29 ಮಿಲಿಯನ್ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌..! ನಿಮ್ಮ FB ಕೂಡ ಹ್ಯಾಕ್‌ ಆಗಿದಿಯಾ ನೋಡಿ..!

|

ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಕೆಲವು ತಿಂಗಳು ಹಿಂದೆ ಬಹುದೊಡ್ಡ ಮಾಹಿತಿ ಸೋರಿಕೆ ಹಗರಣಕ್ಕೆ ಸಾಕ್ಷಿಯಾಗಿತ್ತು. ಆ ಹಗರಣದ ತನಿಖೆ ಮುಗಿಸಿರುವ ಫೇಸ್‌ಬುಕ್‌ ಈಗ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಮಾಹಿತಿ ಸೋರಿಕೆಯಾಗಿರುವುದನ್ನು ದೃಢಪಡಿಸಿದೆ.

29 ಮಿಲಿಯನ್ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌.! ನಿಮ್ಮ FB ಕೂಡ ಹ್ಯಾಕ್‌ ಆಗಿದಿಯಾ.?

ಹೌದು, ಇಂದು ಫೇಸ್‌ಬುಕ್‌ ತನ್ನ ಬ್ಲಾಗ್‌ನಲ್ಲಿ ಬಹಿರಂಗಪಡಿಸರುವಂತೆ ಸುಮಾರು 29 ಮಿಲಿಯನ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಿದ್ದು, ಹ್ಯಾಕರ್‌ಗಳು ಹೇಗೆ ಡೇಟಾವನ್ನು ಕದ್ದಿದ್ದಾರೆ ಎಂಬುದನ್ನು ಸಹ ವಿವರಿಸಿದೆ. ಅದರಂತೆ, ನಿಮ್ಮ ಅಕೌಂಟ್‌ ಕೂಡ ಹ್ಯಾಕ್‌ ಆಗಿದೆಯಾ ಎಂಬುದನ್ನು ತಿಳಿದುಕೊಳ್ಳಲು ಟೂಲ್‌ ಪರಿಚಯಿಸಿದ್ದು, ಆ ಟೂಲ್‌ ಯಾವುದು..? ಹ್ಯಾಕರ್‌ಗಳು ಹೇಗೆ ಡೇಟಾ ಕದ್ದರು ಎಂಬುದನ್ನು ಮುಂದೆ ನೋಡಿ..

View As ಫೀಚರ್ ಬಳಕೆ

View As ಫೀಚರ್ ಬಳಕೆ

ಫೇಸ್‌ಬುಕ್‌ನಲ್ಲಿ ಮಾಹಿತಿ ಕದಿಯಲು ಹ್ಯಾಕರ್ಸ್‌ View As ಫೀಚರ್ ಬಳಸಿರುವುದು ಸ್ಪಷ್ಟವಾಗಿದೆ. ಅದರಿಂದ ಅಕೌಂಟ್‌ ಮಾಹಿತಿಯನ್ನು ಕದಿಯಲು ಹ್ಯಾಕರ್ಸ್‌ ಯಶಸ್ವಿಯಾಗಿದ್ದರು.

ವೈಯಕ್ತಿಕ ಮಾಹಿತಿ ಬಹಿರಂಗ

ವೈಯಕ್ತಿಕ ಮಾಹಿತಿ ಬಹಿರಂಗ

ಹ್ಯಾಕರ್‌ಗಳ ದಾಳಿಯಿಂದ ಸುಮಾರು 29 ಮಿಲಿಯನ್ ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿ ಬಹಿರಂಗವಾಗಿದೆ. ಈ ವೈಯಕ್ತಿಕ ಮಾಹಿತಿಯಲ್ಲಿ ಫೋನ್‌ ನಂಬರ್‌, ಜನ್ಮದಿನ, ಶಾಲೆ, ಕಾಲೇಜುಗಳ ವಿವರ ಹಾಗೂ ಯಾವ ಡಿವೈಸ್‌ನಿಂದ ಬಳಸುತ್ತಿದ್ದಾರೆ ಮತ್ತು ಇತ್ತೀಚೆಗೆ ಯಾವ ಸ್ಥಳದಿಂದ ಲಾಗಿನ್ ಆಗಿದ್ದಾರೆ ಎಂಬುದನ್ನು ಹ್ಯಾಕರ್ಸ್‌ ತಿಳಿದುಕೊಂಡಿದ್ದರು.

ನೀವು ಹ್ಯಾಕ್‌ ಆಗಿದಿರಾ..?

ನೀವು ಹ್ಯಾಕ್‌ ಆಗಿದಿರಾ..?

ಬಳಕೆದಾರರು ತಮ್ಮ ಅಕೌಂಟ್‌ ಹ್ಯಾಕ್‌ ಆಗಿದಿಯೋ ಇಲ್ಲವೋ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಫೇಸ್‌ಬುಕ್‌ನ ಹೆಲ್ಪ್‌ ಸೆಂಟರ್‌ ಪೇಜ್‌ಗೆ ಹೋದರೆ ನಿಮ್ಮ ಅಕೌಂಟ್‌ ಹ್ಯಾಕ್‌ ಆಗಿದಿಯಾ ಇಲ್ಲವೇ ತಿಳಿಸುತ್ತದೆ. ಅದಲ್ಲದೇ ಹ್ಯಾಕರ್‌ಗಳಿಂದ ಯಾವ ಮಾಹಿತಿ ಸೋರಿಕೆಯಾಗಿದೆ ಎಂದು ತಿಳಿಸುತ್ತದೆ.

