವಶಪಡಿಸಿಕೊಳ್ಳಬೇಕಿಲ್ಲ!

ಮೂಲ ದಾಖಲೆ ವಶಪಡಿಸಿಕೊಳ್ಳಬೇಕಿಲ್ಲ!

ಪೊಲೀಸರು ತಮ್ಮ ಕೈಲಿರುವ ಎಲೆಕ್ಟ್ರಾನಿಕ್ ಸಾಧನ ಅಥವಾ ಮೊಬೈಲ್ ಫೋನ್‌ ಮೂಲಕವೇ ಚಾಲಕರು ಮತ್ತು ವಾಹನಗಳ ಎಲೆಕ್ಟ್ರಾನಿಕ್‌ ದಾಖಲೆಗಳ ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡಿ ಕೇಂದ್ರೀಕೃತ ಡೇಟಾಬೇಸ್‌ಗೆ ಲಾಗಿನ್ ಆಗಬಹುದು. ಹೀಗಾಗಿ ಮೂಲ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಳ್ಳಬೇಕಿಲ್ಲ ಎಂದು ಕೇಂದ್ರವು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ಡಿಜಿಲಾಕರ್ ಅನ್ನು ಒಪ್ಪಲೇಬೇಕು!

ಡಿಜಿಲಾಕರ್ ಅನ್ನು ಒಪ್ಪಲೇಬೇಕು!

ಸರಕಾರದ ಡಿಜಿಲಾಕರ್ ಅಥವಾ ಎಂಪರಿವಹನ್‌ ಆಪ್‌ಗಳ ಮೂಲಕ ದೃಢೀಕರಿಸಲಾದ 'ಎಲೆಕ್ಟ್ರಾನಿಕ್‌ ಸ್ವರೂಪದ' ದಾಖಲೆಗಳನ್ನು ಅಧಿಕೃತವೆಂದೇ ಪರಿಗಣಿಸತಕ್ಕದ್ದು ಎಂದು ಟ್ರಾಫಿಕ್ ಪೊಲೀಸರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಹಾಗಾದರೆ, ಏನಿದು ಡಿಜಿಲಾಕರ್?ಹೇಗೆ ಕೆಲಸ ಮಾಡುತ್ತಿದೆ? ಗ್ರಾಹಕರಿಗೆ ಹೇಗೆ ಸಹಾಯಕ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏನಿದು ಡಿಜಿಲಾಕರ್?

ಏನಿದು ಡಿಜಿಲಾಕರ್?

ಸಾರಿಗೆ ಇಲಾಖೆಯು ವಾಹನ ಸವಾರರ ಸಹಾಯಕ್ಕೆ ಲಾಂಚ್ ಮಾಡಿರುವ ಹೊಸ ಯೋಜನೆಯೇ ಡಿಜಿ ಲಾಕರ್. ಕೋಟಿ ಸಂಖ್ಯೆಯಲ್ಲಿ ವಾಹನಗಳು ಮತ್ತು ವಾಹನ ಸವಾರರು ಈ ಡಿಜಿ ಲಾಕರ್ ಆಪ್ ಲಾಭವನ್ನು ಪಡೆಯಬಹುದಾಗಿದೆ. ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಅಧಿಕೃತ ಪ್ರಮಾಣ ಪತ್ರಗಳನ್ನು ತೋರಿಸುವ ಬದಲು ಅದರ ಸಾಫ್ಟ್ ಕಾಪಿಯನ್ನು (ಡಿಜಿಟಲ್ ರೂಪ) ತೋರಿಸುವ ಆಪ್ ಇದಾಗಿದೆ.

ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದು!

ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದು!

ವಾಹನದ ಮತ್ತು ಚಾಲನೆಯ ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಆಪ್ ಇದಾಗಿದ್ದು, ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಬಳಕೆ ಮಾಡಿಕೊಂಡರೆ ಓರ್ಜಿನಲ್ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಅಗತ್ಯತೆ ಇರುವುದಿಲ್ಲ. ಮೊಬೈಲ್‌ ನಲ್ಲಿಯೇ ಎಲ್ಲಾ ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದಾಗಿದೆ. ಪೊಲೀಸರು ಕೇಳಿದ ಸಂದರ್ಭದಲ್ಲಿ ಪ್ರದರ್ಶಿಸಬಹುದಾಗಿದೆ.

