ಪ್ರವಾಸಕ್ಕೆ ಸಿದ್ಧರಾಗಿದ್ದೀರ ಎಂದಾದರೆ ಸ್ಮಾರ್ಟ್‌ಫೋನ್‌ನಲ್ಲಿ ಕಡ್ಡಾಯವಾಗಿ ಈ ಕೆಲಸ ಮಾಡಿ!

|

ಇಂದು ಸ್ಮಾರ್ಟ್‌ಫೋನ್‌ನಲ್ಲಿ ಇಡೀ ಜಗತ್ತನ್ನು ವೀಕ್ಷಣೆ ಮಾಡಬಹುದು, ಅಷ್ಟು ಸೌಕರ್ಯವನ್ನು ತಂತ್ರಜ್ಞಾನ ನೀಡಿದೆ. ಇದರ ನಡುವೆ ಹಲವರು ದೇಶ ಸುತ್ತುವ ಅಥವಾ ಕೆಲವು ಸಂದರ್ಭಗಳಲ್ಲಿ ದೂರದ ಯಾವುದೋ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಅದರಲ್ಲೂ ಈಗ ಪ್ರವಾಸ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಪ್ರವಾಸಕ್ಕೆ ಹೊರಡುವಾಗ ಅಗತ್ಯ ವಸ್ತುಗಳು ಎಷ್ಟು ಮುಖ್ಯವೋ ತಂತ್ರಜ್ಞಾನದ ಬಳಕೆ ಸಹ ಅಷ್ಟೇ ಮುಖ್ಯ. ಇದರಿಂದ ಸುರಕ್ಷತೆಯಿಂದ ಹೋಗಿ ಸಂತೋಷವಾಗಿ ವಾಪಸ್‌ ಬರಬಹುದು.

ಚಳಿಗಾಲ

ಹೌದು, ಇದೀಗ ಚಳಿಗಾಲ ಅಂರಂಭ ಆಗಿದ್ದು, ಈ ವೇಳೆ ಹಲವರು ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಹಾಗೆಯೇ ನೀವೇನಾದರೂ ಈ ಚಳಿಗಾಲದಲ್ಲಿ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕು ಎಂದು ಯೋಚಿಸಿದ್ದರೆ ಪ್ರಮುಖವಾಗಿ ನೀವು ಮಾಡಲೇಬೇಕಾದ ಕೆಲವು ಕೆಲಸಗಳನ್ನು ಲಿಸ್ಟ್‌ ಮಾಡಿದ್ದೇವೆ. ಇದಕ್ಕಾಗಿ ನಿಮ್ಮ ಬಳಿ ಸ್ಮಾರ್ಟ್‌ಫೋನ್‌ ಇದ್ದರೆ ಸಾಕು. ಈ ಮೂಲಕ ತುರ್ತು ಸಂದರ್ಭದಲ್ಲಿ ಹೇಗೆ ಬಚಾವಾಗಬಹುದು?, ಸ್ಥಳ ಮಾಹಿತಿ ತಪ್ಪಿ ಹೋದರೆ ಸರಿಯಾದ ಮಾರ್ಗ ಕಂಡುಕೊಳ್ಳುವುದು ಹೇಗೆ? ಎಂಬಿತ್ಯಾದಿ ವಿವರವನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಎಮರ್ಜೆನ್ಸಿ ಬ್ರಾಡ್‌ಕಾಸ್ಟ್‌ ನೋಟಿಫಿಕೇಶನ್‌ ಆನ್ ಮಾಡಿ

ಎಮರ್ಜೆನ್ಸಿ ಬ್ರಾಡ್‌ಕಾಸ್ಟ್‌ ನೋಟಿಫಿಕೇಶನ್‌ ಆನ್ ಮಾಡಿ

ನೀವು ದೂರದ ಸ್ಥಳ ಅಥವಾ ಭೂಕುಸಿತ ಅಥವಾ ಇತರ ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದರೆ, ಕಡ್ಡಾಯವಾಗಿ ನಿಮ್ಮ ಫೋನ್‌ನಲ್ಲಿ ಎಮರ್ಜೆನ್ಸಿ ಬ್ರಾಡ್‌ಕಾಸ್ಟ್‌ ನೋಟಿಫಿಕೇಶನ್‌ ಆನ್ ಮಾಡಿ. ಇದನ್ನು ಆನ್ ಮಾಡುವುದರಿಂದ ಮುಂಗಡ ಎಚ್ಚರಿಕೆಗಳು, ಯಾವಾಗ ಏನಾಗಲಿದೆ ಎಂಬ ನೋಟಿಫಿಕೇಶನ್‌ಗಳನ್ನು ಪಡೆಯಬಹುದು.