ಹ್ಯಾಕ್‌ ಆಗಿದ್ದರೆ ಹುಷಾರು..!

ಹ್ಯಾಕ್‌ ಆಗಿದ್ದರೆ ಹುಷಾರು..!

ತಜ್ಞರ ಪ್ರಕಾರ ಯಾರ ಅಕೌಂಟ್‌ ಹ್ಯಾಕ್‌ ಆಗಿದೆಯೋ ಅವರು ಹುಷಾರಾಗಿರುವುದು ಒಳಿತಂತೆ. ಹ್ಯಾಕ್‌ ಆಗಿರುವ ಮಾಹಿತಿಯಿಂದ ನಿಮ್ಮ ಹಣಕಾಸು ಮತ್ತು ಇತರೆ ಅಕೌಂಟ್‌ಗಳಿಗೆ ಅಕ್ಸೆಸ್‌ ಆಗುವ ಸಾಧ್ಯತೆಯಿದೆ.

ಫೇಸ್‌ಬುಕ್‌ನಿಂದ ಸಂದೇಶ

ಫೇಸ್‌ಬುಕ್‌ನಿಂದ ಸಂದೇಶ

ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಅಕೌಂಟ್‌ ಹ್ಯಾಕ್‌ ಆಗಿರುವ ಕುರಿತು ಸಂದೇಶವನ್ನು ಕಳಿಸಿದೆ. ಆ ಸಂದೇಶದಲ್ಲಿ ಯಾವ ಮಾಹಿತಿಯನ್ನು ಹ್ಯಾಕರ್‌ಗಳು ಕದ್ದಿರುವ ಬಗ್ಗೆ ವಿವರಣೆಯನ್ನು ನೀಡಲಾಗಿದೆ.

15 ಮಿಲಿಯನ್‌ ಬಳಕೆದಾರರ ಮೊಬೈಲ್‌ ಸಂಖ್ಯೆ ಹ್ಯಾಕ್‌

15 ಮಿಲಿಯನ್‌ ಬಳಕೆದಾರರ ಮೊಬೈಲ್‌ ಸಂಖ್ಯೆ ಹ್ಯಾಕ್‌

ಫೇಸ್‌ಬುಕ್‌ನ 15 ಮಿಲಿಯನ್‌ ಬಳಕೆದಾರರ ಮೊಬೈಲ್‌ ಸಂಖ್ಯೆ ಹಾಗೂ ಇಮೇಲ್‌ ಐಡಿಗಳನ್ನು ಮಾತ್ರ ಹ್ಯಾಕರ್‌ಗಳು ಕದ್ದಿದ್ದಾರಂತೆ.

ಕಳೆದು ತಿಂಗಳು ಬಯಲಾಗಿದ್ದ ಹ್ಯಾಕಿಂಗ್‌

ಕಳೆದು ತಿಂಗಳು ಬಯಲಾಗಿದ್ದ ಹ್ಯಾಕಿಂಗ್‌

ಭದ್ರತಾ ಲೋಪದಿಂದ ಕಳೆದ ತಿಂಗಳು ಫೇಸ್‌ಬುಕ್‌ನ 30 ಮಿಲಿಯನ್‌ ಅಕೌಂಟ್‌ಗಳನ್ನು ಹ್ಯಾಕರ್‌ ಹ್ಯಾಕ್‌ ಮಾಡಿದ್ದರು ಎಂಬುದು ಬಯಲಾಗಿತ್ತು.

ತನಿಖೆ ಶುರುವಾಗಿದೆ

ತನಿಖೆ ಶುರುವಾಗಿದೆ

ಫೇಸ್‌ಬುಕ್‌ ಹೇಳಿರುವಂತೆ ಹೀಗಾಗಲೇ ಅಮೇರಿಕಾದ ಫೆಡರಲ್‌ ಬ್ಯುರೋ ಆಫ್ ಇನ್‌ವೆಸ್ಟಿಗೇಷನ್‌ ಹ್ಯಾಕಿಂಗ್‌ ಕುರಿತು ತನಿಖೆಯನ್ನು ಆರಂಭಿಸಿದೆಯಂತೆ.

ಫೇಸ್‌ಬುಕ್‌ಗೆ ಮಾತ್ರ ಸೀಮಿತ

ಫೇಸ್‌ಬುಕ್‌ಗೆ ಮಾತ್ರ ಸೀಮಿತ

ಹ್ಯಾಕಿಂಗ್‌ ಕೇವಲ ಫೇಸ್‌ಬುಕ್‌ಗೆ ಮಾತ್ರ ಸೀಮಿತವಾಗಿದ್ದು, ಫೇಸ್‌ಬುಕ್‌ ಒಡೆತನದ ವಾಟ್ಸ್‌ಆಪ್‌, ಇನ್ಸ್‌ಟಾಗ್ರಾಮ್‌ಗೆ ವಿಸ್ತರಿತವಾಗಿಲ್ಲ ಎಂದು ಫೇಸ್‌ಬುಕ್‌ ಹೇಳಿದೆ.

Best Mobiles in India

English summary
Name and other details of 29 million Facebook users hacked: How to check if yours was hacked and more. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X