ಡಿಜಿ ಲಾಕರ್ ಬಳಸುವುದು ಸುಲಭ

ಡಿಜಿ ಲಾಕರ್ ಬಳಸುವುದು ಸುಲಭ

ವಾಹನ ಸವಾರರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Digilocker ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಬಳಕೆ ಮಾಡಿಕೊಳ್ಳುವ ಸಲುವಾಗಿ ಯಾವುದೇ ಹಣವನ್ನು ಪಾವತಿ ಮಾಡುವ ಅಗತ್ಯತೆ ಇಲ್ಲ ಎನ್ನಲಾಗಿದೆ. ಇದೊಂದು ಉಚಿತ ಸೇವೆಯಾಗಿದೆ. ಸ್ಮಾರ್ಟ್‌ಫೋನ್‌ ಇರವವರು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ರಿಜಿಸ್ಟರ್ ಮಾಡಿಕೊಳ್ಳಬೇಕು

ರಿಜಿಸ್ಟರ್ ಮಾಡಿಕೊಳ್ಳಬೇಕು

ಪ್ಲೇಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಂಡ ನಂತರ ಸ್ಮಾರ್ಟ್‌ಫೋನಿನಲ್ಲಿ ಇನ್ಸ್‌ಸ್ಟಾಲ್ ಮಾಡಬೇಕಾಗಿದೆ. ನಂತರ ಆಪ್ ತೆರೆದು ಮೊಬೈಲ್‌ ಸಂಖ್ಯೆ ಬಳಸಿ ಲಾಗ್‌- ಇನ್‌ ಆಗಬೇಕು. ನಂತರ ಕಡ್ಡಾಯವಾಗಿ ಆಧಾರ್‌ ಸಂಖ್ಯೆಯನ್ನು ನಮೂದಿಸಬೇಕು. ತದನಂತರ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ನಿರ್ದಿಷ್ಟ ಹೆಸರಿನಲ್ಲಿ ದಾಖಲೆಗಳನ್ನು ಸೇವ್‌ ಮಾಡಬಹುದಾಗಿದೆ.

ಬೇರೆಯವರ ಗಾಡಿ ಓಡಿಸಿದರು ಚಿಂತೆ ಇಲ್ಲ

ಬೇರೆಯವರ ಗಾಡಿ ಓಡಿಸಿದರು ಚಿಂತೆ ಇಲ್ಲ

ನೀವು ಬೇರೆ ಯಾರದ್ದರೂ ವಾಹನವನ್ನು ಓಡಿಸುತ್ತಿರುವ ಸಂಧರ್ಭದಲ್ಲಿ ಪೊಲೀಸರು ತಪಾಸಣೆಗೆ ಮುಂದಾದ ಸಂದರ್ಭದಲ್ಲಿ ವಾಹನ ಮಾಲೀಕರ ಡಿಎಲ್‌ ಸಂಖ್ಯೆಯನ್ನು ತಿಳಿಸಿದರೂ ಸಾಕು. ಆದರೆ ವಾಹನದ ಮಾಲೀಕರು ಡಿಜಿ ಲಾಕರ್ ಬಳಕೆ ಮಾಡಿಕೊಳ್ಳುತ್ತಿರಬೇಕು.

ಈ ಆಪ್ ಉಪಯೋಗಗಳೇನು..?

ಈ ಆಪ್ ಉಪಯೋಗಗಳೇನು..?

ಈ ಆಪ್ ಬಳಕೆಯಿಂದಾಗಿ ಡಿಜಿಟಲ್ ಮಾದರಿಯಲ್ಲಿ ದಾಖಲೆಗಳು ಸುಲಭವಾಗಿ ಲಭ್ಯವಾಗಲಿದ್ದು, ಓರ್ಜಿನಲ್ ದಾಖಲೆ ಕಳೆದುಹೋಗುವ ಭಯವಿಲ್ಲ, ಇದಲ್ಲದೇ ಇ-ಆಧಾರ್ ಡಿಜಿಲಾಕರ್​ನಲ್ಲೇ ಸಿಗಲಿದೆ. ಹೀಗಾಗಿ ಈ ಆಪ್ ಬಳಕೆಯೂ ಸಾಕಷ್ಟು ಸಹಾಯವನ್ನು ಮಾಡುತ್ತದೆ.