ಲಾಕ್ ಸ್ಕ್ರೀನ್‌ನಲ್ಲಿ ಮೆಡಿಕಲ್‌ ID, ತುರ್ತು ಸಂಪರ್ಕ ಇರಿಸಿಕೊಳ್ಳಿ

ಲಾಕ್ ಸ್ಕ್ರೀನ್‌ನಲ್ಲಿ ಮೆಡಿಕಲ್‌ ID, ತುರ್ತು ಸಂಪರ್ಕ ಇರಿಸಿಕೊಳ್ಳಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ತುರ್ತು ಸಂಪರ್ಕ ಮಾಹಿತಿ ಮತ್ತು ವೈದ್ಯಕೀಯ ಮಾಹಿತಿಯನ್ನು ನೀವು ಇರಿಸಿಕೊಂಡರೆ ತುಂಬಾ ಸಹಕಾರಿಯಾಗಲಿದೆ. ಪ್ರವಾಸದ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಎದುರಾದರೆ ಇತರರು ನಿಮಗೆ ಸಹಾಯ ಮಾಡಲು ಇದು ಅನುಕೂಲ. ಹಾಗೆಯೇ ನಿಮ್ಮ ಕುಟುಂಬವನ್ನು ಅವರು ಸಂಪರ್ಕಿಸಬಹುದು.

ಸ್ಥಳೀಯ ಅಧಿಕಾರಿಗಳು, ಹೋಟೆಲ್‌ ಸೇರಿದಂತೆ ಪ್ರಮುಖ ಸಂಪರ್ಕ ವಿವರ ಸೇವ್‌ ಮಾಡಿ

ಸ್ಥಳೀಯ ಅಧಿಕಾರಿಗಳು, ಹೋಟೆಲ್‌ ಸೇರಿದಂತೆ ಪ್ರಮುಖ ಸಂಪರ್ಕ ವಿವರ ಸೇವ್‌ ಮಾಡಿ

ನೀವು ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ಹೋಟೆಲ್‌ಗಳಲ್ಲಿ ತಂಗಬೇಕಾಗುತ್ತದೆ. ಹೀಗಾಗಿ ಆ ಹೋಟೆಲ್‌ನ ಫೋನ್‌ ನಂಬರ್‌ ಹಾಗೂ ಆ ಪ್ರದೇಶದ ಸ್ಥಳೀಯ ಅಧಿಕಾರಿಗಳು, ಪೊಲೀಸರ ನಂಬರ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇವ್‌ ಮಾಡಿ ಇಟ್ಟುಕೊಳ್ಳಿ. ಯಾಕೆಂದರೆ ಯಾರಾದರೂ ನಿಮಗೆ ತೊಂದರೆ ಉಂಟು ಮಾಡಿದರೆ ಅಥವಾ ಏನಾದರೂ ಸಮಸ್ಯೆ ಎದುರಾದರೆ ಇವರಿಂದ ಸಹಾಯ ಸಿಗುತ್ತದೆ.

ಆಫ್‌ಲೈನ್ ನಕ್ಷೆ ಡೌನ್‌ಲೋಡ್ ಮಾಡಿ

ಆಫ್‌ಲೈನ್ ನಕ್ಷೆ ಡೌನ್‌ಲೋಡ್ ಮಾಡಿ

ಸಾಮಾನ್ಯವಾಗಿ ಎಲ್ಲಾ ಸಮಯದಲ್ಲೂ ನೆಟ್‌ವರ್ಕ್‌ ಕೆಲಸ ಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ಈ ಕಾರಣಕ್ಕೆ ಗೂಗಲ್‌ ಪ್ರಮುಖ ಫೀಚರ್ಸ್‌ಗಳಲ್ಲಿ ಒಂದಾದ ಆಫ್‌ಲೈನ್ ನಕ್ಷೆ ಡೌನ್‌ಲೋಡ್ ಮಾಡಿಕೊಂಡರೆ ನೀವು ಕಾರಿನಲ್ಲಿ ಪ್ರಯಾಣಿಸುವಾಗ ಅಥವಾ ಟ್ರೆಕ್ಕಿಂಗ್‌ ಮಾಡುವಾಗ ಸರಿಯಾದ ಮಾರ್ಗ ನಿಮಗೆ ಸಿಗುತ್ತದೆ.

ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌ನೊಂದಿಗೆ ಇತರೆ ದಾಖಲೆ ಇಟ್ಟುಕೊಳ್ಳಿ

ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌ನೊಂದಿಗೆ ಇತರೆ ದಾಖಲೆ ಇಟ್ಟುಕೊಳ್ಳಿ

ಪ್ರವಾಸದ ಸಂದರ್ಭದಲ್ಲಿ ನೀವು ನಿಮ್ಮ ಎಲ್ಲಾ ಪ್ರಮುಖ ದಾಖಲಾತಿಗಳನ್ನು ಡಿಜಿಲಾಕರ್‌ನಲ್ಲಿ ಇರಿಸಿಕೊಳ್ಳಿ. ಈ ಮೂಲಕ ಯಾವುದೇ ಪ್ರದೇಶದಲ್ಲಿ ಕಾನೂನಿನ ತೊಡಕು ಅಥವಾ ಇನ್ನೇನಾದರೂ ಸಮಸ್ಯೆ ಎದುರಾದರೆ ಇವುಗಳು ಸಹಾಯಕ್ಕೆ ಬರುತ್ತವೆ.

ಯುಪಿಐ ಆಧಾರಿತ ಆಪ್‌ ಸೇವೆ ಸಕ್ರಿಯಗೊಳಿಸಿ

ಯುಪಿಐ ಆಧಾರಿತ ಆಪ್‌ ಸೇವೆ ಸಕ್ರಿಯಗೊಳಿಸಿ

ಪ್ರವಾಸಕ್ಕೆ ಅಂತಾ ನಿರ್ಧಾರ ಮಾಡಿದ ಮೇಲೆ ಹಣ ಮುಖ್ಯ. ಈಗ ಎಲ್ಲವೂ ಡಿಜಿಟಲೀಕರಣ ಆಗಿರುವುದರಿಂದ ಯುಪಿಐ ಆಧಾರಿತ ಅಥವಾ ವಾಲೆಟ್ ಆಧಾರಿತ ಪಾವತಿ ಆಪ್‌ಗಳ ಸೇವೆಗಳನ್ನು ಸಕ್ರಿಯಗೊಳಿಸಬೇಕು. ಇದರಿಂದ ನಿಮಗೇನಾದರೂ ಹಣದ ಕೊರತೆಯಾದರೆ ಅಥವಾ ನಿಮ್ಮ ವ್ಯಾಲೆಟ್ ಅನ್ನು ಕಳೆದುಕೊಂಡರೆ ಇದು ಸಹಾಯಕ್ಕೆ ಬರುತ್ತದೆ.

ಫೋನ್‌ನಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ವಿವರ ಇರಿಸಿಕೊಳ್ಳಿ

ಫೋನ್‌ನಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ವಿವರ ಇರಿಸಿಕೊಳ್ಳಿ

ಹಣಕಾಸಿನ ವಿಚಾರದಲ್ಲಿ ಮತ್ತೊಂದು ಕೆಲಸ ಎಂದರೆ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ನಿಮ್ಮ ಫೋನ್‌ನಲ್ಲಿ ಇರಿಸಿಕೊಳ್ಳುವುದು. ನೀವು ಆನ್‌ಲೈನ್ ಪಾವತಿಗಳನ್ನು ಮಾಡಲು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಕೆಲವು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಸ್ಯಾಮ್‌ಸಂಗ್‌ ಪೇ ಆಯ್ಕೆ ಹೊಂದಿದ್ದು, ಈ ಕಾರ್ಡ್‌ಗಳ ಮೂಲಕ ನೇರವಾಗಿ ಪಾವತಿ ಮಾಡುವ ಆಯ್ಕೆಯನ್ನು ನೀಡಲಾಗಿದೆ.

