Mustard ಕಂಪೆನಿಯಿಂದ ಎರಡು ಸ್ಮಾರ್ಟ್‌ವಾಚ್ ಅನಾವರಣ; ಬೆಲೆ ಎಷ್ಟು?

|

ಸ್ಮಾರ್ಟ್ ಗ್ಯಾಜೆಟ್‌ಗಳ ವಿಭಾಗದಲ್ಲಿ ಸ್ಮಾರ್ಟ್‌ವಾಚ್‌ ಇತ್ತೀಚೆಗಂತೂ ಬಹುಪಾಲು ಎಲ್ಲರೂ ಇಷ್ಟಪಡುವ ಡಿವೈಸ್‌ ಆಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಈ ವಾಚ್‌ಗಳು ನೀಡುವ ಆರೋಗ್ಯ ಸಂಬಂಧಿತ ಮೇಲ್ವಿಚಾರಣೆ ಮಾಹಿತಿ. ಇದರ ಬೆನ್ನಲ್ಲೇ ಈಗ ದೆಹಲಿ ಮೂಲಕ ಎಲೆಕ್ಟ್ರಾನಿಕ್ಸ್ ಲೈಫ್‌ಸ್ಟೈಲ್‌ ಕಂಪೆನಿಯೊಂದು ಎರಡು ಪ್ರಮುಖ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣಗೊಳಿಸಿದೆ. ಈ ವಾಚ್‌ಗಳು ಗೈರೋ ಸೆನ್ಸರ್‌ಗಳನ್ನ ಒಳಗೊಂಡಿವೆ.

ಮಸ್ಟರ್ಡ್

ಹೌದು, ಭಾರತದ ಅದರಲ್ಲೂ ದೆಹಲಿ ಮೂಲದ ಮಸ್ಟರ್ಡ್ ಕಂಪೆನಿ 'ಮಸ್ಟರ್ಡ್ ರಾಕ್‌' ಹಾಗೂ 'ಮಸ್ಟರ್ಡ್ ಟೆಂಪೋ' ಎಂಬ ಎರಡು ಹೊಸ ಸ್ಮಾರ್ಟ್ ವಾಚ್‌ಗಳನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ವಾಚ್‌ಗಳು ಪ್ರೀಮಿಯಂ ವಿನ್ಯಾಸದೊಂದಿಗೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿವೆ. ಹಾಗೆಯೇ ಒಮ್ಮೆ ಚಾರ್ಜ್‌ ಮಾಡಿದರೆ ಒಂದು ವಾರಗಳ ಕಾಲ ಬಳಕೆ ಮಾಡಬಹುದು. ಹಾಗಿದ್ರೆ ಇವುಗಳ ಮತ್ತಷ್ಟು ಫೀಚರ್ಸ್‌ ಹಾಗೂ ಭಾರತದಲ್ಲಿನ ಬೆಲೆ ಎ‍ಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಈ ಮಸ್ಟರ್ಡ್ ರಾಕ್ ವಾಚ್‌ 1.81 ಇಂಚಿನ ಡಿಸ್‌ಪ್ಲೇ ಹೊಂದಿದ್ದರೆ, ಮಸ್ಟರ್ಡ್ ಟೆಂಪೋ 1.69 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ವಾಚ್‌ಗಳನ್ನು ಕ್ರೌನ್‌ ಬಟನ್‌ ಮೂಲಕ ನಿಯಂತ್ರಣ ಮಾಡಬಹುದಾಗಿದೆ. ಇನ್ನು ರಾಕ್‌ ವಾಚ್ 204 ppi ಜೊತೆಗೆ 240 x 286 ಪಿಕ್ಸೆಲ್‌ ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿದ್ದು, ಇದು 500Nits ಬ್ರೈಟ್‌ನೆಸ್ ನೀಡಲಿದೆ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಮಸ್ಟರ್ಡ್ ರಾಕ್‌ ಹಾಗೂ ಮಸ್ಟರ್ಡ್ ಟೆಂಪೋ ಸ್ಮಾರ್ಟ್ವಾಚ್‌ಗಳು 100 ಕ್ಕೂ ಹೆಚ್ಚು ಕ್ಲೌಡ್-ಆಧಾರಿತ ವೈಯುಕ್ತೀಕರಿಸಬಹುದಾದ ವಾಚ್ ಫೇಸ್‌ಗಳನ್ನು ಹೊಂದಿದ್ದು, ಪ್ರೀಮಿಯಂ ವಿನ್ಯಾಸದ ಜೊತೆಗೆ ಬಹು ಬಣ್ಣದ ಆಯ್ಕೆಗಳನ್ನು ಪಡೆದಿವೆ. ಇವು ನಿದ್ರೆ ಮಾನಿಟರ್, ಡ್ರಿಂಕಿಂಗ್‌ ಮಾನಿಟರ್, ವಿಶ್ರಾಂತಿ ಜ್ಞಾಪನೆ, ಮೇನ್ಸ್ಟ್ರುಯೇಷನ್ ಟ್ರ್ಯಾಕರ್, SpO2 ಟ್ರ್ಯಾಕರ್ ಮತ್ತು ಹೃದಯ ಬಡಿತ ಮಾನಿಟರ್‌ ಸೇರಿದಂತೆ ಇನ್ನಿತರೆ ಪ್ರಮುಖ ಫೀಚರ್ಸ್‌ ಗಳನ್ನು ಪಡೆದುಕೊಂಡಿವೆ.