ಅನಾನುಕೂಲಗಳೇನು

ಅನಾನುಕೂಲಗಳೇನು

ವಾಹನ ಸವಾರರು ಈ ಡಿಜಿ ಲಾಕ್ ಸೇವಯನ್ನು ಬಳಕೆ ಮಾಡಿಕೊಳ್ಳಲು ಸ್ಮಾರ್ಟ್ ಫೋನ್ ಬೇಕಾಗಿದ್ದು, ಸಾಮಾನ್ಯ ಫೋನಿನಲ್ಲಿ ಬಳಕೆಯೂ ಸಾಧ್ಯವಿಲ್ಲ. ಇದಲ್ಲದೇ ಈ ಆಪ್ ಕಾರ್ಯನಿರ್ವಹಿಸಲು ಇಂಟರ್​ನೆಟ್ ಬೇಕು. ಇದಲ್ಲದೇ ಆಧಾರ್ ಕಾರ್ಡ್ ಮಾಡಿಸದೆ ಹೋದರೆ ಈ ಆಪ್ ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.

ಕ್ಯಾಶ್‌ಲೆಸ್‌ ಇಂಡಿಯಾಗಾಗಿ ಬಳಸಿ ಯುಪಿಐ ಪೇಮೆಂಟ್ ಆಪ್ಸ್‌..!

ಕ್ಯಾಶ್‌ಲೆಸ್‌ ಇಂಡಿಯಾಗಾಗಿ ಬಳಸಿ ಯುಪಿಐ ಪೇಮೆಂಟ್ ಆಪ್ಸ್‌..!

ಹಿಂದೊಂದು ದಿನ ದೂರದ ಊರಲ್ಲಿ ಇರುವವರಿಗೆ ದುಡ್ಡು ಕಳಿಸಬೇಕೆಂದರೆ ಒಂದು ಮನಿ ಆರ್ಡರ್ ಅಥವಾ ಡಿಡಿ ಕಳಿಸಬೇಕಾಗಿತ್ತು. ಅವೇರಡು ಮಾಡಿದರೂ ದುಡ್ಡು ಹೋಗೋದು ಏನಿಲ್ಲ ಎಂದರು 3 ರಿಂದ 4 ದಿನ ಬೇಕಾಗಿತ್ತು. ಆದರೆ, 2016 ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರೂ. ನೋಟುಗಳ ಅಮಾನ್ಯೀಕರಣ ಘೋಷಿಸಿದ ನಂತರ ಭಾರತದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿಯಾಗಿತ್ತು. ಆಗ ಎಲ್ಲರಿಗೂ ನೆನಪಾಗಿದ್ದು ಡಿಜಿಟಲ್ ಪೇಮೆಂಟ್.

ಹೌದು, ಭಾರತ ಕ್ಯಾಶ್‌ಲೆಸ್‌ ಆಗುವತ್ತ ಹೆಜ್ಜೆ ಹಾಕುತ್ತಿದೆ. ಡಿಜಿಟಲ್ ಇಂಡಿಯಾ ಮತ್ತು ಕ್ಯಾಶ್‌ಲೆಸ್‌ ಇಂಡಿಯಾದ ಪರಿಕಲ್ಪನೆ ಸಾಕಾರಗೊಳಿಸಲು ನಿಮ್ಮ ಅಂಗೈಯಲ್ಲಿಯೇ ಹಲವು ಅಸ್ತ್ರಗಳು ಲಭ್ಯವಿವೆ. ಕ್ಯಾಶ್‌ಲೆಸ್‌ ಇಂಡಿಯಾ ನಿರ್ಮಿಸಲು ಭಾಗಶಃ ಎಲ್ಲಾ ಬ್ಯಾಂಕ್‌ಗಳು ತಮ್ಮದೇ ಆದ ಮೊಬೈಲ್ ಆಪ್‌ಗಳನ್ನು ಹೊಂದಿವೆ. SMS ಬ್ಯಾಂಕಿಂಗ್‌, ಮೊಬೈಲ್ ಬ್ಯಾಂಕಿಂಗ್ ನಂತರ ಡಿಜಿಟಲ್ ಬ್ಯಾಂಕಿಂಗ್ ಜನರನ್ನು ಸೆಳೆಯುತ್ತಿದೆ. ಯುಪಿಐ ಮೂಲಕ ಹಣವನ್ನು ತಕ್ಷಣ ಕಳಿಸುವ ಆಯ್ಕೆ ದೊರೆತಿದೆ. ಅಂತಹ ಬೆಸ್ಟ್‌ ಯುಪಿಐ ಪೇಮೆಂಟ್ ಆಪ್‌ಗಳನ್ನು ನಿಮಗಾಗಿಯೇ ಪಟ್ಟಿ ಮಾಡಲಾಗಿದೆ.