ಫೈಂಡ್ ಮೈ ಸರ್ವಿಸ್‌ ಸಕ್ರಿಯಗೊಳಿಸಿ

ಫೈಂಡ್ ಮೈ ಸರ್ವಿಸ್‌ ಸಕ್ರಿಯಗೊಳಿಸಿ

ನಿಮ್ಮ ಫೋನ್ ಅನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಯಾಕೆಂದರೆ ಇಷ್ಟೆಲ್ಲಾ ಮಾಹಿತಿಯನ್ನು ನೀವು ಫೋನ್‌ನಲ್ಲಿ ಇರಿಸುತ್ತೀರ ಎಂದಾದರೆ ಫೋನ್‌ನ ರಕ್ಷಣೆ ಸಹ ಅತಿಮುಖ್ಯ. ಇದಕ್ಕಾಗಿ ನೀವು ಫೋನ್‌ನಲ್ಲಿ ಫೈಂಡ್ ಮೈ ಸರ್ವಿಸ್ ಅನ್ನು ಆನ್‌ ಮಾಡಿಕೊಳ್ಳುವ ಮೂಲಕ ಫೋನ್‌ ಏನಾದರೂ ಕಳೆದುಹೋದರೆ, ತಪ್ಪಿದ ಜಾಗದಲ್ಲಿ ಇರಿಸಿದರೆ ಪತ್ತೆ ಮಾಡಲು ಸಹಾಯಕವಾಗುತ್ತದೆ.

ಏರ್‌ಟ್ಯಾಗ್ಸ್‌ ಟ್ರ್ಯಾಕಿಂಗ್ ಡಿವೈಸ್‌ ಬಳಸಿ

ಏರ್‌ಟ್ಯಾಗ್ಸ್‌ ಟ್ರ್ಯಾಕಿಂಗ್ ಡಿವೈಸ್‌ ಬಳಸಿ

ಪ್ರಯಾಣದಲ್ಲಿರುವಾಗ ನೀವು ಸ್ಮಾರ್ಟ್‌ಫೋನ್‌ ಅಥವಾ ಹಣವನ್ನಷ್ಟೇ ಅಲ್ಲದೆ ಸಾಕಷ್ಟು ಲಗೇಜ್‌ ಸಹ ನಿಮ್ಮ ಜೊತೆ ಇರುತ್ತದೆ. ಇದಕ್ಕಾಗಿ ನೀವು ಏರ್‌ಟ್ಯಾಗ್ಸ್‌ ಟ್ರ್ಯಾಕಿಂಗ್ ಹಾಗೂ ಇತರೆ ಡಿವೈಸ್‌ ಬಳಕೆ ಮಾಡಬೇಕು. ಇದರಿಂದ ಲಗೇಜ್‌ಅನ್ನು ಮರೆತು ಎಲ್ಲಾದರೂ ಇಟ್ಟರೆ, ಅಥವಾ ಯಾರಾದರೂ ಅದನ್ನು ಕದ್ದುಹೋಯ್ದರೆ ಪತ್ತೆ ಮಾಡಲು ಸುಲಭವಾಗುತ್ತದೆ.

ಜಿಪಿಎಸ್ ಟ್ರ್ಯಾಕಿಂಗ್‌ ಆಯ್ಕೆ ಇರುವ ಡಿಜಿಟಲ್ ಲಾಕ್‌ ಬಳಸಿ

ಜಿಪಿಎಸ್ ಟ್ರ್ಯಾಕಿಂಗ್‌ ಆಯ್ಕೆ ಇರುವ ಡಿಜಿಟಲ್ ಲಾಕ್‌ ಬಳಸಿ

ಏರ್‌ಟ್ಯಾಗ್ಸ್‌ ಟ್ರ್ಯಾಕಿಂಗ್ ರೀತಿಯಲ್ಲೇ ಇವು ಸಹ ನಿಮ್ಮ ಲಗೇಜ್‌ಗೆ ಭದ್ರತೆ ನೀಡುತ್ತವೆ. ಲಗೇಜ್‌ ಬ್ಯಾಗ್‌ ಅನ್ನು ಲಾಕ್‌ ಮಾಡುವುದಷ್ಟೇ ಅಲ್ಲದೆ ಈ ಗ್ಯಾಜೆಟ್‌ಗಳಲ್ಲಿ ಜಿಪಿಎಸ್‌ ಆಯ್ಕೆ ಇರುವುದರಿಂದ ಲಗೇಜ್‌ ಎಲ್ಲಿದೆ ಎಂದು ಟ್ರ್ಯಾಕ್‌ ಮಾಡಲು ಸಹಕಾರಿಯಾಗುತ್ತದೆ.

Best Mobiles in India

English summary
Must do things on phone before travelling in winters.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X