ಸ್ಮಾರ್ಟ್

ಹಾಗೆಯೇ, ಈ ಸ್ಮಾರ್ಟ್ ವಾಚ್‌ಗಳು ಗೈರೋ ಸೆನ್ಸರ್‌ಗಳನ್ನು ಒಳಗೊಂಡಿದ್ದು, ಬಳಕೆದಾರ ನಡಿಗೆಯ ದೂರ ಮತ್ತು ಕ್ಯಾಲೊರಿ ಮೇಲೆ ಹೆಚ್ಚಿನ ನಿಗಾ ಇಡಲಿವೆ. ಇನ್ನುಳಿದಂತೆ ರಾಕ್ ಸ್ಮಾರ್ಟ್‌ವಾಚ್‌ 120+ ಹಾಗೂ ಟೆಂಪೋ ಸ್ಮಾರ್ಟ್‌ವಾಚ್‌ 100+ ಸ್ಪೋರ್ಟ್ಸ್ ಮೋಡ್‌ಗಳನ್ನು ಬೆಂಬಲಿಸಲಿದ್ದು, ಆಂಡ್ರಾಯ್ಡ್‌ ಹಾಗೂ ಐಓಎಸ್‌ ಫೋನ್‌ಗಳಿಗೆ ಸಪೋರ್ಟ್‌ ಮಾಡಲಿವೆ.

ಸ್ಮಾರ್ಟ್‌ವಾಚ್

ಮಸ್ಟರ್ಡ್ ರಾಕ್ ಸ್ಮಾರ್ಟ್‌ವಾಚ್ ಬ್ಲೂಟೂತ್ ಕರೆ ಹಾಗೂ AI ವಾಯ್ಸ್ ಅಸಿಸ್ಟೆಂಟ್ ಜೊತೆಗೆ ಕೆಲವು ಇನ್‌ಬಿಲ್ಟ್‌ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗೆಯೇ ಈ ವಾಚ್‌ಗಳ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾವನ್ನು ನಿಯಂತ್ರಣ ಮಾಡಬಹುದಾಗಿದೆ. ಸ್ಮಾರ್ಟ್‌ವಾಚ್‌ಗಳನ್ನು ಶೇಕ್‌ ಮಾಡುವುದರಿಂದ ಕನೆಕ್ಟ್‌ ಆದ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ತೆರೆದುಕೊಳ್ಳುತ್ತದೆ. ಹಾಗೆಯೇ ಈ ವಾಚ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗೆ ಬಂದ ನೋಟಿಫಿಕೇಶನ್‌ ಗಳನ್ನೂ ಓದಬಹುದಾಗಿದೆ. ಇವು ವಿವಿಧ ಭಾಷೆಗಳನ್ನು ಬೆಂಬಲಿಸಲಿವೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಮಸ್ಟರ್ಡ್ ರಾಕ್‌ ಹಾಗೂ ಮಸ್ಟರ್ಡ್ ಟೆಂಪೋ ಸ್ಮಾರ್ಟ್ವಾಚ್‌ಗಳು ಯುಎಸ್‌ಬಿ ಮ್ಯಾಗ್ನೆಟಿಕ್ ಚಾರ್ಜಿಂಗ್ ಬೆಂಬಲಿತ 280mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಹಾಗೆಯೇ ಸ್ಮಾರ್ಟ್ ವಾಚ್ IP68 ರೇಟಿಂಗ್ ಅನ್ನು ಹೊಂದಿದ್ದು, ನೀರು, ಬೆವರು ಹಾಗೂ ಧೂಳು ನಿರೋಧಕವಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಮಸ್ಟರ್ಡ್ ರಾಕ್ ಮತ್ತು ಮಸ್ಟರ್ಡ್ ಟೆಂಪೋ ಒಂದು ವರ್ಷದ ವಾರಂಟಿಯೊಂದಿಗೆ ಮಾರಾಟವಾಗುತ್ತಿದ್ದು, ಮಸ್ಟರ್ಡ್ ರಾಕ್‌ ಸ್ಮಾರ್ಟ್‌ವಾಚ್‌ಗೆ ಆರಂಭಿಕ ಕೊಡುಗೆಯಾಗಿ 2,199ರೂ. ಬೆಲೆ ಪಡೆದಿದೆ ಹಾಗೆಯೇ ಮಸ್ಟರ್ಡ್ ಟೆಂಪೋ ಸ್ಮಾರ್ಟ್‌ವಾಚ್‌ 1,399ರೂ. ಗಳ ಬೆಲೆ ಹೊಂದಿದೆ. ಇವು ಸಿಲ್ವರ್, ಬ್ಲ್ಯಾಕ್ ಹಾಗೂ ಗ್ರೀನ್, ಬ್ಲಾಕ್‌, ರೆಡ್‌ ವೇರಿಯಂಟ್‌ನಲ್ಲಿ ಲಭ್ಯವಿದ್ದು, ಬೆಲೆಯಲ್ಲಿ ಸ್ವಲ್ಪ ಬದಲಾವಣೆ ಆಗಲಿದೆ. ಇನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ mustardbrand.com, ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದಾಗಿದೆ ಹಾಗೆಯೇ ಇವು ರಿಟೇಲ್‌ ಸ್ಟೋರ್‌ಗಳಲ್ಲಿಯೂ ಲಭ್ಯ ಇವೆ.

Best Mobiles in India

English summary
Smartwatch is popular in the segment of smart gadgets. Now two new smartwatches have been unveiled by Mustard company.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X