ಭೀಮ್ BHIM

ಭೀಮ್ BHIM

ಭೀಮ್ ಯುಪಿಐ ಆಪ್‌ನ್ನು ಭಾರತ ಸರ್ಕಾರದ ಒಡೆತನದಲ್ಲಿರುವ ನ್ಯಾಷನಲ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡುತ್ತಿದೆ. ಆದ್ದರಿಂದ ಬೇರೆ ಎಲ್ಲ ಆಪ್‌ಗಳಿಗಿಂತ ಈ ಆಪ್‌ನ್ನು ಜನ ನಂಬಬಹುದಾಗಿದೆ. ಡಿಸೆಂಬರ್ 30, 2016ರಲ್ಲಿ ಈ ಆಪ್ ಬಿಡುಗಡೆಯಾಗಿದ್ದು, ಹಣ ವರ್ಗಾವಣೆ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ, ಮುಂತಾದ ಪಾವತಿಗಳನ್ನು ಮಾಡಬಹುದಾಗಿದೆ. ಭೀಮ್‌ ಸೇವೆಯನ್ನು ಸಾಧಾರಣ ಜಾವಾ ಮೊಬೈಲ್‌ಗಳಲ್ಲಿಯೂ ಪಡೆಯಬಹುದಾಗಿದೆ. *99# ಕೋಡ್ ಮೂಲಕ ಭೀಮ್ ಬಳಸಬಹುದು.

ಪೋನ್‌ಪೇ PhonePe

ಪೋನ್‌ಪೇ PhonePe

ಪೋನ್‌ಪೇ ಆಪ್ ಬಳಕೆಗೆ ಬಹಳಷ್ಟು ಸರಳವಾಗಿದ್ದು, ಭಾರತದ ಪ್ರಸಿದ್ಧ ಆನ್‌ಲೈನ್ ಶಾಪಿಂಗ್ ತಾನ ಫ್ಲಿಪ್‌ಕಾರ್ಟ್‌ನ ಒಡೆತನದಲ್ಲಿದೆ. ಬಳಕೆದಾರ ಸ್ನೇಹಿಯಾಗಿರುವ ಪೋನ್‌ಪೇ ಮೊಬೈಲ್ ರಿಚಾರ್ಜ್, ಡಿಟಿಎಚ್, ಆನ್‌ಲೈನ್‌ನಲ್ಲಿ ಬಿಲ್ ಪಾವತಿ, ಮೂವೀ ಟಿಕೇಟ್ ಬುಕ್ ಮಾಡಲು ಆಯ್ಕೆ ನೀಡಲಾಗಿದೆ. ಈ ಆಪ್‌ನಲ್ಲಿ ಹಲವು ಆಫರ್‌ಗಳು ಲಭ್ಯವಿದ್ದು, ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಸದ್ಯ ಪೋನ್‌ಪೇ ಆಪ್‌ನಲ್ಲಿ 24 ಗಂಟೆಗಳಲ್ಲಿ 1 ಲಕ್ಷ ರೂ.ವರೆಗೂ ಹಣ ವರ್ಗಾವಣೆ ಮಾಡುವ ಸೌಲಭ್ಯವಿದೆ. ಭಾರತದ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಈ ಆಪ್ ಬಳಸಬಹುದಾಗಿದೆ.

ಗೂಗಲ್ ತೇಜ್ Google Tez

ಗೂಗಲ್ ತೇಜ್ Google Tez

ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಹೊಂದಿರುವ ಸರ್ಚ್‌ ಇಂಜಿನ್ ದೈತ್ಯ ಗೂಗಲ್ ತೇಜ್ ಎಂಬ ಯುಪಿಐ ಪೇಮೆಂಟ್ ಆಪ್ ಬಿಡುಗಡೆ ಮಾಡಿದೆ. ಇದರಲ್ಲಿ ನೇರವಾಗಿ ಬ್ಯಾಂಕ್ ಅಕೌಂಟ್‌ಗೆ ಹಣ ಪಾವತಿಸಬಹುದಾಗಿದೆ. ಡಿಟಿಹೆಚ್ ಬಿಲ್, ಅಗತ್ಯತೆಗಳಾದ ಮೊಬೈಲ್ ರೀಚಾರ್ಜ್, ಡಾಟಾ ಕಾರ್ಡ್‌, ಬ್ರಾಡ್‌ಬ್ಯಾಂಡ್, ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ. ಕ್ಯಾಶ್ ಮೋಡ್‌ ಸಹ ಇದ್ದು, ಹತ್ತಿರದಲ್ಲಿರುವ ಸ್ನೇಹಿತರಿಗೆ ಯಾವುದೇ ವಿವರವಿಲ್ಲದೇ ಹಣ ವರ್ಗಾವಣೆ ಮಾಡುವ ಆಯ್ಕೆ ಇದೆ. ಅದಲ್ಲದೇ ಗೂಗಲ್ ತೇಜ್ ಸ್ಕ್ರಾಚ್ ಕಾರ್ಡ್‌ ನೀಡುತ್ತಿದ್ದು 1000 ರೂ.ವರೆಗೂ ಗೆಲ್ಲುವ ಅವಕಾಶ ನೀಡಿದೆ. ಉತ್ತಮ ಯುಪಿಐ ಆಪ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಪೇಟಿಎಂ Paytm

ಪೇಟಿಎಂ Paytm

ಪೇಟಿಎಂ ಅಂದ್ರೇ ಎಲ್ಲರೂ ಹೆಸರು ಕೇಳಿಯೇ ಕೇಳಿರುತ್ತಿರಿ. ಪೇಟಿಎಂ ಮೇಕ್ ಇನ್ ಇಂಡಿಯಾ ಉತ್ಪನ್ನವಾಗಿದೆ. ಆಗಸ್ಟ್‌ 2010ರಲ್ಲಿ ನೋಯ್ಡಾದಲ್ಲಿ ವಿಜಯ್ ಶೇಖರ್ ಶರ್ಮಾ ಎಂಬುವವರು ಪೇಟಿಎಂ ಸ್ಥಾಪಿಸಿದರು. ಪೇಟಿಎಂ ಭಾರತದ 10 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ಹಣ ವರ್ಗಾವಣೆ, ಮೊಬೈಲ್ ರಿಚಾರ್ಜ್‌, ಅಗತ್ಯ ಬಿಲ್‌ಗಳ ಪಾವತಿ, ಟ್ರಾವೆಲ್, ಮೂವೀಸ್, ಇವೆಂಟ್‌ಗಳ ಬುಕ್ಕಿಂಗ್ ಮಾಡಲು ಮತ್ತು ಸಣ್ಣ ಸಣ್ಣ ಅಂಗಡಿಗಳಲ್ಲಿಯೂ ಸಹ ಪೇಟಿಎಂ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸುವ ಆಯ್ಕೆಯನ್ನು ಪೇಟಿಎಂ ನೀಡಿದೆ. 2018ರ ಜನವರಿ ಹೊತ್ತಿಗೆ ಪೇಟಿಎಂ 10 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಅದಲ್ಲದೇ ಇತ್ತೀಚೆಗೆ ಪೇಟಿಎಂ ತನ್ನ ಆಪ್‌ನಲ್ಲಿ ಮನರಂಜನೆಗೂ ಒತ್ತು ನೀಡಿದ್ದು, ಹೊಸ ಹೊಸ ಆಯ್ಕೆಗಳನ್ನು ನೀಡಿದೆ.

ಎಸ್‌ಬಿಐ ಪೇ SBI Pay

ಎಸ್‌ಬಿಐ ಪೇ SBI Pay

ಎಸ್‌ಬಿಐ ಪೇ ಆಪ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ. ಬೇರೆ ಯುಪಿಐ ಆಪ್‌ಗಳಂತೆ ಇದು ಸಹ ಸಾಮಾನ್ಯ ಫೀಚರ್‌ಗಳನ್ನು ಹೊಂದಿದೆ. ಇದರ ಜೊತೆಗೆ ಎಸ್‌ಬಿಐ ಪೇ ನಿಮ್ಮ ನಗರದಲ್ಲಿರುವ ಲೆಟೇಸ್ಟ್‌ ಡೀಲ್ಸ್‌ ಬಗ್ಗೆ ನಿಮಗೆ ಸೂಚನೆ ನೀಡುತ್ತದೆ. ಸ್ಪಾ, ಸಲೂನ್, ಬಫ್ಫೇಟ್‌ಗಳಲ್ಲಿ , ವಾರಾಂತ್ಯದ ಚಟುವಟಿಕೆಗಳಲ್ಲಿ ಮತ್ತು ಅನೇಕ ಸೇವೆಗಳಲ್ಲಿ ಎಸ್‌ಬಿಐ ಪೇ ಆಪ್ ಬಳಸಿ ರಿಯಾಯಿತಿ ಪಡೆಯಬಹುದು.

ಆಕ್ಸಿಸ್ ಪೇ Axis Pay

ಆಕ್ಸಿಸ್ ಪೇ Axis Pay

ಈ ಆಪ್ ಸಹ ಎಸ್‌ಬಿಐ ಪೇ ಆಪ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಈ ಆಪ್‌ನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಹಣ ವರ್ಗಾವಣೆ, ರೀಚಾರ್ಜ್‌, ಬಿಲ್ ಪಾವತಿ ಮುಂತಾದ ಸಾಮಾನ್ಯ ಫೀಚರ್ಸ್‌ಗಳನ್ನು ಬಿಟ್ಟರೆ ಬೇರೆ ಆಪ್‌ಗಳಂತೆ ವಿಶೇಷ ಫೀಚರ್‌ಗಳು ಇಲ್ಲ.

ಚಿಲ್ಲರ್ Chillr

ಚಿಲ್ಲರ್ Chillr

ಯುಪಿಐ ವ್ಯವಸ್ಥೆಯನ್ನು ಗುರಿಯಾಗಿಟ್ಟುಕೊಂಡು ರೂಪುಗೊಂಡಿರುವ ಈ ಆಪ್ ಖಾಸಗಿ ಕಾರ್ಪೊರೇಷನ್‌ನಿಂದ ನಿರ್ವಹಿಸಲ್ಪಡುತ್ತಿದೆ. ಸುರಕ್ಚಿತ ಹಣ ವರ್ಗಾವಣೆ, ಬಹು ಭಾಷೆಗೆ ಬೆಂಬಲಿತ, ನಿಮ್ಮ ಬಿಲ್‌ಗಳ ಹಂಚಿಕೆ, ಅಗತ್ಯ ಬಿಲ್ ಪಾವತಿ ಮತ್ತು ರೀಚಾರ್ಜ್, ಬ್ಯಾಂಕ್ ಅಕೌಂಟ್ ಬ್ಯಾಲೆನ್ಸ್‌, ಟ್ರಾನ್ಸ್ಯಾಕ್ಷನ್ ಸ್ಟೇಟ್‌ಮೆಂಟ್, ಸ್ಟೋರ್ ಪೇಮೆಂಟ್ಸ್ ನೋಡುವುದು, ಐಎಂಪಿಎಸ್ ಮತ್ತೀತರ ಸೌಲಭ್ಯಗಳು ಲಭ್ಯವಿವೆ.

ಪಾಕೇಟ್ಸ್‌ Pockets

ಪಾಕೇಟ್ಸ್‌ Pockets

ಚಿಲ್ಲರ್ ಆಪ್‌ನಂತೆ ಪಾಕೇಟ್ಸ್‌ ಆಪ್ ಕಾರ್ಯನಿರ್ವಹಸುತ್ತೆ. ಐಸಿಐಸಿಐ ಬ್ಯಾಂಕ್ ಈ ಆಪ್‌ನ್ನು ಅಭಿವೃದ್ಧಿಪಡಿಸಿದೆ. ವಿಸಾ ಕಾರ್ಡ್‌ನಂತೆ ಎಲ್ಲಿ ಬೇಕಾದರೂ ಬಳಸುವ ಆಯ್ಕೆ ಇದೆ. ಇದಲ್ಲದೇ ಯುಪಿಐ, ಎನ್‌ಎಫ್‌ಸಿ, ಟಚ್ & ಪೇ, ಎಂವಿಸಾ ಮತ್ತು ಭಾರತ್ ಕ್ಯೂಆರ್ ಕೋಡ್ ಆಯ್ಕೆ ನೀಡಿದೆ. ಹಲವು ವಿಶೇಷವಾದ ಡೀಲ್ಸ್‌ಗಳನ್ನು ನೀಡುತ್ತದೆ.

Best Mobiles in India

English summary
Carry driving license, RC on your phone! Govt validates digital copies. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X